ನಾನು ಮೆಚ್ಚಿದ ವಾಟ್ಸಪ್

Wednesday, July 12, 2017

ಕಾಶ್ಮೀರದಲ್ಲಿ ರಾಸಾಯನಿಕ ಯುದ್ಧಕ್ಕೆ ಪಾಕ್ ಕುಮ್ಮಕ್ಕು?

ಕಾಶ್ಮೀರದಲ್ಲಿ ರಾಸಾಯನಿಕ ಯುದ್ಧಕ್ಕೆ 

ಪಾಕ್ ಕುಮ್ಮಕ್ಕು?

ನವದೆಹಲಿ:  ಜಮ್ಮು ಕಾಶ್ಮೀರದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಲು ಪಾಕಿಸ್ತಾನ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ನೆರವು ನೀಡಲು ಮುಂದಾಗಿರುವ ಅಂಶವನ್ನು ಭದ್ರತಾ ಸಂಸ್ಥೆ ಬಹಿರಂಗ ಪಡಿಸಿದೆ ಎಂದು ಸಿ ಎನ್ ಎನ್ ನ್ಯೂಸ್ 18 ವರದಿ ಮಾಡಿದೆ.
ರಾಸಾಯನಿಕ ಯುದ್ಧಕ್ಕೆ (ಕೆಮಿಕಲ್ ವಾರ್)ಗೆ ಪಾಕಿಸ್ತಾನ ಸಿದ್ಧತೆ ನಡೆಸಿರುವ ಕುರಿತು ಹಿಜ್ಜುಲ್ ಮುಜಾಹಿದೀನ್ ಉಗ್ರಗಾಮಿಗಳು ನಡೆಸಿರುವ  ಮಾತುಕತೆಯ ಆಡಿಯೋ ಬಹಿರಂಗವಾಗುವ ಮೂಲಕ ಪಾಕಿಸ್ತಾನದ ಬಣ್ಣ ಮತ್ತೊಮ್ಮ ಬಯಲಾಗಿದೆ.

ಮಾತುಕತೆಯ ಆಡಿಯೋವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯೂಸ್ 18 ವರದಿ, ಪಾಕಿಸ್ತಾನ ಉಗ್ರರಿಗೆ ಹೇಗೆ ನೆರವು ನೀಡುತ್ತದೆ ಎಂಬ ಬಗ್ಗೆ ಮತ್ತು ಪಾಕಿಸ್ತಾನದಲ್ಲಿ ಉಗ್ರರ ಚಟುವಟಿಕೆ ಬಗ್ಗೆ ಈ ಆಡಿಯೋ ಬಲವಾದ ಸಾಕ್ಷ್ಯ ಒದಗಿಸಿದೆ ಎಂದು ತಿಳಿಸಿದೆ.
ರಾಸಾಯನಿಕ (ಕೆಮಿಕಲ್) ಶಸ್ತ್ರಾಸ್ತ್ರದ ಮೂಲಕ ದಾಳಿ ನಡೆಸುವುದರಿಂದ ಹೆಚ್ಚಿನ ಸಾವು, ನೋವು ಸಂಭವಿಸಲಿದೆ. ಆದ್ಧರಿಂದ ಕಾಶ್ಮೀರದಲ್ಲಿ ಉಗ್ರರನ್ನು ಹತ್ಯೆಗೈದಿರುವ ಭಾರತೀಯ ಸೇನೆಗೆ ಪಾಠ ಕಲಿಸಲು ರಾಸಾಯನಿಕ ಯುದ್ಧ ನಡೆಸುವುದು ಹೆಚ್ಚು ಸೂಕ್ತ ಎಂಬುದು ಪಾಕಿಸ್ತಾನದ ಇರಾದೆ ಎಂದು ವರದಿ ಹೇಳಿದೆ.
ಪೀರ್ ಸಾಹಿಬ್ (ಲಷ್ಕರ್ ಕಮಾಂಡರ್ ಹಫೀಜ್ ಮುಹಮ್ಮದ್ ಸಯೀದ್)ಗೆ ನಾನು ಬೇಕು. ಆದರೆ ನನ್ನ ಜನರು ನಾನು ವಾಪಸ್ ಬರಬೇಕು ಎನ್ನುತ್ತಿದ್ದಾರೆ. ನಮ್ಮ ಮುಂದಿನ ದಾಳಿ ಈದ್ ನಂತರ...ಇದು ನ್ಯೂಸ್ 18ಗೆ ಲಭ್ಯವಾಗಿರುವ ಆಡಿಯೋದಲ್ಲಿ ಹಿಜ್ಬುಲ್ ಉಗ್ರರ ಸಂಭಾಷಣೆಯ ಒಂದು ತುಣುಕು.

ಭಾರತೀಯ ಸೇನಾಪಡೆಗೆ ಆಘಾತ ನೀಡಲು ಹಿಜ್ಜುಲ್ ಸಂಘಟನೆಯ ಉಗ್ರರು ಕಾತರದಿಂದ ಕಾಯುತ್ತಿದ್ದಾರೆ.  ಪಾಕಿಸ್ತಾನದಿಂದ ನಮಗೆ ಭರ್ಜರಿ ಬೆಂಬಲವಿದೆ. ಗಡಿಯಲ್ಲಿ ಘಟನೆಗಳು ಸಂಭವಿಸುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಭಾರತ ವಿರೋಧಿ ಆಟವನ್ನು ಆಡಲಿದೆ ಎಂಬ ಸಂಭಾಷಣೆ ಆಡಿಯೋದಲ್ಲಿ ದಾಖಲಾಗಿದೆ.

No comments:

Post a Comment