Showing posts with label Metro. Show all posts
Showing posts with label Metro. Show all posts

Wednesday, August 13, 2025

PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

 ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

ಬೆಂಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ! ಒಂದೇ ಫ್ರೇಮ್‌ನಲ್ಲಿ ನಾಲ್ಕು ಮೆಟ್ರೋ ರೈಲುಗಳು ಏಕಕಾಲದಲ್ಲಿ ಚಲಿಸುತ್ತಿರುವ ಅಪರೂಪದ ದೃಶ್ಯವನ್ನು ಈ ವಿಡಿಯೋ ಸೆರೆಹಿಡಿದಿದೆ.

ಆರ್‌ವಿ ರಸ್ತೆ ಇಂಟರ್‌ಚೇಂಜ್ ಬಳಿ ಸೆರೆಹಿಡಿಯಲಾದ ಈ ವಿಡಿಯೋನಗರವಾಸಿಗಳು ಮತ್ತು ಮೆಟ್ರೋ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರು ಮೂಲದ ವಿಷಯ ರಚನೆಕಾರ ಶ್ರೀಹರಿ ಕಾರಂತ್ ಅವರು ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಗರದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಹೆಸರುವಾಸಿಯಾಗಿರುವ ಶ್ರೀಹರಿ, "ಈ ಪರಿಪೂರ್ಣ ಶಾಟ್‌ಗಾಗಿ ಬಹಳ ಸಮಯ ಕಾಯುತ್ತಿದ್ದೆ – ಹಳದಿ ಮತ್ತು ಹಸಿರು ಮಾರ್ಗಗಳು ಒಂದೇ ಫ್ರೇಮ್‌ನಲ್ಲಿ!" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕೆಳಗೆ ಕ್ಲಿಕ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ದೃಶ್ಯ ವೈಭವವನ್ನು ನೀವೂ ಕಣ್ತುಂಬಿಕೊಳ್ಳಿ ಅಥವಾ ಶ್ರೀ ಹರಿ ಕಾರಂತ್‌ ಅವರ ಈ ಎಕ್ಸ್‌ ಲಿಂಕ್‌ ಕ್ಲಿಕ್‌ ಮಾಡಿರಿ


ಇನ್ನಷ್ಟು ಸುದ್ದಿಗಳಿಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.
PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !:   ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ ! ಬೆಂ ಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ...

Sunday, August 10, 2025

PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

 ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ

ಬೆಂಗಳೂರು: ದೇಶದಲ್ಲಿ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ೨೦೨೫ ಆಗಸ್ಟ್‌ ೧೦ರ ಭಾನುವಾರ ಪಾತ್ರವಾಯಿತು. ಬೆಂಗಳೂರಿನ ರಾಗಿಗುಡ್ಡದಲ್ಲಿ ʼನಮ್ಮ ಮೆಟ್ರೋʼ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವುದರೊಂದಿಗೆ ಈ ಹೆಗ್ಗಳಿಕೆ ಬೆಂಗಳೂರಿನ ಮುಡಿಗೇರಿತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಬಳಿಕ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲೇ ಪಯಣಿಸಿದರು. ಸಿದ್ದರಾಮಯ್ಯ, ಶಿವಕುಮಾರ್‌ ಸೇರಿದಂತೆ ಇತರ ಗಣ್ಯರೂ ಪ್ರಧಾನಿಯರೊಂದಿಗೆ ಇದ್ದರು.

೧೯.೧೫ ಕಿಮೀ ಉದ್ದದ ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲ ೭೬.೯೫ ಕಿಮೀಯಿಂದ ೯೬.೧೦ ಕಿಮೀಗೆ ವಿಸ್ತರಣೆಗೊಂಡಿತು. ಈ ಮಾರ್ಗದಲ್ಲಿ ೧೬ ನಿಲ್ದಾಣಗಳಿದ್ದು  ಮೂರು ರೈಲುಗಳು ನಿತ್ಯ ಸಂಚರಿಸಲಿವೆ.

ಇದಕ್ಕೂ ಮುನ್ನ ಪ್ರಧಾನಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ-ಅಜ್ನಿ (ನಾಗ್ಪುರ) ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲುಗಳ ಸಂಚಾರವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಇಲ್ಲಿದೆ ಭಾರತದ ಮೆಟ್ರೋ ಕಥೆ

ಇಲ್ಲಿದೆ ಭಾರತದ ಮೆಟ್ರೋ ಕಥೆಯ ವಿಡಿಯೋ. ಇದನ್ನು ಈದಿನ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏನು ಹೇಳಿದರು?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇನ್ನಷ್ಟು ಸುದ್ದಿಗಳಿಗಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ
PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ:   ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ ಬೆಂ ಗಳೂರು: ...