Showing posts with label Music. Show all posts
Showing posts with label Music. Show all posts

Monday, April 6, 2026

PARYAYA: ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!

 ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!

ಚೆನ್ನೈ: ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲೆಯ ಕಡೆಗೆ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ. ಇತ್ತೀಚೆಗೆ ಅವರು ಖ್ಯಾತ ಸಂಗೀತ ಸಂಯೋಜಕ ತಿರು ರಮೇಶ್ ವಿನಾಯಕಮ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿಭಾರತೀಯ ಸಂಗೀತ ಜಗತ್ತಿನ ಹೊಸ ಆವಿಷ್ಕಾರವೊಂದನ್ನು ಕಣ್ತುಂಬಿಕೊಂಡರು.

ಭಾರತೀಯ ಸಂಗೀತಕ್ಕೆ ಜಾಗತಿಕ ಮನ್ನಣೆ: ಏನಿದು 'ಗಮಕ ಬಾಕ್ಸ್'?

ರಮೇಶ್ ವಿನಾಯಕಮ್ ಅವರು ತಮ್ಮ ಜೀವನವನ್ನೇ ಭಾರತೀಯ ಸಂಗೀತದ ಪ್ರಸಾರಕ್ಕಾಗಿ ಮುಡಿಪಾಗಿಟ್ಟವರು. ಅವರು ತಾವು ಅಭಿವೃದ್ಧಿಪಡಿಸಿರುವ 'ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್' (Gamaka Box Notation System) ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು.

  • ವಿಶೇಷತೆ: ಭಾರತೀಯ ಶಾಸ್ತ್ರೀಯ ಸಂಗೀತದ ಅವಿಭಾಜ್ಯ ಅಂಗವಾದ 'ಗಮಕ'ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಅರ್ಥೈಸಲು ಈ ವ್ಯವಸ್ಥೆ ಸಹಕಾರಿ.
  • ಪ್ರಧಾನಿಯವರ ಮೆಚ್ಚುಗೆ: ಈ ಕುರಿತು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ, "ಇದು ನಮ್ಮ ಸಂಗೀತವನ್ನು ವಿಶ್ವದಾದ್ಯಂತ ಕೊಂಡೊಯ್ಯುವ ಒಂದು ನವೀನ ಮಾರ್ಗ" ಎಂದು ಶ್ಲಾಘಿಸಿದ್ದಾರೆ. 

"ಚುನಾವಣಾ ಪ್ರಚಾರದ ನಡುವೆ ರಮೇಶ್ ವಿನಾಯಕಮ್‌ ಜೀ ಮತ್ತು ಅವರ ಕುಟುಂಬವನ್ನು ಭೇಟಿಯಾದದ್ದು ಸಂತಸ ತಂದಿದೆ. ಭಾರತೀಯ ಸಂಗೀತವನ್ನು ಜಗತ್ತಿಗೆ ಪರಿಚಯಿಸಲು ಅವರು ಮಾಡುತ್ತಿರುವ ಕೆಲಸ ಅದ್ಭುತವಾಗಿದೆ," ಎಂದು ಪ್ರಧಾನಿ ಬಣ್ಣಿಸಿದ್ದಾರೆ. ☝ ವಿಡಿಯೋ ನೋಡಿ.

ನವೀನ ಆವಿಷ್ಕಾರಕ್ಕೆ ಪ್ರಧಾನಿ ಸಾಕ್ಷಿ

ರಮೇಶ್ ವಿನಾಯಕಮ್‌ ಅವರು ತಮ್ಮ ಸಂಶೋಧನೆಯ ಒಂದು ಸಣ್ಣ ಝಲಕ್ ಅನ್ನು ಪ್ರಧಾನಿಯವರಿಗೆ ಪ್ರದರ್ಶಿಸಿದರು. ಕೇವಲ ರಾಜಕೀಯ ಮಾತ್ರವಲ್ಲದೆಕಲೆ ಮತ್ತು ತಂತ್ರಜ್ಞಾನದ ಸಮ್ಮಿಲನಕ್ಕೆ ಪ್ರಧಾನಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತೀಯ ಸಂಗೀತದ ಈ ಹೊಸ ಹೆಜ್ಜೆ ಮುಂದಿನ ದಿನಗಳಲ್ಲಿ ಜಾಗತಿಕ ವೇದಿಕೆಯಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

 
PARYAYA: ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!:   ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ! ಚೆ ನ್ನೈ: ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈ ಯ ಲ್ಲಿ ಭಾರತೀಯ ಸಂಸ್ಕೃತಿ ...

Saturday, May 10, 2025

PARYAYA: ವಿಶ್ವ ಅಮ್ಮಂದಿರ ದಿನಾಚರಣೆ....

 ವಿಶ್ವ ಅಮ್ಮಂದಿರ ದಿನಾಚರಣೆ....


ಮ್ಮ ಎಂದು ಕರೆಯುವ  ಪದದಲ್ಲಿ ಏನೋ ಶಕ್ತಿ ಇದೆ. ಎಂತಹ ನೋವಿದ್ದರೂ ಅಮ್ಮನ ಪ್ರೀತಿ ಮುಂದೆ ಅದೆಲ್ಲ ನಗಣ್ಯ ಹೀಗಾಗಿ ಅಮ್ಮನ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯನ್ನು ಹೊಗಳಲು ಪದಗಳಿಲ್ಲ.  ತಾಯಿ ತನ್ನ ಮಗುವಿಗೆ ತೋರಿಸುವ ಪ್ರೀತಿಕಾಳಜಿ ಮತ್ತು ತ್ಯಾಗವನ್ನು ಪ್ರಶಂಸಿಸಲು ಪ್ರತಿ ವರ್ಷ ವಿಶ್ವ ತಾಯಂದಿರ ದಿನವನ್ನು (ಮೇ ೧೧) ಆಚರಿಸಲಾಗುತ್ತದೆ...

ಈ ಸಂದರ್ಭಕ್ಕೊಂದು ಸುಂದರವಾದ ಹಾಡನ್ನು ಬರೆದಿದ್ದಾರೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ಚಂದ್ರಹಾಸ ಕೋಟೆಕಾರ್.‌ ಅವರ ಹಾಡಿಗೆ ಇಂಪಾಗಿ ಧ್ವನಿ ನೀಡಿದ್ದಾರೆ ಸುಪ್ರಿಯಾ.

ವಿಡಿಯೋ ಸಹಿತವಾಗಿ ಹಾಡು ಕೇಳಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ ಅಥವಾ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

PARYAYA: ವಿಶ್ವ ಅಮ್ಮಂದಿರ ದಿನಾಚರಣೆ....:   ವಿಶ್ವ ಅಮ್ಮಂದಿರ ದಿನಾಚರಣೆ.... ಅ ಮ್ಮ ಎಂದು ಕರೆಯುವ   ಪದದಲ್ಲಿ ಏನೋ ಶಕ್ತಿ ಇದೆ. ಎಂತಹ ನೋವಿದ್ದರೂ ಅಮ್ಮನ ಪ್ರೀತಿ ಮುಂದೆ ಅದೆಲ್ಲೂ ನಗಣ್ಯ ಹೀಗಾಗಿ ಅಮ್ಮನ ಪ್ರೀತಿ...

Thursday, March 20, 2025

PARYAYA: ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

 ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ಈಕೆಯ ಪಿಟೀಲು ವಾದನದ ಮಾಧುರ್ಯಕ್ಕೆ ತಲೆದೂಗದವರಿಲ್ಲ.

ಆದರೆ ಇತ್ತೀಚೆಗೆ ಕೇರಳದ ಅಲಪ್ಪುಳದ ಕೊಟ್ಟಂಕುಲಂಗರ ದೇವಸ್ಥಾನದಲ್ಲಿ ಈಕೆಯ ಭಕ್ತಿ ಸಂಗೀತಕ್ಕೆ ಪೊಲೀಸರ ತಡೆ ಬಿತ್ತು. ದೇವಸ್ಥಾನದಲ್ಲಿ ಇನ್ನೂ ಉತ್ಸವ ಮುಂದುವರೆದಿತ್ತು. ದೇವಸ್ಥಾನ ಸಮೀಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪುಟ್ಟ ಬಾಲಕಿ ಶಶಿ ಭಾವಪೂರ್ಣವಾಗಿ ಪಿಟೀಲು ವಾದನದಲ್ಲಿ ನಿರತಳಾಗಿದ್ದಳು.

ಆಕೆ ನುಡಿಸುತ್ತಿದ್ದ ʼಮರುತಮಲೈ ಮಾಮನಿಯೇ ಮುರುಗಯ್ಯʼ ತಮಿಳು ಹಾಡಿಗೆ ಅಲ್ಲಿ ನೆರೆದಿದ್ದ ಸಹಸ್ರಾರು ಮಂದಿ ತಲೆದೂಗುತ್ತಾ ಕುಳಿತಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ʼರಾತ್ರಿ ೧೦ ಗಂಟೆಯಾಗಿದೆ. ಕಚೇರಿ ನಿಲ್ಲಿಸುʼ ಎಂದು ಆಕೆಯ ಬಳಿಗೆ ವೇದಿಕೆಯೇರಿ ಬಂದು ಸೂಚಿಸಿದರು. ಈ ದಿಢೀರ್‌ ಸೂಚನೆಯಿಂದ ಪುಟ್ಟ ಬಾಲಕಿ ಆಘಾತಕ್ಕೆ ಒಳಗಾದಳು. ನೆರೆದಿದ್ದ ಜನರೂ ದಿಗ್ಭ್ರಮೆಗೊಂಡರು. ಪೊಲೀಸರೂ ಬಂದು ಸಂಗೀತ ಕಾರ್ಯಕ್ರಮ ನಿಲ್ಲಿಸಿದರು.

ಕೊನೆಗೆ ಆ ಪುಟ್ಟ ಬಾಲಕಿ ಕೊಠಡಿಯೊಂದರಲ್ತಲಿ ಪ್ರೀತಿಯ ಪಿಟೀಲನ್ನು ಹಿಡಿದುಕೊಂಡು ಕುಳಿತಿದ್ದ ದೃಶ್ಯವನ್ನು ಕೂಡಾ ಸೇರಿಸಿ ಮಲಯಾಳಂ ಮನೋರಮಾ ವರದಿ ಮಾಡಿದೆ.

ಪುಟ್ಟ ಬಾಲಕಿಯ ಪಿಟೀಲುವಾದನಕ್ಕೆ ತಡೆ ಹಾಕಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ. 

ಈ ಘಟನೆ ಬಗ್ಗೆ ನಿಮಗೆ ಏನನ್ನಿಸಿತು? ಕಾಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.

ಬಾಲಕಿಯ ಮಧುರವಾದ ಪಿಟೀಲು ಧ್ವನಿ ಆಲಿಸಲು ಈ ಕೆಳಗಿನ ಸುದ್ದಿಯಲ್ಲಿನ ವಿಡಿಯೋ ನೋಡಿರಿ:

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

PARYAYA: ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!:   ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ! ಹ ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ...

Sunday, February 6, 2022

PARYAYA: ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

 ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ  ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು 2022 ಫೆಬ್ರುವರಿ 6ರ ಭಾನುವಾರ ನಿಧನರಾದರು.

ಕೋವಿಡ್-೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಿಸಲಾಗಿತ್ತು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದರು.

ಗಾನ ಕೋಗಿಲೆ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.  ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆ ಪಡೆದಿವೆ.

ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ.

ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

೧೯೨೯ರಲ್ಲಿ ಜನಿಸಿದ್ದ ಲತಾ ಅವರು ಐವರು ಮಕ್ಕಳ ಪೈಕಿ ಹಿರಿಯವರು. ಶಾಸ್ತೀಯ ಸಂಗೀತಗಾರರಾಗಿದ್ದ ತಂದೆ ಪಂಡಿತ ದೀನಾನಾಥ್ ಮಂಗೇಶ್ಕರ್ ಅವರು ಕಿರಿಯ ಲತಾ ಮಂಗೇಶ್ಕರ್ ಅವರಿಗೆ ಸಂಗೀತದ ಮೊದಲ ಪಾಠ ಮಾಡಿದ್ದರು. ೧೯೪೨ರಲ್ಲಿ ತಂದೆ ಮೃತರಾದ ಬಳಿಕ, ೧೩ರ ಹರೆಯದ ಲತಾ ಮಂಗೇಶ್ಕರ್ ಅವರು ಮರಾಠಿ ಸಿನಿಮಾಗಳಿಗೆ ಹಾಡುವ ಮೂಲಕ ಗಾಯನ ವೃತ್ತಿಯನ್ನು ಆರಂಭಿಸಿದರು.

೧೯೪೫ರಲ್ಲಿ ಲತಾ ಅವರು ಮಧುಬಾಲಾ ನಟನೆಯ ಮಹಲ್ ಚಲಚಿತ್ರದ ’ಆಯೇಗಾ ಆನೇವಾಲ’ ಚಿತ್ರದ ಮೂಲಕ ಮೊತ್ತ ಮೊದಲಿಗೆ ಪ್ರಸಿದ್ಧಿಗೆ ಬಂದರು. ಆ ಬಳಿಕ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಗಾಯನ ವೃತ್ತಿ ಹೊಸ ಉತ್ತುಂಗಕ್ಕೆ ಏರಿತು..

ಬೈಜು ಬಾವ್ರಾ, ಮದರ್ ಇಂಡಿಯಾ ಮತ್ತು ಮುಘಲ್-ಇ-ಆಜಂ ದಂತಹ ಚಿತ್ರಗಳಲ್ಲಿ ನೌಶದ್ ರಚನೆಯ ರಾಗ ಆಧಾರಿತ ಹಾಡುಗಳನ್ನು ಅವರು ಹಾಡಿದರು. ಶಂಕರ್ ಜೈಕಿಷನ್ ಅವರ ಹಿಟ್ ಸಿನಿಮಾಗಳಾದ ಬರ್ಸಾತ್, ಶ್ರೀ ೪೨೦, ಸಲೀಲ್ ಚೌಧರಿ ಮಧುಮತಿ ಚಿತ್ರದ ಹಾಡುಗಳು ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಹಿನ್ನೆಲೆಗಾಯಕಿ  ಫಿಲಂಫೇರ್ ಪ್ರಶಸ್ತಿಯನ್ನು ತಂದು ಕೊಟ್ಟವು. ಬಳಿಕ ಬೀಸ್ ಸಾಲ್ ಬಾದ್, ಖಾನ್ದಾನ್ ಮತ್ತು ಜೀನೆ ಕಿ ರಾಹ್ ಚಿತ್ರಗಳ ಹಾಡುಗಳಿಗೂ ಅವರಿಗೆ ಇನ್ನೂ ಮೂರು ಫಿಲಂಫೇರ್ ಪ್ರಶಸ್ತಿಗಳು ಬಂದವು. ಪರಿಚಯ್, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಅವರಿಗೆ  ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದವು.

ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆನಂದಿ, ಸಿಲ್ ಸಿಲಾ, ಚಾಂದನಿ, ಸಾಗರ್, ರುಡಾಲಿ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಇತ್ಯಾದಿ ಚಿತ್ರಗಳು ಅವರ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಪ್ರಸಿದ್ಧವಾಗಿವೆ.

ಲತಾ ಮಂಗೇಶ್ಕರ್ ಅವರ ದೇಶಭಕ್ತಿ ಗೀತೆಗಳಲ್ಲಿ ೧೯೬೨ರಲ್ಲಿ ಚೀನಾ ಜೊತೆಗಿನ ಸಮರದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ಹಾಡಿದ ’ಆಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಖ್ಯಾತಿ ಪಡೆದ ಹಾಡಾಗಿದ್ದು ಇದನ್ನು ೧೯೬೩ರ ಗಣರಾಜ್ಯೋತ್ಸವ ದಿನ ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಅವರು ಈ ಹಾಡನ್ನು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದರು.

ಲತಾ ಮಂಗೇಶ್ಕರ್ ಅವರು ಹಿಡಿಯಷ್ಟು ಮರಾಠಿ ಚಿತ್ರಗಳಿಗೆ ಸಂಗೀತ ರಚನೆಯನ್ನೂ ಮಾಡಿದ್ದಾರೆ. ಇವುಗಳಲ್ಲಿ ಸಧಿ ಮನಸೆ ಚಿತ್ರವು  ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ೧೯೬೫ರಲ್ಲಿ ತಂದುಕೊಟ್ಟಿತ್ತು. ಅವರು ನಿರ್ಮಿಸಿದ ಕೆಲವೇ ಕೆಲವು ಚಿತ್ರಗಳ ಪೈಕಿ ೧೯೯೦ರಲ್ಲಿ ನಿರ್ಮಿಸಿದ ಲೇಖಿನ್ ಚಿತ್ರವೂ ಒಂದಾಗಿದ್ದು ಅದರಲ್ಲಿ ಸ್ವತಃ ಲತಾ ಅವರೇ ಹಾಡಿದ್ದರು.

ಲತಾ ಮಂಗೇಶ್ಕರ್ ಅವರ ಮೈ ನವಿರೇಳಿಸುವ ಒಂದು ಹಾಡಿನ ಪರಿ ಇಲ್ಲಿದೆ ನೋಡಿ:



PARYAYA: ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್:   ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ   ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ ( ೯೨ ) ಅವರು 2022 ಫೆಬ್ರು...

Thursday, January 26, 2017

ಕಿಂಕಿಣಿ ನೃತ್ಯೋತ್ಸವ: ನಿರುಪಮಾ ರಾಜೇಂದ್ರ ‘ಯುಗಳ್’

ಕಿಂಕಿಣಿ ನೃತ್ಯೋತ್ಸವ:  ನಿರುಪಮಾ ರಾಜೇಂದ್ರ ‘ಯುಗಳ್

ಕಥಕ್ ಧಾರೆಯಾಗಿ ಹರಿಯಲಿದೆ ‘ಅಭಂಗ್ ಎಂಬ ಕಾವ್ಯಧಾರೆ
ಬೆಂಗಳೂರು:  ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ... ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ ಹರಿಸಲಿದ್ದಾರೆ.

ಜನವರಿ ೨೭ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ೩೩ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರರ ವಿಶೇಷ ‘ಯುಗಳ ಭಕ್ತಿಯ ನೃತ್ಯಧಾರೆಯಾಗಿ ಹರಿಯಲಿದೆ. ಮಹಾರಾಷ್ಟ್ರ ಸಂತರು, ಭಕ್ತಿಯ ಪರಾಕಾಷ್ಟೆಯಲ್ಲಿ ಸೃಷ್ಟಿಸಿದ ಅಭಂಗ್‌ಗಳನ್ನು ನಿರುಪಮಾ ರಾಜೇಂದ್ರ ನೃತ್ಯರೂಪಕ್ಕಿಳಿಸಲಿದ್ದಾರೆ.

ನಿರುಪಮಾ ರಾಜೇಂದ್ರ ಪ್ರಸ್ತುತಪಡಿಸುವ ‘ತಾಲ್ ಶುದ್ಧ ನೃತ್ಯದಲ್ಲಿ ಭಾರತದ ಸಂಸ್ಕೃತಿ, ಶ್ರದ್ದೆ ಮತ್ತು ಮೌಲ್ಯಗಳು ಅನಾವರಣಗೊಳ್ಳಲಿವೆ.

ರಾಮ ಮತ್ತು ಸೀತೆ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅವರು ರಾಮಾಯಣದ ಒಂದೊಂದೇ ಘಟನಾವಳಿಯನ್ನು ನೆನಪಿಸಿಕೊಳ್ಳುತ್ತಾ ಸಾಗುವ ಸನ್ನಿವೇಶಗಳನ್ನು ನೃತ್ಯರೂಪದಲ್ಲಿ ನಿರುಪಮಾ ರಾಜೇಂದ್ರ ರಂಗದ ಮೇಲೆ ತೆರೆದಿಡಲಿದ್ದಾರೆ.

  ನಿರುಪಮಾ ರಾಜೇಂದ್ರ ಅವರ ಕಥಕ್ ಯುಗಳ ಬಂದಿಯ ಮತ್ತೊಂದು ವಿಶೇಷವೆಂದರೆ; ಖ್ಯಾತ ಗಾಯಕ ಫಯಾಜ್‌ಖಾನ್ ಅವರ ಕಂಠ ಮಾಧುರ್ಯದಲ್ಲಿ ಮೂಡಿಬರಲಿರುವ ತಿಲ್ಲಾನ ಮಾದರಿಯ ತರಾನಾ ನೃತ್ಯ.

ನಿರುಪಮಾ ರಾಜೇಂದ್ರ ಅವರ ಕಥಕ್‌ಗೆ ಪ್ರವೀಣ್ ಡಿ ರಾವ್ ಸಂಗೀತ ಸಾಥ್ ನೀಡಲಿದ್ದು, ತಬಲಾ- ತ್ರಿಲೋಚನ್ ಕಂಪ್ಲಿ, ಗುರುಮೂರ್ತಿ ವೈದ್ಯ; ಸಿತಾರ್- ಶ್ರುತಿ ಕಾಮತ್; ಸಾರಂಗಿ- ಸರ್ಫ್‌ರೋಜ್ ಖಾನ್; ಕೊಳಲು- ಶಿವಲಿಂಗ.


ಸ್ಥಳ: ಜೆಎಸ್ ಎಸ್ ಅಡಿಟೋರಿಯಂ, ಜಯನಗರ, 

ದಿನಾಂಕ: 27 ಜನವರಿ 2017, ಸಂಜೆ 7.30

Tuesday, January 24, 2017

ಕಲಾ ಸೇವೆಗೊಂದು ರಸೀದಿ

ಕಲಾ ಸೇವೆಗೊಂದು ರಸೀದಿ

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಬಹುಷಃ ಈ ಸಾಲುಗಳಿಗೆ ಅನ್ವರ್ಥಕವಾಗಿ ಬದುಕುವವರು ಇಂದಿನ ದಿನಮಾನದಲ್ಲಿ ಬಹು ಕಡಿಮೆ. ಆದರೆ ನಮ್ಮ ನಡುವಣ ಕಲಾವಿದನೊಬ್ಬ ಸಂಪೂರ್ಣವಾಗಿ ತನ್ನ ಜೀವನವನ್ನ ಕಲೆ ಮತ್ತು ಮುಖ್ಯವಾಗಿ ಕಲಾವಿದರ ಸೇವೆಗಾಗಿಯೆ ಮುಡುಪಾಗಿಟ್ಟಿರುವುದು ಬಲು ಅಪರೂಪದ ಸಂಗತಿ. ತಬಲಾ ಕಲಾವಿದ ಶ್ರೀ.ಚಂದ್ರಶೇಖರ್ ಬಡಿಗೇರ್ ಪಂ.ರಘುನಾಥ್ ನಾಕೋಡ್ ಅವರ ಶಿಷ್ಯ ಮತ್ತು ಗದುಗಿನ ಸಂತ ಪಂ.ಪುಟ್ಟರಾಜ ಗವಾಯಿಗಳ ಆಶ್ರಮದ ಅನುಯಾಯಿ.

ಕೇವಲ ಇಷ್ಟು ವಿಶೇಷಣಗಳನ್ನು ಮಾತ್ರ ಹೊಂದಿದ್ದಲ್ಲಿ ಚಂದ್ರಶೇಖರ್ ಮತ್ತೊಬ್ಬ ಸಾಮಾನ್ಯ ಕಲಾವಿದರಾಗುತ್ತಿದ್ದರೇನೊ.. ಆದರೆ ಆ ವ್ಯಕ್ತಿ ಕಲಾಪ್ರಪಂಚಕ್ಕೆ ಮತ್ತು ಕಲಾವಿದರಿಗೆ ಸಲ್ಲಿಸಿದ ಸೇವೆ ಅಪೂರ್ವ. ಸರ್ವೆಸಾಮಾನ್ಯವಾಗಿ ಆರ್ಥಿಕ ಸಹಾಯ ನೀಡುವುದೊಂದೆ ಸಹಾಯ ಮಾಡುವ ರೀತಿ ಅಂತ ಭಾವಿಸುವುದು ಲೋಕರೂಢಿ. ಆದರೆ ಕಲಾವಿದರಿಗೆ ಅವರ ದೈಹಿಕ ಅಸ್ವಸ್ಥತೆಗಳ ಮಧ್ಯೆ, ಅವರ ಜೊತೆಗಿದ್ದು ಅವರ ನಿತ್ಯಕರ್ಮಗಳಿಗೆ ಸಹಕರಿಸುತ್ತಾ, ಊರುಗೋಲಾಗಿ ನಿಂತಂತಹ ವ್ಯಕ್ತಿ ಚಂದ್ರಶೇಖರ್ ಬಡಿಗೇರ್. ಅವರ ನಿಸ್ವಾರ್ಥ ಸೇವೆಯನ್ನು ನೆನೆದು ಇಂದಿಗೂ ಹಲವಾರು ಕಲಾವಿದರು ಹನಿಗಣ್ಣಾಗುವುದನ್ನು ಹಲವರು ಕಂಡಿದ್ದಾರೆ.

ಅಲ್ಲದೆ ಗದುಗಿನ ಆಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿ, ಬೆಂಗಳೂರು ಮಹಾನಗರದಲ್ಲಿ ನೆಲೆ ಕಂಡುಕೊಳ್ಳಲು ಬರುವ ಹಲವಾರು ಯುವಕರಿಗೆ, ತನ್ನ ಪುಟ್ಟ ಗೂಡಿನಲ್ಲಿಯೆ ಅವರು ಇರಬಯಸಿದಷ್ಟು ದಿನ ಆಶ್ರಯ ನೀಡಿದ ವ್ಯಕ್ತಿ ಚಂದ್ರು. ಆ ಯುವಕಲಾವಿದ ಬೆಂಗಳೂರು ಮಹಾನಗರದಲ್ಲಿ ನೆಲೆನಿಲ್ಲುವವರೆಗೂ ತನ್ನ ಮನೆಯಲ್ಲಿಯೆ ಉಳಿಸಿಕೊಂಡು ಅವರ ಊಟೋಪಚಾರಗಳ ವ್ಯವಸ್ಥೆಯನ್ನು ಸರಿದೂಗಿಸಿ ಹಲವರಿಗೆ ಬಾಳು ಕಟ್ಟಿಕೊಳ್ಳಲು ಸಹಕಾರ ನೀಡಿದ್ದಾರೆ.

ನಿರಂತರವಾಗಿ ಈ ಕಾಯಕದಲ್ಲಿ ನಿರತರಾಗಿದ್ದ ಚಂದ್ರು ಅವರಿಗೆ ಇದೀಗ ಅತಿಯಾದ ಅನಾರೋಗ್ಯ ಕಾಡುತ್ತಿದ್ದು, ಕಲಾವಿದರು ಅವರ ಋಣಸಂದಾಯ ಮಾಡಲು ಒಂದಾಗಿದ್ದಾರೆ. ಇದಕ್ಕಾಗಿ ಅನನ್ಯ ಸಂಸ್ಥೆಯ ರಾಘವೇಂದ್ರ ಅವರ "ಅನನ್ಯ ಆರೋಗ್ಯಧಾರಾ ನಿಧಿ"ಯ ಮೂಲಕ ಸಹಾಯ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಪದ್ಮಶ್ರೀ.ಪಂ.ಎಮ್.ವೆಂಕಟೇಶ್ ಕುಮಾರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಚಂದ್ರು ಅವರ ಗುರುಗಳಾದ ಪಂ.ರಘುನಾಥ್ ನಾಕೋಡ್ ತಬಲಾ ಸಾಥ್ ನೀಡುತ್ತಿದ್ದಾರೆ. ಇವರೊಂದಿಗೆ ಹಾರ್ಮೋನಿಯಂನಲ್ಲಿ ಶ್ರೀ.ಮಧುಸೂದನ್ ಭಟ್ ಮತ್ತು ಸಾರಂಗಿಯಲ್ಲಿ ಶ್ರೀ.ಸರ್ಫರಾಜ್ ಖಾನ್ ಸಾಥ್ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಂಗೀತ ರಸಿಕರು ಉದಾರವಾಗಿ ಈ ನಿಧಿಗೆ ದಾನ ನೀಡಿ ಕಲಾವಿದನೊಬ್ಬನ ಶ್ರೇಯೋಭಿವೃದ್ಧಿಗೆ ಜೊತೆಯಾಗಬೇಕೆಂದು ಅನನ್ಯ ಸಂಘಟನೆಕೋರಿದೆ.

ದಿನಾಂಕ 26 ಜನವರಿ, , ಗುರುವಾರ
ಸ್ಥಳ ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು
ಸಮಯ ಸಂಜೆ 6 ಗಂಟೆ.


Friday, December 16, 2016

ಭಾರತೀಯ ವಿದ್ಯಾಭವನದಲ್ಲಿ ಡಿ.17 ಮತ್ತು 18ರಂದು ಉಸ್ತಾದ್ ಫಯಾಜ್ ಖಾನ್ ಸಂಗೀತ ಸುಧೆ

ಭಾರತೀಯ ವಿದ್ಯಾಭವನದಲ್ಲಿ ಡಿ.17 ಮತ್ತು 18ರಂದು
ಉಸ್ತಾದ್ ಫಯಾಜ್ ಖಾನ್ ಸಂಗೀತ ಸುಧೆ

ಬೆಂಗಳೂರು:   ಖ್ಯಾತ ಹಿಂದೂಸ್ತಾನಿ ಕಲಾವಿದ ಉಸ್ತಾದ್ ಫಯಾಜ್ ಖಾನ್ ಅವರು ಸ್ಥಾಪಿಸಿರುವ ಪರ್ವೀನ್ ಬೇಗಂ ಸ್ಮೃತಿ ಎಜುಕೇಷನ್ ಟ್ರಸ್ಟ್ ವತಿಯಿಂದ ಡಿಸೆಂಬರ್ 17  ಮತ್ತು 18ರಂದು ನಗರದ ಭಾರತೀಯ ವಿದ್ಯಾಭವನದಲ್ಲಿ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಂಗೀತ ಕಛೇರಿ ಏರ್ಪಡಿಸಲಾಗಿದೆ.

ತಮ್ಮ ಪತ್ನಿ ಪರ್ವೀನ್ ಬೇಗಂ ಅವರ ಸ್ಮರಣಾರ್ಥ ಫಯಾಜ್ ಖಾನ್ ಅವರು ಸ್ಥಾಪಿಸಿರುವ ಟ್ರಸ್ಟ್ ಪ್ರತಿ ವರ್ಷ ಎರಡು ದಿನಗಳ ಸಂಗೀತ ಕಾರ್ಯಕ್ರಮ ನಡೆಸುತ್ತ ಬರುತ್ತಿದ್ದು, ಬಾರಿ ಪಂಡಿತ್ ರಾಜೀವ್ ತಾರಾನಾಥ್ ಅವರ ಸರೋದ್ ವಾದನ ಸಹಿತ ಹಲವಾರು ಸಂಗೀತ ಕಲಾವಿದರ ಕಛೇರಿಗಳು ನಡೆಯಲಿದೆ. 17 ಮತ್ತು 18ರಂದು ಸಂಜೆ 5 ರಿಂದ ರಾತ್ರಿ 9 ವರೆಗೆ ಕಾರ್ಯಕ್ರಮಗಳು ಸಭ್ಯರನ್ನು ರಂಜಿಸಲಿವೆ.

17ರಂದು ದಿಲ್ಷಾದ್ ಖಾನ್ ಅವರಿಂದ ಸಾರಂಗಿ, ಹಿರಣ್ಮಯಿ ಶರ್ಮಾ ಅವರಿಂದ ಹಿಂದೂಸ್ತಾನಿ ಗಾಯನ ಹಾಗೂ ಪಂಡಿತ್ ರಾಜೀವ್ ತಾರಾನಾಥ ಅವರಿಂದ ಸರೋದ್ ವಾದನ ನಡೆಯಲಿದೆ.

18ರಂದು ರಶೀದ್ ಮುಸ್ತಾಫ ತಿರಾಕ್ವಾ ಅವರಿಂದ ತಬ್ಲಾ ವಾದನ (ಅಪ್ಪ-ಮಗನಿಂದ ತಬ್ಲಾ ಜುಗಲ್ಬಂದಿ), ಸರ್ಫ್ರಾಜ್ ಖಾನ್ ಅವರಿಂದ ಸಾರಂಗಿ ಹಾಗೂ ಉಸ್ತಾದ್ ಫಯಾಜ್ ಖಾನ್ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ.

ಕಲಾವಿದರ ಕಿರು ಪರಿಚಯ
ಉಸ್ತಾದ್ ಫಯಾಜ್ ಖಾನ್
ದೇಶ ಕಂಡ ಅಪ್ರತಿಮ ಹಾಡುಗಾರ, ಸಂಗೀತ ವಾದ್ಯ ಕಲಾವಿದ ಹಾಗೂ ಶ್ರೇಷ್ಠ ಗುರು ಉಸ್ತಾದ್ ಫಯಾಜ್ ಖಾನ್. ಕಿರಾಣಾ ಘರಾನಾದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಇವರು ಆಕಾಶವಾಣಿಯ ಗ್ರೇಡ್ ಕಲಾವಿದರು. ದೇಶ, ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನೀಡಿರುವ ಇವರು ಸಿನಿಮಾ ಸಂಗೀತಕ್ಕೂ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಪಂಡಿತ್ ರಾಜೀವ್ ತಾರಾನಾಥ
ಜಗದ್ವಿಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ ಅವರು ಅಲಿ ಅಕ್ಬರ್ ಖಾನ್ ಅವರ ಹಾದಿಯಲ್ಲಿ ಪಯಣ ಬೆಳೆಸಿದವರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ದೇಶ, ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ.

ಹಿರಣ್ಮಯಿ ಶರ್ಮಾ
ಹಿಂದೂಸ್ತಾನಿ ಸಂಗೀತದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಹಿರಣ್ಮಯಿ ಶರ್ಮಾ ಅವರು ಭಕ್ತಿ, ಲಘು ಸಂಗೀತ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ. ಈಗಾಗಲೇ ೨೬ ಸಿನಿಮಾಗಳಲ್ಲಿ ಹಾಡಿದ್ದಾರೆ.

ಸರ್ಫ್ರಾಜ್ ಖಾನ್
ಸರ್ಫ್ರಾಜ್ ಖಾನ್ ಅವರು ತಮ್ಮ ಸಂಗೀತ ಕುಟುಂಬದ ಎಂಟನೇ ತಲೆಮಾರಿನ ಕಲಾವಿದ. ಸಾರಂಗಿ ದಂತಕತೆ ಪದ್ಮವಿಭೂಷಣ ಪಂಡಿತ್ ರಾಮ್ನಾರಾಯಣ್ಜಿ ಅವರ ಶಿಷ್ಯರಾಗಿರುವ ಇವರು ಈಗಾಗಲೇ ದೇಶ, ವಿದೇಶಗಳ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ದಿಲ್ಷಾದ್ ಖಾನ್
ಸಾರಂಗಿ ಕ್ಷೇತ್ರದಲ್ಲಿ ಈಗಾಗಲೇ ಖ್ಯಾತರಾಗಿರುವ ಕುಟುಂಬದ ೯ನೇ ಕುಡಿ ದಿಲ್ಷಾದ್ ಖಾನ್. ಚಿಕ್ಕಪ್ಪ ಪದ್ಮಭೂಷಣ ಉಸ್ತಾದ್ ಸುಲ್ತಾನ್ ಖಾನ್ ಸಹಾಬ್ ಜತೆಗೆ ಕಾರ್ಯಕ್ರಮ ನೀಡಿರುವ ದಿಲ್ಷಾದ್ ಅವರು ೨೦೦೯ರಲ್ಲಿ ಪ್ರತಿಷ್ಠಿತ ಗ್ರಾಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ೫೦೦ಕ್ಕೂ ಅಧಿಕ ಬಾಲಿವುಡ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಷಾರಿಕ್ ಮುಸ್ತಾಫ

ತಬ್ಲಾದಲ್ಲಿ ಫರೂಕಾಬಾದ್ ಘರಾನಾ ಶೈಲಿಯ ಖ್ಯಾತ ಕಲಾವಿದರಾಗಿರುವ ಷಾರಿಕ್ ಮುಸ್ತಾಫ ಅವರು ತಮ್ಮ ತಂದೆ ಉಸ್ತಾದ್ ರಶೀದ್ ಮುಸ್ತಾಫ ಅವರೊಂದಿಗೆ ವೇದಿಕೆಯಲ್ಲಿ ಪರಿಚಿತರಾದವರು. ತಮ್ಮ ತಬ್ಲಾ ಕುಟುಂಬದ ೫ನೇ ಕುಡಿ ಇವರು