Showing posts with label ಬಾಲಾಜಿ ಕೃಪಾ ಬಡಾವಣೆ. Show all posts
Showing posts with label ಬಾಲಾಜಿ ಕೃಪಾ ಬಡಾವಣೆ. Show all posts

Saturday, August 15, 2026

PARYAYA: ಸ್ವಾತಂತ್ರ್ಯೋತ್ಸವ ಸಡಗರ ೨೦೨೬

 ಸ್ವಾತಂತ್ರ್ಯೋತ್ಸವ ಸಡಗರ ೨೦೨೬

ದೇಶದ ಇತರೆಡೆಗಳಂತೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿಯೂ ೨೦೨೬ ಆಗಸ್ಟ್‌ ೧೬ರ ಶನಿವಾರ ಭಾರತದ ೮೦ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.

ನಿವೃತ್ತ ಯೋಧ, ಬಡಾವಣೆಯ ನಿವಾಸಿ ಕೆ. ಥೋಮಸ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತ್ರಿವರ್ಣ ಧ್ವಜವನ್ನು ಅರಳಿಸಿದರು. ಈ ಸಂದರ್ಭದಲ್ಲಿ ಶ್ರೀ ಥೋಮಸ್‌ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.

ಬಡಾವಣೆಯ ಹಿರಿಯ ಸದಸ್ಯ, ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಮತ್ತು ಶ್ರೀ ಬಾಲಾಜಿ ಕೃಪಾ ನಿವಾಸಿಗಳ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಅವರು ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್‌ ಭಾವಚಿತ್ರಗಳಿಗೆ ಪುಷ್ಟಾರ್ಚನೆ ಮಾಡಿದರು.

ಬಡಾವಣೆಯ ಹಿರಿಯ ನಿವಾಸಿ ಶ್ರೀ ಶಿವಪ್ಪ ಶಾಂತಪ್ಪನವರ ಸ್ವಾತಂತ್ರ್ಯದ ಮಹತ್ವ ಕುರಿತು ಮಾತನಾಡಿದರು. ಶ್ರೀ ರಾಜೇಶ ಹೆಗಡೆ ಅಧ್ಯಕ್ಷ ಭಾಷಣ ಮಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.

ಬಡಾವಣೆಯ ಹಿರಿಯ ಸದಸ್ಯ ವಕೀಲ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಶ್ರೀ ಎಚ್.ವಿ. ಉದಯಶಂಕರ್‌, ಶ್ರೀ ರಾಘವೇಂದ್ರ ಕಾಮತ್‌, ಹಂಪಣ್ಣ, ರಶ್ಮಿ, ಸ್ವಾತಿ ಮತ್ತಿತರರು ಕಾರ್ಯಕ್ರಮ ಸಂಘಟಿಸುವಲ್ಲಿ ನೆರವಾಗಿದ್ದರು. ಬಡಾವಣೆಯ ಮತ್ತು ಆಸುಪಾಸಿನ ಪ್ರದೇಶಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಸಡಗರದೊಂದಿಗೆ ಪಾಲ್ಗೊಂಡರು. 
ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ.


PARYAYA: ಸ್ವಾತಂತ್ರ್ಯೋತ್ಸವ ಸಡಗರ ೨೦೨೬:   ಸ್ವಾತಂತ್ರ್ಯೋತ್ಸವ ಸಡಗರ ೨೦೨೬ ದೇ ಶದ ಇತರೆಡೆಗಳಂತೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿಯೂ ೨೦೨೬ ಆಗಸ್ಟ್‌ ೧೬ರ ಶನಿವಾರ ಭಾರತದ ೮೦ನ...

Saturday, March 22, 2025

PARYAYA: ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

 ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ

ಬೆಂಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳೆ ಸುರಿದು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತಂಪನ್ನೆರೆಯಿತು.

ಸಂಜೆ ೪.೨೦ಕ್ಕೆ ಗುಡುಗು ಸಹಿತವಾಗಿ ಸುರಿದ ಮಳೆ ಸುಮಾರು ೪೦ ನಿಮಿಷಗಳಿಗೂ ಹೆಚ್ಚು ಕಾಲ ಭೂಮಿಯನ್ನು ತೋಯಿಸಿತು.

ಮಳೆಯ ಎರಡು ವಿಡಿಯೋಗಳು ಇಲ್ಲಿವೆ.


PARYAYA: ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ:   ಹೆಗಡೆ ನಗರದಲ್ಲಿ ಮೊದಲ ಮಳೆ ಸಿಂಚನ ಬೆಂ ಗಳೂರು: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಈದಿನ (೨೦೨೫ ಮಾರ್ಚ್‌ ೨೨) ಮುಂಗಾರು ಪೂರ್ವ ಮಳ...

Monday, March 17, 2025

PARYAYA: ವರ್ಷದ ಕೊನೆಯ ಸಂಕಷ್ಟಿ ಪೂಜಾ

ವರ್ಷದ ಕೊನೆಯ ಸಂಕಷ್ಟಿ ಪೂಜಾ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯ ಬಳಿಕ ಆರಂಭವಾದ ಸಂಕಷ್ಟಿ ಪೂಜಾ ಸರಣಿಯಲ್ಲಿನ ವರ್ಷದ ಕೊನೆಯ ಸಂಕಷ್ಟಿ ಪೂಜೆಯನ್ನು ೨೦೨೫ ಮಾರ್ಚ್‌ ೧೭ರ ಸೋಮವಾರ ನಡೆಸಲಾಯಿತು.

ವಿದ್ಯುತ್‌ ಕಡಿತದ ಹಿನ್ನೆಲೆಯಲ್ಲಿ ತೈಲ ದೀಪ ಮತ್ತು ತುರ್ತು ದೀಪಗಳ ನಡುವೆಯೇ ಪೂಜಾ ಕೈಂಕರ್ಯ ನೆರವೇರಿತು.

ಪೂಜೆಯ ಸಂದರ್ಭದ ಕೆಲವು ಫೊಟೋ, ವಿಡಿಯೋ ಇಲ್ಲಿವೆ. ಸಮೀಪ ದೃಶ್ಯಕ್ಕಾಗಿ ಫೋಟೋಗಳನ್ನು ಕ್ಲಿಕ್‌ ಮಾಡಿರಿ.




ಇವುಗಳನ್ನೂ ಓದಿರಿ:

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತ, ವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

PARYAYA: ವರ್ಷದ ಕೊನೆಯ ಸಂಕಷ್ಟಿ ಪೂಜಾ: ವರ್ಷದ ಕೊನೆಯ ಸಂಕಷ್ಟಿ ಪೂಜಾ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ...

Sunday, January 26, 2025

PARYAYA: ಗಣರಾಜ್ಯೋತ್ಸವ ಸಂಭ್ರಮ-೨೦೨೫

ಗಣರಾಜ್ಯೋತ್ಸವ ಸಂಭ್ರಮ-೨೦೨೫

ಭಾರತದಾದ್ಯಂತ ಜನವರಿ ೨೬ರ ಈದಿನ ೭೬ನೇ ಗಣರಾಜ್ಯೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲೂ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕವಿ, ಬರಹಗಾರ, ಸಮಾಜ ಸೇವಕ ಸ್ಟೀಫನ್‌ ಜೋಸೆಫ್‌ ಅವರು ಧ್ವಜಾರೋಹಣ ನೆರವೇರಿಸಿ ದೇಶದ ಬಗ್ಗೆ ತಾವೇ ರಚಿಸಿದ ಕವನವನ್ನು ವಾಚಿಸಿದರು. ಪುಟ್ಟ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು.

ಸಂಘದ ಅಧ್ಯಕ್ಷ ರಾಜೇಶ ಕಮಲಾಕರ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದ ಕೆಲವು ಚಿತ್ರಗಳು ಇಲ್ಲಿವೆ.  ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.




ನೆತ್ರಕೆರೆ ಉದಯಶಂಕರ ಭಟ್‌
 ಕಾರ್ಯಕ್ರಮ ನಿರ್ವಹಣೆ.


ಸ್ಟೀಫನ್‌ ಜೋಸೆಫ್‌ ಮುಖ್ಯ ಅತಿಥಿ.
                                                                                                    ರಾಜೇಶ ಕಮಲಾಕರ ಹೆಗಡೆ ಅಧ್ಯಕ್ಷ ಭಾಷಣ.

ಹಾಗೆಯೇ ರಾಷ್ಟ್ರಮಟ್ಟದಲ್ಲಿ ನಡೆದ ಗಣರಾಜ್ಯೋತ್ಸವದ ಸಂಭ್ರಮವನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ. 


PARYAYA: ಗಣರಾಜ್ಯೋತ್ಸವ ಸಂಭ್ರಮ-೨೦೨೫: ಗಣರಾಜ್ಯೋತ್ಸವ ಸಂಭ್ರಮ-೨೦೨೫ ಭಾ ರತದಾದ್ಯಂತ ಜನವರಿ ೨೬ರ ಈದಿನ ೭೬ನೇ ಗಣರಾಜ್ಯೋತ್ಸವವನ್ನು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು. ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್...