Showing posts with label ದೀಪಾವಳಿ. Show all posts
Showing posts with label ದೀಪಾವಳಿ. Show all posts

Tuesday, October 21, 2025

PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!

 ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!

ಇದು ಸುವರ್ಣ ನೋಟ

ದೀಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ.

ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋಧ್ಯೆಗೆ ವಾಪಸಾಗಿ ಪಟ್ಟವನ್ನೇರಿದ ಹಬ್ಬ. ಅಸುರ ನರಕಾಸುರನನ್ನು ವಧಿಸಿದ ದಿನದ ಹಬ್ಬ. ವಿಷ್ಣುವು ವಾಮನರೂಪಿಯಾಗಿ ಬಂದು ಮೂರು ಅಡಿ ಭೂಮಿಯನ್ನು ದಾನವಾಗಿ ಪಡೆದು ಬಲಿಯೇಂದ್ರ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದ ಹಬ್ಬ. ಪಾರ್ವತಿಯ ಕೇದಾರೇಶ್ವರನನ್ನಪೂಜಿಸಿ ಈಶ್ವರನನ್ನು ಪತಿಯಾಗಿ ಪಡೆದ ಹಬ್ಬ. ಲಕ್ಷ್ಮಿಯು ಪೂಜೆ ಸ್ವೀಕರಿಸಿ ಭಕ್ತರನ್ನು ಹರಸುವ ಹಬ್ಬ.ಗೋಮಾತೆಯನ್ನು ಪೂಜಿಸುವ ಹಬ್ಬ.

ಈ ಹಬ್ಬಕ್ಕೆ ದೇವರಿಗೆ ಹೂಗಳ ಸಿಂಗಾರದೊಂದಿಗೆ ಸಾಲು ದೀಪಗಳ ಹಣತೆ ಬೆಳಗಿಸುವುದರ ಜೊತೆಗೆ ಪಟಾಕಿ ಬಾಣಗಳ ಬಿರುಸು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.

ಈ ದೃಶ್ಯಗಳನ್ನು ಸೆರೆ ಹಿಡಿದು ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಕಳೆಗಟ್ಟಿಸಿರುವುದು ಹೀಗೆ.

ಪಟಾಕಿ ಬಾಣಗಳ ಸುಂದರ ಛಾಯಾಚಿತ್ರಗಳನ್ನು ಪರ್ಯಾಯದ 
ʼಸುವರ್ಣ ನೋಟʼಕ್ಕೆ ಒದಗಿಸಿದ್ದಾರೆ.









ಈ ಚಿತ್ರಗಳಿಗೆ ಚಲನೆ ನೀಡಿ ವಿಡಿಯೋ ರೂಪಿಸಿದ್ದು ನೆತ್ರಕೆರೆ ಉದಯಶಂಕರ.

ಚಿತ್ರ ಹಾಗೂ ವಿಡಿಯೋದ ಸಂಗಮ ಇಲ್ಲಿದೆ.👇

ಚಿತ್ರಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ. ವಿಡಿಯೋದ ವೀಕ್ಷಣೆಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ. ಇಲ್ಲವೇ ಇಲ್ಲಿರುವ ಯೂ ಟ್ಯೂಬ್‌ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://youtu.be/ZqJD3In5guY?list=PLv2kXf-8UHyK3E-4qT6ApslDz_pUNsCZO




PARYAYA: ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ!:   ದೀಪಾವಳಿ: ದೀಪ, ಪಟಾಕಿ ಬಾಣಗಳ ಹಬ್ಬ! ಇದು ಸುವರ್ಣ ನೋಟ ದೀ ಪಾವಳಿ ದೀಪಗಳ ಹಬ್ಬ, ಪಟಾಕಿ ಬಾಣಗಳ ಬಿರುಸಿನ ಹಬ್ಬ. ಶ್ರೀರಾಮಚಂದ್ರನು ರಾವಣನನ್ನು ವಧಿಸಿದ ಬಳಿಕ ಅಯೋ...

Monday, October 20, 2025

PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

 ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯೋಧರ ಜೊತೆಗೆ ಆಚರಿಸಿದರು.

ಗೋವಾದ ಕರಾವಳಿಯಲ್ಲಿ ಮತ್ತು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಯೋಧರ ಜೊತೆಗೆ ಸಂವಾದ ನಡೆಸಿದ ಪ್ರಧಾನಿ, ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.

ಐಎನ್‌ ಎಸ್‌ ವಿಕ್ರಾಂತ್‌ ನಲ್ಲಿ ಯೋಧರು ಮತ್ತು ಸಿಬ್ಬಂದಿ ಪ್ರದರ್ಶಿಸಿದ “ಕಸಮ್‌ ಸಿಂದೂರ್‌ ಕಿʼ ಹಾಡನ್ನು ಮೆಚ್ಚಿಕೊಂಡರು.

ಐಎನ್‌ಎಸ್‌ ಮುಖಾಂತರ ಪ್ರದರ್ಶನಗೊಂಡ ವಾಯುಬಲದ ವಿಡಿಯೋವನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡರು.

ಪ್ರಧಾನಿ ಹಂಚಿಕೊಂಡ ವಿಡಿಯೋಗಳು ಇಲ್ಲಿವೆ.


PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ:   ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ ದೀ ಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯ...

Friday, November 1, 2024

PARYAYA: ದೀಪಾವಳಿ ಸಂಭ್ರಮ ೨೦೨೪

 ದೀಪಾವಳಿ ಸಂಭ್ರಮ ೨೦೨೪


ಬೆಂಗಳೂರು: ಬೆಂಗಳೂರು
 ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ಅಕ್ಟೋಬರ್‌ ೩೧ರ ಗುರುವಾರ೨೦೨೪ ನವೆಂಬರ್‌ ೦೧ರ ಶುಕ್ರವಾರ ಬೆಳಗ್ಗೆ ದೀಪಾವಳಿಲಕ್ಷ್ಮೀಪೂಜೆಕೇದಾರನಾಥೇಶ್ವರ ಕಥಾ ಶ್ರವಣ ಕಾರ್ಯಕ್ರಮಗಳು ನಡೆದವು.

 ಸಂದರ್ಭದ ವಿಡಿಯೋ ಇಲ್ಲಿದೆಚಿತ್ರ 👇👇👇 ಕ್ಲಿಕ್‌ ಮಾಡಿರಿ:
PARYAYA: ದೀಪಾವಳಿ ಸಂಭ್ರಮ ೨೦೨೪:   ದೀಪಾವಳಿ ಸಂಭ್ರಮ ೨೦೨೪ ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ೨೦೨...

Sunday, October 23, 2022

PARYAYA: ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ

 ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ

ಅಯೋಧ್ಯೆ: ಹನ್ನೆರಡು ಲಕ್ಷದ ಎಪ್ಪತ್ತಾರು ಸಾವಿರ (12,76,000) ಹಣತೆಗಳನ್ನು ಬೆಳಗುವ ಮೂಲಕ 2022 ಅಕ್ಟೋಬರ್‌ 24ರ ಭಾನುವಾರ ಅಯೋಧ್ಯೆ ವಿಶ್ವದಾಖಲೆಯನ್ನು ಬರೆಯಿತು. ಇದರೊಂದಿಗೆ  ಲೇಸರ್‌ ಬೆಳಕಿನಲ್ಲಿ ರಾಮಾಯಣ, ಅಯೋಧ್ಯಾ ಮಂದಿರದ ದೃಶ್ಯಗಳೂ ಕಣ್ಮನ ಸೆಳೆದವು.

ಅಯೋಧ್ಯೆಯ ಅಭೂತಪೂರ್ವ ದೀಪಾವಳಿ, ಗಂಗಾರತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಪಾಲ್ಗೊಂಡರು.

ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಕೆಳಗಿನ ವಿಡಿಯೋ ಕ್ಲಿಕ್‌ ಮಾಡಿ. ಇದು ಎನ್‌ಎನ್‌ಐ  ವಿಡಿಯೋ.


ಇನ್ನೊಂದು ವಿಡಿಯೋ ನೋಡಿ: 

PARYAYA: ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ:   ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ ಅಯೋಧ್ಯೆ : ಹನ್ನೆರಡು ಲಕ್ಷದ ಎಪ್ಪತ್ತಾರು ಸಾವಿರ (12,76,000) ಹಣತೆಗಳನ್ನು ಬೆಳಗುವ ಮೂಲಕ 2022 ಅಕ್ಟೋಬರ್‌ 24ರ ಭಾನುವಾರ ಅಯೋಧ್ಯ...

Sunday, August 22, 2021

PARYAYA: ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

 ವಾರೇ ವಾಹ್  ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

ಭಾರತದ ಈ ಸಂಸ್ಕೃತಿಗೆ ವಾರೇ ವಾಹ್ ಎನ್ನಲೇಬೇಕು. ಎಂತಹ ಸಾಮ್ಯತೆ ನೋಡಿ. ಕೇರಳದಲ್ಲಿ ಈಗ (ಇದು ಬರೆಯುವಾಗ ದಿನ: 22 ಆಗಸ್ಟ್ 2021) ಓಣಂ ಸಂಭ್ರಮ.  ಇದೇ ಸಂಭ್ರಮ  ತುಳುನಾಡು ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕರ್ನಾಟಕ-ಕೇರಳದ ಗಡಿನಾಡು ಕಾಸರಗೋಡಿನಲ್ಲಿ ದೀಪಾವಳಿಯ ವೇಳೆಯಲ್ಲಿ ಕಂಡು ಬರುತ್ತದೆ.

 ಎರಡೂ ಸಂದರ್ಭಗಳಲ್ಲಿ  ಕಂಡು ಬರುವ ಸಾಮ್ಯತೆ ಬಲಿಯೇಂದ್ರ ಇಲ್ಲವೇ ಬಲಿ ಚಕ್ರವರ್ತಿ ಅಥವಾ ರಾಜಾಮಹಾಬಲಿಗೆ ನೀಡುವ ಸಂಭ್ರಮದ ಸ್ವಾಗತ.

ಈಗ ಕೇರಳದಲ್ಲಿ ಮಾತ್ರವೇ ಅಲ್ಲ ತಾವಿರುವ ಎಲ್ಲ ಕಡೆಗಳಲ್ಲೂ ಕೇರಳಿಗರು ಸಂಭ್ರಮದಿಂದ ಆಚರಿಸುತ್ತಿರುವ ಓಣಂ ಕಡೆಗೆ ಗಮನ ಹರಿಸಿ.

ಓಣಂ ಹಬ್ಬವು ಕೇರಳಿಗರು ನಂಬುವ ಪ್ರಕಾರ ರಾಜ ಮಹಾಬಲಿಯ ತಾಯ್ನಾಡಿನಲ್ಲಿ ಅಂದರೆ ಕೇರಳದಲ್ಲಿ ಆಚರಿಸಲ್ಪಡುತ್ತದೆ.  ಇದು 10 ದಿನಗಳ ಕಾಲ ನಡೆಯುತ್ತದೆ.  ಮುಖ್ಯ ಹಬ್ಬವನ್ನು ಆಗಸ್ಟ್ 21-23 ರಿಂದ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ.

ಮಹಾಬಲಿರಾಕ್ಷಸ ರಾಜ. ಆದರೆ  ಉದಾರ ಮತ್ತು ದಯಾಮಯ ಎಂದು ಪ್ರತೀತಿ. ಆತನ ಆಡಳಿತವನ್ನು  ಸುವರ್ಣ ಯುಗಕ್ಕೆ ಹೋಲಿಕೆ ಮಾಡಲಾಗುತ್ತದೆ,   ಕಾರಣದಿಂದಾಗಿಪ್ರತಿವರ್ಷ ಮಹಾಬಲಿ ತನ್ನ ತಾಯ್ನಾಡಿಗೆ ಭೇಟಿ ನೀಡಿ ಮರಳುವ ಸಂದರ್ಭವನ್ನು  ವ್ಯಾಪಕವಾಗಿ ಆಚರಿಸಲಾಗುತ್ತದೆಹಬ್ಬವನ್ನು ಮಲಯಾಳಂ ಕ್ಯಾಲೆಂಡರ್ ತಿಂಗಳಾದ ಚಿಂಗಂನಲ್ಲಿ ಆಚರಿಸಲಾಗುತ್ತದೆಈ ಓಣಂ  ಸುಗ್ಗಿಯ ಹಬ್ಬ ಕೂಡಾ.

ಪುರಾಣ ಕಥೆಗಳ ಪ್ರಕಾರ ಅಸುರ ನಾಯಕಾಗಿದ್ದ ರಾಜಾ ಮಹಾಬಲಿಯು ದೇವತೆಗಳನ್ನು  ಸೋಲಿಸಿ ಮೂರು ಲೋಕಗಳನ್ನು ವಶಪಡಿಸಿಕೊಂಡನು.ಇದು ದೇವತೆಗಳನ್ನು ವ್ಯಗ್ರಗೊಳಿಸಿತು.  ಅವರು ರಾಕ್ಷಸ ರಾಜನ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡಲು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದರು.

ರಾಜಾ ಮಹಾಬಲಿ ಭಗವಾನ್ ವಿಷ್ಣುವಿನ ಭಕ್ತ.  ಭಗವಾನ್ ವಿಷ್ಣುವಿಗೆ ಉಭಯ ಸಂಕಟ. ವಿಷ್ಣೂ ಭಗವಾನ್ ವಿಷ್ಣು ವಾಮನ  ಅಂದರೆ ಕುಬ್ಜ ಗಾತ್ರದ ಬ್ರಾಹ್ಮಣ ವಟು  ರೂಪದಲ್ಲಿ  ಮಹಾಬಲಿಯನ್ನು ಭೇಟಿ ಮಾಡಿದ  ಮತ್ತು ಮೂರು ಹೆಜ್ಜೆ ಜಾಗವನ್ನು ತನಗೆ ದಾನವಾಗಿ ನೀಡುವಂತೆ ಮಹಾಬಲಿ ಬಳಿ ಪ್ರಾರ್ಥಿಸಿದ. ದಾನಶೂರನಾದ ಮಹಾಬಲಿ  ಅದಕ್ಕೆ ಒಪ್ಪಿದ.

ಬಳಿಕ ವಾಮನ  ಗಾತ್ರದ ವಟುವಿನ ಗಾತ್ರ ಹಿಗ್ಗಿತು.  ಆತ ಕೇಳಿದ  ಎರಡು ಹೆಜ್ಜೆಗಳನ್ನು ಇಡುವಷ್ಟರಲ್ಲಿ ರಾಜಾ ಮಹಾಬಲಿಯ ಆಳ್ವಿಕೆಗೆ ಒಳಪಟ್ಟ ಸಮಸ್ತ ಭೂಮಂಡಲ ಮುಗಿದು ಹೋಯಿತು. ಮೂರನೇ ಹೆಜ್ಜೆ ಇಡಲು ಯಾವುದೇ ಸ್ಥಳ ಇಲ್ಲದೇ ಹೋದಾಗ ಮಹಾಬಲಿ ತನ್ನ ತಲೆಯ ಮೇಲೆಯೇ ಮೂರನೇ ಹೆಜ್ಜೆ ಇಡಲು ಮನವಿ ಮಾಡಿದ.

ಮಹಾಬಲಿಯ ನಡತೆಗೆ ಮೆಚ್ಚಿದ ಭಗವಾನ್ ವಿಷ್ಣು ಆತನಿಗೆ ಪ್ರತಿ  ವರ್ಷದಲ್ಲಿ ಒಂದು ಬಾರಿ ಭೂಮಿಯಲ್ಲಿನ ಆತನ ಸಾಮ್ಯಾಜ್ಯಕ್ಕೆ ಬರಲು ಅವಕಾಶ ನೀಡಿದ. 

ಹೀಗೆ ಪ್ರತಿ ವರ್ಷ ಮಹಾಬಲಿ ಭೂಮಿಯಲ್ಲಿನ ಆತನ ಸಾಮ್ರಾಜ್ಯಕ್ಕೆ ಬರುವ ಕಾಲವನ್ನೇ ಕೇರಳದಲ್ಲಿ ‘ಓಣಂ’ ಎಂಬುದಾಗಿ ಆಚರಿಸಲಾಗುತ್ತದೆ.

ಕೇರಳದಲ್ಲಿ ಅತ್ಯಂತ ಸಂಭ್ರಮದೊಂದಿಗೆ ಆಚರಿಸಲಾಗುವ  ಹಬ್ಬದಲ್ಲಿ ಗಮನ ಸೆಳೆಯುವುದು ರಂಗೋಲಿ ಅಲಂಕಾರ ಮತ್ತು ಬಾಳೆ ಎಲೆಯಲ್ಲಿ ಬಡಿಸಲಾಗುವ ಬಗೆ ಬಗೆಯ ಭಕ್ಷ್ಯ ಭೋಜ್ಯಗಳ ಭೋಜನ.

ಇಲ್ಲಿರುವ ಪುಟ್ಟ ವಿಡಿಯೋ ಈ ‘ಭೋಜನ ಸಂಭ್ರಮವನ್ನು’ ತೋರಿಸುತ್ತದೆ.


ಈ ಜನರು ‘ವಲ್ಲಂ ಕಾಳಿ’ ಎಂದು ಕರೆಯಲಾಗುವ  ದೋಣಿ ಓಟಗಳಲ್ಲಿ ಭಾಗವಹಿಸಿ ಸಂಭ್ರಮ ಆಚರಿಸುತ್ತಾರೆ.

ತುಳುನಾಡಿನಲ್ಲಿ:

ಇದು ಕೇರಳದ ಕಥೆಯಾದರೆ, ಕರ್ನಾಟಕದ ತುಳುನಾಡು ಅಂದರೆ ಪಶ್ಚಿಮ ಕರಾವಳಿಯಲ್ಲಿ ಇದೇ ರಾಜಾ ಮಹಾಬಲಿಯನ್ನು  ಬಲಿಯೇಂದ್ರ ಹೆಸರಿನಲ್ಲಿ ಪ್ರತಿವರ್ಷವೂ ಸಡಗರದೊಂದಿಗೆ ಬರಮಾಡಿಕೊಳ್ಳುತ್ತಾರೆ. ಆದರೆ ಕೇರಳಿಗರ  ಓಣಂ ಸಂದರ್ಭದಲ್ಲಿ ಅಲ್ಲ- ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ದೀಪಾವಳಿಯ ಸಂದರ್ಭದಲ್ಲಿ.

ಕತ್ತಲೆಯಿಂದ ಬೆಳಕಿನ ಕಡೆಗೆ,  ಅಜ್ಞಾನದಿಂದ ಜ್ಞಾನದ ಕಡೆಗೆ ಮತ್ತು ಬಡತನದಿಂದ ಸಮೃದ್ಧಿಯತ್ತ ಸಾಗುವ ನಮ್ಮ ಸಹಜ ಆಕಾಂಕ್ಷೆಯ ಸಂಕೇತವಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದು  ಪ್ರಕೃತಿಮಾತೆಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಕೂಡಾ ಹೌದು.  ದೀಪಾವಳಿ ಎಂದರೆ ದೀಪಗಳ ಸಮೂಹ.

 ಆಧುನಿಕಸಕಾರಾತ್ಮಕ ಚಿಂತನೆಯ ಶೈಲಿಯ ವಿವರಣೆಗಳ ಹೊರತಾಗಿಯೂಉತ್ಸವವನ್ನು ಮೂಲತಃ  ಬಲಿಯೇಂದ್ರನ ಸಾಮ್ರಾಜ್ಯದ  ವ್ಯಾಪ್ತಿಗೆ ಒಳಪಟ್ಟ ತುಳುನಾಡಿನ ಪ್ರಜೆಗಳು  ತಮ್ಮ ರಾಜನನ್ನು ಸ್ವಾಗತಿಸಿ ಆದರಿಸುವ ಹಬ್ಬವಾಗಿ ಆಚರಿಸುತ್ತಾರೆ.

ಬಲಿಯೇಂದ್ರ ಅಥವಾ ಬಲಿ ಚಕ್ರವರ್ತಿಯನ್ನು ಮನೆ ಮನೆಗಳಲ್ಲೂ ದೀಪ ಬೆಳಗಿ ಊಟ ಇಟ್ಟು  ಬಲಿಯೇಂದ್ರ ಪಠಣದ ಮೂಲಕ ಸ್ವಾಗತಿಸಿ ಸಂಭ್ರಮಿಸುವ ಆಚರಣೆ ತುಳುನಾಡಿನಲ್ಲಿದೆ. ಬಲಿಗೆ ಸಂಬಂಧಿಸಿದಂತೆ ತುಳುನಾಡಿನಲ್ಲಿ ಕೂಡಾ ಪ್ರಚಲಿತವಾಗಿರುವುದು ಕೇರಳದಲ್ಲಿ ಪ್ರಚಲಿತವಾಗಿರುವ ಈ ವಾಮನಾವತಾರದ ಕಥೆಯೇ.

 ಅಸುರ ರಾಜ ಬಲಿಯೇಂದ್ರ ಮಾಡಿದ  ಮಹಾಪಾಪ ಏನು?

ಮಹಾಬಲಿ ಅಸುರನಾಗಿದ್ದರೂ  ಹೃದಯವಂತ.  ಲೋಕೋಪಕಾರಿ.  ಅಗತ್ಯವಿದ್ದವರಿಗೆ ಉಚಿತ ಉಡುಗೊರೆಗಳನ್ನು ಮನಃಪೂರ್ವಕವಾಗಿ ನೀಡುತ್ತಿದ್ದ.

ದಂತಕಥೆಯ ಪ್ರಕಾರ  ರಾಜಾ ಬಲಿಯೇಂದ್ರ ತನ್ನಿಂದ ದಾನ ಪಡೆಯುವವರು ಏನನ್ನೇ ಕೇಳಿದರೂ ಅದನ್ನು ಕೊಟ್ಟು ಬಿಡುತ್ತಿದ್ದ ದೇವತೆಗಳ ಮೊರೆಗೆ ಓಗೊಟ್ಟ ಭಗವಾನ್ ವಿಷ್ಣು  ರಾಜಾ ಬಲಿಯೇಂದ್ರನ    ಗುಣವನ್ನೇ ಬಳಸಿಕೊಂಡಮತ್ತು  ಕುಬ್ಜ ವಟುವಿನ ಗಾತ್ರದಲ್ಲಿ ಬಂದು ಮೂರು  ಅಡಿ ಇಡುವಷ್ಟು ಗಾತ್ರದ ಭೂಮಿಯನ್ನು ನೀಡುವಂತೆ ಕೋರಿದರಾಜಾ ಬಲಿಯೇಂದ್ರ  ಮಾತುಕೊಟ್ಟ ಬಳಿಕ ಬೃಹದಾಕಾರವಾಗಿ ಬೆಳೆದ ವಾಮನ ಎರಡು ಅಡಿಗಳನ್ನು ಸಂಪೂರ್ಣ ಭೂಮಂಡಲವನ್ನೇ ಪಡೆದುಕೊಂಡಮೂರನೇ ಅಡಿ ಇಡಲು ಜಾಗವೇ ಇರಲಿಲ್ಲಬಲಿಯೇಂದ್ರ ಮೂರನೇ ಹೆಜ್ಜೆ ಇಡಲು ತನ್ನ ತಲೆಯನ್ನೇ ಒಡ್ಡಿದ.

ಬಲಿಯೇಂದ್ರನ ತಲೆಯ ಮೇಲೆ ತನ್ನ ಪಾದವನ್ನು ಊರಿದ ವಿಷ್ಣು ಭಗವಾನ್ ಆತನನ್ನು ಪಾತಾಳಕ್ಕೆ ತಳ್ಳಿದ.  ಆದರೆ ಬಲಿಯೇಂದ್ರನ ತ್ಯಾಗಕ್ಕೆ ಮೆಚ್ಚಿದ ಭಗವಾನ್ ವಿಷ್ಣು, ಪ್ರತಿವರ್ಷ ಮೂರು ದಿನ ತನ್ನ ಸಾಮ್ರಾಜ್ಯಕ್ಕೆ ಹಿಂತಿರುಗಿ ಪ್ರಜೆಗಳಿಂದ ಆದರಾತಿಥ್ಯ ಪಡೆಯಲು ಅವಕಾಶ ನೀಡಿದ. ತುಳುನಾಡಿನಲ್ಲಿ ಇದನ್ನೇ ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತಿದೆ.

ದೀಪಾವಳಿ ರಾತ್ರಿಯ ಸಮಯದಲ್ಲಿ ತುಳುನಾಡು ಗ್ರಾಮೀಣ ಭಾಗದಲ್ಲಿ 'ಪೊಲಿ ಪೊಲಿ ಬಲಿಯೇಂದ್ರಪಠಣವು ಬಲಿಯೇಂದ್ರನನ್ನು  ಸ್ವಾಗತಿಸುವ ಪ್ರಾಚೀನ ಸಂಪ್ರದಾಯವನ್ನು ಪ್ರತಿಧ್ವನಿಸುತ್ತದೆ.

ಇಲ್ಲಿರುವ ಪುಟ್ಟ ವಿಡಿಯೋ ತುಳುವರು ಬಲಿಯೇಂದ್ರನನ್ನು ‘ಪೊಲಿ ಪೊಲಿ ಬಲಿಯೇಂದ್ರ’ ಎಂಬುದಾಗಿ ಪಠಿಸುತ್ತಾ ದೀಪ ಹಚ್ಚಿ ಸ್ವಾಗತಿಸುವುದನ್ನು ತೋರಿಸುತ್ತದೆ. 

ಒಂದೇ ಕಥೆ, ಒಂದೇ ಸಂಭ್ರಮ -  ಎರಡು ರಾಜ್ಯಗಳಲ್ಲಿನ ಸಾಮ್ಯತೆಯನ್ನು ಕಣ್ತುಂಬಿಕೊಳ್ಳಿ.

-ನೆತ್ರಕೆರೆ ಉದಯಶಂಕರ


PARYAYA: ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!:   ವಾರೇ ವಾಹ್   ಕೇರಳದ ಓಣಂ ಮತ್ತು ತುಳುವರ ದೀಪಾವಳಿ..! ಭಾರತದ ಈ ಸಂಸ್ಕೃತಿಗೆ ವಾರೇ ವಾಹ್ ಎನ್ನಲೇಬೇಕು. ಎಂತಹ ಸಾಮ್ಯತೆ ನೋಡಿ. ಕೇರಳದಲ್ಲಿ ಈಗ (ಇದು ಬರೆಯುವಾಗ ದಿನ...

Monday, November 5, 2018

ಬೆಳಕು ಎಲ್ಲೆಡೆ ಪ್ರಜ್ವಲಿಸಲಿ

ಬೆಳಕು ಎಲ್ಲೆಡೆ ಪ್ರಜ್ವಲಿಸಲಿ


ದೀಪಾವಳಿಯ ಶುಭಾಶಯಗಳು.

Diwali well wishes to all


 ವಿಡಿಯೋ ವೀಕ್ಷಿಸಲು ಕೆಳಗಿನ ಚಿತ್ರ ಕ್ಲಿಕ್ಕಿಸಿ

Friday, November 2, 2018

ದೀಪಾವಳಿ ಪಟಾಕಿಗೆ ತಮಿಳುನಾಡು ಟೈಮ್

ದೀಪಾವಳಿ ಪಟಾಕಿಗೆ ತಮಿಳುನಾಡು ಟೈಮ್

ಚೆನ್ನೈ: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ 7ಗಂಟೆ ಮತ್ತು ರಾತ್ರಿ 7ರಿಂದ 8 ಗಂಟೆ ಅವಧಿಯಲ್ಲಿ ಮಾತ್ರವೇ ಸುಡುಮದ್ದು/ ಪಟಾಕಿ ಸಿಡಿಸಲು ತಮಿಳುನಾಡು ಸರ್ಕಾರ ಸಮಯ ನಿಗದಿ ಪಡಿಸಿ, 2018 ನವೆಂಬರ್ 2ರ ಶುಕ್ರವಾರ ಪ್ರಕಟಣೆ ಹೊರಡಿಸಿದೆ.

ಅತ್ಯಂತ ಕಡಿಮೆ ಸದ್ದಿನ ಹಾಗೂ ಕಡಿಮೆ ಮಾಲಿನ್ಯ ಉಂಟು ಮಾಡುವ ಪಟಾಕಿ/ ಸುಡುಮದ್ದು ಬಳಸುವಂತೆ, ಆಸ್ಪತ್ರೆ, ದೇವಸ್ಥಾನಗಳ ಸಮೀಪ ಸುಡುಮದ್ದು ಸಿಡಿಸದಂತೆ ಸರ್ಕಾರ ಆಜ್ಞಾಪಿಸಿದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


Tuesday, October 23, 2018

ದೀಪಾವಳಿ, ಹೊಸವರ್ಷ: ಪಟಾಕಿ ಅಬ್ಬರಕ್ಕೆ ಸುಪ್ರೀಂ ಕಡಿವಾಣ


ದೀಪಾವಳಿ, ಹೊಸವರ್ಷ: ಪಟಾಕಿ ಅಬ್ಬರಕ್ಕೆ ಸುಪ್ರೀಂ ಕಡಿವಾಣ

ನವದೆಹಲಿ: ಪಟಾಕಿ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಮಂಗಳವಾರ ನಿರಾಕರಿಸಿರುವ ಸುಪ್ರೀಂಕೋರ್ಟ್ ರಾಷ್ಟ್ರಾದ್ಯಂತ ಶರತ್ತಗಳೊಂದಿಗೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಇದೇ ವೇಳೆಗೆ ದೀಪಾವಳಿ, ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಪಟಾಕಿ ಅಬ್ಬರಕ್ಕೆ ಕಡಿವಾಣ ಹಾಕಿದೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆ ನಡುವಣ ಅವಧಿಯಲ್ಲಿ  2 ಗಂಟೆ ಮಾತ್ರವೇ ಪಟಾಕಿಗಳನ್ನು ಸಿಡಿಸಬಹುದು. ಹಾಗೆಯೇ  ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.55 ರಿಂದ ನಸುಕಿನ 12.30 ನಡುವಣ 35 ನಿಮಿಷ ಮಾತ್ರ ಪಟಾಕಿ ಸಿಡಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಭಾರತದ 14 ನಗರಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಾಯುಮಾಲಿನ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ  ಆದೇಶ ನೀಡಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವು ನಿಗದಿ ಪಡಿಸುವ  ಸದ್ದು ಮತ್ತು ಮಾಲಿನ್ಯ ಹೊರಸೂಸುವಿಕೆ ಮಿತಿಯನ್ನು ಮೀರುವ  ಎಲ್ಲ ಪಟಾಕಿಗಳ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಿದೆ. ಪಟಾಕಿಗಳ ಆನ್ ಲೈನ್ ಮಾರಾಟವನ್ನೂ ಸುಪ್ರೀಂಕೋರ್ಟ್ ಸಾರಾಸಗಟು ನಿಷೇಧಿಸಿದೆ.

ಪಟಾಕಿಗಳ ಆನ್ ಲೈನ್ ಮಾರಾಟವನ್ನು ನಿಷೇಧಿಸಿದ ಸುಪ್ರೀಂಕೋರ್ಟ್ ಪರವಾನಗಿ ಹೊಂದಿರುವ ಮಾರಾಟಗಾರರ ಮೂಲಕ ಮಾತ್ರವೇ ಪಟಾಕಿಗಳ ಮಾರಾಟವನ್ನು ನಡೆಸಬಹುದು  ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು.

ತೀರ್ಪು ದೀಪಾವಳಿಗೆ ಮಾತ್ರವೇ ಸೀಮಿತವಲ್ಲ,  ಇತರ ಎಲ್ಲ ಧಾರ್ಮಿಕ ಸಮಾರಂಭಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು.

ಪಟಾಕಿ ತಯಾರಕರ ಮೂಲಭೂತ  ಬದುಕಿನ ಹಕ್ಕು  ಮತ್ತು ರಾಷ್ಟ್ರದ  130 ಕೋಟಿ (1.3 ಬಿಲಿಯನ್ ) ಜನರ ಆರೋಗ್ಯಗ ಹಕ್ಕುಗಳು ಸೇರಿದಂತೆ ಎಲ್ಲ ಅಂಶಗಳನ್ನು ಕೂಡಾ ತಾನು  ಗಮನದಲ್ಲಿ ಇಟ್ಟುಕೊಂಡು ಪಟಾಕಿ ನಿಷೇಧಿಸುವಂತೆ ಕೋರಿದ ಮನವಿಗಳ ಬಗ್ಗೆ ತಾನು ನಿರ್ಧಾರ ಕೈಗಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಮುನ್ನ ತಿಳಿಸಿತ್ತು.

ಸಂವಿಧಾನದ 21ನೇ ಅನುಚ್ಛೇದವು (ಬದುಕುವ ಹಕ್ಕು) ಎಲ್ಲ ವರ್ಗಗಳ ಜನರಿಗೂ ಅನ್ವಯಿಸುತ್ತದೆ ಮತ್ತು ಪಟಾಕಿ ನಿಷೇಧ ವಿಚಾರವನ್ನು ಪರಿಗಣಿಸುವ ಮುನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ಗಮನಿಸುವ ಅಗತ್ಯವಿದೆ ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.

ಮಾಲಿನ್ಯ ನಿಯಂತ್ರಣ ಮತ್ತು ಪಟಾಕಿಗಳಿಂದ ಸಾರ್ವಜನಿಕರ ಮೇಲೆ ಆಗುವ ದುಷ್ಪರಿಣಾಮಗಳನ್ನು ನಿಗ್ರಹಿಸಲು ಸೂಕ್ತ ಕ್ರಮಗಳನ್ನು ಸಲಹೆ ಮಾಡುವಂತೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತಿಲ್ಲ, ಆದರೆ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಪಟಾಕಿ ತಯಾರಕರು ಇದಕ್ಕೆ ಮುನ್ನ ನ್ಯಾಯಾಲಯಕ್ಕೆ ತಿಳಿಸಿದ್ದರು. ವಾಯುಮಾಲಿನ್ಯಕ್ಕೆ ಪಟಾಕಿಯೊಂದೇ ಕಾರಣವಲ್ಲ, ಗಾಳಿ, ಹವಾಮಾನ ಇತ್ಯಾದಿಗಳೂ ವಾಯುಮಾಲಿನ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸುತ್ತವೆ ಎಂದು ಅವರು ವಾದಿಸಿದ್ದರು.

ಕಳೆದ ವರ್ಷ  ಅಕ್ಟೋಬರ್ 9ರಂದು ದೀಪಾವಳಿಗೆ ಮುನ್ನವೇ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಆದೇಶವನ್ನು ಸಡಿಲಿಸುವಂತೆ ಮಾರಾಟಗಾರರು ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.
2017  ಅಕ್ಟೋಬರಿನಲ್ಲಿ ಕನಿಷ್ಠ ದೀಪಾವಳಿಗೆ ಒಂದೆರಡು ದಿನವಾದರೂ ಮುಂಚಿತವಾಗಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಮಾರಾಟಗಾರರು ಮನವಿ ಮಾಡಿದ್ದರು.