ಇದು ಮೇಲಕ್ಕೆ ಧುಮುಕುವ ಜಲಪಾತ..!
ಈ ಭೂಮಿ ಅನೇಕ ನಿಗೂಢಗಳನ್ನು ಹೊಂದಿದೆ. ಅವೆಲ್ಲವೂ ನಮಗಿನ್ನೂ ಪರಿಚಿತವಾಗಿಲ್ಲ. ನೀರು ಹರಿಯುವುದು ಕೆಳಕ್ಕೆ ಹಾಗೆಯೇ ಜಲಪಾತ ಧುಮುಕುವುದು ಕೂಡಾ ಕೆಳಕ್ಕೆ. ಆದರೆ ಇದಕ್ಕೆ ವಿರುದ್ಧವಾಗಿ ಮೇಲಕ್ಕೆ ನೀರು ಹರಿಯುವುದೆಂದರೆ ಅದೊಂದು ನಿಗೂಢ. ಹೀಗೇಕೆ ಎಂಬ ಪ್ರಶ್ನೆಗೆ ಉತ್ತರ ಕೂಡಾ ಕಷ್ಟ.
ಭಾರತ ಇಂತಹ ಹತ್ತಾರು ವಿಸ್ಮಯ, ನಿಗೂಢಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇರುವ ನಾನೇಘಾಟ್ ಜಲಪಾತ. ಮುಂಬೈಯಿಂದ ಸುಮಾರು ಮೂರು ಗಂಟೆಗಳಷ್ಟು ಪಯಣ ಮಾಡಿದರೆ ಸಿಗುವ ಜಲಪಾತ ಇದು. ಪುಣೆಯ ಜುನ್ನಾರ್ ಬಳಿ ಸಹ್ಯಾದ್ರಿ ಪರ್ವತ ಶ್ರೇಣಿಯ ಉತ್ತರಕ್ಕೆ ಈ ಜಲಪಾತ ಇದೆ.
ಅಷ್ಟಕ್ಕೂ ಈ ಈ ಜಲಪಾತದ ವಿಶೇಷ ಏನೆಂದರೆ ಇದು ಇತರ ಜಲಪಾತಗಳಿಗೆ ವ್ಯತಿರಿಕ್ತವಾಗಿ ಮೇಲ್ಮುಖವಾಗಿ ದುಮ್ಮಿಕ್ಕುತ್ತದೆ. ಹೀಗಾಗಿ ಇದಕ್ಕೆ ʼರಿವರ್ಸ್ ವಾಟರ್ ಫಾಲ್ಸ್ʼ ಅಂದರೆ ʼಉಲ್ಟಾ ಜಲಪಾತʼ ಎಂದೇ ಹೆಸರಿದೆ. ಈ ಜಲಪಾತವನ್ನು ನೋಡಿ ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಆದರೆ ಈ ಜಲಪಾತದ ಬಗ್ಗೆ ಬಹುಮಂದಿಗೆ ಗೊತ್ತೇ ಇಲ್ಲ.
ಈ ಜಲಪಾತ ಹೀಗೆ ಏಕೆ? ನೀರು ಕೆಳಕ್ಕೆ ಹರಿಯುವ ಬದಲು ಮೇಲಕ್ಕೆ ಏಕೆ ಹರಿಯುತ್ತದೆ ಎಂಬ ಪ್ರಶ್ನೆ ಸಹಜ. ವೈಜ್ಞಾನಿಕವಾಗಿ ಇದಕ್ಕೆ ಲಭಿಸಿರುವ ಉತ್ತರ ಏನು ಎಂದರೆ ಜಲಪಾತದ ಕೆಳಗಿನ ಕಣಿವೆ ಭಾಗದಿಂದ ಮೇಲಕ್ಕೆ ಪ್ರಬಲವಾದ ಗಾಳಿ ಬೀಸುವುದಂತೆ. ಆ ಪ್ರಬಲ ಗಾಳಿಯ ಒತ್ತಡಕ್ಕೆ ಸಿಲುಕಿ ಜಲಪಾತದ ನೀರು ಕೆಳಕ್ಕೆ ಧುಮ್ಮಿಕ್ಕುವ ಬದಲು ಮೇಲ್ಮುಖವಾಗಿ ಧುಮುಕುತ್ತದೆಯಂತೆ.
ಏನೇ ಇರಲಿ. ಗಾಳಿ- ನೀರಿನ ಈ ತಳ್ಳಾಟ ನೋಡುಗರ ಪಾಲಿಗೆ ಒಂದು ಅಪೂರ್ವವಾದ ನೋಟ, ನೈಸರ್ಗಿಕ ವಿದ್ಯಮಾನವೇ ಸರಿ. ಮೈ ನವಿರೇಳಿಸುವ ಈ ಜಲಪಾತದ ಸೊಬಗನ್ನು ವಿಡಿಯೋದಲ್ಲಿ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
ಈ ಕೆಳಗಿನವುಗಳನ್ನೂ ಓದಿರಿ:
No comments:
Post a Comment