Monday, April 7, 2025

PARYAYA: ವಿಧಾನಸೌಧಕ್ಕೆ ವರ್ಣಾಲಂಕಾರ

 ವಿಧಾನಸೌಧಕ್ಕೆ ವರ್ಣಾಲಂಕಾರ

ಇದು ಸುವರ್ಣ ನೋಟ

ನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ – ಹೀಗೆ ವಿಶೇಷ ಸಂದರ್ಭಗಳಲ್ಲಿ ವರ್ಣಾಲಂಕಾರದಿಂದ ಜಗಮಗಿಸುತ್ತಿದ್ದ ಕರ್ನಾಟಕದ ವಿಧಾನಸೌಧ ಇದೀಗ ನಿತ್ಯವೂ ವರ್ಣಾಲಂಕಾರದಿಂದ ಸಂಭ್ರಮಿಸುತ್ತಿದೆ.

ವಿಧಾನಸೌಧದ ನಿತ್ಯ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೫ ಏಪ್ರಿಲ್‌ ೦೬ರ ಶ್ರೀರಾಮ ನವಮಿಯಂದು ಉದ್ಘಾಟಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ವಿಧಾನಸೌಧ ಇನ್ನು ಮುಂದೆ ಪ್ರತಿದಿನವೂ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರದೊಂದಿಗೆ ಜಗಮಗಿಸಲಿದೆ.

ವಿಧಾನಸೌಧ ಬಣ್ಣದ ದೀಪಗಳ ಬೆಳಕಿನಲ್ಲಿ ಕಣ್ಸೆಳೆದ ಚಿತ್ರಗಳನ್ನು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಆ ಚಿತ್ರಗಳು ಇಲ್ಲಿವೆ. ಜೊತೆಗೆ ಈ ಚಿತ್ರಗಳನ್ನಾಧರಿಸಿ ʼಪರ್ಯಾಯʼ ನಿರ್ಮಿಸಿದ ಒಂದು ವಿಡಿಯೋ ಕೂಡಾ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ


ಶಕ್ತಿ ಸೌಧದ ಹೊಳಪು,

ಬಣ್ಣಗಳ ಚಿತ್ತಾರ!
ವಿಶೇಷ ದಿನದ ಸಂಭ್ರಮ,
ನಿತ್ಯವೂ ಬೆಳಗುವ ಸಿಂಗಾರ!
ಕತ್ತಲೆಗೆ ಬೆಳಕು,
ಮನಗಳಿಗೆ ಹರ್ಷ!
ನಾಡಿನ ಹೆಮ್ಮೆಯ ಪ್ರತೀಕ,
ಸದಾ ಬೆಳಗಲಿ ಈ ಸ್ಪರ್ಶ!

ಕಟ್ಟಿದರು ಕನಸನು ಹೊತ್ತು,
ನಾಡಿನ ಭವ್ಯತೆಯ ನೆಲೆ.
ಶಿಲ್ಪಿಗಳ ಕೈಚಳಕದ ಕಲೆ,
 
ಕಲ್ಲಿನಲಿ ಮೂಡಿದ ಬೆಲೆ.

ಸ್ವಾತಂತ್ರ್ಯದ ಉಸಿರು ಸೇರಿ,
ಪ್ರಜಾಪ್ರಭುತ್ವದ ಗುಡಿ.
ಕಾಲದ ಪುಟಗಳಲಿ ಮೆರೆದಿಹುದು,
ಕರುನಾಡಿನ ಕೀರ್ತಿ ನುಡಿ.

ಕನಸುಗಾರರ ದೃಷ್ಟಿಯ ಫಲ,
ಕೆಂಗಲ್ ಹನುಮಂತಯ್ಯನವರ ಶ್ರಮ.
ನಾಡಿನ ಆಡಳಿತದ ತಾಣವಿದು,
ಕನ್ನಡಿಗರ ಹೆಮ್ಮೆಯ ಧ್ವಜ ಸ್ತಂಭ.


ವಿಡಿಯೋ ನೋಡಲು ಯುಟ್ಯೂಬ್‌ ವಿಡಿಯೋ ಕೊಂಡಿ ಅಥವಾ ಅದರ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ.

ಕೆಳಗಿನವುಗಳನ್ನೂ ಓದಿರಿ: 
ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!
ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಕೇವಲ ಅರ್ಧ ಬೆಲೆ ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ವಿಧಾನಸೌಧಕ್ಕೆ ವರ್ಣಾಲಂಕಾರ:   ವಿಧಾನಸೌಧಕ್ಕೆ ವರ್ಣಾಲಂಕಾರ ಇದು ಸುವರ್ಣ ನೋಟ ಕ ನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ – ಹೀಗೆ ವಿಶೇಷ ಸಂದರ್ಭಗಳಲ್ಲಿ ವರ್ಣಾಲಂಕಾರದಿಂದ ಜಗಮಗಿಸ...

No comments:

Post a Comment