ಲಾಲುಗೆ ಸಿಬಿಐ ಶಾಕ್, 12 ಕಡೆ ದಾಳಿ
ನವದೆಹಲಿ: ಮಾಜಿ ಕೇಂದ್ರ ರೈಲ್ವೇ ಸಚಿವ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಹೊಸ ಸಂಕಷ್ಟ ಎದುರಾಗಿದ್ದು 7 ಜುಲೈ 2017ರ ಶುಕ್ರವಾರ ಸಿಬಿಐ ರೈಲ್ವೇ ಸಚಿವರಾಗಿದ್ದ ವೇಳೆ ಹೊಟೇಲ್‌ಗಳಿಗೆ ನೀಡಿದ ಗುತ್ತಿಗೆ ಅಕ್ರಮದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡು, 12 ಕಡೆಗಳಲ್ಲಿ ದಾಳಿ ನಡೆಸಿ ಆಘಾತ ನೀಡಿದೆ.
ಲಾಲು , ಪತ್ನಿ ರಾಬ್ರಿ ದೇವಿ ,
ಪುತ್ರ ಬಿಹಾರ ಡಿಸಿಎಂ ತೇಜಸ್ವಿ , ಆಗಿನ ಐಆರ್‌ಸಿಡಿಸಿ ಎಂಡಿ ಪಿ.ಕೆ ಗೋಯಲ್, ಲಾಲು ಆಪ್ತ
ಪ್ರೇಮ್‌ಚಂದ್ರ ಗುಪ್ತಾ ಪತ್ನಿ ಸುಜಾತಾ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ದೆಹಲಿ, ಪಟ್ನಾ, ರಾಂಚಿ, ಪುರಿ, ಗುರುಗ್ರಾಮ
ಸೇರಿದಂತೆ 12 ಕಡೆಗಳಲ್ಲಿ ಏಕಕಾಲದಲ್ಲಿ ಸಿಬಿಐ ಅಧಿಕಾರಿ ಗಳು ದಾಳಿ ನಡೆಸಿ ಪರಿಶೀಲನೆ
ನಡೆಸುತ್ತಿದ್ದಾರೆ ಎಂದು ಎ ಎನ್ ಐ ವರದಿ
ತಿಳಿಸಿದೆ.
2006 ರಲ್ಲಿ ಬಿಎನ್‌ಆರ್ ಹೊಟೇಲ್‌ಗಳ
ನಿರ್ವಹಣೆಗೆ ಸುಜಾತಾ ಹೊಟೇಲ್ಸ್‌ಗೆ ನೀಡಿದ ಗುತ್ತಿಗೆಯಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ದಾಳಿ
ನಡೆಸಲಾಗಿದೆ. ಸುಜಾತಾ ಹೊಟೇಲ್‌ಸ್ ನ್ನು ರೈಲ್ವೇ ಇಲಾಖೆ ಈ ವರ್ಷಾರಂಭದಲ್ಲಿ ಆಧೀನಕ್ಕೆ ಪಡೆದುಕೊಂಡಿತ್ತು.
No comments:
Post a Comment