ನವದೆಹಲಿ:
ಇಸ್ರೇಲ್ ಪ್ರವಾಸದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರು 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬದುಕಿ ಉಳಿದ 2 ವರ್ಷದ ಮಗು ಮೊಶೆ ಹೊಲ್ಸ್ಬಬರ್ಗ್ನನ್ನು ಭೇಟಿ ಮಾಡುವ ಅಪರೂಪದ ಸುಳಿವು ನೀಡಿದ್ದಾರೆ. ಈದಿನ,
5 ಜುಲೈ 2017ರ ಬುಧವಾರ ಪ್ರಧಾನಿ-ಮೊಶೆ ಭೇಟಿ ನಡೆಯಲಿದೆ.
ಇಸ್ರೇಲಿಗೆ
ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಮೋದಿಯವರು ಭಯೋತ್ಪಾದಕ ದಾಳಿ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥನಾಧ ಮೊಶೆಯನ್ನು ರಕ್ಷಿಸಿದ ಭಾರತೀಯ ಮಹಿಳೆ ಸಾಂಡ್ರಾ ಸ್ಯಾಮ್ಯುಯೆಲ್ಸ್ ಅವರನ್ನೂ ಭೇಟಿ ಮಾಡಲಿದ್ದಾರೆ.
ಎಲ್ ಇಟಿ ಉಗ್ರರು ನಾರಿಮನ್ ಹೌಸ್ ಮೇಲೆ ನಡೆಸಿದ 26/11ರ ಭಯೋತ್ಪಾದಕ ದಾಳಿಯಲ್ಲಿ ಮೊಶೆ ಅವರ ಹೆತ್ತವರಾದ ರಿವ್ಕ ಮತ್ತು ಗಾವ್ರಿಯಲ್ ಸಾವನ್ನಪ್ಪಿದ್ದರು. ಮುಂಬೈಯಲ್ಲಿ ಚಬಾದ್ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಬಾಲಕನನ್ನು ರಕ್ಷಿಸಿದ ಸಾಂಡ್ರಾಗೆ ಇಸ್ರೇಲ್ ಗೌರವ ಪೌರತ್ವವನ್ನು ನೀಡಿ ಇಸ್ರೇಲಿನಲ್ಲಿ ಮೊಶೆ ಪಾಲನೆ ಮಾಡಲು ಅವಕಾಶ ಕಲ್ಪಿಸಿತ್ತು. ಮೊಶೆ ಈಗ ಅಜ್ಜ-ಅಜ್ಜಿಯರಾದ ಶಿಮೋನ್ ಮತ್ತು ಯೆಹುಡಿಟ್ ರೊಸೆನ್ ಬರ್ಗ್ ಜತೆಗೆ ವಾಸವಾಗಿದ್ದಾನೆ.

ವಿವರಗಳಿಗೆ:
www.paryaya.com ಗೆ ಭೇಟಿ ಕೊಡಿ.
No comments:
Post a Comment