Showing posts with label ಪಂಚಲಿಂಗೇಶ್ವರ. Show all posts
Showing posts with label ಪಂಚಲಿಂಗೇಶ್ವರ. Show all posts

Friday, January 23, 2026

PARYAYA: ಪಂಚಲಿಂಗೇಶ್ವರನ ಅವಭೃತ

 ಪಂಚಲಿಂಗೇಶ್ವರನ ಅವಭೃತ

ವಭೃತ (ದೇವನಾಗರಿಯಲ್ಲಿ ʼವಭೃʼಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರವಾದ ಮಂಗಳಸ್ನಾನ. ಇದು ಯಜ್ಞದ ಸಮಾಪ್ತಿಯನ್ನು ಸೂಚಿಸುವ ವಿಧಿಯಾಗಿದ್ದುಪಾಪ ಪರಿಹಾರ ಮತ್ತು ಶುದ್ಧೀಕರಣದ ಸಂಕೇತ. 


ಅವಭೃತದ ಮುಖ್ಯಾಂಶಗಳು:

  • ಯಜ್ಞಾಂತ ಸ್ನಾನ: ಪ್ರಧಾನ ಯಾಗ ಅಥವಾ ಯಜ್ಞ ಪೂರ್ಣಗೊಂಡ ನಂತರ ಮಾಡಲಾಗುವ ವಿಶೇಷ ಜಳಕ.
  • ಶುದ್ಧೀಕರಣ: ಯಜ್ಞದ ಸಮಯದಲ್ಲಿ ಉಂಟಾಗಬಹುದಾದ ದೋಷಗಳನ್ನು ಕಳೆದುಯಜಮಾನನನ್ನು ಶುದ್ಧಗೊಳಿಸುವ ಪ್ರಕ್ರಿಯೆ.
  • ಮಂಗಳ ಕಾರ್ಯ: ಇದು ಯಜ್ಞದ ಮುಕ್ತಾಯದ ಸೂಚಕವಾಗಿದ್ದುಯಶಸ್ಸನ್ನು ಸೂಚಿಸುತ್ತದೆ.
  • ನದಿ/ತೀರ್ಥ ಸ್ನಾನ: ಸಾಮಾನ್ಯವಾಗಿ ಹರಿಯುವ ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಈ ಸ್ನಾನವನ್ನು ಆಚರಿಸಲಾಗುತ್ತದೆ. 

ಸರಳವಾಗಿ ಹೇಳುವುದಾದರೆಯಜ್ಞದ ಕೊನೆಯಲ್ಲಿ ಆಚರಿಸಲಾಗುವ ಸಮಾರೋಪ ಸ್ನಾನವೇ 'ಅವಭೃತ'. ದೇವಾಲಯದ ವಾರ್ಷಿಕೋತ್ಸವ, ಜಾತ್ರೆ, ಆಯನ ಕೂಡಾ ದೇವರ ಶಕ್ತಿಯನ್ನು ಜಾಗೃತಗೊಳಿಸುವ ಯಜ್ಞ, ಹಾಗಾಗಿಯೇ ಆಯನದ ಕೊನೆಗೆ ಅವಭೃತ ನಡೆಯುತ್ತದೆ.

ವಿಟ್ಲಾಯನದ ಸಡಗರದ ರಥೋತ್ಸವದ ಮರುದಿನ ಕೊಡಂಗಾಯಿ ಹೊಳೆಯಲ್ಲಿ ವಿಟ್ಲದೊಡೆಯ ಪಂಚಲಿಂಗೇಶ್ವರನ ಅವಭೃತ ನಡೆಯುತ್ತದೆ. ಈ ಅವಭೃತಕ್ಕಾಗಿ ದೇವಸ್ಥಾನದಿಂದ ಕೊಡಂಗಾಯಿವರೆಗೆ ಸಾಗುವಾಗ  ದೇವಸ್ಥಾನದ ಕಟ್ಟೆಯಿಂದ ತೊಡಗಿ, ವಿವಿಧ ಕಟ್ಟೆಗಳಲ್ಲಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲುತ್ತದೆ. ಪ್ರತಿವರ್ಷವೂ ಈ ಕಟ್ಟೆಗಳಿಗೆ ದೇವರು ಬರುವ ಹೊತ್ತಿನಲ್ಲಿ ಆಸುಪಾಸಿನ ಜನರು ಭಕ್ತಿ ಪೂರ್ವಕವಾಗಿ ನೆರೆದು ಭಗವಂತನಿಗೆ ಕೈ ಮುಗಿಯುತ್ತಾರೆ.

ಅವಭೃತಕ್ಕಾಗಿ ಪಂಚಲಿಂಗೇಶ್ವರನು ಸಾಗುವ ದೃಶ್ಯದ ವಿಡಿಯೋ ಹಾಗೂ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸಮೀಪದ ನೆತ್ರಕೆರೆಯ ಎರಡು ಕಟ್ಟೆಗಳಲ್ಲಿ ನಡೆದ ಪಂಚಲಿಂಗನ ಪೂಜೆಯ ಚಿತ್ರ, ವಿಡಿಯೋಗಳು ಮೇಲಿವೆ. (ಚಿತ್ರ, ವಿಡಿಯೋ ಕೃಪೆ: ಸದಾಶಿವ ಬನ, ವಿಟ್ಲ ಸುದ್ದಿಗಳು ಗ್ರೂಪ್‌, ನೆತ್ರಕೆರೆ ಮಠ ಗ್ರೂಪ್)

ಅವಭೃತದ ಮರುದಿನ ಧ್ವಜಾವರತಣದೊಂದಿಗೆ ವಿಟ್ಲಾಯನದ ಸಡಗರ ಕೊನೆಗೊಳ್ಳುತ್ತದೆ.

PARYAYA: ಪಂಚಲಿಂಗೇಶ್ವರನ ಅವಭೃತ:   ಪಂಚಲಿಂಗೇಶ್ವರನ ಅವಭೃತ ಅ ವಭೃತ (ದೇವನಾಗರಿಯಲ್ಲಿ ʼ ಅವಬೃಥ ʼ ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರ...

Thursday, January 22, 2026

PARYAYA: ವಿಟ್ಲ ತೇರಿನ ಸುಂದರ ಕ್ಷಣ!

 ವಿಟ್ಲ ತೇರಿನ ಸುಂದರ ಕ್ಷಣ!

ವಿಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು.

ವಿಟ್ಲ ತೇರಿನ ಸುಂದರ ಕ್ಷಣದ ವಿಡಿಯೋ ಇಲ್ಲಿದೆ 👇👇.


ಇದನ್ನೂ ನೋಡಿ:

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

PARYAYA: ವಿಟ್ಲ ತೇರಿನ ಸುಂದರ ಕ್ಷಣ!:  ವಿಟ್ಲ ತೇರಿನ ಸುಂದರ ಕ್ಷಣ! ವಿ ಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು. ವಿಟ್ಲ ತೇರಿನ ಸುಂದರ ಕ್ಷಣದ ವಿಡಿ...

Wednesday, January 14, 2026

PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

 ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

ವಿಟ್ಲದ ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯು ಸಡಗರದೊಂದಿಗೆ ೨೦೨೬ ಜನವರಿ ೧೪ರ ಬುಧವಾರ ಮಕರ ಸಂಕ್ರಾಂತಿಯ ಶುಭದಿನ ಆರಂಭವಾಯಿತು. ವಿಟ್ಲ ಪಂಚಲಿಂಗೇಶ್ವರ ಜಾತ್ರೆಯು ಆಸುಪಾಸಿನಲ್ಲಿ ʼವಿಟ್ಲಾಯನʼ ಎಂದೇ ಖ್ಯಾತಿ ಪಡೆದಿದೆ.

ಧ್ವಜಾರೋಹಣದೊಂದಿಗೆ ಆರಂಭವಾದ ಜಾತ್ರಾ ಸಡಗರವು ಜನವರಿ ೨೧ರವರೆಗೆ ಮುಂದುವರಿಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಭಕ್ತರನ್ನು ಮುದಗೊಳಿಸಲಿವೆ.

ಜಾತ್ರೋತ್ಸವ ಸಡಗರದ ವಿವಿಧ ಸಂದರ್ಭದ ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್)




 PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ:   ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ ವಿ ಟ್ಲದ ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯು ಸಡಗರದೊಂದಿಗ...

Friday, March 28, 2025

PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತ...

 ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ

ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ

ದೈವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ವಿಟ್ಲ ಪಾಂಡವರು ನೆಲೆಸಿದ್ದ ಏಕ ಚಕ್ರನಗರ ಎಂಬ ಪ್ರತೀತಿ ಇದೆ.

ಇದೇ ಬಂಟ್ವಾಳ ತಾಲೂಕಿನ ಬೊಳ್ನಾಡುವಿನ ಚೀರುಂಭ ಭಗವತಿ ದೇವಸ್ಥಾನ ಕೂಡಾ ಹಳೆಯದೇ. ಕೆಲವು ವರ್ಷಗಳ ಹಿಂದೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಆಗಿದ್ದರೆ, ಇತ್ತೀಚೆಗೆ ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ನಡೆದಿದೆ. ೨೦೨೫ರ ಮಾರ್ಚ್‌ ೨೦ರಿಂದ ೨೭ರವರೆಗೆ ಭಗವತಿ ದೇವಸ್ಥಾನದಲ್ಲಿ ಭರಣಿ ಮಹೋತ್ಸವ ನಡೆದಿದೆ.

ಈ ಸಂದರ್ಭದಲ್ಲಿ ಒಂದು ವಿಶೇಷವಾದ ಘಟನೆ ವಿಟ್ಲದಲ್ಲಿ ನಡೆದಿದೆ. ಮನುಷ್ಯರು ಅದರಲ್ಲೂ ಗಣ್ಯರು ಪರಸ್ಪರ ಭೇಟಿ ಮಾಡುವುದು ನಮಗೆಲ್ಲರಿಗೂ ಗೊತ್ತು. ಆದರೆ ದೇವರು- ದೇವಿ ಭೇಟಿ ಮಾಡುವುದು ಅಪರೂಪದ ಸಂಗತಿ. ಭಗವತಿ ದೇವಸ್ಥಾನದ ಭರಣಿ ಮಹೋತ್ಸವದ ಸಂದರ್ಭದಲ್ಲಿ ಚೀರುಂಭ ಭಗವತಿ, ಸನಿಹದ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಿ ಪಂಚಲಿಂಗೇಶ್ವರನ ದರ್ಶನಗೈದ ಘಟನೆ ನಡೆದಿದೆ.

ಶ್ರೀ ಪಂಚಲಿಂಗೇಶ್ವರ ಮತ್ತು ಚೀರುಂಭ ಭಗವತಿ ಭೇಟಿ ಹೀಗೆ ನಡೆಯುವುದು ೬೦೦ ವರ್ಷಗಳಿಗೆ ಒಮ್ಮೆ ಎಂಬ ಪ್ರತೀತಿ ಇದೆ. ಹೀಗಾಗಿ ಪ್ರಯಾಗದಲ್ಲಿ ನಡೆದ ಮಹಾಕುಂಭ ಮೇಳದಂತೆಯೇ, ಮನುಷ್ಯರ ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ, ಪಾಲ್ಗೊಳ್ಳಬಹುದಾದ ಅಪರೂಪದ ಭೇಟಿ ಇದು.

೨೦೨೫ರ ಮಾರ್ಚ್‌ ೨೫ರಂದು ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉತ್ಸವ ರೂಪದಲ್ಲಿ ಈ ಘಟನೆ ನಡೆಯಿತು. ಬೊಳ್ನಾಡು ಚೀರುಂಭ ಭಗವತಿ ದೇವಸ್ಥಾನದಿಂದ ಕಾಲ್ನಡಿಗೆಯಲ್ಲೇ ಹೊರಟು ವಿಟ್ಲದ ಶ್ರೀ ಪಂಚಲಿಂಗೇಶ್ವರ ಸನ್ನಿಧಾನಕ್ಕೆ ವಾದ್ಯಮೇಳದೊಂದಿಗೆ ಆಗಮಿಸಿದ ಭಗವತಿ ಮಾತೆಯು ಶ್ರೀ ಪಂಚಲಿಂಗೇಶ್ವರನ ದೇವರ ದರ್ಶನ-ಭೇಟಿಯನ್ನು ಮಾಡಿದ ಅಪರೂಪದ ದೃಶ್ಯವನ್ನು ಸಹಸ್ರಾರು ಮಂದಿ ವೀಕ್ಷಿಸಿದರು.


ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.

ಈ ಕೆಳಗಿನವುಗಳನ್ನೂ ಓದಿರಿ:

ವಿಟ್ಲ ಪಂಚಲಿಂಗೇಶ್ವರನಿಗೆ ಮರುಹುಟ್ಟು ಸಂಭ್ರಮ

ವಿಟ್ಲ ಪಂಚಲಿಂಗೇಶ್ವರನಿಗೆ ಧರ್ಮಸ್ಥಳದ 'ಮುಗುಳಿ'

ವಿಟ್ಲಾಯನದ ಕೊನೆಯ ದಿನ

Wahl! What Water falls..!

PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತ...:   ವಿಟ್ಲ ಶ್ರೀ ಪಂಚಲಿಂಗೇಶ್ವರ- ಬೊಳ್ನಾಡು ಶ್ರೀ ಚೀರುಂಭ ಭಗವತಿ ಭೇಟಿ ಇದು ೬೦೦ ವರ್ಷಗಳಗೊಮ್ಮೆ ನಡೆಯುವ ಅಪರೂಪದ ಉತ್ಸವ ದೈ ವ -ದೇವತೆಗಳ ಬೀಡಾಗಿರುವ ಕರ್ನಾಟಕದ ದಕ್ಷಿ...