Monday, April 14, 2025

PARYAYA: ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್ಮ ಕೈಯಾರೆ ಬೂಟುಗಳನ್ನು ನೀಡಿ ಅವುಗಳನ್ನು ಧರಿಸುವಂತೆ ವಿನಂತಿಸಿದರು.

ಏಕೆ ಗೊತ್ತೇ?

ಈ ವ್ಯಕ್ತಿ ೧೪ ವರ್ಷಗಳ ಹಿಂದೆ ಪ್ರತಿಜ್ಞೆಯೊಂದನ್ನು ಮಾಡಿ ಪಾದರಕ್ಷೆ ಧರಿಸುವುದನ್ನು ಬಿಟ್ಟು ಬಿಟ್ಟಿದ್ದರು. ಪಾದರಕ್ಷೆ ಧಾರಣೆಯನ್ನು ಬಿಟ್ಟ ಈ ಸಂದರ್ಭದಲ್ಲಿ ಅವರು ಮಾಡಿದ್ದ ಪ್ರತಿಜ್ಞೆ ಏನೆಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತನಗೆ ಅವರ ಭೇಟಿಯ ಅವಕಾಶ ಲಭಿಸಿದ ಬಳಿಕ ಮಾತ್ರವೇ ಪಾದರಕ್ಷೆ ಧರಿಸುವೆ ಅಂತ.

ಈ ವಿಷಯ ನರೇಂದ್ರ ಮೋದಿ ಅವರಿಗೆ ಈದಿನ ಗೊತ್ತಾಯಿತು. ಯಮುನಾ ನಗರದಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಕರೆಸಿಕೊಂಡು ತಮ್ಮ ಕೈಗಳಿಂದಲೇ ಅವರಿಗೆ ಪಾದರಕ್ಷೆಗಳನ್ನು ನೀಡಿದ ಮೋದಿ ಹೀಗೆ ಮಾಡಿದ್ದು ಏಕೆ ಎಂದು ಗದರಿದರು. ಮುಂದೆಂದೂ ಹೀಗೆಲ್ಲ ಮಾಡಬಾರದು. ಸಾಮಾಜಿಕ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

ಈ ವಿಡಿಯೋವನ್ನು ಎಕ್ಸ್‌ ನಲ್ಲಿ (ಹಿಂದಿನ ಟ್ವಿಟ್ಟರ್)‌ ಹಂಚಿಕೊಂಡ ಪ್ರಧಾನಿಯವರು ʼಅಭಿಮಾನಿಗಳ ಇಂತಹ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಳನ್ನೆಲ್ಲ ಮಾಡುವ ಬದಲಿಗೆ ಸಾಮಾಜಿಕ ಕೆಲಸ ಮಾಡಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸ ಮಾಡಿʼ ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

PARYAYA: ಕೈಯಾರೆ ಬೂಟು ಕೊಟ್ಟು ಧರಿಸಲು ಹೇಳಿದ ಪ್ರಧಾನಿ:   ಕೈಯಾರೆ ಬೂಟು ಕೊಟ್ಟು ಧರಿಸಲು ಹೇಳಿದ ಪ್ರಧಾನಿ ಪ್ರ ಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್...

No comments:

Post a Comment