ಬ್ಲಡ್ ಕ್ಯಾನ್ಸರ್ ವಿರುದ್ಧ ಜೀನ್ ಥೆರೆಪಿ, ವಿಶ್ವದ
ಪ್ರಥಮ ರಾಷ್ಟ್ರ ಅಮೆರಿಕ
ವಾಷಿಂಗ್ಟನ್: ಮಕ್ಕಳು,
ಹದಿಹರೆಯದ ಮಂದಿಯ ಜೀವ ಹಿಂಡುವ ಸಾಮಾನ್ಯ ಬ್ಲಡ್ ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಗೆ ವಂಶವಾಹಿ
ಚಿಕಿತ್ಸೆ (ಜೀನ್ ಥೆರೆಪಿ) ಒದಗಿಸುವ ವಿಶ್ವದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಅಮೆರಿಕ ಪಾತ್ರವಾಗಿದೆ.ಪ್ರಥಮ ರಾಷ್ಟ್ರ ಅಮೆರಿಕ
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಸಲಹಾ ಸಮಿತಿಯು 2017 ಜುಲೈ
12ರ ಬುಧವಾರ 10-0 ಮತಗಳ ಅಂತರದಲ್ಲಿ
ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಅಂಡ್ ನೋವಾರ್ಟಿಸ್ ಕಾರ್ಪೋರೇಷನ್ ಅಭಿವೃದ್ಧಿ ಪಡಿಸಿದ ಲ್ಯುಕೇಮಿಯಾ
ಚಿಕಿತ್ಸೆಗೆ ಅನುಮತಿ ನೀಡಿದೆ.
ಚಿಕಿತ್ಸೆ ಹೇಗೆ?
ಸಿಎಆರ್-ಟಿ
(ಕಾರ್-ಟಿ) ಹೆಸರಿನ ಈ ವಂಶವಾಹಿ ಚಿಕಿತ್ಸೆಯಲ್ಲಿ ರೋಗಿಯ ಪ್ರತಿರಕ್ಷಣಾ ಕೋಶಗಳನ್ನು (ಇಮ್ಯೂನ್ ಸೆಲ್ಸ್)
ತೆಗೆದುಕೊಂಡು, ಅವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಮತ್ತೆ ದೇಹಕ್ಕೆ ಮರುಸೇರ್ಪಡೆ ಮಾಡಲಾಗುತ್ತದೆ.
ಕೃತಕ ಪ್ರಯೋಗಾಲಯದಲ್ಲಿರೋಗಿಯ
ರಕ್ತದಲ್ಲಿನ ಪ್ರತಿರಕ್ಷಣಾ ಕೋಶಗಳ ಸಂಖ್ಯೆಯನ್ನು ಹೆಚ್ಚಿಸಿ ಅವು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಂತೆ
ಮಾಡಿ ಬಳಿಕ ಅದನ್ನು ರಕ್ತಕ್ಕೆ ಸೇರಿಸಲಾಗುತ್ತದೆ. ದೇಹದಲ್ಲಿ ಮಾರ್ಪಾಡುಗೊಂಡ ಪ್ರತಿರಕ್ಷಣಾ ಕೋಶಗಳು
ಅಗಣಿತವಾಗಿ ಬೆಳೆದು ಕ್ಯಾನ್ಸರ್ ಕೋಶಗಳನ್ನು ಕೊಂದು ಹಾಕುತ್ತವೆ.
ಚಿಕಿತ್ಸೆ ಪಡೆದ
ಪ್ರಥಮ ಬಾಲಕಿ ಎಮಿಲಿ
ಪೆನ್ಸಿಲ್ವೇನಿಯಾದ
ಫಿಲಿಪ್ಸ್ ಬರ್ಗಿನ ಟೋಮ್ ವೈಟ್ ಹೆಡ್ ಅವರ ಪುತ್ರಿ 12 ವರ್ಷದ ಎಮಿಲಿ ಐದು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ
ಈ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ.
ಅಂದಿನಿಂದಲೂ
ಈ ಚಿಕತ್ಸೆಗೆ ಸರ್ಕಾರಿ ಮನ್ನಣೆ ಪಡೆಯಲು ಯತ್ನಗಳು ನಡೆದಿದ್ದು ಇದೀಗ ಸರ್ಕಾರ ಸಮ್ಮತಿ ಮುದ್ರೆ ಲಭಿಸಿದೆ.
ವೆಚ್ಚ ಎಷ್ಟಾಗಬಹುದು?
ತಜ್ಞರ ಪ್ರಕಾರ
ಈ ಚಿಕಿತ್ಸೆಗೆ ಅಂದಾಜು ಸಹಸ್ರ ಡಾಲರ್ ವೆಚ್ಚ ಆಗಬಹುದು. ಆದರೆ ಒಮ್ಮೆ ಚಿಕಿತ್ಸೆ ಪಡೆದರೆ ಸಾಕು,
ಜೀವಮಾನ ಪರ್ಯಂತ ರೋಗಿಗೆ ಮತ್ತೆ ಈ ಕ್ಯಾನ್ಸರ್ ಕಾಡುವುದಿಲ್ಲ.
ಅಡ್ಡ ಪರಿಣಾಮಗಳಿವೆಯೇ?
ಚಿಕಿತ್ಸೆ ನೀಡುವ
ಹಂತದಲ್ಲಿ ಜ್ವರ ಕಾಡಬಹುದು. ಇತರ ಅಡ್ಡ ಪರಿಣಾಮಗಳ ಬಗ್ಗೆ ಈವರೆಗೆ ಸ್ಪಷ್ಟತೆ ಲಭಿಸಿಲ್ಲ.
ವಿಜ್ಞಾನಿಗಳು
ಇದೀಗ ಈ ಚಿಕಿತ್ಸೆಯನ್ನು ಇತರ ಕ್ಯಾನ್ಸರ್ ರೋಗಗಳಲ್ಲೂ ಪ್ರಯೋಗಿಸಬಹುದೇ ಎಂದು ಅಧ್ಯಯನ ಮಾಡುತ್ತಿದ್ದಾರೆ.
ಹೆಚ್ಚಿನ ವಿವರಗಳಿಗೆ:
www.paryaya.com
No comments:
Post a Comment