Saturday, April 5, 2025

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!

 ಸಮುದ್ರದ ಮೇಲೊಂದು ಸೇತುವೆ ಕೌತುಕ!

ದೇಶದಲ್ಲೇ ಮೊದಲು ಇಂತಹ ಸೇತುವೆ

ರಾಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರಿಯ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೧೪ರಲ್ಲಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸುಮಾರು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಅತ್ಯಾಧುನಿಕ ಎಂಜಿನಿಯರಿಂಗ್‌ ಪದ್ಧತಿಯನ್ನು ಒಳಗೊಂಡಿದೆ. ಹಡಗುಗಳ ಸಂಚಾರಕ್ಕೆ ಅನುಕೂಲವಾಗಲು ಇಲ್ಲಿ ನಿರ್ಮಿಸಲಾಗಿರುವ ʼವರ್ಟಿಕಲ್‌ ಲಿಫ್ಟ್‌ʼ (ಲಂಬ ಎತ್ತು ಸೇತುವೆ) ಸಮುದ್ರದ ಮೇಲಿನ ಕೌತುಕ ಎಂದರೆ ತಪ್ಪಿಲ್ಲ..

ಹಳೆಯ ಸೇತುವೆ ಪಕ್ಕದಲ್ಲೇ ಹೊಸದಾಗಿ ನಿರ್ಮಿಸಲಾಗಿರುವ ಈ ನೂತನ ಸೇತುವೆ ಸುಮಾರು ೨ ಕಿಲೋ ಮೀಟರಿನಷ್ಟು ಉದ್ದವಿದೆ. ಈ ಸೇತುವೆಯಲ್ಲಿ ಸುರಕ್ಷತೆಗಾಗಿ, ವೇಗ ನಿಯಂತ್ರಣಕ್ಕಾಗಿ ಆಧುನಿಕ ಎಂಜಿನಿಯರಿಂಗ್‌ ವಿಧಾನವನ್ನು ಬಳಸಿ ಪ್ರಯಾಣಿಕರ ಹಾಗೂ ರೈಲಿನ ಸುರಕ್ಷತೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರ್‌ ವಿ ಎನ್‌ ಎಲ್‌ನ ಹಿರಿಯ ಅಧಿಕಾರಿ ಆರ್.‌ ಶ್ರೀನಿವಾಸನ್‌ ಹೇಳುತ್ತಾರೆ.

 ಈ ವಿಡಿಯೋ ನೋಡಿ. ಅಂದಾಜು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ರೈಲು ಸೇತುವೆಯ ಮೇಲೆ ಹೇಗೆ ಸರಾಗವಾಗಿ ಸಾಗಿ ಹೋಗುತ್ತದೆ.

ಆದರೆ ಈ ಸೇತುವೆಯ ಕೆಳಭಾಗದಲ್ಲಿ ಹಡಗು ಬಂದರೆ?

ಅಂತಹ ಹಡಗುಗಳಿಗೆ ಸಾಗಿ ಹೋಗಲು ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆಳಗೆ ಹಡಗು ಬಂದಾಗ ಸೇತುವೆಯ ಈ ಲಿಫ್ಟ್‌ ಮಾದರಿಯ ಭಾಗವನ್ನು ನಿಧಾನವಾಗಿ ಲಂಬಾಕಾರವಾಗಿ ಅಂದರೆ ನೇರವಾಗಿ ಮೇಲಕ್ಕೆ ಎತ್ತಲಾಗುತ್ತದೆ.

ಹಡಗುಗಳಿಗೆ ಹೋಗಲು ವ್ಯವಸ್ಥೆ ಮಾಡುವ ಈ ಕೆಲಸಕ್ಕೆ ಹಿಂದೆ ೪೫ ನಿಮಿಷ ಬೇಕಾಗಿದ್ದರೆ, ಈಗ ಕೇವಲ ೫ ನಿಮಿಷದಲ್ಲಿ ಈ ಕೆಲಸ ಆಗುತ್ತದೆ.

ಲಿಫ್ಟ್‌ ಮಾದರಿಯ ಸೇತುವೆಯ ಭಾಗವೇ ಈ ಪಂಬನ್‌ ನೂತನ ಸೇತುವೆಯ ವಿಶೇಷ. ಲಂಬಾಕಾರವಾಗಿ ಹೀಗೆ ಸೇತುವೆಯ ಭಾಗವನ್ನೇ ಮೇಲಕ್ಕೆ ಎತ್ತುವ ತಂತ್ರಜ್ಞಾನದ ಬಳಕೆಯಾಗಿರುವ ಇಂತಹ ಸೇತುವೆ ಇಡೀ ದೇಶದಲ್ಲಿ ಬೇರೆ ಇಲ್ಲ. ದೇಶಕ್ಕೆ ಇದೇ ಮೊದಲನೆಯದು. ಲಿಫ್ಟ್‌ ಮಾದರಿಯ ಈ ಭಾಗದ ಉದ್ದ ೭೨ ಮೀಟರಿನಷ್ಟಿದೆ. ಈ ಲಿಫ್ಟ್‌ ೨೨ ಮೀಟರಿನಷ್ಟು ಎತ್ತರಕ್ಕೆ ಏರಬಲ್ಲುದು.

 ಈ ವಿಶೇಷ ವ್ಯವಸ್ಥೆಯಿಂದ ರೈಲಿನ ಸರಾಗ ಸಂಚಾರಕ್ಕೆ ವ್ಯವಸ್ಥೆ ಆಗಿದೆ. ಜೊತೆಗೆ ಕೆಳಗೆ ಸಮುದ್ರದಲ್ಲಿ ಬರುವ ಹಡಗುಗಳ ಸಂಚಾರಕ್ಕೂ ತೊಂದರೆ ಇಲ್ಲ.

ಈ ನೂತನ ಸೇತುವೆ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಲಾಭವನ್ನು ತಂದು ಕೊಡಲಿದೆ. ದೇಶದ ʼಚಾರ್‌ ಧಾಮ್ ಯಾತ್ರೆʼ ಪರಿಪೂರ್ಣವಾಗಲು ರಾಮೇಶ್ವರಂಗೆ ಯಾತ್ರಿಕರು ಭೇಟಿ ಕೊಡಲೇಬೇಕು. ಈ ಸೇತುವೆಯಿಂದಾಗಿ ಇಂತಹ ಯಾತ್ರಿಕರಿಗೆ ಅನುಕೂಲವಾಗಲಿದೆ. ಹಾಗೆಯೇ ವಿದೇಶೀ ಪ್ರವಾಸಿಗಳಿಗೂ ಅನುಕೂಲವಾಗಲಿದೆ. ರಾಮೇಶ್ವರಕ್ಕೆ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಯೂಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ  ಅಥವಾ ಲಿಂಕ್‌ ಕ್ಲಿಕ್‌ ಮಾಡಿರಿ:

Video link:

https://youtu.be/MIP4rO3Gejg

ಇವುಗಳನ್ನೂ ನೋಡಿರಿ/ ಓದಿರಿ:

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!:   ಸಮುದ್ರದ ಮೇಲೊಂದು ಸೇತುವೆ ಕೌತುಕ! ದೇಶದಲ್ಲೇ ಮೊದಲು ಇಂತಹ ಸೇತುವೆ ರಾ ಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರ...

No comments:

Post a Comment