Showing posts with label ಸೆಂಟ್ರಲ್‌ ವಿಸ್ತಾ. Show all posts
Showing posts with label ಸೆಂಟ್ರಲ್‌ ವಿಸ್ತಾ. Show all posts

Wednesday, August 6, 2025

PARYAYA: ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ

 ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ

ದೆಹಲಿಯ ಜನಪಥ್‌ನಲ್ಲಿ ಹಿಂದೆ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಇದ್ದ ಜಾಗದಲ್ಲಿಈಗ ಹೈಟೆಕ್ ಕರ್ತವ್ಯ ಭವನ ತಲೆ ಎತ್ತಿದೆ.! ಇದು ನಮ್ಮ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳಿಗೆ ಹೊಸ ಆಡಳಿತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಹಂತ ಹಂತವಾಗಿ ಇದರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದುಆಧುನಿಕ ಭಾರತದ ಆಡಳಿತಕ್ಕೆ ಹೊಸ ಮೆರುಗು ನೀಡಲು ಸಜ್ಜಾಗಿದೆ.

ಹೊಸತನದ ಸ್ಪರ್ಶ: ಹೇಗಿರಲಿದೆ ಕರ್ತವ್ಯ ಭವನ?

  • ಸುರಕ್ಷಿತ ಪ್ರವೇಶ: ಇದು ಪ್ರವೇಶ ನಿಯಂತ್ರಿತ ಕಚೇರಿಗಳನ್ನು ಹೊಂದಿದ್ದುಪ್ರವೇಶಕ್ಕೆ ಐಡಿ ಕಾರ್ಡ್ ಆಧರಿತ ವ್ಯವಸ್ಥೆ ಇರಲಿದೆ. ಇದು ಅಧಿಕಾರಿಗಳು ಮತ್ತು ಸಂದರ್ಶಕರು ಇಬ್ಬರಿಗೂ ಅನ್ವಯಿಸುತ್ತದೆ.
  • ಆಧುನಿಕ ಸಭಾ ಕೊಠಡಿಗಳು: ಅತ್ಯಾಧುನಿಕ ಸಮ್ಮೇಳನ ಕೊಠಡಿಗಳು (ಸ್ವಾಂಕಿ ಕಾನ್ಫರೆನ್ಸ್ ರೂಮ್ಸ್)ವಿಶಾಲವಾದ ಕಾರ್ಯಕ್ಷೇತ್ರಗಳು (ಓಪನ್ ಫ್ಲೋರ್ ವರ್ಕ್ ಹಾಲ್ಸ್) ಇಲ್ಲಿ ಲಭ್ಯ.
  • ಸಂಪೂರ್ಣ ನಿಗಾ: ಪ್ರತಿ ಮಹಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ಅಳವಡಿಕೆಯಾಗಿರುತ್ತದೆ. ಇಡೀ ಕೇಂದ್ರ ವಿಸ್ತಾರದ ಚಲನವಲಗಳನ್ನು ನಿಗಾ ವಹಿಸಲು ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
  • ಹಸಿರು ತಂತ್ರಜ್ಞಾನ: ಪರಿಸರ ಸ್ನೇಹಿ ವೈಶಿಷ್ಟ್ಯಗಳಾದ ಡಬಲ್-ಗ್ಲೇಜ್ಡ್ ಗ್ಲಾಸ್ ಕಿಟಕಿಗಳುಥರ್ಮಲ್ ಇನ್ಸುಲೇಶನ್ಕಡಿಮೆ ಶಬ್ದಮತ್ತು ಕಡಿಮೆ ಘನೀಕರಣಕ್ಕೆ ಸಹಾಯಕವಾಗಿವೆ. ಶಕ್ತಿ ದಕ್ಷತೆಯ ಎಲ್ಇಡಿ ದೀಪಗಳುಆಕ್ಯುಪೆನ್ಸಿ ಸೆನ್ಸರ್‌ಗಳು ಮತ್ತು ಡೇಲೈಟ್ ಸೆನ್ಸರ್‌ಗಳನ್ನು ಬಳಸಿ ಶಕ್ತಿಯ ಬಳಕೆಯಲ್ಲಿ ಶೇ. 30ರಷ್ಟು ಉಳಿತಾಯ ಮಾಡುವ ಗುರಿ ಹೊಂದಲಾಗಿದೆ.

ಈ ಬೃಹತ್ ಯೋಜನೆಯು ಲುಟ್ಯೆನ್ಸ್ ದೆಹಲಿಯ ಅತ್ಯಂತ ಮಹತ್ವಾಕಾಂಕ್ಷೆಯ ನಗರ ನವೀಕರಣ ಯೋಜನೆಗಳಲ್ಲಿ ಒಂದಾಗಿದ್ದು, 2019 ರಲ್ಲಿ ಪ್ರಾರಂಭಿಸಲಾದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ.

ಪ್ರಧಾನಿ ಮೋದಿ ಉದ್ಘಾಟನೆ

ಒಟ್ಟು ಹತ್ತು ಕಟ್ಟಡಗಳಲ್ಲಿಮೊದಲನೆಯದಾದ CCS-3 ಸಂಪೂರ್ಣಗೊಂಡಿದ್ದುಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೦೬ ಆಗಸ್ಟ್‌ ೨೦೨೫ರ ಬುಧವಾರ ಇದನ್ನು ಉದ್ಘಾಟಿಸಿದರು. ಮೂಲತಃ ನವೆಂಬರ್ 2023 ರ ವೇಳೆಗೆ ಮೂರು ಸಿ.ಸಿ.ಎಸ್ ಕಟ್ಟಡಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಮುಂದಿನ ತಿಂಗಳು ಇನ್ನೂ ಎರಡು ಕಟ್ಟಡಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸದ್ಯಕ್ಕೆಗೃಹ ಸಚಿವಾಲಯ ಮಾತ್ರ CCS-3 ಗೆ ತನ್ನ ಹಳೆಯ ನಾರ್ತ್ ಬ್ಲಾಕ್ ವಿಳಾಸದಿಂದ ಸ್ಥಳಾಂತರಗೊಂಡಿದೆ. ನಂತರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಸ್ಥಳಾಂತರಗೊಳ್ಳಲಿವೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದಾರೆ. CCS 1, 2 ಮತ್ತು ರ ನಿರ್ಮಾಣಕ್ಕಾಗಿ ಕೇಂದ್ರವು 3,690 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ಒಟ್ಟಾರೆಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳನ್ನು ಒಳಗೊಳ್ಳುವ ಹತ್ತು ಹೊಸ ಕಟ್ಟಡಗಳ ಬ್ಲಾಕ್‌ಗಳನ್ನು CCS ಹೊಂದಿರುತ್ತದೆ. 2027ರ ಮಧ್ಯದ ವೇಳೆಗೆ CCS ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ವಸತಿ ಕಾರ್ಯದರ್ಶಿ ಕೆ. ಶ್ರೀನಿವಾಸ್ ಹೇಳುತ್ತಾರೆ. "ಡಿಸೆಂಬರ್ 2025 ರ ವೇಳೆಗೆಉಳಿದ ಎಲ್ಲಾ ಕಟ್ಟಡಗಳ ಕೆಲಸ ಪ್ರಾರಂಭವಾಗುತ್ತದೆ ಮತ್ತು ನಾವು ಬಳಸುತ್ತಿರುವ ಹೊಸ ಕಟ್ಟಡ ತಂತ್ರಜ್ಞಾನದೊಂದಿಗೆಅದನ್ನು 24 ತಿಂಗಳೊಳಗೆ ಪೂರ್ಣಗೊಳಿಸಲು ನಮಗೆ ಸಾಧ್ಯವಾಗುತ್ತದೆ" ಎಂಬುದು ಶ್ರೀನಿವಾಸ್ ವಿಶ್ವಾಸ.

ಹೊಸ ಕರ್ತವ್ಯ ಭವನವು 45 ಜನರಿಗೆ ಆಸನ ಸಾಮರ್ಥ್ಯವಿರುವ 24 ಮುಖ್ಯ ಸಭಾ ಕೊಠಡಿಗಳುತಲಾ 25 ಜನರಿಗೆ ಆಸನ ಸಾಮರ್ಥ್ಯವಿರುವ 26 ಸಣ್ಣ ಸಭಾ ಕೊಠಡಿಗಳುಮತ್ತು ತಲಾ ಜನರಿಗೆ ಆಸನ ಸಾಮರ್ಥ್ಯವಿರುವ 67 ಸಣ್ಣ ಸಭಾ ಕೊಠಡಿಗಳನ್ನು ಹೊಂದಿರುತ್ತದೆ.

ಸದ್ಯಕ್ಕೆ ಹಳೆಯ ಸೆಂಟ್ರಲ್ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿ 22 ಕೇಂದ್ರ ಸಚಿವಾಲಯಗಳು ಮತ್ತು 41,000 ಉದ್ಯೋಗಿಗಳ ಕಚೇರಿಗಳಿವೆ. ಶಾಸ್ತ್ರಿ ಭವನನಿರ್ಮಾಣ ಭವನಉದ್ಯೋಗ ಭವನಕೃಷಿ ಭವನ ಮತ್ತು ವಾಯು ಭವನ ಸೇರಿದಂತೆ ಹಲವು ಕಟ್ಟಡಗಳು ಇದರಲ್ಲಿ ಸೇರಿವೆ. ಹೆಚ್ಚಿನ ಕೇಂದ್ರ ಸಚಿವಾಲಯಗಳು CCS ಗೆ ಸ್ಥಳಾಂತರಗೊಳ್ಳಲಿದ್ದರೂವಾಣಿಜ್ಯ ಸಚಿವಾಲಯದ ಕಚೇರಿಗಳನ್ನು ಹೊಂದಿರುವ ವಾಣಿಜ್ಯ ಭವನ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಗಳನ್ನು ಹೊಂದಿರುವ ಜವಾಹರಲಾಲ್ ನೆಹರು ಭವನದಂತಹ ಕೆಲವು ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಅಂಬೇಡ್ಕರ್ ಆಡಿಟೋರಿಯಂ ಕೂಡ ಉಳಿಯಲಿವೆ.

ಪ್ರಧಾನಿ ನಿವಾಸ ಮತ್ತು ಕಾರ್ಯಾಲಯಕ್ಕೆ ಹೊಸ ರೂಪ!

ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಡಿಯಲ್ಲಿಹೊಸ ಪ್ರಧಾನಮಂತ್ರಿ ಕಾರ್ಯಾಲಯ (PMO)ಇದನ್ನು ಕಾರ್ಯನಿರ್ವಾಹಕ ಎನ್‌ಕ್ಲೇವ್ ಎಂದು ಕರೆಯಲಾಗುತ್ತದೆಮತ್ತು ಪ್ರಧಾನಮಂತ್ರಿ ನಿವಾಸ ಕೂಡ ಸಿದ್ಧವಾಗುತ್ತಿದೆ. PMO ಗಾಗಿ ಕಾರ್ಯನಿರ್ವಾಹಕ ಎನ್‌ಕ್ಲೇವ್ ಕೆಲಸ ನಡೆಯುತ್ತಿದ್ದುಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಖಟ್ಟರ್ ಹೇಳಿದ್ದಾರೆ.

ಈ ಕಾರ್ಯನಿರ್ವಾಹಕ ಎನ್‌ಕ್ಲೇವ್ ಸದ್ಯದ ಸೌತ್ ಬ್ಲಾಕ್ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಪ್ರಧಾನಮಂತ್ರಿಗಳ ಹೊಸ ನಿವಾಸದ ಕೆಲಸವೂ ಪ್ರಾರಂಭವಾಗಿದೆ. "ನಾವು ಯೋಜನೆಗೆ ಬಿಡ್ ಸಲ್ಲಿಸಿದ್ದೇವೆ" ಎಂಬುದು ಹಿರಿಯ ವಸತಿ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆ.

ಕಾರ್ಯನಿರ್ವಾಹಕ ಎನ್‌ಕ್ಲೇವ್-II ಭಾಗವಾಗಿರುವ ಪ್ರಧಾನಮಂತ್ರಿ ನಿವಾಸ ಸಂಕೀರ್ಣವು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಪ್ರಮುಖ ಮತ್ತು ಹೈ-ಪ್ರೊಫೈಲ್ ಅಂಶಗಳಲ್ಲಿ ಒಂದಾಗಿದೆ. ದೆಹಲಿಯ ಸೌತ್ ಬ್ಲಾಕ್ ಬಳಿಯ ದಾರಾ ಶಿಕೋ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸಂಕೀರ್ಣವು ಒಟ್ಟು 2,26,203 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು ಅಂದಾಜು 467 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಪ್ರಧಾನಮಂತ್ರಿಗಳ ನಿವಾಸವು 36,328 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.

ಈ ಸಂಕೀರ್ಣದಲ್ಲಿ ಪ್ರಧಾನಮಂತ್ರಿಗಳ ಮುಖ್ಯ ನಿವಾಸ (ನೆಲ ಮತ್ತು ಮೊದಲ ಮಹಡಿ), PMO, ಒಳಾಂಗಣ ಕ್ರೀಡಾ ಸೌಲಭ್ಯಸಹಾಯಕ ಸಿಬ್ಬಂದಿ ಕ್ವಾರ್ಟರ್ಸ್ವಿಶೇಷ ರಕ್ಷಣಾ ಗುಂಪು (SPG) ಕಚೇರಿಸೇವಾ ಸದನ ಮತ್ತು ಭದ್ರತಾ ಕಚೇರಿ ಇರಲಿದೆ ಎಂದು ವರದಿ ತಿಳಿಸಿದೆ. ಈ ಸಂಕೀರ್ಣದ ಒಂದು ಪ್ರಮುಖ ಅಂಶವೆಂದರೆ, PMO ನಿವಾಸದಿಂದ ನೇರವಾಗಿ ಕಾರ್ಯನಿರ್ವಾಹಕ ಎನ್‌ಕ್ಲೇವ್‌ಗೆ ಸಂಪರ್ಕ ಕಲ್ಪಿಸುವ ಭೂಗತ ವಿಐಪಿ ಸುರಂಗಇದು ಪ್ರಧಾನಮಂತ್ರಿ ಕಾರ್ಯಾಲಯಹೊಸ ಸಂಸತ್ತು ಮತ್ತು ಉಪರಾಷ್ಟ್ರಪತಿ ನಿವಾಸವನ್ನು ಒಳಗೊಂಡಿರುತ್ತದೆ.
PARYAYA: ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ:   ಹೈಟೆಕ್ ' ಕರ್ತವ್ಯ ಭವನ ': ಸಮಗ್ರ ಸಚಿವಾಲಯಗಳ ಹೊಸ ತಾಣ ದೆ ಹಲಿಯ ಜನಪಥ್‌ನಲ್ಲಿ ಹಿಂದೆ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಇದ್ದ ಜಾಗದಲ್...

Thursday, September 8, 2022

PARYAYA: ಇಂಡಿಯಾಗೇಟಿನಲ್ಲಿ ನೇತಾಜಿ ಪ್ರತಿಮೆ, ʼರಾಜಪಥʼವಾಯಿತು ʼಕರ್...

 ಇಂಡಿಯಾಗೇಟಿನಲ್ಲಿ ನೇತಾಜಿ ಪ್ರತಿಮೆ, ʼರಾಜಪಥʼವಾಯಿತು ʼಕರ್ತವ್ಯಪಥ”

ನವದೆಹಲಿಪ್ರಧಾನಿ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್‌ 8 ಗುರುವಾರ ಇಂಡಿಯಾ ಗೇಟಿನಲ್ಲಿ ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಹೊಸದಾಗಿ ನಾಮಕರಣಗೊಂಡ ʼಕರ್ತವ್ಯ ಪಥʼವನ್ನು ಉದ್ಘಾಟಿಸಿದರುಇದರೊಂದಿಗೆ ಬ್ರಿಟಿಷ್‌ ವಸಾಹತುಶಾಹಿಯ ಸಂಕೇತಗಳನ್ನು ಭಾರತವು ಅಳಿಸಿಹಾಕಿತು.

ಇಂಡಿಯಾಗೇಟಿನಲ್ಲಿ ಇದುವರೆಗೂ ಜಾರ್ಜ್‌ ದೊರೆಯ ಪ್ರತಿಮೆ ಇತ್ತುಅದನ್ನು ತೆಗೆದು ಇದೀಗ 28 ಅಡಿ ಎತ್ತರದ ನೇತಾಜಿ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

 ಸಂದರ್ಭಕ್ಕೆ ಸಾಕ್ಷಿಯಾಗಲು   ಚಿತ್ರ ಕ್ಲಿಕ್‌ ಮಾಡಿ:


ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ʼಕರ್ತವ್ಯಪಥʼವು  ಕೆಂಪು ಗ್ರಾನೈಟ್ ನಡಿಗೆ ಪಥಗಳನ್ನು (ವಾಕ್‌ ವೇಹೊಂದಿದ್ದುಸುತ್ತಲೂ ಹಸಿರುನವೀಕರಿಸಿದ ಕಾಲುವೆಗಳುರಾಜ್ಯವಾರು ಆಹಾರ ಮಳಿಗೆಗಳುಹೊಸ ಸೌಕರ್ಯ ಬ್ಲಾಕ್‌ಗಳು ಮತ್ತು ಮಾರಾಟ ಕಿಯೋಸ್ಕ್‌ಗಳನ್ನು ಹೊಂದಿದೆ.

ಸರ್ಕಾರದ ಪ್ರಕಾರಹಿಂದಿನ ರಾಜಪಥವು ಅಧಿಕಾರದ ಐಕಾನ್ ಆಗಿತ್ತುಅದೀಗ ʼಕರ್ತವ್ಯ ಪಥʼ ಆಗುವ ಮೂಲಕ ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯಾಗಿರುವುದನ್ನು ಸಂಕೇತಿಸುತ್ತದೆಇದರೊಂದಿಗೆ ಇಂಡಿಯಾ ಗೇಟಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯ ಅನಾವರಣವು ವಸಾಹತುಶಾಹಿ ಮನಸ್ಥಿತಿಯ ಯಾವುದೇ ಕುರುಹುಗಳನ್ನು ಕಿತ್ತುಹಾಕಿʼ ಎಂಬುದಾಗಿ ಹೇಳಿರುವ ಪ್ರಧಾನಿಯ ನವಭಾರತದ  ʼಅಮೃತಕಾಲʼ ಎರಡನೇ ʼಪಂಚಪ್ರಾಣʼ ಎನಿಸಿದೆ.

ಇಂಡಿಯಾ ಗೇಟ್‌ ಸಮೀಪ ಸಿಪಿಡಬ್ಲ್ಯೂಡಿಯು  ಐದು ಮಾರಾಟ ವಲಯಗಳನ್ನು ಸ್ಥಾಪಿಸಿದೆಅಲ್ಲಿ ತಲಾ 40 ಮಾರಾಟಗಾರರಿಗೆ ಅನುಮತಿ ನೀಡಲಾಗುತ್ತದೆ. ಇಂಡಿಯಾ ಗೇಟ್ ಬಳಿ ಎರಡು ಬ್ಲಾಕ್‌ಗಳು ತಲಾ ಎಂಟು ಅಂಗಡಿಗಳನ್ನು ಹೊಂದಿರುತ್ತದೆಕೆಲವು ರಾಜ್ಯಗಳು ತಮ್ಮ ಆಹಾರ ಮಳಿಗೆಗಳನ್ನು ಸ್ಥಾಪಿಸಲು ತಮ್ಮ ಆಸಕ್ತಿಯನ್ನು ತೋರಿಸಿವೆಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಂಪೂರ್ಣ ಪ್ರದೇಶವನ್ನು ನವೀಕರಿಸಲಾಗಿದೆ.

ಲ್ಲವನ್ನೂ ಹೊಸದಾಗಿ ಮರುಅಭಿವೃದ್ಧಿಪಡಿಸಿದ ರಾಜಪಥವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ʼಕರ್ತವ್ಯ ಪಥʼ ಎಂಬ ಹೊಸ ಹೆಸರಿನಲ್ಲಿ  ಉದ್ಘಾಟಿಸಿದರು.

ʼಕರ್ತವ್ಯಪಥʼದ ಸೊಬಗನ್ನು ಕೆಳಗೆ  ಕ್ಲಿಕ್‌ ಮಾಡಿ ನೋಡಿ:


  ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಹೊಸದಾಗಿ ನಾಮಕರಣಗೊಂಡ ಕರ್ತವ್ಯ ಪಥವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಇಂದು ನಾವು ವಸಾಹತುಶಾಹಿ ಭೂತಕಾಲವನ್ನು ತೊಡೆದುಹಾಕಿದ್ದೇವೆ. ವಸಾಹತುಶಾಹಿಯ ಪ್ರತೀಕವಾದ ‘ಕಿಂಗ್ಸ್‌ವೇ’ ಒಂದು ಇತಿಹಾಸವಾಗಲಿದೆ ಮತ್ತು ಅದನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ ಎಂದು ಘೋಷಿಸಿದರು.


ʼಕರ್ತವ್ಯ.ಪಥʼದ ರೂಪದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ನಾವು ವಸಾಹತುಶಾಹಿಯ ಮತ್ತೊಂದು ಸಂಕೇತದಿಂದ ಹೊರಬಂದಿರುವುದಕ್ಕಾಗಿ ದೇಶದ ಎಲ್ಲ ಜನರನ್ನು ನಾನು ಅಭಿನಂದಿಸುತ್ತೇನೆ.ʼ ಎಂದು ಹೇಳಿದರು.

ಇಂಡಿಯಾ ಗೇಟಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ, , “ಭಾರತವು ಸುಭಾಷ್ ಚಂದ್ರ ಬೋಸ್ ತೋರಿಸಿದ ಮಾರ್ಗವನ್ನು ಅನುಸರಿಸಿದ್ದರೆದೇಶವು ಹೊಸ ಎತ್ತರವನ್ನು ತಲುಪುತ್ತಿತ್ತು; ಆದರೆ  ಅವರು ಮರೆತುಹೋದದ್ದು ದುಃಖದ ವಿಚಾರ” ಎಂದು ಪ್ರಧಾನಿ ನುಡಿದರು.

 “ಇಂದು ದೇಶವು ಬ್ರಿಟಿಷರ ಕಾಲದಿಂದ ಇದ್ದ ವಿವಿಧ ಕಾನೂನುಗಳನ್ನು ಬದಲಾಯಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಈಗ ದೇಶದ ಯುವಕರು ಅನ್ಯ ಭಾಷೆಯ ಒತ್ತಡದಿಂದ ಮುಕ್ತರಾಗುತ್ತಿದ್ದಾರೆ. ಭಾರತದ ಜನರನ್ನು ಗುಲಾಮರಾಗಿಸಿದ್ದ ಬ್ರಿಟಿಷರಿಗೆ ರಾಜಪಥವಾಗಿದ್ದ ಇದು ವಸಾಹತುಶಾಹಿಯ ಸಂಕೇತವಾಗಿತ್ತು. ಆದರೆ ಈಗ, ಭಾರತದ ವಾಸ್ತುಶಿಲ್ಪವು ಬದಲಾಗಿದೆ ಮತ್ತು ಅದರ ಆತ್ಮವೂ ಬದಲಾಗಿದೆ” ಎಂದು ಮೋದಿ ಹೇಳಿದರು.

ಕಳೆದ 8 ವರ್ಷಗಳಲ್ಲಿ ನಾವು ನೇತಾಜಿ ಸುಭಾಷ್ ಚಂದ್ರ ಅವರ ಛಾಪು ಹೊಂದಿರುವ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಬೋಸ್. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ 'ಅಖಂಡ ಭಾರತ'ದ ಮೊದಲ ಮುಖ್ಯಸ್ಥರಾಗಿದ್ದರು.

ಇಂಡಿಯಾ ಗೇಟಿನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ದೇಶವು ಸಶಕ್ತ ರಾಷ್ಟ್ರಕ್ಕಾಗಿ ಹೊಸ ಮಾರ್ಗವನ್ನು ಸ್ಥಾಪಿಸಿದೆ ಎಂದು ಪ್ರಧಾನಿ ಹೇಳಿದರು.

 “ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ. ಬ್ರಿಟಿಷರ ಆಳ್ವಿಕೆಯಲ್ಲಿ ಇಲ್ಲಿ ಬ್ರಿಟಿಷರ ಪ್ರತಿನಿಧಿಯ ಪ್ರತಿಮೆ ಇತ್ತು. ನೇತಾಜಿ ಅವರ ಪ್ರತಿಮೆ ಸ್ಥಾಪನೆಯೊಂದಿಗೆನಾವು ಸಶಕ್ತ ಭಾರತಕ್ಕಾಗಿ ಹೊಸ ಮಾರ್ಗವನ್ನು ಸ್ಥಾಪಿಸಿದ್ದೇವೆ ಎಂದು ಅವರು ಹೇಳಿದರು.

ಈ ಹಿಂದೆ ರಾಜ್‌ಪಥ್ ಎಂದು ಕರೆಯಲಾಗುತ್ತಿದ್ದ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ರಸ್ತೆಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಅಭಿವೃದ್ಧಿ ಯೋಜನೆಯಲ್ಲಿ ತೊಡಗಿರುವ ಕಾರ್ಮಿಕರು ಅಥವಾ 'ಶ್ರಮಜೀವಿ'ಗಳಿಗೆ ಧನ್ಯವಾದ ಅರ್ಪಿಸಿದರು.

 “ಅವರು 
ದನ್ನು ನಿರ್ಮಿಸಿದ್ದು ಮಾತ್ರವಲ್ಲದೆ ಇತರರಿಗೂ 
ʼಕರ್ತವ್ಯʼ
ದ ದಾರಿ ತೋರಿಸಿದ್ದಾರೆ. "ಮರುಅಭಿವೃದ್ಧಿಪಡಿಸಿದ ಸೆಂಟ್ರಲ್ ವಿಸ್ಟಾಕ್ಕಾಗಿ ಇಲ್ಲಿ ಕೆಲಸ ಮಾಡಿದವರು (ಶ್ರಮಜೀವಿಗಳು) ಜನವರಿ 26 ರಂದು ನನ್ನ ವಿಶೇಷ ಅತಿಥಿಯಾಗಿರುತ್ತಾರೆ" ಎಂದು ಮೋದಿ ಹೇಳಿದರು.


PARYAYA: ಇಂಡಿಯಾಗೇಟಿನಲ್ಲಿ ನೇತಾಜಿ ಪ್ರತಿಮೆ, ʼರಾಜಪಥʼವಾಯಿತು ʼಕರ್...:   ಇಂಡಿಯಾಗೇಟಿನಲ್ಲಿ ನೇತಾಜಿ ಪ್ರತಿಮೆ, ʼ ರಾಜಪಥ ʼ ವಾಯಿತು ʼ ಕರ್ತವ್ಯಪಥ” ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು 2022 ಸೆಪ್ಟೆಂಬರ್ ‌ 8 ರ ಗುರುವಾರ ಇಂಡಿ...