Showing posts with label Suvarna Nota. Show all posts
Showing posts with label Suvarna Nota. Show all posts

Thursday, July 10, 2025

PARYAYA: ಗುರು ಪೂರ್ಣಿಮಾ

 ಗುರು ಪೂರ್ಣಿಮಾ

ಮೋ‌sಸ್ತು ತೇ ವ್ಯಾಸ ವಿಶಾಲಬುದ್ಧೇ

ಫುಲ್ಲಾರವಿಂದಾಯತಪತ್ರನೇತ್ರ |

ಯೇನ ತ್ವಯಾ ಭಾರತತೈಲಪೂರ್ಣಃ

ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃII

ಇದು ವ್ಯಾಸ ಮಹರ್ಷಿಗಳನ್ನು ಸ್ತುತಿಸುವ ಶ್ಲೋಕ..

 ಇದರ ಅರ್ಥ ಹೀಗಿದೆ:

  • ನಮೋ‌sಸ್ತು ತೇ ವ್ಯಾಸ ವಿಶಾಲಬುದ್ಧೇ
    • ಓ ವಿಶಾಲವಾದ ಬುದ್ಧಿಯುಳ್ಳ ವ್ಯಾಸ ಮಹರ್ಷಿಗಳೇನಿಮಗೆ ನಮಸ್ಕಾರ!
  • ಫುಲ್ಲಾರವಿಂದಾಯತಪತ್ರನೇತ್ರ
    • ಅರಳಿದ ಕಮಲದ ದಳಗಳಂತಹ ವಿಶಾಲವಾದ ಕಣ್ಣುಳ್ಳವರೇ (ನಿಮಗೆ ನಮಸ್ಕಾರ).
  • ಯೇನ ತ್ವಯಾ ಭಾರತತೈಲಪೂರ್ಣಃ
    • ಯಾವ ನಿಮ್ಮಿಂದ ಮಹಾಭಾರತವೆಂಬ ತೈಲದಿಂದ ತುಂಬಿದ,
  • ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃII
    • ಜ್ಞಾನಮಯವಾದ ದೀಪವು ಪ್ರಜ್ವಲಿಸಲ್ಪಟ್ಟಿತೋ (ಅಂತಹ ನಿಮಗೆ ನಮಸ್ಕಾರ).

ಸಾರಾಂಶ:

ವ್ಯಾಸ ಮಹರ್ಷಿಗಳೇನಿಮ್ಮ ವಿಶಾಲ ಬುದ್ಧಿಗೆ ನಮಸ್ಕಾರ. ಅರಳಿದ ಕಮಲದ ದಳಗಳಂತಹ ವಿಶಾಲ ಕಣ್ಣುಳ್ಳವರೇನೀವು ಮಹಾಭಾರತವೆಂಬ ತೈಲದಿಂದ ಜ್ಞಾನವೆಂಬ ದೀಪವನ್ನು ಪ್ರಜ್ವಲಿಸುವಂತೆ ಮಾಡಿದ್ದೀರಿ. ಅಂತಹ ನಿಮಗೆ ನಮ್ಮ ನಮನಗಳು.

ವ್ಯಾಸ ಪೂರ್ಣಿಮೆಯನ್ನೇ ಗುರುಪೂರ್ಣಿಮೆ ಎಂದು ಕರೆಯಲಾಗುತ್ತದೆ.

ಇದು ಹಿಂದೂ ಸಂಪ್ರದಾಯದಲ್ಲಿ ಗುರುಗಳಿಗೆ ಗೌರವ ಸಲ್ಲಿಸುವ ಒಂದು ಪ್ರಮುಖ ಹಬ್ಬವಾಗಿದೆ. ಈ ದಿನದಂದು ಮಹರ್ಷಿ ವೇದವ್ಯಾಸರು ಜನಿಸಿದರು ಎಂದು ನಂಬಲಾಗಿದೆ. ವೇದವ್ಯಾಸರು ಮಹಾಭಾರತವನ್ನು ರಚಿಸಿದವರು ಮತ್ತು ವೇದಗಳನ್ನು ವಿಭಾಗಿಸಿದವರು. ಹಾಗಾಗಿಅವರನ್ನು ಆದಿಗುರು ಎಂದು ಪರಿಗಣಿಸಲಾಗುತ್ತದೆ.

ಆದ್ದರಿಂದವ್ಯಾಸ ಪೂರ್ಣಿಮೆಯು ಗುರುಪೂರ್ಣಿಮೆಯಾಗಿದ್ದುಸಮಸ್ತ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ.ಇಂದು ಗುರು ಪೂರ್ಣಿಮೆ.

ಗುರು ಎಂದರೆ ನಗುಬೆಳಕುಜ್ಞಾನ ಮತ್ತು ಮಾರ್ಗದರ್ಶನ ನೀಡುವ ನಮ್ಮ ಗುರುಗಳು.
ಗುರು ಪೂರ್ಣಿಮೆಯು ಶ್ರದ್ಧೆ
ಗೌರವದೊಂದಿಗೆ ಗುರುಗಳಿಗೆ ಧನ್ಯವಾದ ತಿಳಿಸಲು ಸಮರ್ಪಿತವಾದ ದಿನ.

ಈ ಹಬ್ಬವನ್ನು ಆಚಾರ್ಯರ ದಿನವಾಗಿ ಮತ್ತು ವಿಶ್ವದಾದ್ಯಾಂತ ಗುರುಗಳಿಗಾಗಿ ಆಚರಿಸಲಾಗುತ್ತದೆ. ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಜೀವನದ ತತ್ತ್ವಗಳನ್ನುಜ್ಞಾನವನ್ನು ಮತ್ತು ಕರ್ಮವನ್ನು ದಿನನಿತ್ಯ ಬೋಧಿಸುತ್ತಾರೆ.

ಹಬ್ಬದ ದಿನಶ್ರದ್ಧಾಯಿಂದ ಗುರುಗಳಿಗೆ ಪೂಜೆ ಸಲ್ಲಿಸುವುದು ಹಬ್ಬದ ವಿಶೇಷತೆ. ಜೊತೆಗೆ ಸಮಾಜದಲ್ಲಿ ಶಿಕ್ಷಣ ಮತ್ತು ಜ್ಞಾನವನ್ನು ಕೇಂದ್ರ ಸ್ಥಳಕ್ಕೆ ತರುವುದಕ್ಕೂ ಇದು ಸಹಾಯ ಮಾಡುತ್ತದೆ.

ಈ ದಿನವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿಶೇಷವಾಗಿ ಸಿದ್ಧವಾಗುತ್ತಾರೆ. ಗುರುಗಳು ಏನೇನು ನೀಡಿದರೋವು ನಿಖರವಾಗಿ ಪೂರೈಸುತ್ತದೆ ಎಂಬ ನಂಬಿಕೆಯನ್ನು ಹೊಂದುತ್ತಾರೆ.

ಜೀವನದಲ್ಲಿ ಗುರುಗಳು ನಮ್ಮ ಮಾರ್ಗದರ್ಶನ ನೀಡಲು ಸದಾ ಇರುತ್ತಾರೆ. ಆದ್ದರಿಂದಅವರು ನೀಡುವ ಬೋಧನೆಗಳನ್ನು ಎಂದಿಗೂ ಮರೆಯಬಾರದು.

ಗುರುಪೂರ್ಣಿಮೆಯ ಈ ಸಂದರ್ಭಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಾವು ಬೆಳಗಾವಿಯಲ್ಲಿ ಸೆರೆ ಹಿಡಿದ ಸುಂದರ ಚಿತ್ರಗಳನ್ನು ಕಳುಹಿಸಿದ್ದಾರೆ.

ಅವುಗಳನ್ನು ಇಲ್ಲಿ ನೋಡಿ.  ಸಮೀಪ ನೋಟಕ್ಕೆಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ. ಕೆಳಗೆ ಕ್ಲಿಕ್‌ ಮಾಡಿ ವಿಡಿಯೋ ನೋಡಲು ಮರೆಯಬೇಡಿ.

PARYAYA: ಗುರು ಪೂರ್ಣಿಮಾ:   ಗುರು ಪೂರ್ಣಿಮಾ ನ ಮೋ‌ s ಸ್ತು ತೇ ವ್ಯಾಸ ವಿಶಾಲಬುದ್ಧೇ ಫುಲ್ಲಾರವಿಂದಾಯತಪತ್ರನೇತ್ರ | ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃII ...

Monday, June 30, 2025

PARYAYA: ಕರ್ನಾಟಕದಲ್ಲಿ ಪತ್ರಿಕಾ ದಿನ: ಇತಿಹಾಸ ಗೊತ್ತಾ?

 ಕರ್ನಾಟಕದಲ್ಲಿ ಪತ್ರಿಕಾ ದಿ: ಇತಿಹಾಸ ಗೊತ್ತಾ?

ಇದು ಸುವರ್ಣ ನೋಟ

ಪ್ರತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ 'ಪತ್ರಿಕಾ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ವಿಶೇಷ ಮಹತ್ವವಿದೆಏಕೆಂದರೆ ಇದು ಕನ್ನಡದ ಮೊಟ್ಟಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪ್ರಕಟಗೊಂಡ ದಿನ. 1843ರ ಜುಲೈ 1 ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್‌ನ ಮುದ್ರಣಾಲಯದಿಂದ ಈ ಪತ್ರಿಕೆ ಹೊರಬಂದಿತು.

ಕನ್ನಡ ಪತ್ರಿಕೋದ್ಯಮದ ಪಿತಾಮಹ: ರೆವರೆಂಡ್ ಹರ್ಮನ್ ಮೋಗ್ಲಿಂಗ್

'ಮಂಗಳೂರು ಸಮಾಚಾರ'ದ ಸಂಪಾದಕರು ರೆವರೆಂಡ್ ಹರ್ಮನ್ ಮೋಗ್ಲಿಂಗ್ಜರ್ಮನ್‌ನ ಮತ ಪ್ರಚಾರಕರಾದ ಇವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ. ಯುರೋಪಿಯನ್ ಪತ್ರಿಕೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಮೋಗ್ಲಿಂಗ್, 1840ರಲ್ಲಿ ಮಂಗಳೂರಿಗೆ ಬಂದ ನಂತರ ತುಳುಕೊಂಕಣಿಕನ್ನಡ ಭಾಷೆಗಳನ್ನು ಕಲಿತರು. ಮಿಷನರಿಯಾಗಿದ್ದರೂಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ಅವರು ತೀವ್ರ ಆಸಕ್ತಿ ತೋರಿಸಿದರು.

'ಮಂಗಳೂರು ಸಮಾಚಾರ'ದ ಪ್ರಕಟಣೆ ಮತ್ತು ಪ್ರಭಾವ

'ಮಂಗಳೂರು ಸಮಾಚಾರ'ವು ಆರಂಭದಲ್ಲಿ ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ಇದು ಕಲ್ಲಚ್ಚಿನಲ್ಲಿ ಪ್ರಕಟವಾಗುತ್ತಿತ್ತು ಮತ್ತು ನಾಲ್ಕು ಪುಟಗಳನ್ನು ಒಳಗೊಂಡಿತ್ತುಅದರ ಬೆಲೆ ಕೇವಲ ಒಂದು ಪೈಸೆ. ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಸ್ಥಳೀಯಸರ್ಕಾರಿ ಅಧಿಸೂಚನೆಗಳುಕಾನೂನು ವಿಷಯಗಳುಹಾಡುಗಳುಕಥೆಗಳುಅಂತರರಾಜ್ಯ ವರ್ತಮಾನಗಳುಮತ್ತು ಓದುಗರ ವಾಣಿಗಳಂತಹ ವೈವಿಧ್ಯಮಯ ವಿಷಯಗಳನ್ನು ಈ ಪತ್ರಿಕೆ ಪ್ರಕಟಿಸುತ್ತಿತ್ತು. ಜನರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕೋರ್ಟ್ ಪ್ರಕರಣಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು. ನಂತರಈ ಪತ್ರಿಕೆಯ ಹೆಸರನ್ನು 'ಕನ್ನಡ ಸಮಾಚಾರ' ಎಂದು ಬದಲಾಯಿಸಿ ಬಳ್ಳಾರಿಯಿಂದ ಪ್ರಕಟಿಸಲು ಪ್ರಾರಂಭಿಸಲಾಯಿತು.

ಮೋಗ್ಲಿಂಗ್‌ಗೆ ಗೌರವ ಡಾಕ್ಟರೇಟ್

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಮೋಗ್ಲಿಂಗ್ ನೀಡಿದ ಅನನ್ಯ ಕೊಡುಗೆಗಾಗಿಟ್ಯೂಬಿಂಗೆನ್‌ನ ಎಬರ್‍ಹಾರ್ಡ್ ಕಾರ್ಲ್ಸ್ ವಿಶ್ವವಿದ್ಯಾನಿಲಯವು 1858ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ಕನ್ನಡಕ್ಕಾಗಿ ಇಂತಹ ಗೌರವ ಪಡೆದ ಮೊದಲ ವ್ಯಕ್ತಿ ಇವರಾಗಿದ್ದರು.

ಆಧುನಿಕ ಪತ್ರಿಕೋದ್ಯಮದ ಬೆಳವಣಿಗೆ

'ಮಂಗಳೂರು ಸಮಾಚಾರ'ದೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗವು ಇಂದು ಆಧುನಿಕ ತಂತ್ರಜ್ಞಾನದೊಂದಿಗೆ ಅಗಾಧವಾಗಿ ಬೆಳೆದಿದೆ. ಈಗ ಅನೇಕ ಪತ್ರಿಕೆಗಳುಸ್ಯಾಟಲೈಟ್ ಚಾನೆಲ್‌ಗಳುಬಹುಭಾಷಾ ಪ್ರಾದೇಶಿಕ ಚಾನೆಲ್‌ಗಳುಆನ್‌ಲೈನ್ ಆವೃತ್ತಿಗಳುವೆಬ್‌ಸೈಟ್‌ಗಳುವೆಬ್ ಪತ್ರಿಕೆಗಳುಸಾಮಾಜಿಕ ಮಾಧ್ಯಮ (ಫೇಸ್‌ಬುಕ್ವಾಟ್ಸಪ್)ಮತ್ತು ನೇರ ಪ್ರಸಾರ ನೀಡುವ ಸುದ್ದಿವಾಹಿನಿಗಳ ಮೂಲಕ ಮಾಧ್ಯಮವು ಕ್ಷಣಕ್ಷಣದ ಸುದ್ದಿಗಳನ್ನು ಜನರಿಗೆ ತಲುಪಿಸುತ್ತಿದೆ.

ಛಾಯಾಗ್ರಹಣ ಮತ್ತು ವ್ಯಂಗ್ಯಚಿತ್ರ

ಇಂದಿನ ದಿನಗಳಲ್ಲಿ ಪತ್ರಿಕೆಗಳು ಜೀವಂತಿಕೆಯನ್ನು ತಳೆಯುವುದು ಛಾಯಾಚಿತ್ರಗಳು ಮತ್ತು ವ್ಯಂಗ್ಯ ಚಿತ್ರಗಳ ಮೂಲಕ. ಸಾವಿರ ಪದಗಳಲ್ಲಿ ಹೇಳಬಹುದಾದ ವಿಷಯವನ್ನು ಒಂದು ಛಾಯಾಚಿತ್ರ ಪ್ರಭಾವಶಾಲಿಯಾಗಿ ಹೇಳಬಲ್ಲುದು.

ಹಾಗೆಯೇ ವ್ಯಂಗ್ಯಚಿತ್ರ ಕೂಡಾ ಅತ್ಯಂತ ಪರಿಣಾಮಕಾರಿಯಾಗಿ ರಾಜಕೀಯ, ಜನರ ಬದುಕು, ವರ್ತನೆ, ಮಾತುಗಳನ್ನು ಮೊನಚಾಗಿ ತಿವಿಯಬಲ್ಲುದು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ತಮ್ಮ ಛಾಯಾಚಿತ್ರಗಳ ಮೂಲಕ ಬಹುರೂಪೀ ವಿದ್ಯಮಾನಗಳನ್ನು ದಾಖಲಿಸಿದ್ದಾರೆ. ವಿಧಾನಸಭಾ ಕಲಾಪ, ಪೊಲೀಸ್‌ ಗೋಲೀಬಾರ್‌, ವಾಹನಗಳಿಗೆ ಬೆಂಕಿ, ಜನರ ಅಭಿವ್ಯಕ್ತಿಗಳು – ಹೀಗೆ ಹತ್ತಾರು ಸಂದರ್ಭಗಳು ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವುಗಳ ಸುಂದರ ಕಂತು ಇಲ್ಲಿದೆ.

ಜುಲೈ 01ರ ಪತ್ರಿಕಾ ದಿನಕ್ಕಾಗಿ ವಿಶ್ವನಾಥ ಸುವರ್ಣ ಅವರು ಈ ಚಿತ್ರಗಳನ್ನು ಇಲ್ಲಿ ಒದಗಿಸಿದ್ದಾರೆ. ಸಮೀಪ ನೋಟಕ್ಕಾಗಿ ಚಿತ್ರಗಳನ್ನು ಕ್ಲಿಕ್‌ ಮಾಡಿರಿ.










-ನೆತ್ರಕೆರೆ ಉದಯಶಂಕರ
 ಹಿಂದಿನ ಸುವರ್ಣ ನೋಟಗಳಿಗಾಗಿ
                                                            ಇಲ್ಲಿ ಕ್ಲಿಕ್‌ ಮಾಡಿರಿ   👉👉👉

PARYAYA: ಕರ್ನಾಟಕದಲ್ಲಿ ಪತ್ರಿಕಾ ದಿನ: ಇತಿಹಾಸ ಗೊತ್ತಾ?:   ಕರ್ನಾಟಕದಲ್ಲಿ ಪತ್ರಿಕಾ ದಿ ನ : ಇತಿಹಾಸ ಗೊತ್ತಾ? ಇದು ಸುವರ್ಣ ನೋಟ ಪ್ರ ತಿ ವರ್ಷ ಜುಲೈ 1 ರಂದು ಕರ್ನಾಟಕದಲ್ಲಿ ' ಪತ್ರಿಕಾ ದಿನ ' ವನ್ನು ಆಚರಿಸಲಾಗು...

Monday, June 2, 2025

PARYAYA: ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

 ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!

ತಿಕ್ಯಾತ ಬಣ್ಣ ಬದಲಿಸುತ್ತದೆ ಎಂಬುದು ಬಹಳ ಜನಕ್ಕೆ ಗೊತ್ತು. ಆದರೆ ಹಾಗೆ ಬಣ್ಣ ಬದಲಿಸುವಾಗ ಕಾಣ ಸಿಗುವುದು ಬಲು ಅಪರೂಪ. ಸಿಕ್ಕಿದರೂ ಅದನ್ನೆಲ್ಲ ನೋಡುವಷ್ಟು ಹೊತ್ತು ಅದೇನು ಫೋಸ್‌ ನೀಡುತ್ತಾ ನಿಲ್ಲುತ್ತದೆಯೇ?

ಮನುಷ್ಯರ ಕಾಲಿನ ಸಪ್ಪಳ ಕೇಳುವಷ್ಟರಲ್ಲೇ ಅದು ಸ್ಥಳದಿಂದ ಪರಾರಿ ಆಗಿ ಬಿಡುತ್ತದೆ.

ಅಂತಹ ಓತಿಕ್ಯಾತ ಬಣ್ಣ ಬದಲಿಸುತ್ತಾ ವರ್ಣಮಯ ರೂಪದಲ್ಲಿ ನಿಂತು ಫೋಸ್‌ ಕೊಟ್ಟು ಬಿಟ್ಟಿದೆ ನೋಡಿ- ನಮ್ಮ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೆ.

ನಮ್ಮ ಕರ್ನಾಟಕದ ಮಧ್ಯಭಾಗದಲ್ಲಿ ಇರುವ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವನ್ಯಜೀವಿ ಅಭಯಾರಣ್ಯಕ್ಕೆ ನೆಲೆ. ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯದಲ್ಲಿ ಕೃಷ್ಣಮೃಗಗ್ರೇಟ್ ಇಂಡಿಯನ್ ಬಸ್ಟರ್ಡ್ ಮತ್ತು ತೋಳಗಳು ಸಾಕಷ್ಟವೆ. ಆದರೆ ಇಲ್ಲಿದ್ದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿ ಈಗ ಬಹುತೇಕ ಅಳಿದು ಹೋದಂತಿದೆ. ಕೊನೆಯ ಬಾರಿಗೆ 2005 ರಲ್ಲಿ ಈ ಪಕ್ಷಿ ಕಾಣಿಸಿಕೊಂಡಿತ್ತು. ಆ ನಂತರ ಈ ಯಾರಿಗೂ ಕಂಡದ್ದಿಲ್ಲವಂತೆ.

ವಿಶ್ವನಾಥ ಸುವರ್ಣ ಇತ್ತೀಚಿನ ದಿನಗಳಲ್ಲಿ ಅಳಿಯುತ್ತಿರುವ ಚಿಕ್ಕಪುಟ್ಟ ಪ್ರಾಣಿಗಳು, ಪಕ್ಷಿಗಳ ಹುಡುಕಾಟದಲ್ಲಿದ್ದಾರೆ. ಅವುಗಳನ್ನು ಸೆರೆ ಹಿಡಿದು (ಕ್ಯಾಮರಾದಲ್ಲಿ ಮಾರಾಯರೆ) ಜನರಿಗೆ ತೋರಿಸಬೇಕೆಂಬ ತವಕದಲ್ಲಿ ಇದ್ದಾರೆ. ಹೀಗಾಗಿ ತಮ್ಮ ಕ್ಯಾಮರಾ ಹಿಡಿದುಕೊಂಡು ಊರೂರು ಸುತ್ತುತ್ತಿದ್ದಾರೆ.

ಇತ್ತೀಚೆಗೆ ಅವರು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿಗೆ ಭೇಟಿ ಕೊಟ್ಟಿದ್ದರು. ಹಾಗೆಯೇ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಸುತ್ತಾಡುತ್ತಿದ್ದಾಗ, ಹೊಲ ಒಂದರಲ್ಲಿ ಬಣ್ಣ ಬದಲಿಸುತ್ತಿದ್ದ ಓತಿ ಕ್ಯಾತ ಇವರ ಕ್ಯಾಮರಾಕ್ಕೆ ಫೋಸ್‌ ಕೊಟ್ಟೇ ಬಿಟ್ಟಿತು.

ಆ ಓತಿಕ್ಯಾತನ ಚಿತ್ರಗಳು ಇಲ್ಲಿವೆ ನೋಡಿ.

ಇದೇ ಸಮಯದಲ್ಲಿ ಸುವರ್ಣರಿಗೆ ಅಪರೂಪದ ಪಕ್ಷಿಯಾದ ಫ್ಲೈ ಕ್ಯಾಚರ್‌ ಹಕ್ಕಿಯೂ ಕಾಣ ಸಿಕ್ಕಿತು. ಫ್ಲೈ ಕ್ಯಾಚರ್‌ ಪಕ್ಷಿಗಳನ್ನು ʼಇಂಡಿಯನ್‌ ಪ್ಯಾರಡೈಸ್‌ ಫ್ಲೈ ಕ್ಯಾಚರ್‌ʼ ಎಂಬುದಾಗಿಯೂ ಕರೆಯುತ್ತಾರೆ.

ಅತ್ಯಂತ ಆಕರ್ಷಕವಾದ ಈ ಪಕ್ಷಿ ಜಾತಿಯ ಗಂಡು ಹಕ್ಕಿಗಳು ಉದ್ದವಾದ ರಿಬ್ಬನ್‌ ಮಾದರಿಯ ಬಾಲ ಹೊಂದಿರುತ್ತವೆ. ಗಂಡು ಹಕ್ಕಿಗಳು ದಾಲ್ಚಿನ್ನಿ ಮತ್ತು ಬಿಳಿ ಎರಡು ಬಣ್ಣಗಳಲ್ಲಿ ಇರುತ್ತವೆ. ಎರಡೂ ಬಣ್ಣದ ಹಕ್ಕಿಗಳು ಕಣ್ಣಿನ ಸುತ್ತಲೂ ನೀಲಿ ಉಂಗುರವನ್ನು ಹೊಂದಿರುತ್ತವೆ. ಕಪ್ಪುಬಣ್ಣದ ಹೊಳಪುಳ್ಳ ತಲೆಯನ್ನು ಹೊಂದಿರುತ್ತವೆ. ಆದರೆ ಬಿಳಿ ಹಕ್ಕಿ ಕೆಳಗೆ ಸಂಪೂರ್ಣವಾಗಿ ಬೆಳ್ಳಗಿರುತ್ತದೆ. ದಾಲ್ಚಿನ್ನಿ ಹಕ್ಕಿ ದಾಲ್ಚಿನ್ನಿ ಮೇಲ್ಭಾಗ ಮತ್ತು ಬಾಲ ಮತ್ತು ಮಾಸಿದ ಬಿಳಿಬಣ್ಣದ  ಒಳಭಾಗವನ್ನು ಹೊಂದಿರುತ್ತದೆ.

ಹೆಣ್ಣು ಹಕ್ಕಿಗಳು ಬೂದು ಬಣ್ಣದ ಗಂಟಲುಚಿಕ್ಕ ಬಾಲವನ್ನು ಹೊಂದಿರುತ್ತವೆ. ಬಾಲದ ಮೇಲ್ಭಾಗದಲ್ಲಿ ದಾಲ್ಚಿನ್ನಿ ಬಣ್ಣವಿರುತ್ತದೆ. ಹೆಣ್ಣು ಹಕ್ಕಿಯು ಗಂಡು ಹಕ್ಕಿಯಂತೆ ನೀಲಿ ಕಣ್ಣುರೆಪ್ಪೆಯನ್ನು ಹೊಂದಿರುವುದಿಲ್ಲ.

ಈ ಹಕ್ಕಿಗಳು ಕೀಟಗಳ ಮೇಲೆ ಸಣ್ಣ ವಿಮಾನದಂತೆ ಎರಗುತ್ತವೆ. ಕೀಟಗಳನ್ನು ಹಿಡಿಯಲು ಸಾಂದರ್ಭಿಕವಾಗಿ ನೆಲಕ್ಕೆ ಇಳಿಯುತ್ತವೆ. ಮುಖ್ಯವಾಗಿ ಕಾಡಿನ ಆವಾಸಸ್ಥಾನಗಳಲ್ಲಿ ಇವು ಕಂಡು ಕಂಡುಬರುತ್ತವೆ.

ಅಪರೂಪದ ಈ ಕ್ಯಾಚ್‌ ಫ್ಲೈಯರ್‌ ಹಕ್ಕಿ ತನ್ನ ಮರಿಗಳಿಗೆ ಆಹಾರ ನೀಡುತ್ತಿದ್ದಾಗ ಸುವರ್ಣರ ಕ್ಯಾಮರಾದಲ್ಲಿ ಸೆರೆಯಾಗಿ ಬಿಟ್ಟದ್ದನ್ನು ಇಲ್ಲಿ ನೋಡಬಹುದು.


ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.




ನೆತ್ರಕೆರೆ ಉದಯಶಂಕರ

ಸುವರ್ಣ ನೋಟದ ಇತರ ಕಂತುಗಳಿಗೆ ಕೆಳಗೆ 👇ಕ್ಲಿಕ್‌ ಮಾಡಿ


PARYAYA: ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..!:   ಬಣ್ಣ ಬದಲಿಸುವಾಗ ಸಿಕ್ಕಿಹಾಕಿಕೊಂಡ ಓತಿಕ್ಯಾತ..! ಓ ತಿಕ್ಯಾತ ಬಣ್ಣ ಬದಲಿಸುತ್ತದೆ ಎಂಬುದು ಬಹಳ ಜನಕ್ಕೆ ಗೊತ್ತು. ಆದರೆ ಹಾಗೆ ಬಣ್ಣ ಬದಲಿಸುವಾಗ ಕಾಣ ಸಿಗುವುದು ಬಲು ಅ...

Tuesday, May 27, 2025

PARYAYA: ಕಟ್ಟಿಗೆ ಸೋಮೀ, ಕಟ್ಟಿಗೆ…!

 ಕಟ್ಟಿಗೆ ಸೋಮೀ, ಕಟ್ಟಿಗೆ…!

ಇದು ಸುವರ್ಣ ನೋಟ!

ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು?

ಛಾಯಾಗ್ರಾಹಕನ ಕಣ್ಣಿಗೆ ಕಾಣುತ್ತದೆ ನೋಡಿ.

ವಿಧಾನ ಸೌಧದ ಮುಂದೆ ಕಟ್ಟಿಗೆ ಸೋಮೀ ಕಟ್ಟಿಗೆ ಎನ್ನುತ್ತಾ ಕಟ್ಟಿಗೆ ಹೊರೆ ಹೊತ್ತುಕೊಂಡು ಹೋಗುವ  ದೃಶ್ಯ ಕಂಡದ್ದು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಅಂತರದೃಷ್ಟಿಗೆ. ತಕ್ಷಣ ಅದನ್ನು ಸೆರೆ ಹಿಡಿದದ್ದು ಅವರ ಕ್ಯಾಮರಾ ಕಣ್ಣು. 

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.




ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ

ಬದುಕಿನ ಹೋರಾಟ….!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಡಾ. ರಾಜಕುಮಾರ್ ಆರೋಗ್ಯ ಸೂತ್ರ…!

ಕಥೆ ಹೇಳುವೆ… ನನ್ನ ಕಥೆ ಹೇಳುವೆ..!

ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

PARYAYA: ಕಟ್ಟಿಗೆ ಸೋಮೀ, ಕಟ್ಟಿಗೆ…!:   ಕಟ್ಟಿಗೆ ಸೋಮೀ, ಕಟ್ಟಿಗೆ…! ಇದು ಸುವರ್ಣ ನೋಟ! ರ ವಿಯ ಕಣ್ಣಿಗೆ ಕಾಣದ್ದು ಕವಿಯ ಕಣ್ಣಿಗೆ ಕಾಣುತ್ತದಂತೆ. ಕವಿಯ ಕಣ್ಣಿಗೆ ಕಾಣದ್ದು? ಛಾಯಾಗ್ರಾಹಕನ ಕಣ್ಣಿಗೆ ಕಾಣು...

Friday, April 18, 2025

PARYAYA: ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ

 ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ

ಏಪ್ರಿಲ್‌ ೧೮ ವಿಶ್ವ ಪರಂಪರೆ ದಿನ: ಇದು ಸುವರ್ಣ ನೋಟ

ಪ್ರಿಲ್‌ ೧೮ರ ಈ ದಿನವನ್ನು ʼವಿಶ್ವ ಪರಂಪರೆಯ ದಿನʼವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇದನ್ನು ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನ ಎಂದೂ ಕರೆಯಲಾಗುತ್ತದೆ. ʼವಿಪತ್ತು ಮತ್ತು ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆʼ ಎಂಬುದು ಈ ವರ್ಷದ ವಿಶ್ವ ಪರಂಪರೆ ದಿನದ ʼಥೀಮ್‌ʼ ಅಥವಾ ʼಕೇಂದ್ರ ವಿಷಯʼವಾಗಿದೆ.

ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಗೌರವಿಸಲು ಮತ್ತು ರಕ್ಷಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ವ್ಯಕ್ತಿಗಳು ಮತ್ತು ಸ್ಥಳೀಯ ಸಮುದಾಯಗಳು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪಾಲಿಸುವಂತೆ ಮತ್ತು ರಕ್ಷಿಸುವಂತೆ ಪ್ರೋತ್ಸಾಹ ನೀಡುವುದು ಈ ವಿಶ್ವಪರಂಪರೆ ದಿನ ಆಚರಣೆಯ ಪ್ರಮುಖ ಗುರಿ. ಸ್ಮಾರಕಗಳ ಸಂರಕ್ಷಣೆಯ ಜೊತೆಗೆಸಾಂಸ್ಕೃತಿಕ ಸ್ವತ್ತುಗಳ ವೈವಿಧ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲೂ ಈ ದಿನಾಚರಣೆ ಯತ್ನಿಸುತ್ತದೆ.


ಅಂತಾರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ಮಂಡಳಿಯು (ICOMOS) 1983ರಿಂದ  ಏಪ್ರಿಲ್‌ ೧೮ರ ಈ ದಿನವನ್ನು ಆಚರಿಸಲು ಒಂದು ಕೇಂದ್ರ ವಿಷಯವನ್ನು ನಿರ್ಧರಿಸುತ್ತದೆ. 2025 ರ ವಿಶ್ವ ಪರಂಪರೆಯ ದಿನದ ವಿಷಯವು "ವಿಪತ್ತುಗಳು ಮತ್ತು ಸಂಘರ್ಷಗಳಿಂದ ಬೆದರಿಕೆಯಲ್ಲಿರುವ ಪರಂಪರೆ: ಮಂಡಳಿಯ 60 ವರ್ಷಗಳ ಅನುಭವ, ಕ್ರಮಗಳಿಂದ ಸಿದ್ಧತೆ ಮತ್ತು ಕಲಿಕೆ" ಎಂಬುದಾಗಿದೆ.

"2025ರ ಅಂತರರಾಷ್ಟ್ರೀಯ ಸ್ಮಾರಕಗಳು ಮತ್ತು ತಾಣಗಳ ದಿನಾಚರಣೆಯು ವಿಪತ್ತುಗಳು ಮತ್ತು ಸಂಘರ್ಷಗಳ ಬೆದರಿಕೆಯ ಅಡಿಯಲ್ಲಿ ಪರಂಪರೆಯನ್ನು ರಕ್ಷಿಸುವ ಸಂಬಂಧ 60 ವರ್ಷಗಳ ಕ್ರಮಗಳ ಮೇಲೆ ಹಾಗೂ ಬಿಕ್ಕಟ್ಟಿನ ಸಮಯದಲ್ಲಿ ಪರಂಪರೆಯನ್ನು ರಕ್ಷಿಸಲು ನಾವು ತೆಗೆದುಕೊಳ್ಳಬಹುದಾದ ಮುಂಜಾಗರೂಕತೆಸಿದ್ಧತೆತುರ್ತು ಪ್ರತಿಕ್ರಿಯೆ ಮತ್ತು ಚೇತರಿಕೆಗಾಗಿ ಅದರ ಭವಿಷ್ಯದ ಉದ್ದೇಶಗಳ ಮೇಲೆ ಕೇಂದ್ರೀಕರಿಸುತ್ತದೆ" ಎಂದು ಸಂಸ್ಥೆ ತಿಳಿಸಿದೆ.

ಹಂಪಿಯಲ್ಲಿರುವ ಸ್ಮಾರಕಗಳು

ಕರ್ನಾಟಕದ ಹಂಪಿಯು ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಇರುವ ಒಂದು ಭವ್ಯ ಸ್ಥಳ. ಇದು ವಿಜಯನಗರದ ಮಹಾನ್ ಹಿಂದೂ ಸಾಮ್ರಾಜ್ಯದ ಕೊನೆಯ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಆಡಳಿತ ಕಾಲದಲ್ಲಿ ದ್ರಾವಿಡ ಶೈಲಿಯ ದೇವಾಲಯಗಳು ಮತ್ತು ಅರಮನೆಗಳನ್ನು ನಿರ್ಮಿಸಿದ್ದರು. ಇದು 14 ನೇ ಮತ್ತು 16 ನೇ ಶತಮಾನಗಳ ನಡುವೆ ಪ್ರವಾಸಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ನಗರದ ರಸ್ತೆಗಳಲ್ಲಿ ಮುತ್ತು ರತ್ನಗಳನ್ನು ಮಾರಲಾಗುತ್ತಿತ್ತು ಎಂದು ಈ ಪ್ರವಾಸಿಗರು ಬಣ್ಣಿಸಿದ್ದರು. 1565ರಲ್ಲಿ ದಕ್ಕಣದ ಮುಸ್ಲಿಂ ಪಡೆಗಳು ಈ ನಗರವನ್ನು ವಶಪಡಿಸಿಕೊಂಡವು. ಆ ಬಳಿಕ ಆರು ತಿಂಗಳ ಅವಧಿಯಲ್ಲಿ ಈ ನಗರವನ್ನು ಲೂಟಿ ಮಾಡಿ ಹಾಳು ಗೆಡವಲಾಯಿತು. ಆ ಬಳಿಕ ಇದಕ್ಕೆ ʼಹಾಳು ಹಂಪೆʼ ಎಂಬ ಹೆಸರು ಬಂದು ಬಿಟ್ಟಿತು.

ವಿಜಯನಗರ ಸಾಮ್ರಾಜ್ಯದ  ಈ ರಾಜಧಾನಿ ನಗರ 14 ನೇ-16 ನೇ ಶತಮಾನ ಅವಶೇಷಗಳನ್ನು ಒಳಗೊಂಡಿದೆ. ಈ ಆಸ್ತಿಯು 4187,24 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದುಮಧ್ಯ ಕರ್ನಾಟಕದ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿದೆ.

ತುಂಗಭದ್ರಾ ನದಿಕಡಿದಾದ ಬೆಟ್ಟಗಳ ಶ್ರೇಣಿಗಳು ಮತ್ತು ತೆರೆದ ಬಯಲು ಪ್ರದೇಶಗಳ ಮಧ್ಯೆ ಇರುವ ಈ ಹಂಪಿಯು ಇಂದಿಗೂ ಅದ್ಭುತವಾದ ಪರಿಸರವನ್ನು ಹೊಂದಿದೆ. ಭೌತಿಕ ಅವಶೇಷಗಳು, ಕೋಟೆಗಳುನದಿ ತೀರದ ವೈಶಿಷ್ಟ್ಯಗಳುರಾಜರಿಗೆ ಸಂಬಂಧಿಸಿದ ಹಾಗೂ ಪವಿತ್ರ ದೇವಾಲಯಗಳ ಸಂಕೀರ್ಣಗಳು ಈ ದೇವಾಲಯಗಳ ಕಂಬಗಳ ಸಭಾಂಗಣಗಳುಮಂಟಪಗಳುಸ್ಮಾರಕ ರಚನೆಗಳುದ್ವಾರಗಳುರಕ್ಷಣಾ ತಾಣಗಳುಅಶ್ವಶಾಲೆಗಳುಕಲ್ಯಾಣಿಗಳ ರಚನೆಗಳು, ಕಲ್ಲಿನ ರಥ ಇತ್ಯಾದಿಗಳನ್ನು ಒಳಗೊಂಡಂತೆ 1600ಕ್ಕೂ ಹೆಚ್ಚು ಅವಶೇಷಗಳು ಇಲ್ಲಿವೆ.

ಇವುಗಳಲ್ಲಿಕೃಷ್ಣ ದೇವಾಲಯ ಸಮುಚ್ಚಯ, ನರಸಿಂಹಗಣೇಶಹೇಮಕೂಟ ದೇವಾಲಯಗಳ ಗುಂಪುಅಚ್ಯುತರಾಯ ದೇವಾಲಯ ಸಂಕೀರ್ಣವಿಠ್ಠಲ ದೇವಾಲಯ ಸಂಕೀರ್ಣಪಟ್ಟಾಭಿರಾಮ ದೇವಾಲಯ ಸಂಕೀರ್ಣಕಮಲ ಮಹಲ್ ಸಂಕೀರ್ಣವನ್ನು ಮುಖ್ಯವೆಂದು ಹೇಳಬಹುದು.

ದೊಡ್ಡ ದ್ರಾವಿಡ ದೇವಾಲಯ ಸಂಕೀರ್ಣಗಳನ್ನು ಸಣ್ಣ ಪರಿವಾರ ದೇವರ ದೇವಾಲಯಗಳುಬಜಾರುಗಳುವಸತಿ ಪ್ರದೇಶಗಳು ಮತ್ತು ಕಲ್ಯಾಣಿಗಳನ್ನು ಉಪನಗರ ಪಟ್ಟಣಗಳು ​​(ಪುರಗಳು) ಸುತ್ತುವರೆದಿವೆ. ಸುತ್ತಮುತ್ತಲಿನ ಭೂದೃಶ್ಯವು ಪಟ್ಟಣ ಮತ್ತು ರಕ್ಷಣಾ ವಾಸ್ತುಶಿಲ್ಪವನ್ನು ಕೌಶಲ್ಯದಿಂದ ಮತ್ತು ಸಾಮರಸ್ಯದಿಂದ ಸಂಯೋಜಿಸುತ್ತದೆ. ಈ ಸ್ಥಳದಲ್ಲಿ ಪತ್ತೆಯಾಗಿರುವ ಅವಶೇಷಗಳು ಒಂದು ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಆರ್ಥಿಕ ಸಮೃದ್ಧಿ ಮತ್ತು ರಾಜಕೀಯ ಸ್ಥಾನಮಾನದ ವ್ಯಾಪ್ತಿಯನ್ನು ವಿವರಿಸುತ್ತವೆ. ಹೆಚ್ಚು ಅಭಿವೃದ್ಧಿ ಹೊಂದಿದ ಶ್ರೀಮಂತ ಸಮಾಜ ಇದಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ.

ʼಮಳೆ ಬಂದ ಹೊತ್ತಿನಲ್ಲಿ ಈ ಹಂಪಿʼ ಹೇಗಿರುತ್ತದೆ ಎಂಬ ಸಜೀವ ದೃಶ್ಯವನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾ ಮೂಲಕ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಇಂತಹ ಅದ್ಭುತ ಪಾರಂಪರಿಕ ತಾಣಗಳನ್ನು ರಕ್ಷಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂಬುದನ್ನು ಈದಿನ ನಾವು ನೆನಪಿಸಿಕೊಳ್ಳಬೇಕಾಗಿದೆ.





ಚಿತ್ರಗಳ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿಯೂ ಟ್ಯೂಬ್‌ ವಿಡಿಯೋ ನೋಡಲು 
ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.




ಕೆಳಗಿನವುಗಳನ್ನೂ ಓದಿರಿ: 

ವಿಧಾನಸೌಧಕ್ಕೆ ವರ್ಣಾಲಂಕಾರ
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ:   ವಿಪತ್ತು, ಸಂಘರ್ಷಗಳ ಬೆದರಿಕೆಯಲ್ಲಿ ಪರಂಪರೆ ಏಪ್ರಿಲ್‌ ೧೮ ವಿಶ್ವ ಪರಂಪರೆ ದಿನ: ಇದು ಸುವರ್ಣ ನೋಟ ಏ ಪ್ರಿಲ್‌ ೧೮ರ ಈ ದಿನವನ್ನು ʼ ವಿಶ್ವ ಪರಂಪರೆಯ ದಿನ ʼ ವಾಗಿ ಜ...