Showing posts with label ಯಕ್ಷಗಾನ. Show all posts
Showing posts with label ಯಕ್ಷಗಾನ. Show all posts

Tuesday, June 30, 2026

PARYAYA: ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

 ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು

ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ

ಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇಂಬುಕೊಡುವ ಕಾರ್ಯಕ್ರಮಗಳು ದೇವಾಲಯಕ್ಕೆ ವಿಶೇಷ ಕಳೆಯನ್ನು ನೀಡುತ್ತವೆ.

ಗಣೇಶೋತ್ಸವ, ವಾರ್ಷಿಕೋತ್ಸವ, ಜಾತ್ರೆ ಇವುಗಳೆಲ್ಲ ದೇವಸ್ಥಾನಕ್ಕೆ ವಿಶೇಷ ಕಳೆಯನ್ನು ತಂದುಕೊಡುವ ವಿಶೇಷ ಸಂದರ್ಭಗಳು. ಹಾಗೆಯೇ ಇಂತಹ ಸಂದರ್ಭಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವಿಶೇಷ ಸಂದರ್ಭಗಳನ್ನು ಇನ್ನಷ್ಟು ಸ್ಮರಣೀಯವನ್ನಾಗಿ ಮಾಡುತ್ತವೆ.

ದೇವಸ್ಥಾನಗಳಲ್ಲಿ ಇಂತಹ ಸಾಂಸ್ಕತಿಕ ಚಟುವಟಿಕೆಗೆ ಒದಗಿ ಬರುವ ಪ್ರೋತ್ಸಾಹ ಇನ್ನೂ ವಿಶೇಷವಾದದ್ದು.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನವು ಈ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸುತ್ತಿದೆ.

ಪ್ರತಿ ಮಾಸವೂ ಸತ್ಯ ನಾರಾಯಣ ಪೂಜೆ ಮತ್ತು ಸಂಕಷ್ಟಿ ಪೂಜೆಯನ್ನು ನಿರಂತರವಾಗಿ ನೆರವೇರಿಸುತ್ತಾ ಬಂದಿರುವುದರ ಜೊತೆಗೆ ಕಳೆದ ಎಂಟು ತಿಂಗಳುಗಳಿಂದ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಆಸಕ್ತರಿಗೆ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಕಲಿಸಿಕೊಡುವ ಕೈಕಂಕರ್ಯಕ್ಕೆ ನೀರೆಯುತ್ತಾ ಬಂದಿದೆ.

ಈ ತಂಡದ ಮೂಲಕ ಯಕ್ಷಗಾನ ಕಲಿತ ಮಕ್ಕಳು, ಮಹಿಳೆಯರು ಈ ಅವಧಿಯಲ್ಲಿ ಮೂರು ಯಕ್ಷಗಾನ ಪ್ರದರ್ಶನಗಳನ್ನೂ ಯಶಸ್ವಿಯಾಗಿ ನೀಡಿದ್ದಾರೆ. ಇದೀಗ ತಂಡವು ಯಕ್ಷಗಾನ ಕಲಿಯಬಯಸಿರುವ ಎರಡನೇ ತಂಡಕ್ಕೆ ತರಗತಿಗಳನ್ನೂ ಆರಂಭಿಸಿದೆ.

೨೦೨೬ ಜೂನ್‌ ೨೮ರ ಭಾನುವಾರ ಎರಡನೇ ತಂಡದ ಯಕ್ಷಗಾನ ತರಗತಿಯ ಆರಂಭೋತ್ಸವ ʼಬಾಲಾಜಿ ಮಹಾಗಣಪತಿಯ ಸನ್ನಿಧಿಯಲ್ಲಿ ಕಿರೀಟ ಪೂಜೆಯೊಂದಿಗೆ ಜರುಗಿತು. ಯಕ್ಷಗಾನ ವಿದ್ಯಾರ್ಥಿಗಳು, ಪೋಷಕರು, ಯಕ್ಷ ಕಲಾ ಕೌಸ್ತುಭ ಕುಟುಂಬದ ಸರ್ವ ಸದಸ್ಯರು, ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮರುದಿನ ೨೦೨೬ ಜೂನ್‌ ೨೯ರ ಸೋಮವಾರ ದೇವಸ್ಥಾನದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.

ಈ ಎರಡೂ ಕಾರ್ಯಕ್ರಮಗಳ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


PARYAYA: ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು:   ದೇಗುಲಕ್ಕೆ ಕಳೆಗಟ್ಟಿಸಿದ ಎರಡು ಕಾರ್ಯಕ್ರಮಗಳು ಯಕ್ಷಗಾನ ತರಗತಿ ದ್ವಿತೀಯ ತಂಡ ಪ್ರಾರಂಭೋತ್ಸವ + ಸತ್ಯನಾರಾಯಣ ಪೂಜಾ ಭ ಕ್ತಿ ಶ್ರದ್ಧೆಯೊಂದಿಗೆ ನಡೆಯುವ ದೇವಾರಾಧನೆ ...

Sunday, June 21, 2026

PARYAYA: ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

 ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದು.


ಯಕ್ಷಗಾನ ಕಲಾವಿದರು ತಮ್ಮ ವೇಷ ಧರಿಸುವುದನ್ನು ಸ್ವತಃ ಮಾಡುತ್ತಾರೆ, ಅದು ಅಂದವಾಗಿ ಬಣ್ಣ ಬಳಿದುಕೊಂಡು, ವೇಷಭೂಷಣ ತೊಟ್ಟುಕೊಳ್ಳುವುದರಿಂದ ಹಿಡಿದು ಗೆಜ್ಜೆ ಕಟ್ಟುವವರೆಗೂ ಅವರವರೇ ತಮ್ಮ ಕೆಲಸಗಳನ್ನು ಮಾಡುತ್ತಾರೆ.

ಗೆಜ್ಜೆ ಕಟ್ಟುವುದನ್ನು ಕಲಿಯುವ ಮುನ್ನ ಗುರುಗಳು ಗೆಜ್ಜೆಯನ್ನು ಕಲಾವಿದರಿಗೆ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಕಲಾವಿದರು ಪ್ರಪ್ರಥಮವಾಗಿ ದೇವರ ಮುಂದೆ ಹೋಗಿ ನಮಸ್ಕರಿಸಿ ಆ ಬಳಿಕ ಗುರುಗಳಿಗೆ ನಮಸ್ಕರಿಸುತ್ತಾರೆ. ಆ ಬಳಿಕ ಗುರುಗಳು ಕಲಾವಿದರಿಗೆ ಗೆಜ್ಜೆ ಕಟ್ಟುವುದನ್ನು ಹೇಳಿಕೊಡುತ್ತಾರೆ.

ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಚೌಕಿಯಲ್ಲಿ ಗಣೇಶನ ಭಾವಚಿತ್ರವನ್ನು ಇರಿಸಿರುತ್ತಾರೆ. ಗೆಜ್ಜೆ ಕಟ್ಟುವ ಮುನ್ನ ಕಲಾವಿದರು ಗಣೇಶನಿಗೆ ನಮಸ್ಕರಿಸಿ ನಂತರ ಗೆಜ್ಜೆ ಕಟ್ಟಿಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ತಿಂಗಳುಗಳಿಂದ ಯಕ್ಷಗಾನ ಕಲಿಯುತ್ತಿರುವ ಮಕ್ಕಳಿಗೆ ಇಂದು ೨೦೨೬ ಜೂನ್‌ ೨೧ರ ಭಾನುವಾರ ಗೆಜ್ಜೆ ಕಟ್ಟುವ ಸಂಭ್ರಮ. ಯಕ್ಷ ಕಲಾ ಕೌಸ್ತುಭ ತಂಡದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರು ಮಕ್ಕಳಿಗೆ ಗೆಜ್ಜೆ ಕಟ್ಟುವ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.

ಸಂದರ್ಭದ ಕೆಲವು ಪಟಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಅಂದಹಾಗೆ ಯಕ್ಷಗಾನ ಕಲಿಯಲು ಇಚ್ಛಿಸುವವರಿಗಾಗಿ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡದ ಅಭ್ಯಾಸ ಮುಂದಿನ ಭಾನುವಾರ ೨೦೨೬ ಜೂನ್‌ ೨೧ರಂದು ಬೆಳಗ್ಗೆ ಆರಂಭವಾಗಲಿದೆ. 
ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ ನೋಡಿ 👉


PARYAYA: ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು:   ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಯ ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದ...

Thursday, June 18, 2026

PARYAYA: ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

 ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ

ಬೆಂಗಳೂರು ರಾಜರಾಜೇಶ್ವರಿ ನಗರದ ಶಿವರತ್ನಪುರಿ ಟೆಂಪಲ್‌ ಆಫ್‌ ಹೆಲ್ತ್.‌ ರಸ್ತೆಯಲ್ಲಿ ಹೋಗುವವರನ್ನು ತನ್ನ ʼಪಿರಮಿಡ್‌ʼ ಆಕಾರದ ವಿಶಿಷ್ಠ ವಿನ್ಯಾಸದಿಂದಲೇ ಗಮನ ಸೆಳೆಯುವ ಸ್ಥಳ. ಇಲ್ಲಿ ಇತ್ತೀಚೆಗೆ ʼಪವಿತ್ರ ಭಾರತʼ ಕಾರ್ಯಕ್ರಮ. ೨೦೨೬ ಜೂನ್‌ ೧೩ರಂದು ವೇದ ಕುರಿತ ಸಂವಾದ ಮತ್ತು ಭರತ ನಾಟ್ಯದ ಸೊಬಗು.

೨೦೨೬ ಜೂನ್‌ ೧೪ರಂದು ವೇದ ಕುರಿತು ಸಂವಾದ ಮತ್ತು ಯಕ್ಷಗಾನ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಹೆಗಡೆ ನಗರ ಸಮೀಪದ ಅಮೃತಹಳ್ಳಿಯ ಮಕ್ಕಳಿಂದ ಸೊಗಸಾದ ʼಕಂಸವಧೆʼ ಯಕ್ಷಗಾನ. ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ʼಯಕ್ಷ ಕಲಾ ಕೌಸ್ತುಭʼ ತಂಡದ ಮೂಲಕ ಯಕ್ಷಗಾನ ಹೇಳಿಕೊಡುತ್ತಿರುವ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ಅವರ ನಿರ್ದೇಶನ.

ಭರತನಾಟ್ಯ ಕಲಿಯುತ್ತಿರುವ ಬಾಲಕಿಯರು ಮಂದಾರ್ತಿ ಅವರ ನಿರ್ದೇಶನದಲ್ಲಿ ಕೇವಲ ೧೦-೧೫ ದಿನಗಳ ಕಾಲ ನೀಡಿದ ತರಬೇತಿಯಲ್ಲಿ ಯಕ್ಷಗಾನ ಕಲಿತು ಯಶಸ್ವಿಯಾಗಿ ಅದ್ಭುತ ಪ್ರದರ್ಶನವನ್ನು ನೀಡಿದರು.


ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. ಯಕ್ಷಗಾನದ ಪೂರ್ಣ ಪ್ರಸಂಗವನ್ನು ವೀಕ್ಷಿಸಲು ಕೆಳಗಿನ ಚಿತ್ರಕ್ಲಿಕ್‌ ಮಾಡಿ.



PARYAYA: ರಾಜರಾಜೇಶ್ವರಿ ನಗರದಲ್ಲಿ ʼಕಂಸವಧೆʼ:   ರಾಜರಾಜೇಶ್ವರಿ ನಗರದಲ್ಲಿ ʼ ಕಂಸವಧೆ ʼ ಬೆಂ ಗಳೂರು ರಾಜರಾಜೇಶ್ವರಿ ನಗರದ ಶಿವರತ್ನಪುರಿ ಟೆಂಪಲ್‌ ಆಫ್‌ ಹೆಲ್ತ್.‌ ರಸ್ತೆಯಲ್ಲಿ ಹೋಗುವವರನ್ನು ತನ್ನ ʼ ಪಿರಮಿಡ್‌ ʼ ಆಕ...

Wednesday, May 20, 2026

PARYAYA: ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..

ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..
ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ. ಪೂರ್ತಿ ಓದಲು  ಪರ್ಯಾಯ ವೆಬ್‌ ಸೈಟಿನ ಹವ್ಯಕ ಪುಟಕ್ಕೆ ಭೇಟಿ ಕೊಡಿ.
PARYAYA: ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇಳಿ..:   ಬಂಗ್ಲೆ ಗುಡ್ಡೆಯಲ್ಲೋ ... ಬಾಕೀಮಾರಿನಲ್ಲೋ ಕೂತು ಕೇ ಳಿ.. ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ. ಪೂರ್ತಿ ಓದಲು ಈ ಪರ್ಯಾಯ ವೆಬ್‌ ಸೈಟಿನ ಹವ್ಯಕ ಪುಟಕ್ಕೆ ಭ...

Tuesday, May 12, 2026

PARYAYA: ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

 ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ

ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡ ಹಾಗೂ ಯಕ್ಷಗಾನ ಕುರಿತಾಗಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಎಂಎಎಚ್‌ಇ ʼಮಾಹೆʼ) ಟಿಎ ಪೈ ಮ್ಯಾನೇಜ್‌ ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ) ಬೆಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಸುಂದರವಾದ ಸಾಕ್ಷ್ಯಚಿತ್ರವೊಂದನ್ನು (ಡಾಕ್ಯಮೆಂಟರಿ) ಸಿದ್ಧ ಪಡಿಸಿದ್ದಾರೆ.

ಈ ಸಾಕ್ಷ್ಯ ಚಿತ್ರದಲ್ಲಿ ಯಕ್ಷಗಾನ, ಅದರ ಹಾಡುಗಾರಿಕೆ, ಬಣ್ಣಗಾರಿಕೆ ವೇಷಭೂಷಣ, ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಇಂಗ್ಲಿಷಿನಲ್ಲಿ  ವಿವರಿಸಿದ್ದಾರೆ. ಈ ಸಾಕ್ಷ್ಯ ಚಿತ್ರವನ್ನು ಇಲ್ಲಿ ನೋಡಬಹುದು.

ಎರಡನೇ ತಂಡ:
ಈ ಮಧ್ಯೆ, ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2025 ನವೆಂಬರ್‌ 26ರಂದು ಪ್ರಾರಂಭವಾದ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡವು ತನ್ನ ಎರಡನೇ ತಂಡಕ್ಕೆ ತರಬೇತಿ ಆರಂಭಿಸಲು ಸಜ್ಜಾಗಿದೆ. (ಚಿತ್ರಗಳ   ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ).

ಕೇವಲ ಆರು ತಿಂಗಳ ಅವಧಿಯಲ್ಲಿ ಯಕ್ಷಗುರು ಉಮೇಶ ರಾಜ್‌ ಅವರಿಂದ ಯಕ್ಷಗಾನ ಕಲಿತ ಮಕ್ಕಳು ಜಕ್ಕೂರಿನ ʼಸುಗಿ-ಹುಗ್ಗಿʼಯಲ್ಲಿ ನೀಡಿದ ಪ್ರದರ್ಶನವೂ ಸೇರಿದಂತೆ ಐದು ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ʼಅಭಿಮನ್ಯು ಕಾಳಗʼ, ʼಭಾರ್ಗವ ವಿಜಯʼ ಮತ್ತು ʼಲವ ಕುಶ ಕಾಳಗʼ ಪ್ರದರ್ಶನಗಳನ್ನು ನೀಡಿ ಪ್ರೇಕ್ಷಕರ ಮನರಂಜಿಸಿದ್ದಾರೆ.

ಇದೀಗ ಜೂನ್‌ ಮೊದಲ ವಾರದಿಂದ ಆರಂಭವಾಗಲಿರುವ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡಕ್ಕೆ ಸೇರ್ಪಡೆಯಾಗಬಯಸುವವರು ಯಕ್ಷಗುರು ಉಮೇಶರಾಜ್‌ ಅವರನ್ನು ದೂರವಾಣಿ ಸಂಖ್ಯೆ 9663671591 ಅಥವಾ 9606981591 ಮೂಲಕ ಸಂಪರ್ಕಿಸಬಹುದು ಎಂದು ಹೇಳಿಕೆ ತಿಳಿಸಿದೆ.



ಯಕ್ಷಗಾನ ಕುರಿತ ವಿವರಗಳಿಗೆ ನೋಡಿ:  ಪರ್ಯಾಯ ವೆಬ್‌ ಸೈಟಿನ ʼಯಕ್ಷಗಾನ/ತಾಳಮದ್ದಳೆʼ ಪುಟ.

PARYAYA: ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ:   ಯಕ್ಷಗಾನ, ಯಕ್ಷ ಕಲಾ ಕೌಸ್ತುಭ: ‘ಮಾಹೆ’ ಮಕ್ಕಳ ಸಾಕ್ಷ್ಯ ಚಿತ್ರ ಬೆಂ ಗಳೂರಿನ ಯಕ್ಷ ಕಲಾ ಕೌಸ್ತುಭ ತಂಡ ಹಾಗೂ ಯಕ್ಷಗಾನ ಕುರಿತಾಗಿ ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜು...

Sunday, March 29, 2026

PARYAYA: ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ

 ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ

ಮುಗಿಲೆತ್ತರಕ್ಕೆ ಚಾಚಿದ ಅಪಾರ್ಟ್‌ಮೆಂಟುಗಳು, ಬೃಹತ್‌ ಐಟಿ ಕಂಪೆನಿಗಳು. ಮಧ್ಯೆ ಮಧ್ಯೆ ಅಂಕುಡೊಂಕಿನ ಸಿಮೆಂಟ್‌ ರಸ್ತೆಗಳು. ಅವುಗಳ ಬದಿಯಲ್ಲಿ ಹಸಿರಿಗಾಗಿ ನೆಟ್ಟ ಗಿಡಗಳು. ಎಲ್ಲಿ ನೋಡಿದರೂ ಬಹುತೇಕ ಹಿಂದಿ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲೇ ಮಾತನಾಡುವ ಮಂದಿ.

ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿ.

೨೦೨೬ ಮಾರ್ಚ್‌ ೨೭ರ ರಾಮನವಮಿಯ ದಿನ. ಇಲ್ಲಿ ರಾಮೋತ್ಸವ ಸಡಗರ. ಭಜನೆ, ನೃತ್ಯ, ಹಾಡುಗಳ ಸಂಭ್ರಮ. ಇವೆಲ್ಲದರ ಮಧ್ಯೆ ಅಲ್ಲಿದ್ದ ಎಲ್ಲರನ್ನೂ ಸೂಜಿಗಲ್ಲಿನಂತೆ ಗಮನ ಸೆಳೆದದ್ದು, ಚೆಂಡೆ- ಮದ್ದಳೆಯ ಸದ್ದು, ಯಕ್ಷಗಾನದ ನೃತ್ಯ, ಭಾಗವತರ ಕಂಚಿನ ಕಂಠದ ಹಾಡುಗಳು.

ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ಅಭ್ಯಾಸ ನಡೆಸುತ್ತಿದ್ದ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು, ಅವರ ಅಮ್ಮಂದಿರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಸಂಭ್ರಮದೊಂದಿಗೆ ಈ ಯಕ್ಷಗಾನ ಪ್ರದರ್ಶನ ನೀಡಿದವರು.

ಅವರು ಪ್ರದರ್ಶಿಸಿದ್ದು ರಾಮಾಯಣದ ಉತ್ತರ ಕಾಂಡದಲ್ಲಿ ಬರುವ ʼಲವ ಕುಶ ಕಾಳಗʼದ ಪ್ರಸಂಗ. ಈ ಪ್ರಸಂಗದ ವಿವರವನ್ನು ಸಂಘಟಕರ ಜೊತೆಗೆ ತಂಡದ ಸದಸ್ಯರೇ ಆದ ಶಿವಾಂಶ್‌ ಮತ್ತು ಉಮಾ ದೇವಿ ಎನ್.‌ ಅವರು ಹಿಂದಿ ಮತ್ತು ಇಂಗ್ಲಿಷಿನಲ್ಲಿ ವಿವರ ನೀಡಿದರು.

ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರ ನಿರ್ದೇಶನದಲ್ಲಿ ಶ್ರೀರಾಮನಾಗಿ ಉಮಾದೇವಿ ಎನ್,
ಸೀತಾಮಾತೆಯಾಗಿ ಅರ್ಚನಾ ಬಂಗೇರಲವಕುಮಾರನಾಗಿ ಆದ್ಯಾ ಶ್ರೀವಲ್ಲಿಕುಶಕುಮಾರನಾಗಿ ಆದ್ಯ ಎಂ ಕಶ್ಯಪ್ಶತ್ರುಘ್ನನಾಗಿ ಆದ್ಯ ಭಟ್  ಮತ್ತು ವಾಲ್ಮೀಕಿ ಮಹರ್ಷಿಯಾಗಿ ಪ್ರಣೀತಾ ರೈ ಮಿಂಚಿದರು.

ವೆಂಕಟೇಶ್ ಪ್ರಭು ಅವರು ಮದ್ದಳೆ,  ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಚೆಂಡೆಯೊಂದಿಗೆ ಉಮೇಶರಾಜ್‌ ಅವರಿಗೆ ಸಾಥ್‌ ನೀಡಿದರು. ಚೌಕಿಯಲ್ಲಿ ಹಲವು ತಾಸುಗಳ ಮೊದಲೇ ಬಣ್ಣ ಹಚ್ಚಿಕೊಂಡು, ವೇಷಭೂಷಣ ಧರಿಸಿ ಸಿದ್ದರಾಗುವಲ್ಲಿ ಪ್ರಸನ್ನ ಮಯ್ಯ ಮತ್ತು ಉಮೇಶ ಮಂದಾರ್ತಿ ಸಹಕರಿಸಿದರು.

ಉಮೇಶ ರಾಜ್‌ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದಾರೆ.

ರಂಗಸ್ಥಳದ ಸಮೀಪ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಲವ ಕುಶ ಕಾಳಗʼದ ಎರಡು ಭಾಗಗಳು ಇಲ್ಲಿವೆ.

ಮೇಲಿನ ಮತ್ತು ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡುವ ಮೂಲಕ ಈ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ ವೀಕ್ಷಿಸಿ.

ಅಥವಾ ಪರ್ಯಾಯ.ಕಾಮ್ ವೆಬ್‌ ಸೈಟಿನಲ್ಲಿ ಮೇಲಿರುವ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ಕೊಡಿ.
PARYAYA: ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ:   ಭಾರತೀಯ ಸಿಟಿಯಲ್ಲಿ ಲವ ಕುಶ ಕಾಳಗ ಮು ಗಿಲೆತ್ತರಕ್ಕೆ ಚಾಚಿದ ಅಪಾರ್ಟ್‌ಮೆಂಟುಗಳು, ಬೃಹತ್‌ ಐಟಿ ಕಂಪೆನಿಗಳು. ಮಧ್ಯೆ ಮಧ್ಯೆ ಅಂಕುಡೊಂಕಿನ ಸಿಮೆಂಟ್‌ ರಸ್ತೆಗಳು. ಅವುಗಳ...

Sunday, March 22, 2026

PARYAYA: ಗೀತಾ ರಾಮಾಯಣ

 ಗೀತಾ ರಾಮಾಯಣ

ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ದೇವಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗಿನ ದೃಶ್ಯ. (ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ.)

ಅವರು ಅಭ್ಯಾಸ ಮಾಡುತ್ತಿದ್ದದು ಲವಕುಶ ಕಾಳಗದ ಒಂದು ದೃಶ್ಯ.

ಈ ಕಥೆ ಯಾವುದು, ಅದನ್ನು ಹೇಳುತ್ತಿರುವುದು ಏಕೆ? ಹೇಳುತ್ತಿರುವುದು ಯಾರು ಇವೆಲ್ಲ ಪ್ರಶ್ನೆಗಳಿಗೆ ಉತ್ತರ: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿಯ ನಿಕೂ ಹೋಮ್ಸ್‌ ನಲ್ಲಿ 2026 ಮಾರ್ಚ್‌ 27ರ ಸಂಜೆ 6.45 ಗಂಟೆಗೆ.

ಪೂರ್ತಿ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ಪರ್ಯಾಯ.ಕಾಮ್ ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

PARYAYA: ಗೀತಾ ರಾಮಾಯಣ:   ಗೀತಾ ರಾಮಾಯಣ ಇ ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್...

Friday, March 20, 2026

PARYAYA: ಯಕ್ಷರಂಗದ ಭೀಷ್ಮ, 'ದಶಾವತಾರಿ' ಸೂರಿಕುಮೇರು ಕೆ. ಗೋವಿಂದ ಭ...

ಯಕ್ಷರಂಗದ ಭೀಷ್ಮ, 'ದಶಾವತಾರಿಸೂರಿಕುಮೇರು ಕೆ. ಗೋವಿಂದ ಭಟ್ ಇನ್ನಿಲ್ಲ

ತೆಂಕುತಿಟ್ಟು ಯಕ್ಷಗಾನ ಲೋಕದ ಅಪ್ರತಿಮ ಮೇರು ಕಲಾವಿದ'ಕಲಾತಪಸ್ವಿ' ಎಂದೇ ಖ್ಯಾತರಾಗಿದ್ದ ಸೂರಿಕುಮೇರು ಕೆ. ಗೋವಿಂದ ಭಟ್ (90) ಅವರು 2026 ಮಾರ್ಚ್‌ 20 ಶುಕ್ರವಾರ ರಾತ್ರಿ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ತಮ್ಮ ಪುತ್ರನ ನಿವಾಸದಲ್ಲಿ ದೈವಾಧೀನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರುಯಕ್ಷಗಾನದ ಒಂದು ಸುದೀರ್ಘ ಮತ್ತು ಸುವರ್ಣ ಯುಗಕ್ಕೆ ತೆರೆ ಎಳೆದಿದ್ದಾರೆ.

ನಡೆದಾಡುವ ವಿಶ್ವಕೋಶದ ಸಾಧನೆಯ ಹಾದಿ

ಬಡತನದ ಬೇಗೆಯಲ್ಲೂ ಕಲೆಯನ್ನು ಅಪ್ಪಿಕೊಂಡ ಭಟ್ಟರುಯಕ್ಷಗಾನದ 'ನಡೆದಾಡುವ ವಿಶ್ವಕೋಶ' ಎಂದೇ ಪ್ರಸಿದ್ಧರು.

  • ಹುಟ್ಟು:
     1940ರ ಮಾರ್ಚ್ 22ರಂದು ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕೆಮನೆ ಕುಟುಂಬದಲ್ಲಿ ಜನನ.
  • ಆರಂಭ: ಕಡುಬಡತನದ ಬದುಕು. 1951ರಲ್ಲಿ ಧರ್ಮಸ್ಥಳ ಮೇಳದ 'ಬಾಲಗೋಪಾಲವೇಷದ ಮೂಲಕ ಕಲಾ ಪಯಣ ಆರಂಭ.
  • ದಾಖಲೆ: ಒಂದೇ ಮೇಳದಲ್ಲಿ (ಧರ್ಮಸ್ಥಳ) ಸತತ 54 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಪರೂಪದ ದಾಖಲೆ ಇವರದ್ದು.
  • ಪರಕಾಯ ಪ್ರವೇಶ: ರಕ್ತಬೀಜಾಸುರಇಂದ್ರಜಿತುಭೀಷ್ಮಕೌರವನಂತಹ ಪಾತ್ರಗಳಿಗೆ ಇವರು ಜೀವ ತುಂಬುತ್ತಿದ್ದ ರೀತಿ ಅದ್ಭುತ.

ಸಾಹಿತ್ಯ ಮತ್ತು ಕಲಾ ಸೇವೆ

ಕೇವಲ ನಟನೆಯಷ್ಟೇ ಅಲ್ಲದೆಇವರು ಒಬ್ಬ ಶ್ರೇಷ್ಠ ಅರ್ಥಧಾರಿ ಹಾಗೂ ಪ್ರಸಂಗಕರ್ತರೂ ಹೌದು.

  • ಕೃತಿಗಳು: 'ಮಣಿಮೇಖನೆ', 'ಕಾವೇರಿ ಮಹಾತ್ಮೆ', 'ಮಹಾವೀರ ಸಾಮ್ರಾಟ ಅಶೋಕಮುಂತಾದ ಪ್ರಸಂಗಗಳನ್ನು ರಚಿಸಿದ್ದಾರೆ.
  • ಪ್ರಶಸ್ತಿಗಳ ಗರಿ: 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸೇರಿದಂತೆ ಹತ್ತು ಹಲವು ಗೌರವಗಳು ಇವರಿಗೆ ಲಭಿಸಿವೆ.

ಹುಟ್ಟೂರು 

ಗೋವಿಂದ ಭಟ್ಟರ ಹುಟ್ಟೂರಿನ ಬಗ್ಗೆ ವಿವಿಧೆಡೆ ಬೇರೆ ಬೇರೆ ಹೆಸರುಗಳು ಕೇಳಿಬರುತ್ತವೆಯಾದರೂಅವೆಲ್ಲವೂ ಭೌಗೋಳಿಕವಾಗಿ ಹತ್ತಿರದ ಪ್ರದೇಶಗಳೇ ಆಗಿವೆ:

ಸ್ಥಳ

ವಿವರಣೆ

ಕೋಡಪದವು

ಇವರು ಜನಿಸಿದ ಮೂಲ ಗ್ರಾಮ (ಬಂಟ್ವಾಳ ತಾಲೂಕು).

ಸೂರಿಕುಮೇರು

ಇವರು ವಾಸವಿದ್ದ ಮತ್ತು ಗುರುತಿಸಿಕೊಂಡಿದ್ದ ಪ್ರಸಿದ್ಧ ಸ್ಥಳ (ಮಂಗಳೂರು-ಪುತ್ತೂರು ಹೆದ್ದಾರಿಯಲ್ಲಿದೆ).

ಕುಕ್ಕೆಮನೆ

ಇವರ ಮನೆತನದ ಹೆಸರು ಅಥವಾ ಕುಟುಂಬದ ನೆಲೆ (ಇಡ್ಕಿದು/ಸೂರಿಕುಮೇರು ಸಮೀಪ).

ಸೂರಿಕುಮೇರು/ಇಡ್ಕಿದು ಪ್ರದೇಶದಿಂದ ಕೋಡಪದವು ಅಂದಾಜು ರಿಂದ ಕಿ.ಮೀ. ಅಂತರದಲ್ಲಿದೆ. ವಾಹನದಲ್ಲಿ ಸಾಗಿದರೆ ಕೇವಲ 10-15 ನಿಮಿಷಗಳ ಹಾದಿ. ಆದ್ದರಿಂದಲೇ ಪತ್ರಿಕೆಗಳಲ್ಲಿ ಈ ಮೂರೂ ಹೆಸರುಗಳು ಅದಲುಬದಲಾಗಿ ಬಳಕೆಯಾಗುತ್ತಿರುತ್ತವೆ. ಇವೆಲ್ಲವೂ ವಿಟ್ಲದ ಆಸುಪಾಸಿನಲ್ಲೇ ಇವೆ.

ಕಣ್ಣಿನ ದೃಷ್ಟಿ ಮಂಜಾಗುತ್ತಿದ್ದರೂಶರೀರ ದಣಿಯುತ್ತಿದ್ದರೂ ರಂಗಸ್ಥಳವೇ ನನ್ನ ಗತಿ ಎಂದು ಕೊನೆಯವರೆಗೂ ಕಲಾ ಸೇವೆಯನ್ನೇ ಉಸಿರಾಗಿಸಿಕೊಂಡ ಈ ಮಹಾನ್ ಚೇತನಕ್ಕೆ ನಮೋ ನಮಃ.

ಚಿತ್ರಕೃಪೆ: https://ruthumana.com/2017/06/18/kashameru_soorikumeru_govinda-bhat/

ಪರ್ಯಾಯ.ಕಾಮ್ ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

PARYAYA: ಯಕ್ಷರಂಗದ ಭೀಷ್ಮ, 'ದಶಾವತಾರಿ' ಸೂರಿಕುಮೇರು ಕೆ. ಗೋವಿಂದ ಭ...: ಯಕ್ಷರಂಗದ ಭೀಷ್ಮ , ' ದಶಾವತಾರಿ ' ಸೂರಿಕುಮೇರು ಕೆ. ಗೋವಿಂದ ಭಟ್ ಇನ್ನಿಲ್ಲ ತೆಂ ಕುತಿಟ್ಟು ಯಕ್ಷಗಾನ ಲೋಕದ ಅಪ್ರತಿಮ ಮೇರು ಕಲಾವಿದ , ' ಕಲಾತಪಸ್ವಿ ...

Thursday, January 29, 2026

PARYAYA: ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

 ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ೨೦೨೫ ಜನವರಿ ೨೫ರ ಭಾನುವಾರ ಹಿಂದೂ ಸಮಾಜೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದಿಂದ ʼಭಾರ್ಗವ ವಿಜಯʼ ಯಕ್ಷಗಾನ ಕಾರ್ಯಕ್ರಮ ನಡೆಯಿತು.






ಹಿಮ್ಮೇಳದಲ್ಲಿ ಭಾಗವತರು:ಉಮೇಶ ರಾಜ್ ಮಂದಾರ್ತಿ
ಮದ್ದಳೆ: ನರಸಿಂಹ ಆಚಾರ್ ಕೂರಾಡಿ 
ಚೆಂಡೆ:‌ ಸುಬ್ರಹ್ಮಣ್ಯ ಸಾಸ್ತಾನ
ವೇಷಭೂಷಣ: ಯಕ್ಷ ಕಲಾ ಕೌಸ್ತುಭ ಬೆಂಗಳೂರು
ಉದಯ ಮಂದಾರ್ತಿ,
ಗುರುರಾಜ್‌  ಬಿಲ್ಲಾಡಿ ನಡೆಸಿಕೊಟ್ಟರು.

ಮುಮ್ಮೇಳದಲ್ಲಿ ಪರಶುರಾಮ – ಶಿವಾಂಷ್
ಕಾರ್ತ್ಯವೀರ್ಯಾರ್ಜನ – ಆದ್ಯ ಕಶ್ಯಪ್
ಕಾಲಾಜ್ಞ – ಆದ್ಯ
ರೇಣುಕೆ -ಆದ್ಯ ಶ್ರೀವಲ್ಲಿ
ಜಮದಗ್ನಿ – ಉಮಾದೇವಿ
ಶತ್ರಜಿತು – ಪುಣ್ಯ

ರಂಗಸ್ಥಳಕ್ಕೆ ಕಳೆ ಕಟ್ಟಿದರು.

ಅದಕ್ಕೂ ಮುನ್ನ ಜನವರಿ ೨೪ರ ಭಾನುವಾರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ತಂಡಕ್ಕಾಗಿ ತಂದ ಹೊಸ ಕಿರೀಟಗಳ ಪೂಜೆಯೂ ನಡೆಯಿತು.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ಯಕ್ಷಗಾನ ಭಾರ್ಗವ ವಿಜಯದ ವಿಡಿಯೋಗಳು ಮೇಲಿವೆ.  ಯಕ್ಷಗಾನ/ ತಾಳಮದ್ದಳೆಯ ಹೆಚ್ಚಿನ ಸುದ್ದಿಗಳಿಗಾಗಿ  PARYAYA.COMನ ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ನೀಡಿ. 

PARYAYA: ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ:   ಹಿಂದೂ ಸಮಾಜೋತ್ಸವ- ಭಾರ್ಗವ ವಿಜಯ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ೨೦೨೫ ಜನವರಿ ೨೫ರ ಭಾನುವಾರ ಹಿಂದೂ ಸಮಾಜೋತ್ಸವ ನಡೆಯಿತು. ಈ ಸಂದರ್...

Saturday, January 17, 2026

PARYAYA: ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ

 ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ

ಬೆಂಗಳೂರಿನ ಜಕ್ಕೂರು ಮೈದಾನದಲ್ಲಿ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ೨೦೨೬ ಜನವರಿ ೧೭ ಮತ್ತು ೧೮ರಂದು ಎರಡು ದಿನ ಸುಗ್ಗಿ ಹುಗ್ಗಿ ಸಂಕ್ರಾಂತಿ ಸಂಭ್ರಮ.

ವಿವಿಧ ಬಗೆಯ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ನಾಟಕ, ಸ್ಪರ್ಧೆಗಳು, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ ತಿನಸುಗಳು, ಉಡುಪುಗಳ ಮೇಳ.

೨೦೨೬ರ  ಜನವರಿ ೧೭ರಂದು ವಿವಿಧ ಬಗೆ ನೃತ್ಯ ಸ್ಪರ್ಧೆಗಳಲ್ಲಿ ನಾಗವಾರ ಆಸುಪಾಸಿನ ಮಕ್ಕಳ ತಂಡ- ʼಭೈರವʼ ನೃತ್ಯ ತಂಡವು ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ತುಣುಕೊಂದನ್ನು ಪ್ರದರ್ಶಿಸಿತು. ಯಕ್ಷ ಕಲಾ ಕೌಸ್ತುಭದ ಯಕ್ಷಗಾನ ಗುರು ಉಮೇಶ್‌ ರಾಜ್‌ ಅವರಿಗೆ ಮಾರ್ಗದರ್ಶನ ಮಾಡಿದರು.

ಯಕ್ಷಗಾನದ ವಿಡಿಯೋ ಇಲ್ಲಿದೆ. ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://youtu.be/yDx_oeGV4aM







PARYAYA: ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ:   ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ ಬೆಂ ಗಳೂರಿನ ಜಕ್ಕೂರು ಮೈದಾನದಲ್ಲಿ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ ಅವರ...

Sunday, December 21, 2025

PARYAYA: ಶಾಲಾ ಮಕ್ಕಳಿಂದ ಯಕ್ಷಗಾನ ʼಭಾರ್ಗವ ವಿಜಯʼ

 ಶಾಲಾ ಮಕ್ಕಳಿಂದ ಯಕ್ಷಗಾನ ʼಭಾರ್ಗವ ವಿಜಯʼ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ- ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ೨೦೨೫ರ ಡಿಸೆಂಬರ್‌ ೧೯ ಮತ್ತು ೨೦ರಂದು ಶಾಲಾ ವಾರ್ಷಿಕೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ʼಭಾರ್ಗವ ವಿಜಯʼ ಯಕ್ಷಗಾನವನ್ನು ಪ್ರದರ್ಶಿಸಿದರು.

ಎರಡು ಭಾಗಗಳಲ್ಲಿ ಇರುವ ಯಕ್ಷಗಾನದ ವಿಡಿಯೋಗಳು ಇಲ್ಲಿವೆ:




ಇನ್ನಷ್ಟು ವಿವರಗಳಿಗೆ PARYAYA.COMನ   ಯಕ್ಷಗಾನ/ತಾಳಮದ್ದಳೆ ಪುಟಕ್ಕೆ ಭೇಟಿ ನೀಡಿ.
PARYAYA: ಶಾಲಾ ಮಕ್ಕಳಿಂದ ಯಕ್ಷಗಾನ ʼಭಾರ್ಗವ ವಿಜಯʼ:   ಶಾಲಾ ಮಕ್ಕಳಿಂದ ಯಕ್ಷಗಾನ ʼ ಭಾರ್ಗವ ವಿಜಯ ʼ ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರ- ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ೨೦೨೫ರ ಡಿ...

Wednesday, November 26, 2025

PARYAYA: ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ

 ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ

ಬೆಂಗಳೂರಿನಲ್ಲಿ ರಾಜ್ಯೋತ್ಸವ ಅಂದರೆ ನೆನಪಾಗುವುದು  ಭಾಷಣ, ನಾಟಕ,ಸಂಗೀತ, ನೃತ್ಯ.

ಆದರೆ, ರಾಮಕೃಷ್ಣ ಹೆಗಡೆ ನಗರ, ಜಕ್ಕೂರಿಗೆ ಸಮೀಪದ ಅಮೃತಹಳ್ಳಿಯ ತಲಕಾವೇರಿ ಬಡಾವಣೆಯಲ್ಲಿ ಈ ಬಾರಿಯ ರಾಜ್ಯೋತ್ಸವ ವಿಶೇಷವಾಗಿತ್ತು. ಈ ಬಡಾವಣೆಯ ಪುಟ್ಟ ಮಕ್ಕಳು ಬಣ್ಣ ಬಣ್ಣದ ವೇಷ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಪೌರಾಣಿಕ ಪ್ರಸಂಗದ ಪಾತ್ರಧಾರಿಗಳಾಗಿ ಯಕ್ಷ ರಂಗಭೂಮಿಯಲ್ಲಿ ಮಿಂಚಿದರು.

ಕೇವಲ ೧೦ರಿಂದ ೧೫ದಿನಗಳ ಅವಧಿಯ ತರಬೇತಿಯಲ್ಲಿ ಯಕ್ಷಗಾನದ ಭಾಗವತಿಕೆಗೆ ಹೆಜ್ಜೆ ಹಾಕಿ ಅದ್ಭುತ ಪ್ರದರ್ಶನ ನೀಡಿದರು. ʼಅಭಿಮನ್ಯು ಕಾಳಗʼವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು.

ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರ ನಿರ್ದೇಶನ ಮತ್ತು ಅವರ ತಂಡದ ಸದಸ್ಯರ ಸಹಕಾರದೊಂದಿಗೆ ತಲಕಾವೇರಿ ಬಡಾವಣೆಯ ʼಅಭಿಮನ್ಯು ಕಾಳಗʼ ಯಕ್ಷಗಾನ ಎಲ್ಲರ ಮನ ಸೆಳೆಯಿತು.

ಉಮೇಶ ರಾಜ್‌ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದಾರೆ.

ʼಅಭಿಮನ್ಯು ಕಾಳಗʼ ಪ್ರದರ್ಶನಕ್ಕೆ ನಾಲ್ಕೈದು ತಾಸು ಮುಂಚಿತವಾಗಿಯೇ ರಂಗಭೂಮಿಯ ಸಮೀಪದ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಅಭಿಮನ್ಯು ಕಾಳಗʼದ ಎರಡು ಭಾಗಗಳು ಇಲ್ಲಿವೆ.

ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡುವ ಮೂಲಕ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ 👇 ವೀಕ್ಷಿಸಬಹುದು.

ಭಾಗ ೧ ಯು ಟ್ಯೂಬ್‌ ಲಿಂಕ್:‌ https://youtu.be/1LFnZpXOnlQ

ಭಾಗ ೨ ಯು ಟ್ಯೂಬ್‌ ಲಿಂಕ್‌: https://youtu.be/yl-0kIOX3HQ


ಅಥವಾ PARYAYA.COMನ  ಯಕ್ಷಗಾನ ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ.
ಇನ್ನೊಂದು ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿರಿ.
PARYAYA: ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ:   ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼ ಅಭಿಮನ್ಯು ಕಾಳಗ ʼ ಬೆಂ ಗಳೂರಿನಲ್ಲಿ ರಾಜ್ಯೋತ್ಸವ ಅಂದರೆ ನೆನಪಾಗುವುದು   ಭಾಷಣ, ನಾಟಕ,ಸಂಗೀತ, ನೃತ್ಯ. ಆದರೆ, ರಾಮಕೃಷ್ಣ ಹೆ...