Sunday, March 30, 2025

PARYAYA: ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ?

 ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ?

ವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅಧಿಕೃತ ಐಷಾರಾಮಿ ಕಾರು ಲಿಮೋಸಿನ್‌ ಮಾಸ್ಕೋದಲ್ಲಿ ಸ್ಫೋಟಗೊಂಡಿದೆ ಎಂದು ʼದಿ ಸನ್ʼ ವರದಿ ಮಾಡಿದೆ.

೨,೭೫,೦೦೦ ಪೌಂಡ್‌ ಬೆಲೆಯ ಪುಟಿನ್‌ ಅವರ ಈ ಅಧಿಕೃತ ಕಾರು ಸ್ಪೋಟಗೊಂಡು ಬೆಂಕಿಗೆ ಆಹುತಿಯಾಗಿರುವುದು ಈಗ ರಷ್ಯಾ ಅಧ್ಯಕ್ಷರ  ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ಭೀತಿಯನ್ನು ಹುಟ್ಟು ಹಾಕಿದೆ. ಜೊತೆಗೆ ಕ್ರೆಮ್ಲಿನ್‌ನೊಳಗಿನ ಆಂತರಿಕ ಬೆದರಿಕೆಗಳ ಬಗ್ಗೆಯೂ ಅನುಮಾನಗಳನ್ನು ಹೆಚ್ಚಿಸಿದೆ.

ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿರುವ ಲಿಮೋದ ವೀಡಿಯೊ ಅಂತರ್ಜಾಲದಲ್ಲಿಯೂ ಕಾಣಿಸಿಕೊಂಡಿದೆ. ರಷ್ಯಾ ಅಧ್ಯಕ್ಷರ ಅನಾರೋಗ್ಯ ಸಂಬಂಧಿತ ವದಂತಿಗಳ ನಡುವೆ ರಷ್ಯಾ ಯುದ್ಧದಲ್ಲಿ ನಿರ್ಣಾಯಕ ಹಿನ್ನಡೆಯನ್ನು ಅನುಭವಿಸಬಹುದು ಎಂಬುದಾಗಿ ಉಕ್ರೇನಿನ ಅಧ್ಯಕ್ಷ ವ್ಲೊಡಿಮಿರ್‌ ಝೆಲೆನ್ಸ್ಕಿ ಅವರು ಭವಿಷ್ಯ ನುಡಿದ ಕೆಲವೇ ದಿನಗಳಲ್ಲಿ ಈ ಸ್ಫೋಟ ಸಂಭವಿಸಿದೆ.

ರಣರಂಗದಲ್ಲಿ ಹೆಚ್ಚುತ್ತಿರುವ ನಷ್ಟಗಳ ಮಧ್ಯೆಝೆಲೆನ್ಸ್ಕಿ ಇತ್ತೀಚೆಗೆ ನಡೆಯುತ್ತಿರುವ ಯುದ್ಧದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದರು. "ವಾಲ್ಡಿಮಿರ್ ಪುಟಿನ್ ಶೀಘ್ರದಲ್ಲೇ ಸಾಯುತ್ತಾರೆಎಂಬುದಾಗಿ ಝೆಲೆನ್ಸ್ಕಿ ಹೇಳಿದ್ದು ಸತ್ಯ ಎಂಬುದಾಗಿ ಮಿರರ್ ವರದಿ ಮಾಡಿತ್ತು.

 "...ಇದು (ಯುದ್ಧ) ಕೊನೆಗೊಳ್ಳುತ್ತದೆ" ಎಂದು ಹೇಳಿದ್ದ ಉಕ್ರೇನ್‌ ಅಧ್ಯಕ್ಷ, "ಬಲವಾಗಿರಿ" ಮತ್ತು ಮಾಸ್ಕೋದ ಆಕ್ರಮಣವನ್ನು ನಿಲ್ಲಿಸಲು ಒತ್ತಡವನ್ನು ಮುಂದುವರಿಸಿʼ ಎಂದು ಅಮೆರಿಕಕ್ಕೆ ಮನವಿ ಮಾಡಿದ್ದರು.

ರಷ್ಯಾದ ರಾಜಕೀಯ ಗಣ್ಯರ ಸಂಕೇತವೆಂದು ಪರಿಗಣಿಸಲಾದ £275,000 ಮೌಲ್ಯದ ಔರಸ್ ಸೆನಾಟ್ಲುಬಿಯಾಂಕಾದಲ್ಲಿರುವ ಎಫ್‌ ಎಸ್‌ ಬಿ (FSB) ಪ್ರಧಾನ ಕಚೇರಿಯ ಬಳಿ ಉರಿಯುತ್ತಿರುವುದು ಕಂಡುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರಎಂಜಿನ್‌ನಿಂದ ಜ್ವಾಲೆಗಳು ಹೊರಬಂದು ನಂತರ ವಾಹನದೊಳಗೆ ಹರಡಿತು. ಅಗ್ನಿಶಾಮಕ ಸಿಬ್ಬಂದಿ ಬರುವ ಮೊದಲು ಹತ್ತಿರದ ರೆಸ್ಟೋರೆಂಟ್‌ಗಳಲ್ಲಿ ಇದ್ದ ಜನರು ಸಹಾಯ ಮಾಡಲು ಧಾವಿಸಿದರು. ವಾಹನದಿಂದ ದಟ್ಟವಾದ ಕಪ್ಪು ಹೊಗೆ ಹೊರಬರುತ್ತಿರುವುದನ್ನು ದೃಶ್ಯಗಳು ತೋರಿಸಿವೆ ಮತ್ತು ಕಾರಿನ ಹಿಂಭಾಗದಲ್ಲಿ ಹಾನಿ ಕಂಡುಬಂದಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ದಿ ಸನ್ ವರದಿಯ ಪ್ರಕಾರಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ. ಘಟನೆಯ ಬಳಿಕ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಿರತರಾಗಿರುವುದನ್ನೂ ವಿಡಿಯೋ ತೋರಿಸಿದೆ.

PARYAYA: ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ?:   ಪುಟಿನ್‌ ಐಷಾರಾಮಿ ಕಾರು ಸ್ಪೋಟ, ಕೊಲೆ ಯತ್ನ? ನ ವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಅಧಿಕೃತ ಐಷಾರಾಮಿ ಕಾರು ಲಿಮೋಸಿನ್‌ ಮಾಸ್ಕೋದಲ್ಲಿ ಸ್ಫೋಟಗೊಂ...

No comments:

Post a Comment