ನಾನು ಮೆಚ್ಚಿದ ವಾಟ್ಸಪ್

Tuesday, July 25, 2017

ರಮಾನಾಥ ರೈ ಅವರಿಗೆ ರಾಜ್ಯ ಗೃಹ ಸಚಿವ ಪಟ್ಟ Ramananth Rai to become Home Minister

ರಮಾನಾಥ ರೈ ಅವರಿಗೆ ರಾಜ್ಯ ಗೃಹ ಸಚಿವ ಪಟ್ಟ
ಬೆಂಗಳೂರು: ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿರುವ ಡಾ.ಜಿ. ಪರಮೇಶ್ವರ್‌ ಅವರು ತೆರವುಗೊಳಿಸಿದ್ದ ಗೃಹ ಖಾತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅರಣ್ಯ ಸಚಿವ ರಮಾನಾಥ ರೈ ಅವರಿಗೆ  ನೀಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಮಂಗಳವಾರ ಈ ಸಂಬಂಧ ಸಚಿವ ರಮಾನಾಥ ರೈ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಗೃಹ ಖಾತೆಯ ಜವಾಬ್ದಾರಿ ನೀಡುವ ಕುರಿತು  ಚರ್ಚಿಸಿದರು.  ಹೈಕಮಾಂಡ್‌ ಸೂಚನೆಯನ್ನೂ ರೈ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಚರ್ಚೆಯ ಬಳಿಕ ರಮಾನಾಥ ರೈ ಗೃಹ ಖಾತೆಯ ಜವಾಬ್ದಾರಿ ಹೊರಲು ಸಹಮತಿ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.

Ramananth Rai to become Home Minister 

Saturday, July 22, 2017

“ತೆಂಗಿನ ಕಾಯಿ”ಗೆ ಮತ, ಬೆಳಗಿತು “ಕಮಲ”ದ ಬಲ್ಬ್!

“ತೆಂಗಿನ ಕಾಯಿ”ಗೆ ಮತ,
ಬೆಳಗಿತು “ಕಮಲ”ದ ಬಲ್ಬ್!
ಮುಂಬೈ: ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಸಂಪೂರ್ಣ ದೋಷಮುಕ್ತ ಎಂಬುದಾಗಿ ಭಾರತದ ಚುನಾವಣಾ ಆಯೋಗ ನಿರಂತರ ಪ್ರತಿಪಾದಿಸುತ್ತಿದ್ದರೂ, ಇವಿಎಂ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಪ್ರಕರಣ ಮಹಾರಾಷ್ಟ್ರದಲ್ಲಿ ಘಟಿಸಿದೆ.
ಮಾಹಿತಿ ಹಕ್ಕು ಕಾಯ್ದೆಯ ಅಡಿ ಒದಗಿಸಲಾದ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ.
ಬುಲ್ದಾನ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸುಲ್ತಾನಪುರ ಮತಗಟ್ಟೆಯಲ್ಲಿ ಈ ಘಟನೆ ಘಟಿಸಿದೆ. ಯಾರೇ ವ್ಯಕ್ತಿ ಪಕ್ಷೇತರ ಅಭ್ಯರ್ಥಿ ಒಬ್ಬರ ತೆಂಗಿನಕಾಯಿ ಚಿಹ್ನೆಗೆ ಮತ ಹಾಕಿದಾಗಲೆಲ್ಲ, ಬಿಜೆಪಿಯ ಕಮಲ ಚಿಹ್ನೆಯ ಮುಂಭಾಗದ ಎಲ್ಇಡಿ ಬಲ್ಬ್ ಮಿನುಗುತ್ತಿತ್ತು ಎಂದು ಆರ್ ಟಿಐ ಮಾಹಿತಿ ಹೇಳಿದೆ.
ಚುನಾವಣಾಧಿಕಾರಿ ಈ ವಿಷಯವನ್ನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದರು ಎಂದು ಆರ್ ಟಿ ಐ ಮಾಹಿತಿ ತಿಳಿಸಿದೆ.
Voted for Coconut, But Lotus Lit Up!
For details Visit: www.paryaya.com 

Friday, July 21, 2017

“ಅಡಾಲ್ಫ್ ಹಿಟ್ಲರ್’ ಆಗಿ ಕಿರಣ್ ಬೇಡಿ! ಕಾಂಗ್ರೆಸ್ಸಿನಿಂದ ಪೋಸ್ಟರ್ ವಾರ್!

“ಅಡಾಲ್ಫ್ ಹಿಟ್ಲರ್’ ಆಗಿ ಕಿರಣ್ ಬೇಡಿ!
ಪುದುಚೆರಿ: ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಕಾಂಗ್ರೆಸ್ ನಡುವಣ ಘರ್ಷಣೆ ಅತ್ಯಂತ ಕೊಳಕು ತಿರುವನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ ಪಕ್ಷವು ಬೇಡಿ ಅವರನ್ನು “ಅಡಾಲ್ಫ್ ಹಿಟ್ಲರ್’ನಂತೆ ಬಿಂಬಿಸುವ ಪೋಸ್ಟರುಗಳನ್ನು ಪ್ರಕಟಿಸಿದೆ.
ಸ್ವತಃ ಕಿರಣ್ ಬೇಡಿ ಅವರು ಈ ಪೋಸ್ಟರನ್ನು ಗುರುವಾರ, 20 ಜುಲೈ 2017ರಂದು ಟ್ವೀಟ್ ಮಾಡಿದ್ದಾರೆ.
ಪೋಸ್ಟರಿನಲ್ಲಿ ಕಿರಣ್ ಬೇಡಿ ಚಿತ್ರಕ್ಕೆ ಹಿಟ್ಲರ್ ಮೀಸೆಯನ್ನು ಬಿಡಿಸಲಾಗಿದೆ. ಶಾಸಕರ  ನಾಮಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ತಮ್ಮನ್ನು ಖಂಡಿಸುವ ಭರದಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕವು ತಮ್ಮ ಚಿತ್ರವನ್ನು ಈ ರೀತಿಯಾಗಿ ವಿರೂಪಗೊಳಿಸಿದೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.
ಇದಕ್ಕೆ ಮುನ್ನ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಮೂವರು ಬಿಜೆಪಿ ಸದಸ್ಯರನ್ನು ಪುದುಚರಿ ವಿಧಾನಸಭೆಗೆ ತಮ್ಮ ಬಳಿ ಸಮಾಲೋಚಿಸದೆಯೇ ನಾಮಕರಣ ಮಾಡಿದ್ದನ್ನು ಪ್ರತಿಭಟಿಸಿ ಮೆರವಣಿಗೆ ನಡೆಸಿದ್ದರು.
Visit: www.paryaya.com

Wednesday, July 19, 2017

ಶಿಮ್ಲಾ: ಕಣಿವೆಗೆ ಉರುಳಿದ ಬಸ್ಸು, 20ಕ್ಕೂ ಹೆಚ್ಚು ಸಾವು

ಶಿಮ್ಲಾ: ಕಣಿವೆಗೆ ಉರುಳಿದ ಬಸ್ಸು,

 20ಕ್ಕೂ ಹೆಚ್ಚು ಸಾವು
ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ರಾಮಪುರದಲ್ಲಿ ಬಸ್ಸೊಂದು ಕಣಿವೆ ಉರುಳಿದ ಪರಿಣಾಮವಾಗಿ ಗುರುವಾರ, 20ನೇ ಜುಲೈ 2017ರಂದು 28ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಬಸ್ಸು ಸೋಲನ್ ಕಡೆಗೆ ಪ್ರಯಾಣ ಹೊರಟಿತ್ತು
.
ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ವರದಿ ತಿಳಿಸಿದೆ.

Over 20 killed in Bus accient: Visit – www.paryaya.com

ಪಾಕ್ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ” ಎನ್ನುತ್ತಿದೆ ಅಮೆರಿಕ..!

ಪಾಕ್ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ” ಎನ್ನುತ್ತಿದೆ ಅಮೆರಿಕ..

ವಾಷಿಂಗ್ಟನ್:  ಪಾಕಿಸ್ತಾನ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ’ ಎಂದು ಅಮೆರಿಕ ಹೇಳಿದೆ. ಬುಧವಾರ, 19 ಜುಲೈ 2017ರಂದು “ಕಂಟ್ರಿ ರಿಪೋರ್ಟ್ ಆನ್ ಟೆರರಿಸಂ’ ಎಂಬ ತನ್ನ ವರದಿಯಲ್ಲಿ ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತವಾದ ಸ್ವರ್ಗಳಾಗಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಸೇರಿದೆ ಎಂದು ಅಮೆರಿಕ ತಿಳಿಸಿದೆ.

ವಿದೇಶಾಂಗ ಇಲಾಖೆಯು ಅಮೆರಿಕನ್ ಕಾಂಗ್ರೆಸ್ಸಿನ ಒಪ್ಪಿಗೆ ಪಡೆದಿರುವ  ಈ ವಾರ್ಷಿಕ  ವರದಿಯಲ್ಲಿ ಎಲ್ ಇಟಿ ಮತ್ತು ಜೆಇಎಂನಂತಹ ಭಯೋತ್ಪಾದಕರ ಸಂಘಟನೆಗಳು ಪಾಕಿಸ್ತಾನದಲ್ಲಿ 2016ರಿಂದಲೂ ಕಾರ್ಯಾಚರಣೆ, ತರಬೇತಿಗಳನ್ನು ಸಂಘಟಿಸುತ್ತಿವೆ ಜತೆಗೆ ನಿಧಿ ಸಂಗ್ರಹವನ್ನೂ ಮಾಡುತ್ತಿವೆ ಎಂದು ಹೇಳಿದೆ.

ಪಾಕಿಸ್ತಾನಿ ಸೇನೆ ಮತ್ತು ಭದ್ರತಾ ಪಡೆಗಳು ತೆಹ್ರೀಕ್- ಇ – ತಾಲಿಬಾನ್ ಪಾಕಿಸ್ತಾನ್ ನಂತಹ ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿರುವ ಸಂಘಟನೆಗಳ ವಿರುದ್ದ ಕಾರ್ಯಾಚರಣೆ ಕೈಗೊಂಡಿವೆ. ಆದರೆ ಅಫ್ಘನ್ ತಾಲಿಬಾನ್ ಅಥವಾ ಹಖ್ಖಾನಿ ಇತ್ಯಾದಿ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕೈಗೊಂಡಿಲ್ಲ ಎಂದು ವರದಿ ಹೇಳಿದೆ.


ವಿವರಗಳಿಗೆ ಭೇಟಿ ಕೊಡಿ: www.paryaya.com

Friday, July 14, 2017

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಇಬ್ಬರು ಭಯೋತ್ಪಾದಕರ ಹತ್ಯೆ

ತ್ರಾಲ್‌ನಲ್ಲಿ ಗುಂಡಿನ ಕಾಳಗ: ಇಬ್ಬರು ಭಯೋತ್ಪಾದಕರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ತ್ರಾಲ್‌ ಪ್ರದೇಶದ ಸತೋರಾದಲ್ಲಿ ಶನಿವಾರ 15 ಜುಲೈ 2017ರಂದು  ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಗೈದಿವೆ. 
ಭಯೋತ್ಪಾದಕರ ವಾಸ್ತವ್ಯ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಸೇನಾ ಪಡೆಗಳು ಇಬ್ಬರನ್ನು ಹತ್ಯೆಗೈದು ಕಾರ್ಯಾಚರಣೆ ಮುಂದುವರೆಸಿದವು. ಇನ್ನೂ ಕೆಲ ಭಯೋತ್ಪಾಕದರು ಅಡಗಿರುವ ಬಗ್ಗೆ ವರದಿಯಾಗಿದೆ. 
ಇದೇ ಭಯೋತ್ಪಾದಕರು ಜೂನ್‌ 9 ರಂದು ತ್ರಾಲ್‌ನ  ಅರಿಬಾಲ್‌ನ ಸಿಆರ್‌ಪಿಎಫ್ ಕ್ಯಾಂಪ್‌ಗೆ ಗ್ರೆನೇಡ್‌ ಎಸೆದಿದ್ದರು ಎನ್ನಲಾಗಿದ್ದು, ಈ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಜವಾನ ಗಾಯಗೊಂಡಿದ್ದ. 

ಪ್ರಸಕ್ತ ವರ್ಷ ಸೇನಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಕಾಶ್ಮೀರದಲ್ಲಿ 102 ಉಗ್ರರನ್ನು ಹತ್ಯೆಗೈದಿರುವ ಅಂಕಿ ಅಂಶ ಲಭ್ಯವಾಗಿದೆ. 
Two Terrorists gunned down at Tral, J & K.

Thursday, July 13, 2017

ಬ್ಲಡ್ ಕ್ಯಾನ್ಸರ್ ವಿರುದ್ಧ ಜೀನ್ ಥೆರೆಪಿ, ವಿಶ್ವದ ಪ್ರಥಮ ರಾಷ್ಟ್ರ ಅಮೆರಿಕ

ಬ್ಲಡ್ ಕ್ಯಾನ್ಸರ್ ವಿರುದ್ಧ ಜೀನ್ ಥೆರೆಪಿ, ವಿಶ್ವದ

ಪ್ರಥಮ ರಾಷ್ಟ್ರ
ಅಮೆರಿಕ
ವಾಷಿಂಗ್ಟನ್:  ಮಕ್ಕಳು, ಹದಿಹರೆಯದ ಮಂದಿಯ ಜೀವ ಹಿಂಡುವ ಸಾಮಾನ್ಯ ಬ್ಲಡ್ ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಗೆ ವಂಶವಾಹಿ ಚಿಕಿತ್ಸೆ (ಜೀನ್ ಥೆರೆಪಿ) ಒದಗಿಸುವ ವಿಶ್ವದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಲಹಾ ಸಮಿತಿಯು 2017 ಜುಲೈ 12ರ ಬುಧವಾರ 10-0 ಮತಗಳ ಅಂತರದಲ್ಲಿ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಅಂಡ್ ನೋವಾರ್ಟಿಸ್ ಕಾರ್ಪೋರೇಷನ್ ಅಭಿವೃದ್ಧಿ ಪಡಿಸಿದ ಲ್ಯುಕೇಮಿಯಾ ಚಿಕಿತ್ಸೆಗೆ ಅನುಮತಿ ನೀಡಿದೆ.

ಚಿಕಿತ್ಸೆ ಹೇಗೆ?
ಸಿಎಆರ್-ಟಿ (ಕಾರ್-ಟಿ) ಹೆಸರಿನ ಈ ವಂಶವಾಹಿ ಚಿಕಿತ್ಸೆಯಲ್ಲಿ ರೋಗಿಯ ಪ್ರತಿರಕ್ಷಣಾ ಕೋಶಗಳನ್ನು (ಇಮ್ಯೂನ್ ಸೆಲ್ಸ್) ತೆಗೆದುಕೊಂಡು, ಅವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತೆ ದೇಹಕ್ಕೆ ಮರುಸೇರ್ಪಡೆ ಮಾಡಲಾಗುತ್ತದೆ.

ಕೃತಕ ಪ್ರಯೋಗಾಲಯದಲ್ಲಿರೋಗಿಯ ರಕ್ತದಲ್ಲಿನ ಪ್ರತಿರಕ್ಷಣಾ ಕೋಶಗಳ ಸಂಖ್ಯೆಯನ್ನು ಹೆಚ್ಚಿಸಿ ಅವು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಂತೆ ಮಾಡಿ ಬಳಿಕ ಅದನ್ನು ರಕ್ತಕ್ಕೆ ಸೇರಿಸಲಾಗುತ್ತದೆ. ದೇಹದಲ್ಲಿ ಮಾರ್ಪಾಡುಗೊಂಡ ಪ್ರತಿರಕ್ಷಣಾ ಕೋಶಗಳು ಅಗಣಿತವಾಗಿ ಬೆಳೆದು ಕ್ಯಾನ್ಸರ್ ಕೋಶಗಳನ್ನು ಕೊಂದು ಹಾಕುತ್ತವೆ.

ಚಿಕಿತ್ಸೆ ಪಡೆದ ಪ್ರಥಮ ಬಾಲಕಿ ಎಮಿಲಿ
ಪೆನ್ಸಿಲ್ವೇನಿಯಾದ ಫಿಲಿಪ್ಸ್ ಬರ್ಗಿನ ಟೋಮ್ ವೈಟ್ ಹೆಡ್ ಅವರ ಪುತ್ರಿ 12 ವರ್ಷದ ಎಮಿಲಿ ಐದು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ಈ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ.

ಅಂದಿನಿಂದಲೂ ಈ ಚಿಕತ್ಸೆಗೆ ಸರ್ಕಾರಿ ಮನ್ನಣೆ ಪಡೆಯಲು ಯತ್ನಗಳು ನಡೆದಿದ್ದು ಇದೀಗ ಸರ್ಕಾರ ಸಮ್ಮತಿ ಮುದ್ರೆ ಲಭಿಸಿದೆ.

ವೆಚ್ಚ ಎಷ್ಟಾಗಬಹುದು?
ತಜ್ಞರ ಪ್ರಕಾರ ಈ ಚಿಕಿತ್ಸೆಗೆ ಅಂದಾಜು ಸಹಸ್ರ ಡಾಲರ್ ವೆಚ್ಚ ಆಗಬಹುದು. ಆದರೆ ಒಮ್ಮೆ ಚಿಕಿತ್ಸೆ ಪಡೆದರೆ ಸಾಕು, ಜೀವಮಾನ ಪರ್ಯಂತ ರೋಗಿಗೆ ಮತ್ತೆ ಈ ಕ್ಯಾನ್ಸರ್ ಕಾಡುವುದಿಲ್ಲ.

ಅಡ್ಡ ಪರಿಣಾಮಗಳಿವೆಯೇ?

ಚಿಕಿತ್ಸೆ ನೀಡುವ ಹಂತದಲ್ಲಿ ಜ್ವರ ಕಾಡಬಹುದು. ಇತರ ಅಡ್ಡ ಪರಿಣಾಮಗಳ ಬಗ್ಗೆ ಈವರೆಗೆ ಸ್ಪಷ್ಟತೆ ಲಭಿಸಿಲ್ಲ.

ವಿಜ್ಞಾನಿಗಳು ಇದೀಗ ಈ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ರೋಗಗಳಲ್ಲೂ ಪ್ರಯೋಗಿಸಬಹುದೇ ಎಂದು ಅಧ್ಯಯನ ಮಾಡುತ್ತಿದ್ದಾರೆ.

ಹೆಚ್ಚಿನ ವಿವರಗಳಿಗೆ: www.paryaya.com

Wednesday, July 12, 2017

ಜ ನರ ಪ್ರತಿನಿಧಿ..!

ಜನರ ಪ್ರತಿನಿಧಿ..!

ಭುವನೇಶ್ವರ: ಬಿಜು ಜನತಾ ದಳ (ಬಿಜೆಡಿ) ಶಾಸಕ ಬಲಭದ್ರ ಮಾಜ್ಹಿ ಅವರನ್ನು ಒಡಿಶಾದ ಮಲ್ಕನ್ಗಿರಿಯಲ್ಲಿ ನೀರು ನಿಂತಿದ್ದ ಜಾಗದಲ್ಲಿ ಬೆಂಬಲಿಗರು ಎತ್ತಿಕೊಂಡು ಹೋಗಿ ಹಳ್ಳ ದಾಟಿಸಿದರು!

ಪ್ರವಾಹ ಪರಿಸ್ಥಿತಿ ವೀಕ್ಷಣೆಗಾಗಿ ಬಂದಿದ್ದ ಬಲಭದ್ರ ಮಾಜ್ಹಿ ಅವರು ಒಡಿಶಾದ ಲಾಂಗಗಢ ಕ್ಷೇತ್ರದ ಪ್ರತಿನಿಧಿ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋವನ್ನು ನೋಡಿದ ವೀಕ್ಷಕರೊಬ್ಬರು “ತುರ್ತು ಸಂದರ್ಭಗಳಲ್ಲಿ ರಾಜಕಾರಣಿಗಳ ಇಂತಹ ಭೇಟಿಯನ್ನು ತಪ್ಪಿಸಬೇಕು. ಕೆಲಸ ಮಾಡುವ ಸಿಬ್ಬಂದಿಯ ಗಮನವನ್ನು ಇಂತಹ ಘಟನೆಗಳು ಬೇರೆ ಕಡೆಗೆ ಸೆಳೆಯುತ್ತದೆ.’ ಎಂದು ಪ್ರತಿಕ್ರಿಯಿಸಿದರು.

ಇನ್ನೊಬ್ಬ ಓದುಗ ಮೇಲ್ಕಂಡ ಚಿತ್ರವನ್ನು ಪ್ರಕಟಿಸಿದರು. ಓದುಗರು ತಾವೇ ತೀರ್ಮಾನಿಸಬಹುದು.

ಈ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ ವಿಡಿಯೋ ವೀಕ್ಷಿಸಬಹುದು:

ಕಾಶ್ಮೀರದಲ್ಲಿ ರಾಸಾಯನಿಕ ಯುದ್ಧಕ್ಕೆ ಪಾಕ್ ಕುಮ್ಮಕ್ಕು?

ಕಾಶ್ಮೀರದಲ್ಲಿ ರಾಸಾಯನಿಕ ಯುದ್ಧಕ್ಕೆ 

ಪಾಕ್ ಕುಮ್ಮಕ್ಕು?

ನವದೆಹಲಿ:  ಜಮ್ಮು ಕಾಶ್ಮೀರದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಲು ಪಾಕಿಸ್ತಾನ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ನೆರವು ನೀಡಲು ಮುಂದಾಗಿರುವ ಅಂಶವನ್ನು ಭದ್ರತಾ ಸಂಸ್ಥೆ ಬಹಿರಂಗ ಪಡಿಸಿದೆ ಎಂದು ಸಿ ಎನ್ ಎನ್ ನ್ಯೂಸ್ 18 ವರದಿ ಮಾಡಿದೆ.
ರಾಸಾಯನಿಕ ಯುದ್ಧಕ್ಕೆ (ಕೆಮಿಕಲ್ ವಾರ್)ಗೆ ಪಾಕಿಸ್ತಾನ ಸಿದ್ಧತೆ ನಡೆಸಿರುವ ಕುರಿತು ಹಿಜ್ಜುಲ್ ಮುಜಾಹಿದೀನ್ ಉಗ್ರಗಾಮಿಗಳು ನಡೆಸಿರುವ  ಮಾತುಕತೆಯ ಆಡಿಯೋ ಬಹಿರಂಗವಾಗುವ ಮೂಲಕ ಪಾಕಿಸ್ತಾನದ ಬಣ್ಣ ಮತ್ತೊಮ್ಮ ಬಯಲಾಗಿದೆ.

ಮಾತುಕತೆಯ ಆಡಿಯೋವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯೂಸ್ 18 ವರದಿ, ಪಾಕಿಸ್ತಾನ ಉಗ್ರರಿಗೆ ಹೇಗೆ ನೆರವು ನೀಡುತ್ತದೆ ಎಂಬ ಬಗ್ಗೆ ಮತ್ತು ಪಾಕಿಸ್ತಾನದಲ್ಲಿ ಉಗ್ರರ ಚಟುವಟಿಕೆ ಬಗ್ಗೆ ಈ ಆಡಿಯೋ ಬಲವಾದ ಸಾಕ್ಷ್ಯ ಒದಗಿಸಿದೆ ಎಂದು ತಿಳಿಸಿದೆ.
ರಾಸಾಯನಿಕ (ಕೆಮಿಕಲ್) ಶಸ್ತ್ರಾಸ್ತ್ರದ ಮೂಲಕ ದಾಳಿ ನಡೆಸುವುದರಿಂದ ಹೆಚ್ಚಿನ ಸಾವು, ನೋವು ಸಂಭವಿಸಲಿದೆ. ಆದ್ಧರಿಂದ ಕಾಶ್ಮೀರದಲ್ಲಿ ಉಗ್ರರನ್ನು ಹತ್ಯೆಗೈದಿರುವ ಭಾರತೀಯ ಸೇನೆಗೆ ಪಾಠ ಕಲಿಸಲು ರಾಸಾಯನಿಕ ಯುದ್ಧ ನಡೆಸುವುದು ಹೆಚ್ಚು ಸೂಕ್ತ ಎಂಬುದು ಪಾಕಿಸ್ತಾನದ ಇರಾದೆ ಎಂದು ವರದಿ ಹೇಳಿದೆ.
ಪೀರ್ ಸಾಹಿಬ್ (ಲಷ್ಕರ್ ಕಮಾಂಡರ್ ಹಫೀಜ್ ಮುಹಮ್ಮದ್ ಸಯೀದ್)ಗೆ ನಾನು ಬೇಕು. ಆದರೆ ನನ್ನ ಜನರು ನಾನು ವಾಪಸ್ ಬರಬೇಕು ಎನ್ನುತ್ತಿದ್ದಾರೆ. ನಮ್ಮ ಮುಂದಿನ ದಾಳಿ ಈದ್ ನಂತರ...ಇದು ನ್ಯೂಸ್ 18ಗೆ ಲಭ್ಯವಾಗಿರುವ ಆಡಿಯೋದಲ್ಲಿ ಹಿಜ್ಬುಲ್ ಉಗ್ರರ ಸಂಭಾಷಣೆಯ ಒಂದು ತುಣುಕು.

ಭಾರತೀಯ ಸೇನಾಪಡೆಗೆ ಆಘಾತ ನೀಡಲು ಹಿಜ್ಜುಲ್ ಸಂಘಟನೆಯ ಉಗ್ರರು ಕಾತರದಿಂದ ಕಾಯುತ್ತಿದ್ದಾರೆ.  ಪಾಕಿಸ್ತಾನದಿಂದ ನಮಗೆ ಭರ್ಜರಿ ಬೆಂಬಲವಿದೆ. ಗಡಿಯಲ್ಲಿ ಘಟನೆಗಳು ಸಂಭವಿಸುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಭಾರತ ವಿರೋಧಿ ಆಟವನ್ನು ಆಡಲಿದೆ ಎಂಬ ಸಂಭಾಷಣೆ ಆಡಿಯೋದಲ್ಲಿ ದಾಖಲಾಗಿದೆ.

Friday, July 7, 2017

ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಯೋಧ, ಪತ್ನಿ ಹುತಾತ್ಮ

ಜಮ್ಮು ಮತ್ತು ಕಾಶ್ಮೀರ: ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ, ಯೋಧ, ಪತ್ನಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ 08 ಜುಲೈ 2017ರ ಶನಿವಾರ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಸೇನಾ ಯೋಧ ಮತ್ತು ಆತನ ಪತ್ನಿ ಹುತಾತ್ಮರಾಗಿದಾರೆ.

 ಬಂಡಿಪೋರಾದ ಹಾಜಿನ್‌ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಶನಿವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದು , ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. 

ಖಾರ್ರಿ ಕರ್ಮರ ಪ್ರದೇದ ಛಕ್ಕ ಡ ಬಾಗಿನ ಗ್ರಾಮಗಳು ಮತ್ತು ಭಾರತೀಯ ಸೇನಾ ನೆಲೆಗಳ ಮೇಲೆ ಪಾಕ್ ದಾಳಿ ನಡೆಸಿದ್ದು, ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ರಜೆ ಪಡೆದು ಮನೆಗೆ ಬಂದಿದ್ದ ಯೋಧ ಶೌಕತ್‌ ಅಲಿ (35), ಪತ್ನಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಬೆಳಗ್ಗೆ 6.30 ರ ವೇಳೆ ಚಕ್ಕಾದಾ ಭಾಗ್‌ ಮತ್ತು ಖರ್‌ರಿ ಪ್ರದೇಶದಲ್ಲಿ ಭಾರೀ ಗುಂಡಿನ ದಾಳಿ ನಡೆಸಲಾಗಿದ್ದು, ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮೋರ್ಟಾರ್‌ ಶೆಲ್‌ಗ‌ಳನ್ನು ದಾಳಿಗೆ ಪಾಕ್‌ ಪಡೆಗಳು ಬಳಸಿವೆ. 
ಪಾಕ್‌ ಪಡೆಗಳ ದಾಳಿಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ. ಗಾಯಗೊಂಡ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. 
ಬಂಡಿಪೋರಾದ ಹಾಜಿನ್‌ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಶನಿವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದು , ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. 

ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌, ಉಗ್ರ ಬುರ್ಹಾನ್‌ ವಾನಿಯ ಹತ್ಯೆಗೆ ಇಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಸಲು ಸಿದ್ಧತೆ ನಡೆಸಲಾಗಿದೆ.  ಭದ್ರತೆಯನ್ನು ಆಯೋಜಿಸಲಾಗಿದೆ. ಕಣಿವೆಯಲ್ಲಿ ಲೀಸ್‌ ಲೈನ್‌ನಲ್ಲಿ ನಡೆಯುವ ಸಾಮಾಜಿಕ ಜಾಲ ತಾಣಗಳನ್ನು ಬ್ಲಾಕ್‌ ಮಾಡಲಾಗಿದ್ದು ಇಂಟರ್ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ. ಶ್ರೀನಗರ ಮತ್ತು ಬಾರಾಮುಲ್ಲಾದಲ್ಲಿ ಕರ್ಫ್ಯೂ ರೀತಿಯ ಪರಿಸ್ಥಿತಿ ಹೇರಲಾಗಿದೆ.
ವಿವರಗಳಿಗೆ:

Thursday, July 6, 2017

ಲಾಲುಗೆ ಸಿಬಿಐ ಶಾಕ್‌, 12 ಕಡೆ ದಾಳಿ Lalu shocked by CBI

ಲಾಲುಗೆ ಸಿಬಿಐ ಶಾಕ್‌, 12 ಕಡೆ ದಾಳಿ

ನವದೆಹಲಿ: ಮಾಜಿ ಕೇಂದ್ರ ರೈಲ್ವೇ ಸಚಿವ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೆ ಹೊಸ ಸಂಕಷ್ಟ ಎದುರಾಗಿದ್ದು 7 ಜುಲೈ 2017ರ ಶುಕ್ರವಾರ ಸಿಬಿಐ ರೈಲ್ವೇ ಸಚಿವರಾಗಿದ್ದ ವೇಳೆ ಹೊಟೇಲ್‌ಗ‌ಳಿಗೆ ನೀಡಿದ ಗುತ್ತಿಗೆ ಅಕ್ರಮದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು,  12 ಕಡೆಗಳಲ್ಲಿ ದಾಳಿ ನಡೆಸಿ ಆಘಾತ ನೀಡಿದೆ.  

ಲಾಲು , ಪತ್ನಿ ರಾಬ್ರಿ ದೇವಿ , ಪುತ್ರ ಬಿಹಾರ ಡಿಸಿಎಂ ತೇಜಸ್ವಿ , ಆಗಿನ ಐಆರ್‌ಸಿಡಿಸಿ ಎಂಡಿ ಪಿ.ಕೆ ಗೋಯಲ್‌, ಲಾಲು ಆಪ್ತ ಪ್ರೇಮ್‌ಚಂದ್ರ ಗುಪ್ತಾ ಪತ್ನಿ ಸುಜಾತಾ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. 
ದೆಹಲಿ, ಪಟ್ನಾ, ರಾಂಚಿ, ಪುರಿ, ಗುರುಗ್ರಾಮ ಸೇರಿದಂತೆ 12 ಕಡೆಗಳಲ್ಲಿ ಏಕಕಾಲದಲ್ಲಿ ಸಿಬಿಐ ಅಧಿಕಾರಿ ಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು  ಎ ಎನ್ ಐ ವರದಿ ತಿಳಿಸಿದೆ.

2006 ರಲ್ಲಿ ಬಿಎನ್‌ಆರ್‌ ಹೊಟೇಲ್‌ಗ‌ಳ ನಿರ್ವಹಣೆಗೆ ಸುಜಾತಾ ಹೊಟೇಲ್ಸ್‌ಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ದಾಳಿ ನಡೆಸಲಾಗಿದೆ. ಸುಜಾತಾ ಹೊಟೇಲ್‌ಸ್‌ ನ್ನು ರೈಲ್ವೇ ಇಲಾಖೆ ಈ ವರ್ಷಾರಂಭದಲ್ಲಿ ಆಧೀನಕ್ಕೆ ಪಡೆದುಕೊಂಡಿತ್ತು. 

Tuesday, July 4, 2017

ಇಸ್ರೇಲಿ ಬಾಲಕ ಮೊಶೆ ಭೇಟಿ ಮಾಡಲಿರುವ ಪ್ರಧಾನಿ ಮೋದಿ

ಇಸ್ರೇಲಿ ಬಾಲಕ ಮೊಶೆ ಭೇಟಿ ಮಾಡಲಿರುವ ಪ್ರಧಾನಿ ಮೋದಿ


ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು 2008 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬದುಕಿ ಉಳಿದ 2 ವರ್ಷದ ಮಗು ಮೊಶೆ ಹೊಲ್ಸ್ಬಬರ್ಗ್ನನ್ನು ಭೇಟಿ ಮಾಡುವ ಅಪರೂಪದ ಸುಳಿವು ನೀಡಿದ್ದಾರೆ. ದಿನ, 5 ಜುಲೈ 2017 ಬುಧವಾರ ಪ್ರಧಾನಿ-ಮೊಶೆ ಭೇಟಿ ನಡೆಯಲಿದೆ.

ಇಸ್ರೇಲಿಗೆ ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಮೋದಿಯವರು ಭಯೋತ್ಪಾದಕ ದಾಳಿ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥನಾಧ ಮೊಶೆಯನ್ನು ರಕ್ಷಿಸಿದ ಭಾರತೀಯ ಮಹಿಳೆ ಸಾಂಡ್ರಾ ಸ್ಯಾಮ್ಯುಯೆಲ್ಸ್ ಅವರನ್ನೂ ಭೇಟಿ ಮಾಡಲಿದ್ದಾರೆ.
ಎಲ್
ಇಟಿ ಉಗ್ರರು ನಾರಿಮನ್ ಹೌಸ್ ಮೇಲೆ ನಡೆಸಿದ 26/11 ಭಯೋತ್ಪಾದಕ ದಾಳಿಯಲ್ಲಿ ಮೊಶೆ ಅವರ ಹೆತ್ತವರಾದ ರಿವ್ಕ ಮತ್ತು ಗಾವ್ರಿಯಲ್ ಸಾವನ್ನಪ್ಪಿದ್ದರು. ಮುಂಬೈಯಲ್ಲಿ ಚಬಾದ್ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
  

ಬಾಲಕನನ್ನು
ರಕ್ಷಿಸಿದ ಸಾಂಡ್ರಾಗೆ ಇಸ್ರೇಲ್ ಗೌರವ ಪೌರತ್ವವನ್ನು ನೀಡಿ ಇಸ್ರೇಲಿನಲ್ಲಿ ಮೊಶೆ ಪಾಲನೆ ಮಾಡಲು ಅವಕಾಶ ಕಲ್ಪಿಸಿತ್ತು. ಮೊಶೆ ಈಗ ಅಜ್ಜ-ಅಜ್ಜಿಯರಾದ ಶಿಮೋನ್ ಮತ್ತು ಯೆಹುಡಿಟ್ ರೊಸೆನ್ ಬರ್ಗ್ ಜತೆಗೆ ವಾಸವಾಗಿದ್ದಾನೆ.

ವಿವರಗಳಿಗೆ: www.paryaya.com ಗೆ ಭೇಟಿ ಕೊಡಿ.

Saturday, July 1, 2017

ಈ ಮಗುವಿನ ಹೆಸರು “ಜಿ ಎಸ್ ಟಿ’ ಏಕೆ ಎಂದು ಗೊತ್ತೆ?

ಈ ಮಗುವಿನ ಹೆಸರು “ಜಿ ಎಸ್ ಟಿ’
ಏಕೆ ಎಂದು ಗೊತ್ತೆ?

ಜೈಪುರ:  ಈ ಮಗುವಿಗೆ ಅದರ ತಾಯಿ “ಜಿಎಸ್ ಟಿ’ ಎಂಬುದಾಗಿ ನಾಮಕರಣ ಮಾಡಿದ್ದಾಳೆ.  ಏಕೆ ಗೊತ್ತೇ? ಏಕೆಂದರೆ ಈ ಮಗು 2017ರ ಜೂನ್ 30 ಮತ್ತು ಜುಲೈ 1ರ ನಡುವಣ ಮಧ್ಯರಾತ್ರಿಯಲ್ಲಿ ಜನಿಸಿತು.

ಹೌದು. ರಾಜಸ್ಥಾನದ ಬೇವಾದಲ್ಲಿ 2017ರ ಜೂನ್ 30 ಮತ್ತು ಜುಲೈ 1ರ ನಡುವಣ ಮಧ್ಯರಾತ್ರಿಯಲ್ಲಿ ಜನಿಸಿದ ಈ ಗಂಡು ಮಗುವಿಗೆ ಅದರ ತಾಯಿ “ಜಿಎಸ್ ಟಿ’ ಎಂಬುದಾಗಿ ಹೆಸರು ಇಟ್ಟಿದ್ದಾಳೆ.

ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಟ್ವೀಟ್ ಮಾಡಿ “ಮಗು ಜಿಎಸ್ ಟಿ ದೀರ್ಘಕಾಲ ಆರೋಗ್ಯಶಾಲಿಯಾಗಿ ಬದುಕಿ ಬಾಳಲಿ’ ಎಂದು ಹಾರೈಸಿದ್ದಾರೆ.

ಭಾರತದ ಹೊಸ “ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ತೆರಿಗೆ ವ್ಯವಸ್ಥೆಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 2017ರ ಜೂನ್ 30 ಮತ್ತು ಜುಲೈ 1ರ ನಡುವಣ ಮಧ್ಯರಾತ್ರಿಯಲ್ಲಿ ಸಂಸತ್ತಿನ ಸೆಂಟ್ರಲ್ ಸಭಾಂಗಣದಲ್ಲಿ ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.