ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !
ಬೆಂಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ! ಒಂದೇ ಫ್ರೇಮ್‌ನಲ್ಲಿ ನಾಲ್ಕು ಮೆಟ್ರೋ ರೈಲುಗಳು ಏಕಕಾಲದಲ್ಲಿ ಚಲಿಸುತ್ತಿರುವ ಅಪರೂಪದ ದೃಶ್ಯವನ್ನು ಈ ವಿಡಿಯೋ ಸೆರೆಹಿಡಿದಿದೆ.
ಆರ್‌ವಿ ರಸ್ತೆ ಇಂಟರ್‌ಚೇಂಜ್ ಬಳಿ ಸೆರೆಹಿಡಿಯಲಾದ ಈ ವಿಡಿಯೋ, ನಗರವಾಸಿಗಳು ಮತ್ತು ಮೆಟ್ರೋ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರು ಮೂಲದ ವಿಷಯ ರಚನೆಕಾರ ಶ್ರೀಹರಿ ಕಾರಂತ್ ಅವರು ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಗರದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಹೆಸರುವಾಸಿಯಾಗಿರುವ ಶ್ರೀಹರಿ, "ಈ ಪರಿಪೂರ್ಣ ಶಾಟ್‌ಗಾಗಿ ಬಹಳ ಸಮಯ ಕಾಯುತ್ತಿದ್ದೆ – ಹಳದಿ ಮತ್ತು ಹಸಿರು ಮಾರ್ಗಗಳು ಒಂದೇ ಫ್ರೇಮ್‌ನಲ್ಲಿ!" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಕೆಳಗೆ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ದೃಶ್ಯ ವೈಭವವನ್ನು ನೀವೂ ಕಣ್ತುಂಬಿಕೊಳ್ಳಿ ಅಥವಾ ಶ್ರೀ ಹರಿ ಕಾರಂತ್ ಅವರ ಈ ಎಕ್ಸ್ ಲಿಂಕ್ ಕ್ಲಿಕ್ ಮಾಡಿರಿ


No comments:
Post a Comment