ಪಾಕ್ ಭಯೋತ್ಪಾದಕರ “ಸುರಕ್ಷಿತ ಸ್ವರ್ಗ” ಎನ್ನುತ್ತಿದೆ
ಅಮೆರಿಕ..
ವಾಷಿಂಗ್ಟನ್: ಪಾಕಿಸ್ತಾನ
ಭಯೋತ್ಪಾದಕರ “ಸುರಕ್ಷಿತ ಸ್ವರ್ಗ’ ಎಂದು ಅಮೆರಿಕ ಹೇಳಿದೆ. ಬುಧವಾರ, 19 ಜುಲೈ 2017ರಂದು “ಕಂಟ್ರಿ
ರಿಪೋರ್ಟ್ ಆನ್ ಟೆರರಿಸಂ’ ಎಂಬ ತನ್ನ ವರದಿಯಲ್ಲಿ ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತವಾದ ಸ್ವರ್ಗಳಾಗಿರುವ
ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಸೇರಿದೆ ಎಂದು ಅಮೆರಿಕ ತಿಳಿಸಿದೆ.
ವಿದೇಶಾಂಗ ಇಲಾಖೆಯು ಅಮೆರಿಕನ್ ಕಾಂಗ್ರೆಸ್ಸಿನ ಒಪ್ಪಿಗೆ ಪಡೆದಿರುವ ಈ ವಾರ್ಷಿಕ
ವರದಿಯಲ್ಲಿ ಎಲ್ ಇಟಿ ಮತ್ತು ಜೆಇಎಂನಂತಹ ಭಯೋತ್ಪಾದಕರ ಸಂಘಟನೆಗಳು ಪಾಕಿಸ್ತಾನದಲ್ಲಿ
2016ರಿಂದಲೂ ಕಾರ್ಯಾಚರಣೆ, ತರಬೇತಿಗಳನ್ನು ಸಂಘಟಿಸುತ್ತಿವೆ ಜತೆಗೆ ನಿಧಿ ಸಂಗ್ರಹವನ್ನೂ ಮಾಡುತ್ತಿವೆ
ಎಂದು ಹೇಳಿದೆ.
ಪಾಕಿಸ್ತಾನಿ ಸೇನೆ ಮತ್ತು ಭದ್ರತಾ ಪಡೆಗಳು ತೆಹ್ರೀಕ್- ಇ – ತಾಲಿಬಾನ್
ಪಾಕಿಸ್ತಾನ್ ನಂತಹ ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿರುವ ಸಂಘಟನೆಗಳ ವಿರುದ್ದ ಕಾರ್ಯಾಚರಣೆ ಕೈಗೊಂಡಿವೆ.
ಆದರೆ ಅಫ್ಘನ್ ತಾಲಿಬಾನ್ ಅಥವಾ
ಹಖ್ಖಾನಿ ಇತ್ಯಾದಿ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕೈಗೊಂಡಿಲ್ಲ ಎಂದು ವರದಿ ಹೇಳಿದೆ.
No comments:
Post a Comment