Tuesday, April 8, 2025

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5

ಪಾರ್ಥನು ಸೇತುವೆಯನ್ನು ಮತ್ತೊಮ್ಮೆ ನಿರ್ಮಿಸಿದ್ದೇ ಆದರೆ, ಅದನ್ನು ಮತ್ತೆ ಮುರಿಯುವುದಕ್ಕೆ ತಾನೂ ಸಿದ್ಧ ಎಂಬುದಾಗಿ ಹನುಮಂತ ವೃದ್ಧನಿಗೆ ಹೇಳುತ್ತಾನೆ. ಅರ್ಜುನ ಮತ್ತೊಮ್ಮೆ ಬಾಣ ಪ್ರಯೋಗಿಸಿ ಸೇತುವೆ ನಿರ್ಮಿಸುತ್ತಾನೆ. ಆಗ ವೃದ್ಧ ಈ ಸೇತುವೆ ಎಷ್ಟು ಗಟ್ಟಿ ಇದೆ ಎಂದು ಒಮ್ಮೆ ಪರೀಕ್ಷಿಸಿ ಬರುತ್ತೇನೆ ಹೇಳಿ ತೆರಳುತ್ತಾನೆ.

ಸ್ವಲ್ಪ ಹೊತ್ತು ವೃದ್ಧನ ಬರುವಿಕೆಗಾಗಿ ಕಾದ ಹನುಮಂತ ಮುಂದೇನು ಮಾಡುತ್ತಾನೆ?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.

 ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ.

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನತಾಳಮದ್ದಳೆ ಭಾಗ-

ಶ್ರೀರಾಮ ದರ್ಶನತಾಳಮದ್ದಳೆ ಭಾಗ-

ಶ್ರೀರಾಮ ದರ್ಶನತಾಳಮದ್ದಳೆ ಭಾಗ-

ಶ್ರೀರಾಮ ದರ್ಶನತಾಳಮದ್ದಳೆ ಭಾಗ-4

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5:   ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-5 ಪಾ ರ್ಥನು ಸೇತುವೆಯನ್ನು ಮತ್ತೊಮ್ಮೆ ನಿರ್ಮಿಸಿದ್ದೇ ಆದರೆ, ಅದನ್ನು ಮತ್ತೆ ಮುರಿಯುವುದಕ್ಕೆ ತಾನೂ ಸಿದ್ಧ ಎಂಬುದಾಗಿ ಹನುಮಂತ ವೃದ...

Monday, April 7, 2025

PARYAYA: ವಿಧಾನಸೌಧಕ್ಕೆ ವರ್ಣಾಲಂಕಾರ

 ವಿಧಾನಸೌಧಕ್ಕೆ ವರ್ಣಾಲಂಕಾರ

ಇದು ಸುವರ್ಣ ನೋಟ

ನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ – ಹೀಗೆ ವಿಶೇಷ ಸಂದರ್ಭಗಳಲ್ಲಿ ವರ್ಣಾಲಂಕಾರದಿಂದ ಜಗಮಗಿಸುತ್ತಿದ್ದ ಕರ್ನಾಟಕದ ವಿಧಾನಸೌಧ ಇದೀಗ ನಿತ್ಯವೂ ವರ್ಣಾಲಂಕಾರದಿಂದ ಸಂಭ್ರಮಿಸುತ್ತಿದೆ.

ವಿಧಾನಸೌಧದ ನಿತ್ಯ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೫ ಏಪ್ರಿಲ್‌ ೦೬ರ ಶ್ರೀರಾಮ ನವಮಿಯಂದು ಉದ್ಘಾಟಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ವಿಧಾನಸೌಧ ಇನ್ನು ಮುಂದೆ ಪ್ರತಿದಿನವೂ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರದೊಂದಿಗೆ ಜಗಮಗಿಸಲಿದೆ.

ವಿಧಾನಸೌಧ ಬಣ್ಣದ ದೀಪಗಳ ಬೆಳಕಿನಲ್ಲಿ ಕಣ್ಸೆಳೆದ ಚಿತ್ರಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಆ ಚಿತ್ರಗಳು ಇಲ್ಲಿವೆ. ಜೊತೆಗೆ ಈ ಚಿತ್ರಗಳನ್ನಾಧರಿಸಿ ʼಪರ್ಯಾಯʼ ನಿರ್ಮಿಸಿದ ಒಂದು ವಿಡಿಯೋ ಕೂಡಾ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ


ಶಕ್ತಿ ಸೌಧದ ಹೊಳಪು,

ಬಣ್ಣಗಳ ಚಿತ್ತಾರ!
ವಿಶೇಷ ದಿನದ ಸಂಭ್ರಮ,
ನಿತ್ಯವೂ ಬೆಳಗುವ ಸಿಂಗಾರ!
ಕತ್ತಲೆಗೆ ಬೆಳಕು,
ಮನಗಳಿಗೆ ಹರ್ಷ!
ನಾಡಿನ ಹೆಮ್ಮೆಯ ಪ್ರತೀಕ,
ಸದಾ ಬೆಳಗಲಿ ಈ ಸ್ಪರ್ಶ!

ಕಟ್ಟಿದರು ಕನಸನು ಹೊತ್ತು,
ನಾಡಿನ ಭವ್ಯತೆಯ ನೆಲೆ.
ಶಿಲ್ಪಿಗಳ ಕೈಚಳಕದ ಕಲೆ,
 
ಕಲ್ಲಿನಲಿ ಮೂಡಿದ ಬೆಲೆ.

ಸ್ವಾತಂತ್ರ್ಯದ ಉಸಿರು ಸೇರಿ,
ಪ್ರಜಾಪ್ರಭುತ್ವದ ಗುಡಿ.
ಕಾಲದ ಪುಟಗಳಲಿ ಮೆರೆದಿಹುದು,
ಕರುನಾಡಿನ ಕೀರ್ತಿ ನುಡಿ.

ಕನಸುಗಾರರ ದೃಷ್ಟಿಯ ಫಲ,
ಕೆಂಗಲ್ ಹನುಮಂತಯ್ಯನವರ ಶ್ರಮ.
ನಾಡಿನ ಆಡಳಿತದ ತಾಣವಿದು,
ಕನ್ನಡಿಗರ ಹೆಮ್ಮೆಯ ಧ್ವಜ ಸ್ತಂಭ.


ವಿಡಿಯೋ ನೋಡಲು ಯುಟ್ಯೂಬ್‌ ವಿಡಿಯೋ ಕೊಂಡಿ ಅಥವಾ ಅದರ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ.

ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ವಿಧಾನಸೌಧಕ್ಕೆ ವರ್ಣಾಲಂಕಾರ:   ವಿಧಾನಸೌಧಕ್ಕೆ ವರ್ಣಾಲಂಕಾರ ಇದು ಸುವರ್ಣ ನೋಟ ಕ ನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ – ಹೀಗೆ ವಿಶೇಷ ಸಂದರ್ಭಗಳಲ್ಲಿ ವರ್ಣಾಲಂಕಾರದಿಂದ ಜಗಮಗಿಸ...

Sunday, April 6, 2025

PARYAYA: ಶ್ರೀ ರಾಮ ನವಮಿ ಆಚರಣೆ

 ಶ್ರೀ ರಾಮ ನವಮಿ ಆಚರಣೆ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ೨೦೨೫ರ ಏಪ್ರಿಲ್‌ ೬ರ ಭಾನುವಾರ ಶ್ರದ್ಧಾ ಭಕ್ತಿಯೊಂದಿಗೆ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.

ಶ್ರೀರಾಮ ನವಮಿಯ ಪ್ರಯುಕ್ತ ಎಲ್ಲ ದೇವರಿಗೂ ಅಭಿಷೇಕ, ಅಭಯ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಶ್ರೀರಾಮ ಪೂಜಾ, ವೆಂಕಟೇಶ್ವರ ಅಷ್ಟೋತ್ತರ, ಚಾಮರ ಸೇವೆಯನ್ನು ಸಲ್ಲಿಸಲಾಯಿತು.

ರಾತ್ರಿ ಭಜನೆ, ಮಹಾಮಂಗಳಾರತಿ ನೆರವೇರಿತು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

ಪೂಜಾ ಕಾರ್ಯಕ್ರಮದ ಬಳಿಕ ಭಕ್ತರೆಲ್ಲರಿಗೂ ಪಾನಕ, ಕೋಸಂಬರಿ, ಮಜ್ಜಿಗೆ ಪ್ರಸಾದ ವಿತರಿಸಲಾಯಿತು.

ಯೂ ಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಲಿಂಕ್‌ ಕ್ಲಿಕ್‌ಮಾಡಿರಿ: {https://youtu.be/XmvpPci20JM }

ಶ್ರೀರಾಮನ ಪ್ರವರ ತಿಳಿಯಲು ಈ ವಿಡಿಯೋ ನೋಡಿರಿ:

ಇವುಗಳನ್ನೂ ಓದಿರಿ:

ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ

ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

ಮಾಘ ಸತ್ಯನಾರಾಯಣ ಪೂಜೆ

ವರ್ಷದ ಕೊನೆಯ ಸಂಕಷ್ಟಿ ಪೂಜಾ

PARYAYA: ಶ್ರೀ ರಾಮ ನವಮಿ ಆಚರಣೆ:   ಶ್ರೀ ರಾಮ ನವಮಿ ಆಚರಣೆ ಬೆಂ ಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇ...

PARYAYA: ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ

 ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ

ಬೆಂಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸುಮಾರು ೫೦೦ ಕೋಟಿ ರೂಪಾಯಿಗಳ ವೆಚ್ಚದ ತಮಿಳುನಾಡಿನ ರಾಮೇಶ್ವರಂ ಬಳಿಯ ನೂತನ  ಪಂಬನ್‌ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ೨೦೨೬ರ ರಾಮನವಮಿಯ ದಿನವಾಗಿರುವ ಈದಿನ (೦೬ ಏಪ್ರಿಲ್)‌ ಲೋಕಾರ್ಪಣೆ ಮಾಡಿದರು.

ಶ್ರೀರಾಮನು ಲಂಕೆಯಲ್ಲಿ ರಾವಣನನ್ನು ವಧಿಸಿ ಅಯೋಧ್ಯೆಗೆ ವಾಪಸಾಗುವಾಗ ರಾಮೇಶ್ವರಂಗೆ ಭೇಟಿ ನೀಡಿ ಜ್ಯೋತಿರ್ಲಿಂಗ ದರ್ಶನ  ಪಡೆದಿದ್ದನೆಂಬ ಪ್ರತೀತಿ ಇದೆ.

ಕಾಕತಾಳೀಯವಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಶ್ರೀಲಂಕಾ ಪ್ರವಾಸದಿಂದ ವಾಪಸಾಗುವಾಗ ರಾಮೇಶ್ವರದಲ್ಲಿ  ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ನಂತರ ನೂತನ ಪಂಬನ್‌ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆಯ ವಿಡಿಯೋ ಇಲ್ಲಿದೆ ನೋಡಿರಿ:


ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ. ಅಥವಾ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.

ಇವುಗಳನ್ನೂ ನೋಡಿರಿ/ ಓದಿರಿ:

ಸಮುದ್ರದ ಮೇಲೊಂದು ಸೇತುವೆ ಕೌತುಕ!

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

https://youtu.be/MIP4rO3Gejg


PARYAYA: ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ:   ಸಮುದ್ರದ ಮೇಲಿನ “ಲಿಫ್ಟ್‌ ʼ ಸೇತುವೆ ಲೋಕಾರ್ಪಣೆ ಬೆಂ ಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರ...

Saturday, April 5, 2025

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!

 ಸಮುದ್ರದ ಮೇಲೊಂದು ಸೇತುವೆ ಕೌತುಕ!

ದೇಶದಲ್ಲೇ ಮೊದಲು ಇಂತಹ ಸೇತುವೆ

ರಾಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರಿಯ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೧೪ರಲ್ಲಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸುಮಾರು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಅತ್ಯಾಧುನಿಕ ಎಂಜಿನಿಯರಿಂಗ್‌ ಪದ್ಧತಿಯನ್ನು ಒಳಗೊಂಡಿದೆ. ಹಡಗುಗಳ ಸಂಚಾರಕ್ಕೆ ಅನುಕೂಲವಾಗಲು ಇಲ್ಲಿ ನಿರ್ಮಿಸಲಾಗಿರುವ ʼವರ್ಟಿಕಲ್‌ ಲಿಫ್ಟ್‌ʼ (ಲಂಬ ಎತ್ತು ಸೇತುವೆ) ಸಮುದ್ರದ ಮೇಲಿನ ಕೌತುಕ ಎಂದರೆ ತಪ್ಪಿಲ್ಲ..

ಹಳೆಯ ಸೇತುವೆ ಪಕ್ಕದಲ್ಲೇ ಹೊಸದಾಗಿ ನಿರ್ಮಿಸಲಾಗಿರುವ ಈ ನೂತನ ಸೇತುವೆ ಸುಮಾರು ೨ ಕಿಲೋ ಮೀಟರಿನಷ್ಟು ಉದ್ದವಿದೆ. ಈ ಸೇತುವೆಯಲ್ಲಿ ಸುರಕ್ಷತೆಗಾಗಿ, ವೇಗ ನಿಯಂತ್ರಣಕ್ಕಾಗಿ ಆಧುನಿಕ ಎಂಜಿನಿಯರಿಂಗ್‌ ವಿಧಾನವನ್ನು ಬಳಸಿ ಪ್ರಯಾಣಿಕರ ಹಾಗೂ ರೈಲಿನ ಸುರಕ್ಷತೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರ್‌ ವಿ ಎನ್‌ ಎಲ್‌ನ ಹಿರಿಯ ಅಧಿಕಾರಿ ಆರ್.‌ ಶ್ರೀನಿವಾಸನ್‌ ಹೇಳುತ್ತಾರೆ.

 ಈ ವಿಡಿಯೋ ನೋಡಿ. ಅಂದಾಜು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ರೈಲು ಸೇತುವೆಯ ಮೇಲೆ ಹೇಗೆ ಸರಾಗವಾಗಿ ಸಾಗಿ ಹೋಗುತ್ತದೆ.

ಆದರೆ ಈ ಸೇತುವೆಯ ಕೆಳಭಾಗದಲ್ಲಿ ಹಡಗು ಬಂದರೆ?

ಅಂತಹ ಹಡಗುಗಳಿಗೆ ಸಾಗಿ ಹೋಗಲು ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆಳಗೆ ಹಡಗು ಬಂದಾಗ ಸೇತುವೆಯ ಈ ಲಿಫ್ಟ್‌ ಮಾದರಿಯ ಭಾಗವನ್ನು ನಿಧಾನವಾಗಿ ಲಂಬಾಕಾರವಾಗಿ ಅಂದರೆ ನೇರವಾಗಿ ಮೇಲಕ್ಕೆ ಎತ್ತಲಾಗುತ್ತದೆ.

ಹಡಗುಗಳಿಗೆ ಹೋಗಲು ವ್ಯವಸ್ಥೆ ಮಾಡುವ ಈ ಕೆಲಸಕ್ಕೆ ಹಿಂದೆ ೪೫ ನಿಮಿಷ ಬೇಕಾಗಿದ್ದರೆ, ಈಗ ಕೇವಲ ೫ ನಿಮಿಷದಲ್ಲಿ ಈ ಕೆಲಸ ಆಗುತ್ತದೆ.

ಲಿಫ್ಟ್‌ ಮಾದರಿಯ ಸೇತುವೆಯ ಭಾಗವೇ ಈ ಪಂಬನ್‌ ನೂತನ ಸೇತುವೆಯ ವಿಶೇಷ. ಲಂಬಾಕಾರವಾಗಿ ಹೀಗೆ ಸೇತುವೆಯ ಭಾಗವನ್ನೇ ಮೇಲಕ್ಕೆ ಎತ್ತುವ ತಂತ್ರಜ್ಞಾನದ ಬಳಕೆಯಾಗಿರುವ ಇಂತಹ ಸೇತುವೆ ಇಡೀ ದೇಶದಲ್ಲಿ ಬೇರೆ ಇಲ್ಲ. ದೇಶಕ್ಕೆ ಇದೇ ಮೊದಲನೆಯದು. ಲಿಫ್ಟ್‌ ಮಾದರಿಯ ಈ ಭಾಗದ ಉದ್ದ ೭೨ ಮೀಟರಿನಷ್ಟಿದೆ. ಈ ಲಿಫ್ಟ್‌ ೨೨ ಮೀಟರಿನಷ್ಟು ಎತ್ತರಕ್ಕೆ ಏರಬಲ್ಲುದು.

 ಈ ವಿಶೇಷ ವ್ಯವಸ್ಥೆಯಿಂದ ರೈಲಿನ ಸರಾಗ ಸಂಚಾರಕ್ಕೆ ವ್ಯವಸ್ಥೆ ಆಗಿದೆ. ಜೊತೆಗೆ ಕೆಳಗೆ ಸಮುದ್ರದಲ್ಲಿ ಬರುವ ಹಡಗುಗಳ ಸಂಚಾರಕ್ಕೂ ತೊಂದರೆ ಇಲ್ಲ.

ಈ ನೂತನ ಸೇತುವೆ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಲಾಭವನ್ನು ತಂದು ಕೊಡಲಿದೆ. ದೇಶದ ʼಚಾರ್‌ ಧಾಮ್ ಯಾತ್ರೆʼ ಪರಿಪೂರ್ಣವಾಗಲು ರಾಮೇಶ್ವರಂಗೆ ಯಾತ್ರಿಕರು ಭೇಟಿ ಕೊಡಲೇಬೇಕು. ಈ ಸೇತುವೆಯಿಂದಾಗಿ ಇಂತಹ ಯಾತ್ರಿಕರಿಗೆ ಅನುಕೂಲವಾಗಲಿದೆ. ಹಾಗೆಯೇ ವಿದೇಶೀ ಪ್ರವಾಸಿಗಳಿಗೂ ಅನುಕೂಲವಾಗಲಿದೆ. ರಾಮೇಶ್ವರಕ್ಕೆ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಯೂಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ  ಅಥವಾ ಲಿಂಕ್‌ ಕ್ಲಿಕ್‌ ಮಾಡಿರಿ:

Video link:

https://youtu.be/MIP4rO3Gejg

ಇವುಗಳನ್ನೂ ನೋಡಿರಿ/ ಓದಿರಿ:

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!:   ಸಮುದ್ರದ ಮೇಲೊಂದು ಸೇತುವೆ ಕೌತುಕ! ದೇಶದಲ್ಲೇ ಮೊದಲು ಇಂತಹ ಸೇತುವೆ ರಾ ಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರ...

Wednesday, April 2, 2025

PARYAYA: ಇದು ಮೇಲಕ್ಕೆ ಧುಮುಕುವ ಜಲಪಾತ..!

 ಇದು ಮೇಲಕ್ಕೆ ಧುಮುಕುವ ಜಲಪಾತ..!

 ಭೂಮಿ ಅನೇಕ ನಿಗೂಢಗಳನ್ನು ಹೊಂದಿದೆ. ಅವೆಲ್ಲವೂ ನಮಗಿನ್ನೂ ಪರಿಚಿತವಾಗಿಲ್ಲ. ನೀರು ಹರಿಯುವುದು ಕೆಳಕ್ಕೆ ಹಾಗೆಯೇ ಜಲಪಾತ ಧುಮುಕುವುದು ಕೂಡಾ ಕೆಳಕ್ಕೆ. ಆದರೆ ಇದಕ್ಕೆ ವಿರುದ್ಧವಾಗಿ ಮೇಲಕ್ಕೆ ನೀರು ಹರಿಯುವುದೆಂದರೆ ಅದೊಂದು ನಿಗೂಢ. ಹೀಗೇಕೆ ಎಂಬ ಪ್ರಶ್ನೆಗೆ ಉತ್ತರ ಕೂಡಾ ಕಷ್ಟ.

ಭಾರತ ಇಂತಹ ಹತ್ತಾರು ವಿಸ್ಮಯ, ನಿಗೂಢಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇರುವ ನಾನೇಘಾಟ್‌ ಜಲಪಾತ. ಮುಂಬೈಯಿಂದ ಸುಮಾರು ಮೂರು ಗಂಟೆಗಳಷ್ಟು ಪಯಣ ಮಾಡಿದರೆ ಸಿಗುವ ಜಲಪಾತ ಇದು. ಪುಣೆಯ ಜುನ್ನಾರ್‌ ಬಳಿ ಸಹ್ಯಾದ್ರಿ ಪರ್ವತ ಶ್ರೇಣಿಯ ಉತ್ತರಕ್ಕೆ ಈ ಜಲಪಾತ ಇದೆ.

ಅಷ್ಟಕ್ಕೂ ಈ ಈ ಜಲಪಾತದ ವಿಶೇಷ ಏನೆಂದರೆ ಇದು ಇತರ ಜಲಪಾತಗಳಿಗೆ ವ್ಯತಿರಿಕ್ತವಾಗಿ ಮೇಲ್ಮುಖವಾಗಿ ದುಮ್ಮಿಕ್ಕುತ್ತದೆ. ಹೀಗಾಗಿ ಇದಕ್ಕೆ ʼರಿವರ್ಸ್‌ ವಾಟರ್‌ ಫಾಲ್ಸ್‌ʼ ಅಂದರೆ ʼಉಲ್ಟಾ ಜಲಪಾತʼ ಎಂದೇ ಹೆಸರಿದೆ. ಈ ಜಲಪಾತವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಆದರೆ ಈ ಜಲಪಾತದ ಬಗ್ಗೆ ಬಹುಮಂದಿಗೆ ಗೊತ್ತೇ ಇಲ್ಲ.

ಈ ಜಲಪಾತ ಹೀಗೆ ಏಕೆ? ನೀರು ಕೆಳಕ್ಕೆ ಹರಿಯುವ ಬದಲು ಮೇಲಕ್ಕೆ ಏಕೆ ಹರಿಯುತ್ತದೆ ಎಂಬ ಪ್ರಶ್ನೆ ಸಹಜ. ವೈಜ್ಞಾನಿಕವಾಗಿ ಇದಕ್ಕೆ ಲಭಿಸಿರುವ ಉತ್ತರ ಏನು ಎಂದರೆ ಜಲಪಾತದ ಕೆಳಗಿನ ಕಣಿವೆ ಭಾಗದಿಂದ ಮೇಲಕ್ಕೆ ಪ್ರಬಲವಾದ ಗಾಳಿ ಬೀಸುವುದಂತೆ. ಆ ಪ್ರಬಲ ಗಾಳಿಯ ಒತ್ತಡಕ್ಕೆ ಸಿಲುಕಿ ಜಲಪಾತದ ನೀರು ಕೆಳಕ್ಕೆ ಧುಮ್ಮಿಕ್ಕುವ ಬದಲು ಮೇಲ್ಮುಖವಾಗಿ ಧುಮುಕುತ್ತದೆಯಂತೆ.

ಏನೇ ಇರಲಿ. ಗಾಳಿ- ನೀರಿನ ಈ ತಳ್ಳಾಟ  ನೋಡುಗರ ಪಾಲಿಗೆ ಒಂದು ಅಪೂರ್ವವಾದ ನೋಟ, ನೈಸರ್ಗಿಕ ವಿದ್ಯಮಾನವೇ ಸರಿ. ಮೈ ನವಿರೇಳಿಸುವ ಈ ಜಲಪಾತದ ಸೊಬಗನ್ನು ವಿಡಿಯೋದಲ್ಲಿ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ: 

ಈ ಕೆಳಗಿನವುಗಳನ್ನೂ ಓದಿರಿ:

PARYAYA: ಇದು ಮೇಲಕ್ಕೆ ಧುಮುಕುವ ಜಲಪಾತ..!:   ಇದು ಮೇಲಕ್ಕೆ ಧುಮುಕುವ ಜಲಪಾತ..! ಈ ಭೂಮಿ ಅನೇಕ ನಿಗೂಢಗಳನ್ನು ಹೊಂದಿದೆ. ಅವೆಲ್ಲವೂ ನಮಗಿನ್ನೂ ಪರಿಚಿತವಾಗಿಲ್ಲ. ನೀರು ಹರಿಯುವುದು ಕೆಳಕ್ಕೆ ಹಾಗೆಯೇ ಜಲಪಾತ ಧುಮು...

Tuesday, April 1, 2025

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4

 ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4

ಮ್ಮಿಬ್ಬರ ನಡುವಣ ಪಂಥಾಹ್ವಾನದಲ್ಲಿ ತಾನು ಸೋತು ಈಗ ಈ ಅಗ್ನಿಕುಂಡಕ್ಕೆ ಹಾರುವ ಸ್ಥಿತಿ ಬಂದೊದಗಿದೆ ಎಂಬುದಾಗಿ ಪಾರ್ಥ ಹೇಳುತ್ತಿದ್ದಂತೆಯೇ ʼಇದೊಳ್ಳೆ ಕಥೆಯಾಯಿತಲ್ಲ. ನೀನು ಬಾಣದ ಸೇತುವೆ ನಿರ್ಮಿಸುವುದಂತೆ ಅದನ್ನು ಆ ಕೋತಿ ಮುರಿಯುವುದಂತೆ. ಇದರ ಚಂದವನ್ನು ನೋಡಬೇಕಪ್ಪ. ಯಾರಿದ್ದಾರಯ್ಯ ಇದನ್ನು ನೋಡಿದವರು? ಎಂಬ ಮರುಪ್ರಶ್ನೆ ಎಸೆಯುತ್ತಾನೆ ವೃದ್ಧ. ಮುಂದೇನಾಯಿತು?

ವಿಡಿಯೋ ಪೂರ್ತಿ ನೋಡಿ:

ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ವಿಡಿಯೋ ನೋಡಿ ಅಥವಾ  ʼಯಕ್ಷಗಾನ/ ತಾಳಮದ್ದಳೆ ʼ ಪುಟ ಕ್ಲಿಕ್‌ ಮಾಡಿ ಪೂರ್ತಿ ಕಥೆ ನೋಡಿ.

 ಕೆಳಗಿನವುಗಳನ್ನೂ ಓದಿರಿ:

ಕೊರೋನಾದಿಂದ ರಕ್ಷಣೆ ಹೇಗಣ್ಣಇಲ್ಲಿದೆ ಜಾಗೃತಿ ಯಕ್ಷಗಾನ

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

ಬಲಿಪರು ಇನ್ನು ದಂತಕಥೆ ಮಾತ್ರ.

ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಶ್ರೀರಾಮ ದರ್ಶನತಾಳಮದ್ದಳೆ ಭಾಗ-

ಶ್ರೀರಾಮ ದರ್ಶನತಾಳಮದ್ದಳೆ ಭಾಗ-

ಶ್ರೀರಾಮ ದರ್ಶನತಾಳಮದ್ದಳೆ ಭಾಗ-

PARYAYA: ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4:   ಶ್ರೀರಾಮ ದರ್ಶನ- ತಾಳಮದ್ದಳೆ ಭಾಗ-4 ತ ಮ್ಮಿಬ್ಬರ ನಡುವಣ ಪಂಥಾಹ್ವಾನದಲ್ಲಿ ತಾನು ಸೋತು ಈಗ ಈ ಅಗ್ನಿಕುಂಡಕ್ಕೆ ಹಾರುವ ಸ್ಥಿತಿ ಬಂದೊದಗಿದೆ ಎಂಬುದಾಗಿ ಪಾರ್ಥ ಹೇಳುತ್ತಿ...