Showing posts with label Rain. Show all posts
Showing posts with label Rain. Show all posts

Thursday, May 14, 2026

PARYAYA: ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

 ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!

ಉತ್ತರ ಪ್ರದೇಶ ವರುಣ ಅಟ್ಟಹಾಸ: 89 ಬಲಿ

ಬರೇಲಿ: ಪ್ರಕೃತಿಯ ವಿಕೋಪಕ್ಕೆ ಉತ್ತರ ಪ್ರದೇಶ ತತ್ತರಿಸಿ ಹೋಗಿದೆ. 2026 ಮೇ 13ರ ಬುಧವಾರ ರಾಜ್ಯದಾದ್ಯಂತ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಗೆ ಬರೋಬ್ಬರಿ 89 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರತೆಯ ನಡುವೆ, ಬರೇಲಿಯಲ್ಲಿ ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಾರಿ ಹೋದ ಎದೆನಡುಗಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

300 ಮೀಟರ್ ದೂರಕ್ಕೆ ಹಾರಿ ಬಿದ್ದ ವ್ಯಕ್ತಿ!

ಬರೇಲಿಯ ಭಮೋರಾ ಭಾಗದ ಬಾಬಿಯಾನಾ ಗ್ರಾಮದ ನಿವಾಸಿ ನನ್ಹೆ-ಮಿಯಾನ್ ಎಂಬುವವರು ಈ ಘೋರ ಘಟನೆಗೆ ಸಾಕ್ಷಿಯಾದವರು. ಬಿರುಗಾಳಿ ಶುರುವಾದಾಗ ರಕ್ಷಣೆಗಾಗಿ ಅವರು ಸಮೀಪದ ಕಲ್ಯಾಣ ಮಂಟಪವೊಂದರ ಒಳಗೆ ಆಶ್ರಯ ಪಡೆದಿದ್ದರು. ಗಾಳಿಯ ವೇಗ ಹೆಚ್ಚಾದಂತೆ, ಅಲ್ಲಿನ ಟಿನ್ ಶೆಡ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಕೆಳಗೆ ಕ್ಲಿಕ್‌ ಮಾಡಿ ವಿಡಿಯೋ ನೋಡಿ:

 ಗಾಳಿಯ ರಭಸ ಎಷ್ಟಿತ್ತೆಂದರೆ:

  • ಬೃಹತ್ ಟಿನ್ ಶೆಡ್ ಅನ್ನೇ ಕಿತ್ತೆಸೆದ ಬಿರುಗಾಳಿ.
  • ಶೆಡ್ ಹಿಡಿದಿದ್ದ ನನ್ಹೆ-ಮಿಯಾನ್ ಅವರು ಸುಮಾರು 300 ಮೀಟರ್‌ಗಳಷ್ಟು ದೂರ ಗಾಳಿಯಲ್ಲೇ ತೇಲುತ್ತಾ ಹೋಗಿದ್ದಾರೆ.
  • ಅಂತಿಮವಾಗಿ ಸಮೀಪದ ಹೊಲವೊಂದಕ್ಕೆ ಅಪ್ಪಳಿಸಿದ್ದು, ಅವರ ಕೈಕಾಲುಗಳು ಮುರಿದಿವೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಹಾನಿಯ ಅಂಕಿ-ಅಂಶಗಳು

ಕೇವಲ ಜೀವಹಾನಿಯಲ್ಲದೆ, ಆಸ್ತಿಪಾಸ್ತಿಗೂ ಭಾರೀ ನಷ್ಟ ಉಂಟಾಗಿದೆ. ಸರ್ಕಾರದ ಅಧಿಕೃತ ವರದಿಯ ಪ್ರಕಾರ:

ವಿವರ

ಹಾನಿಯ ಪ್ರಮಾಣ

ಮೃತಪಟ್ಟವರು

89 ಜನರು

ಗಾಯಗೊಂಡವರು

53 ಜನರು

ಮೃತಪಟ್ಟ ಪ್ರಾಣಿಗಳು

114

ಕಾರಣಗಳು

ಗೋಡೆ ಕುಸಿತ, ಮರಗಳ ಉರುಳುವಿಕೆ, ಸಿಡಿಲು

 "ರಸ್ತೆಯೇ ಕಾಣಿಸುತ್ತಿರಲಿಲ್ಲ!"  ಪ್ರತ್ಯಕ್ಷದರ್ಶಿಗಳ ಹೇಳಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. "ನಾನು ಕಾರಿನಲ್ಲಿದ್ದಾಗ ಮರಗಳು ಬೀಳುತ್ತಿದ್ದವು, ಧೂಳಿನಿಂದಾಗಿ ರಸ್ತೆಯೇ ಕಾಣಿಸುತ್ತಿರಲಿಲ್ಲ. ಜೀವ ಭಯದಿಂದ ಕಾರನ್ನು ಸುರಕ್ಷಿತ ಜಾಗದಲ್ಲಿ ನಿಲ್ಲಿಸಿದೆ," ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಹವಾಮಾನ ಇಲಾಖೆ ಎಚ್ಚರಿಕೆ: ಪಶ್ಚಿಮದ ಮಾರುತಗಳ ಪ್ರಭಾವದಿಂದಾಗಿ ಉತ್ತರ ಭಾರತದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮೊದಲೇ ಮುನ್ಸೂಚನೆ ನೀಡಿತ್ತು.

ಈ ಭೀಕರ ಬಿರುಗಾಳಿಯು ಉತ್ತರ ಪ್ರದೇಶದ ಮೂಲಸೌಕರ್ಯ ಹಾಗೂ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು.

PARYAYA: ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ!:   ಭೀಕರ ಬಿರುಗಾಳಿಗೆ ಹಾರಿ ಹೋದ ಯುವಕ! ಉತ್ತರ ಪ್ರದೇಶ ವರುಣ ಅಟ್ಟಹಾಸ: 89 ಬಲಿ ಬ ರೇಲಿ: ಪ್ರಕೃತಿಯ ವಿಕೋಪಕ್ಕೆ ಉತ್ತರ ಪ್ರದೇಶ ತತ್ತರಿಸಿ ಹೋಗಿದೆ. 2026 ಮೇ 13ರ ಬ...

Saturday, April 25, 2026

PARYAYA: ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆ...

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು,
  
ಮಳೆ ಬಂದರೂ ಕರೆಂಟು!

ಬ್ಯಾಟ್ರಿಯ ಚಾರ್ಜು ಮಾಡಿ ಉಪಯೋಗಿಸುವ ಹಾಂಗೆ ಮತ್ತೆ ಮತ್ತೆ ಉಪಯೋಗಿಸುಲೆ ಸಾಧ್ಯ ಅಪ್ಪಂತ ಇಂಧನದ ವಿಷಯಲ್ಲಿ ಈ ಹವಾಮಾನ ಹೇಳ್ತದು ಯಾವಾಗಲೂ ಒಂದು ದೊಡ್ಡ ಸವಾಲು. ಸಾಧಾರಣ ಮೋಡ ಕವಿದ ವಾತಾವರಣ ಇಪ್ಪಗ ಅಥವಾ ಮಳೆ ಬಪ್ಪಗ ಸೋಲಾರ್ ಪ್ಯಾನೆಲುಗ ಕೈಕೊಡ್ತವು ಹೇಳ್ತದು ಎಂಗೊಗೆಲ್ಲ ಗೊಂತಿಪ್ಪ ವಿಷಯವೇ. ಆದರೆ ಈಗ ವಿಜ್ಞಾನಿಗೋ ಇದಕ್ಕೆ ಒಂದು ಬಾರಿ ಲಾಯ್ಕದ ಉಪಾಯ ಕಂಡುಹಿಡುದ್ದವು. ಬೆಶಿಲು ಇಪ್ಪಗ ಸೂರ್ಯಂದ, ಮಳೆ ಬಪ್ಪಗ ಮಳೆ ನೀರ ಹನಿಂದ ಕರೆಂಟ್ ತಯಾರು ಮಾಡುವ ‘ಹೈಬ್ರಿಡ್ […]

ಮುಂದೆ ಓದಿ »

ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ 

ಚಂದ್ರನ ಪ್ರವಾಸ ಯಶಸ್ವಿ

ಮೊನ್ನೆ ನಾವೊಂದು ಸುದ್ದಿ ಮಾತಾಡಿದ್ದಪ್ಪೋ, ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಚಂದ್ರನ ಪ್ರವಾಸಕ್ಕೆ ಹೇಳಿ ನಾಲ್ಕು ಜನರ ಕಳಿಸಿದ್ದು ಹೇಳಿ. ಆ ಪ್ರವಾಸ ಯಶಸ್ವಿ ಆಯಿದು. ಆ ನಾಲ್ಕು ಜೆನವೂ ಯಶಸ್ವಿಯಾಗಿ ಭೂಮಿಗೆ ಬೈಂದವು. ಇದು ಜಗತ್ತಿನ ಬಾಹ್ಯಾಕಾಶ ಕ್ಷೇತ್ರಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು. 2028ಕ್ಕೆ ಚಂದ್ರನ ನೆಲಲ್ಲಿ ಇಳಿವಲೆ, ನಂತ್ರ ಮಂಗಳ ಗ್ರಹದ ಹೊಡೆಂಗೆ ಹೋಪಲೆ ಈ ಪ್ರವಾಸಂದ ನಾಸಾಕ್ಕೆ ಅನುಕೂಲ ಆವುತ್ತು. ಆರ್ಟೆಮಿಸ್‌-2 ಹೇಳ್ತ ಯೋಜನೆಯ ಭಾಗವಾಗಿ ಕ್ರಿಸ್ಟಿನಾ ಕೋಚ್‌, ಜೆರೆಮಿ ಹ್ಯಾನ್ಸನ್‌, […]

ಮುಂದೆ ಓದಿ »

 ಇಲ್ಲವೇ ಪರ್ಯಾಯ.ಕಾಮ್‌ ವೆಬ್‌ ಸೈಟಿನ ಹವ್ಯಕ ಪುಟ ನೋಡಿ

PARYAYA: ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆ...:   ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು ,  ಮಳೆ ಬಂದರೂ ಕರೆಂಟು! ಸೋಲಾರ್‌ ಕ್ಷೇತ್ರಲ್ಲಿ ದೊಡ್ಡ ಕ್ರಾಂತಿ: ಬೆಶಿಲಿದ್ದರೂ ಕರೆಂಟು ,...

Tuesday, August 26, 2025

PARYAYA: ವರುಣ ಪ್ರಕೋಪ

 ವರುಣ ಪ್ರಕೋಪ 

ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ವರುಣ ಪ್ರಕೋಪಕ್ಕೆ ೨೦೨೫ ಆಗಸ್ಟ್‌ ೨೬ರ ಮಂಗಳವಾರ ನದಿಗಳು ಭೋರ್ಗರೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.


ಮೊದಲ ವಿಡಿಯೋ: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಭೋರ್ಗರೆಯುತ್ತಿರುವ ಬಿಯಾಸ್‌ ನದಿ.

ಎರಡನೇ ವಿಡಿಯೋ: ಜಮ್ಮು ಕಾಶ್ಮೀರದಲ್ಲಿ ಮಹಾಮಳೆಗೆ ಜಮ್ಮುತಾವಿ ಸೇತುವೆ ಕೆಳಗೆ ಉಕ್ಕಿ ಹರಿಯುತ್ತಿರುವ ನದಿ. 

PARYAYA: ವರುಣ ಪ್ರಕೋಪ:  ವರುಣ ಪ್ರಕೋಪ  ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ವರುಣ ಪ್ರಕೋಪಕ್ಕೆ ೨೦೨೫ ಆಗಸ್ಟ್‌ ೨೬ರ ಮಂಗಳವಾರ ನದಿಗಳು ಭೋರ್ಗರೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತ...

Sunday, July 20, 2025

PARYAYA: ಥಾಯ್ಲೆಂಡ್‌ನಲ್ಲಿ ಪ್ರವಾಸಿಗರ 'ಬ್ರಹ್ಮಾಸ್ತ್ರ' ದರ್ಶನ!

 ಥಾಯ್ಲೆಂಡ್‌ನಲ್ಲಿ ಪ್ರವಾಸಿಗರ 'ಬ್ರಹ್ಮಾಸ್ತ್ರ' ದರ್ಶನ!

ನೀವು ಬ್ಯಾಂಕಾಕ್‌ನ ಸುಂದರ ಚಾವೊ ಫ್ರಾಯಾ ನದಿಯಲ್ಲಿ ಆರಾಮವಾಗಿ ವಿಹಾರ ಮಾಡುತ್ತಿದ್ದೀರಿ. ಸುತ್ತಲೂ ರಾತ್ರಿಯ ದೀಪಾಲಂಕಾರ, ತಂಪಾದ ಗಾಳಿ... ಇದ್ದಕ್ಕಿದ್ದಂತೆ, "ಏಯ್! ಎಲ್ಲರೂ ತಲೆ ತಗ್ಗಿಸಿ!" ಎಂಬ ಕೂಗು. ಏನಾಯ್ತು ಅಂತ ನೋಡಿದ್ರೆ, ಸೇತುವೆಯ ಕೆಳಗೆ ಢಿಕ್ಕಿ ಹೊಡೆಯುವಷ್ಟು ಕಡಿಮೆ ಅಂತರದಲ್ಲಿ ನಿಮ್ಮ ಬೋಟ್ ಸಾಗುತ್ತಿದೆ. ನದಿಯಲ್ಲಿ ನೀರು ಹೆಚ್ಚಾಗಿ ಸೇತುವೆಗೂ ದೋಣಿಗೂ ನಡುವಿನ ಅಂತರ ಕಮ್ಮಿ ಆಗಿದೆ!

ಸೇತುವೆಗೆ ತಲೆ ತಗಲದಿರಲೆಂದು ಎಲ್ಲರೂ ಒಟ್ಟಿಗೆ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಅಸ್ತ್ರಗಳಿಂದ ತಪ್ಪಿಸಿಕೊಳ್ಳೋ ಸೀನ್‌‌ನಂತೆ ತಲೆ ಬಗ್ಗಿಸಿ ಕುಳಿತರು.!

ಬ್ಯಾಂಕಾಕ್‌ನ ನದಿಯಲ್ಲಿ ವಿಹಾರ ಮಾಡುವಾಗ ಭಾರಿ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಅಪಾಯಕಾರಿಯಾಗಿ ಸೇತುವೆಯ ಹತ್ತಿರಕ್ಕೆ ದೋಣಿಯು ಬಂದಾಗಿನ ದೃಶ್ಯ ಇದು. ಸೇತುವೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯಾಣಿಕರು ತಲೆಬಗ್ಗಿಸಬೇಕಾಯಿತು.

ವಿಡಿಯೋದಲ್ಲಿ ಕಾಣುವ ಈ ದೃಶ್ಯ, ನಗು ತರುವ ವಿಷಯವಾದರೂ, ಹವಾಮಾನ ಬದಲಾವಣೆ ಹೇಗೆ ಟೂರಿಸ್ಟ್‌ಗಳ ಮಜವನ್ನು ಅರ್ಧಕ್ಕೆ ನಿಲ್ಲಿಸಬಹುದು ಅನ್ನೋದಕ್ಕೆ ಇದು ಒಂದು ಚಿಕ್ಕ ಉದಾಹರಣೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ:

ಚಾವೊ ಫ್ರಾಯಾ: ನದಿನಾ ಅಥವಾ ಜಲಪಾತನಾ?

ಚಾವೊ ಫ್ರಾಯಾ ನದಿ ಸಾಮಾನ್ಯವಾಗಿ ನಿಶ್ಶಬ್ಧವಾಗಿ ಹರಿಯುವ ಸೌಂದರ್ಯದ ತಾಣ. ಆದರೆ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ, ಅದರ ಸಾಮಾನ್ಯ ಸ್ವರೂಪವೇ ಬದಲಾಗಿದೆ. ನದಿಯ ನೀರಿನ ಮಟ್ಟ ಎಷ್ಟರ ಮಟ್ಟಿಗೆ ಏರಿದೆ ಎಂದರೆ, ಅಲ್ಲಿ ಓಡಾಡುವ ಬೋಟ್‌ಗಳು, ಫೆರಿಗಳಿಗೆ ರಸ್ತೆ ಕಾಣದೆ, ದಾರಿ ತಪ್ಪಿದಂತಾಗಿದೆ. ಇದರಿಂದ ಕೇವಲ ಬೋಟ್‌ಗಳಷ್ಟೇ ಅಲ್ಲ, ನದಿ ದಡದಲ್ಲಿರುವ ಕಟ್ಟಡಗಳಿಗೂ ಅಪಾಯ ಎದುರಾಗಬಹುದು.

ಮಳೆ: ವರದಾನವಾ, ಶಾಪವಾ?

ಬ್ಯಾಂಕಾಕ್‌ನಲ್ಲಿ ಈ ವರ್ಷ 1,800 ಮಿ.ಮೀ. ಗಿಂತಲೂ ಹೆಚ್ಚು ಮಳೆ ಬರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಸಾಮಾನ್ಯಕ್ಕಿಂತ ಜಾಸ್ತಿ. ಒಂದು ಕಡೆ ಇದು ನಗರದ ನೀರಿನ ಅಗತ್ಯವನ್ನು ಪೂರೈಸಿದರೆ, ಇನ್ನೊಂದು ಕಡೆ ನಗರವನ್ನು ಮುಳುಗಿಸುವ ಆತಂಕವೂ ಇದೆ. ಹಾಗಾಗಿಯೇ, ಬ್ಯಾಂಕಾಕ್‌ನ ಡ್ರೈನೇಜ್ ಸಿಸ್ಟಮ್‌ಗಳನ್ನು ಸುಧಾರಿಸಬೇಕು ಮತ್ತು ನದಿಯಲ್ಲಿ ಓಡಾಡುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಬಾರಿ ಬೋಟ್‌ನಲ್ಲಿ ತಲೆ ಬಗ್ಗಿಸಿದ್ದಕ್ಕೆ ಬಚಾವ್ ಆದ್ರು, ಮುಂದಿನ ಬಾರಿ? ನೋಡಬೇಕು!.

PARYAYA: ಥಾಯ್ಲೆಂಡ್‌ನಲ್ಲಿ ಪ್ರವಾಸಿಗರ 'ಬ್ರಹ್ಮಾಸ್ತ್ರ' ದರ್ಶನ!:   ಥಾಯ್ಲೆಂಡ್‌ನಲ್ಲಿ ಪ್ರವಾಸಿಗರ ' ಬ್ರಹ್ಮಾಸ್ತ್ರ ' ದರ್ಶನ! ನೀ ವು ಬ್ಯಾಂಕಾಕ್‌ನ ಸುಂದರ ಚಾವೊ ಫ್ರಾಯಾ ನದಿಯಲ್ಲಿ ಆರಾಮವಾಗಿ ವಿಹಾರ ಮಾಡುತ್ತಿದ್ದೀರಿ. ಸುತ್...

Wednesday, June 25, 2025

PARYAYA: ಶಿರಾಡಿ ಘಟ್ಟದಲ್ಲಿ ಭೂಕುಸಿತ: ಹೆದ್ದಾರಿ ಬಂದ್‌

 ಶಿರಾಡಿ ಘಟ್ಟದಲ್ಲಿ ಭೂಕುಸಿತ: ಹೆದ್ದಾರಿ ಬಂದ್‌

ಹಾಸನ: ಸಕಲೇಶಪುರದ ಮಾರೆಹನಳ್ಳಿ ಬಳಿ ಭೂಕುಸಿತ ಸಂಭವಿಸಿದ ಪರಿಣಾಮವಾಗಿ  ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ರದ್ದಾಗಿದೆ.

ಭೂಕುಸಿತದ ಹಿನ್ನೆಲೆಯಲ್ಲಿ  ಶಿರಾಡಿ ಘಟ್ಟ ರಸ್ತೆಯಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತವು ನಿಷೇಧಿಸಿದೆ. ಈ ರಾಷ್ಟ್ರೀಯ ಹೆದ್ದಾರಿ ನಂಬರ್‌ 75 ಮಂಗಳೂರು ಕರಾವಳಿ ನಗರವನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ.

ಜಿಲ್ಲಾಧಿಕಾರಿ ಲತಾ ಕುಮಾರಿ ಹೊರಡಿಸಿದ ಆದೇಶದ ಪ್ರಕಾರ, ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳನ್ನು ಬೆಂಗಳೂರು-ಹಾಸನ-ಬೇಲೂರು-ಚಾರ್ಮಾಡಿ ಘಟ್ಟದ ಮೂಲಕ ಕಳುಹಿಸಲಾಗುತ್ತಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಸಂಪಾಜೆ ರಸ್ತೆ ಅಥವಾ ಚಾರ್ಮಾಡಿ ಘಟ್ಟ ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.

ಏತನ್ಮಧ್ಯೆ, ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.

PARYAYA: ಶಿರಾಡಿ ಘಟ್ಟದಲ್ಲಿ ಭೂಕುಸಿತ: ಹೆದ್ದಾರಿ ಬಂದ್‌:   ಶಿರಾಡಿ ಘಟ್ಟದಲ್ಲಿ ಭೂಕುಸಿತ: ಹೆದ್ದಾರಿ ಬಂದ್‌ ಹಾ ಸನ: ಸಕಲೇಶಪುರದ ಮಾರೆಹನಳ್ಳಿ ಬಳಿ ಭೂಕುಸಿತ ಸಂಭವಿಸಿದ ಪರಿಣಾಮವಾಗಿ   ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾ...

Saturday, March 22, 2025

PARYAYA: ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

 ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

ಬೆಂಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳೆ ಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು.

ಸಂಜೆ ೪.೨೦ಕ್ಕೆ ಗುಡುಗು ಸಹಿತವಾಗಿ ಸುರಿದ ಮಳೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಭೂಮಿಯನ್ನು ತೋಯಿಸಿತು.

ಮಳೆಯ ಎರಡು ವಿಡಿಯೋಗಳು ಇಲ್ಲಿವೆ.


PARYAYA: ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ:   ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ ಬೆಂ ಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳ...