Showing posts with label ನಮ್ಮ ಮೆಟ್ರೋ. Show all posts
Showing posts with label ನಮ್ಮ ಮೆಟ್ರೋ. Show all posts

Wednesday, August 13, 2025

PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

 ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

ಬೆಂಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ! ಒಂದೇ ಫ್ರೇಮ್‌ನಲ್ಲಿ ನಾಲ್ಕು ಮೆಟ್ರೋ ರೈಲುಗಳು ಏಕಕಾಲದಲ್ಲಿ ಚಲಿಸುತ್ತಿರುವ ಅಪರೂಪದ ದೃಶ್ಯವನ್ನು ಈ ವಿಡಿಯೋ ಸೆರೆಹಿಡಿದಿದೆ.

ಆರ್‌ವಿ ರಸ್ತೆ ಇಂಟರ್‌ಚೇಂಜ್ ಬಳಿ ಸೆರೆಹಿಡಿಯಲಾದ ಈ ವಿಡಿಯೋನಗರವಾಸಿಗಳು ಮತ್ತು ಮೆಟ್ರೋ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರು ಮೂಲದ ವಿಷಯ ರಚನೆಕಾರ ಶ್ರೀಹರಿ ಕಾರಂತ್ ಅವರು ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಗರದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಹೆಸರುವಾಸಿಯಾಗಿರುವ ಶ್ರೀಹರಿ, "ಈ ಪರಿಪೂರ್ಣ ಶಾಟ್‌ಗಾಗಿ ಬಹಳ ಸಮಯ ಕಾಯುತ್ತಿದ್ದೆ – ಹಳದಿ ಮತ್ತು ಹಸಿರು ಮಾರ್ಗಗಳು ಒಂದೇ ಫ್ರೇಮ್‌ನಲ್ಲಿ!" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕೆಳಗೆ ಕ್ಲಿಕ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ದೃಶ್ಯ ವೈಭವವನ್ನು ನೀವೂ ಕಣ್ತುಂಬಿಕೊಳ್ಳಿ ಅಥವಾ ಶ್ರೀ ಹರಿ ಕಾರಂತ್‌ ಅವರ ಈ ಎಕ್ಸ್‌ ಲಿಂಕ್‌ ಕ್ಲಿಕ್‌ ಮಾಡಿರಿ


ಇನ್ನಷ್ಟು ಸುದ್ದಿಗಳಿಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.
PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !:   ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ ! ಬೆಂ ಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ...

Sunday, August 10, 2025

PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

 ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ

ಬೆಂಗಳೂರು: ದೇಶದಲ್ಲಿ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ೨೦೨೫ ಆಗಸ್ಟ್‌ ೧೦ರ ಭಾನುವಾರ ಪಾತ್ರವಾಯಿತು. ಬೆಂಗಳೂರಿನ ರಾಗಿಗುಡ್ಡದಲ್ಲಿ ʼನಮ್ಮ ಮೆಟ್ರೋʼ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವುದರೊಂದಿಗೆ ಈ ಹೆಗ್ಗಳಿಕೆ ಬೆಂಗಳೂರಿನ ಮುಡಿಗೇರಿತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಬಳಿಕ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲೇ ಪಯಣಿಸಿದರು. ಸಿದ್ದರಾಮಯ್ಯ, ಶಿವಕುಮಾರ್‌ ಸೇರಿದಂತೆ ಇತರ ಗಣ್ಯರೂ ಪ್ರಧಾನಿಯರೊಂದಿಗೆ ಇದ್ದರು.

೧೯.೧೫ ಕಿಮೀ ಉದ್ದದ ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲ ೭೬.೯೫ ಕಿಮೀಯಿಂದ ೯೬.೧೦ ಕಿಮೀಗೆ ವಿಸ್ತರಣೆಗೊಂಡಿತು. ಈ ಮಾರ್ಗದಲ್ಲಿ ೧೬ ನಿಲ್ದಾಣಗಳಿದ್ದು  ಮೂರು ರೈಲುಗಳು ನಿತ್ಯ ಸಂಚರಿಸಲಿವೆ.

ಇದಕ್ಕೂ ಮುನ್ನ ಪ್ರಧಾನಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ-ಅಜ್ನಿ (ನಾಗ್ಪುರ) ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲುಗಳ ಸಂಚಾರವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಇಲ್ಲಿದೆ ಭಾರತದ ಮೆಟ್ರೋ ಕಥೆ

ಇಲ್ಲಿದೆ ಭಾರತದ ಮೆಟ್ರೋ ಕಥೆಯ ವಿಡಿಯೋ. ಇದನ್ನು ಈದಿನ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏನು ಹೇಳಿದರು?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇನ್ನಷ್ಟು ಸುದ್ದಿಗಳಿಗಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ
PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ:   ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ ಬೆಂ ಗಳೂರು: ...

Saturday, August 2, 2025

PARYAYA: ಆ.10: ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

 ಆ.10: ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

ಬೆಂಗಳೂರು: ನಮ್ಮ ಬೆಂಗಳೂರು ಮೆಟ್ರೋವು ನಿರ್ಮಿಸಿರುವ ಬೊಮ್ಮಸಂದ್ರದಿಂದ ಆರ್‌ ವಿ ರಸ್ತೆವರೆಗಿನ ೧೯.೧೫ ಕಿ.ಮೀ. ದೂರದ ಹಳದಿ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ಆಗಸ್ಟ್‌ ೧೦ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಅದೇ ದಿನ ೧೫,೬೧೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಈ ಮೆಟ್ರೋ ಮಾರ್ಗವು ೪೪.೬೫ ಕಿಮೀ ಉದ್ದವಿರಲಿದೆ.

ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮೆಟ್ರೋ ಮಾರ್ಗವನ್ನು ೫,೦೫೬.೯೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಸುಮಾರು ೮ ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಧಾನಿಯ ನರೇಂದ್ರ ಮೋದಿ ಅವರಿಂದ ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆ ಮತ್ತು ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಶಂಕು ಸ್ಥಾಪನೆ ನೆರವೇರಿಸಲಿರುವ ವಿಚಾರವನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್‌ ಖಟ್ಟರ್‌ ಮತ್ತು ಬೆಂಗಳೂರು ದಕ್ಷಿಣದ ಸಂಸತ್‌ ಸದಸ್ಯ ತೇಜಸ್ವಿ ಸೂರ್ಯ ಎಕ್ಸ್‌ ಮೂಲಕ ನೀಡಿದ ಪ್ರತ್ಯೇಕ ಸಂದೇಶಗಳಲ್ಲಿ ಹಂಚಿಕೊಂಡಿದ್ದಾರೆ.

ಹಳದಿ ಮೆಟ್ರೋ ಮಾರ್ಗದ ಉದ್ಘಾಟನೆ ಮತ್ತು ಮೂರನೇ ಹಂತದ ಮೆಟ್ರೋ ಮಾರ್ಗಕ್ಕೆ ಶಂಕುಸ್ಥಾಪನೆಯನ್ನು ಪ್ರಧಾನಿಯವರು ಆಗಸ್ಟ್‌ ೧೦ರಂದು ನೆರವೇರಿಸಲಿದ್ದಾರೆ ಎಂದು ಖಟ್ಟರ್‌ ಅವರು ತಿಳಿಸಿದರೆ, ಹಳದಿ ಮಾರ್ಗದ ಉದ್ಘಾಟನೆ ಮೂಲಕ ನಮ್ಮ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ತೇಜಸ್ವಿ ಸೂರ್ಯ ಧನ್ಯವಾದ ಅರ್ಪಿಸಿದ್ದಾರೆ.

ಈ ಮಾರ್ಗದ ಉದ್ಘಾಟನೆಯಿಂದ ೮ ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ಸಿಲ್ಕ್‌ ಬೋರ್ಡಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ ಎಂದು ತೇಜಸ್ವಿ ಹೇಳಿದ್ದಾರೆ.

ಸಂಚಾರ ದಟ್ಟಣೆ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯೇ ಏಕೈಕ ಆಯ್ಕೆ. ನಾವು ಆಗಸ್ಟ್‌ ೧೫ರ ಗಡುವನ್ನು ಪೂರೈಸುತ್ತಿದ್ದೇವೆ. ಯಾವುದೇ ವಿಳಂಬವಿಲ್ಲದೆ ಇದು ಸಾರ್ವಜನಿಕರಿಗೆ ಮುಕ್ತವಾಗಬೇಕು ಎಂಬ ಪ್ರಧಾನಿಯವರ ವೈಯಕ್ತಿಕ ಆಗ್ರಹದಿಂದಾಗಿಯೇ ಇದು ಸಾಧ್ಯವಾಗುತ್ತಿದೆ ಎಂದು ಸೂರ್ಯ ಬರೆದಿದ್ದಾರೆ.

ಈ ಕೆಳಗಿದ್ದನ್ನೂ ಓದಿರಿ:

ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲು
ನಾಗವಾರಕೆಂಪಾಪುರಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ
ಆಗ್ರಾ ಮೆಟ್ರೋ ರೈಲು ಯೋಜನೆ: ಮೊದಲ ಹಂತದ ಉದ್ಘಾಟನೆ
ಏನಿದು ರಾಷ್ಟ್ರೀಯ ಸಾಮಾನ್ಯ ಸಂಚಾರೀ ಕಾರ್ಡ್ ?
ಭಾರತದ ಮೊದಲ ಚಾಲಕರಹಿತ ರೈಲು: ಪ್ರಧಾನಿ ಹಸಿರು ನಿಶಾನೆ
ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್: ಪ್ರಧಾನಿ ಉದ್ಘಾಟನೆ
ಬೆಂಗಳೂರು ಸುರಂಗ ರಸ್ತೆಮೆಟ್ರೋಗೆ ರಕ್ಷಣಾ ಭೂಮಿ: ಕೇಂದ್ರಕ್ಕೆ ಮುಖ್ಯಮಂತ್ರಿ ಮನವಿ
 

PARYAYA: ಆ.10: ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ:   ಆ.10: ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ಬೆಂ ಗಳೂರು: ನಮ್ಮ ಬೆಂಗಳೂರು ಮೆಟ್ರೋವು ನಿರ್ಮಿಸಿರುವ ಬೊಮ್ಮಸಂದ್ರದಿಂದ ಆರ್‌ ವಿ ರಸ್ತೆವರೆಗಿನ ೧೯....

Friday, July 18, 2025

PARYAYA: ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲು

 ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲು

ಹಳದಿ ಮಾರ್ಗ ಆಗಸ್ಟ್‌ ತಿಂಗಳಲ್ಲಿ ಆರಂಭ?

ಬೆಂಗಳೂರಿನ ನಮ್ಮ ಮೆಟ್ರೋದ 19.15 ಕಿ.ಮೀ. ಉದ್ದದ ಹಳದಿ ಮಾರ್ಗ (ಯೆಲ್ಲೋ ಲೈನ್ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಆಗಸ್ಟ್ ಆರಂಭದಲ್ಲಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಈ ಮಾರ್ಗವು ದಕ್ಷಿಣ ಬೆಂಗಳೂರಿನ ತಂತ್ರಜ್ಞಾನ ವಲಯದ ಪ್ರಯಾಣಿಕರಿಗೆವಿಶೇಷವಾಗಿ ಜಯದೇವ ಆಸ್ಪತ್ರೆಸಿಲ್ಕ್ ಬೋರ್ಡ್ ಜಂಕ್ಷನ್ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಪ್ರಯಾಣಿಸುವವರಿಗೆ ಗಮನಾರ್ಹ ಅನುಕೂಲ ಮಾಡಿಕೊಡಲಿದೆ.

ಬೆಂಗಳೂರಿನ ಬಹುನಿರೀಕ್ಷಿತ ಯೆಲ್ಲೋ ಲೈನ್ ಅಂತಿಮವಾಗಿ ಉದ್ಘಾಟನೆಗೆ ಸಿದ್ಧವಾಗುತ್ತಿದೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ತನ್ನ ರೈಲು ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳಿಗೆ ನಿರ್ಣಾಯಕ ಸುರಕ್ಷತಾ ಪ್ರಮಾಣೀಕರಣವನ್ನು ಪಡೆದುಕೊಂಡಿದೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ತಿಳಿಸಿದೆ.

ಈ ಪ್ರಮಾಣೀಕರಣವನ್ನು ವ್ಯವಸ್ಥೆಯ ಸುರಕ್ಷತೆಯನ್ನು ಮೌಲ್ಯಮಾಪನ ಮಾಡುವ ಇಟಲಿಯ ಸರ್ಕಾರಿ ಸ್ವಾಮ್ಯದ ಸಂಸ್ಥೆ ಇಟಾಲ್ಸರ್ಟಿಫರ್ (Italcertifer) ನೀಡಿದೆ. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರಚಾಲಕರಹಿತ ರೈಲು ಕಾರ್ಯಾಚರಣೆಗೆ ಕಡ್ಡಾಯವಾಗಿರುವ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ಪ್ರಮಾಣಪತ್ರವನ್ನು ೨೦೨೫ ಜುಲೈ ೧೭ರಗುರುವಾರ ಸಂಜೆ ಬಿಎಂಆರ್‌ಸಿಎಲ್‌ಗೆ ಸಲ್ಲಿಸಲಾಗಿದೆ.

"ನಾವು ವರದಿಯನ್ನು ಪರಿಶೀಲಿಸಿ ನಂತರ ಸಿಎಂಆರ್‌ಎಸ್‌ಗೆ ಸಲ್ಲಿಸುತ್ತೇವೆ" ಎಂದು ನೇರವಾಗಿ ತಿಳಿದಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೀಮೆನ್ಸ್ ಇಂಡಿಯಾ ಲಿಮಿಟೆಡ್ ಮತ್ತು ಸೀಮೆನ್ಸ್ ಎಜಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ಸಾಫ್ಟ್‌ವೇರ್ ದೋಷಗಳಿಂದಾಗಿ ISA ಪ್ರಮಾಣೀಕರಣವು ವಿಳಂಬವಾಗಿತ್ತು ಎಂದು ವರದಿ ತಿಳಿಸಿದೆ.

ಈ ದೋಷಗಳು ಪ್ರಮುಖ ರೈಲು ಕಾರ್ಯಾಚರಣೆಗಳನ್ನು ನಿಯಂತ್ರಿಸುವ ದತ್ತಾಂಶದ ಮೇಲೆ ಪರಿಣಾಮ ಬೀರಿದ್ದವು. ಎಂಜಿನಿಯರ್‌ಗಳು ಸಾಫ್ಟ್‌ವೇರ್ ಅನ್ನು ಸರಿಪಡಿಸಿಕ್ಷೇತ್ರ-ಪರೀಕ್ಷೆಗಳನ್ನು ನಡೆಸಬೇಕಾಗಿ ಬಂದುಇದರಿಂದ ಗಡುವು ಮುಂದೂಡಲ್ಪಟ್ಟಿತು.

ಜುಲೈ ಆರಂಭದಲ್ಲಿಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರು ಯೆಲ್ಲೋ ಲೈನ್ ಆಗಸ್ಟ್ 15 ರೊಳಗೆ ತೆರೆಯುವ ನಿರೀಕ್ಷೆಯಿದೆ ಎಂದು ಘೋಷಿಸಿದ್ದರು. ಪ್ರಸ್ತುತಮೆಟ್ರೋ ಪ್ರಾಧಿಕಾರವು ಮೂರು ರೈಲುಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಿದೆ. ನಾಲ್ಕನೇ ರೈಲು ಜುಲೈ ನಾಲ್ಕನೇ ವಾರದೊಳಗೆ ಕೋಲ್ಕತ್ತಾ ಮೂಲದ ಟೈಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ನಿಂದ ರವಾನೆಯಾಗುವ ನಿರೀಕ್ಷೆಯಿದೆ.

ಪ್ರಮುಖ ವೈಶಿಷ್ಟ್ಯಗಳು:

  • ಮಾರ್ಗ: ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 16 ನಿಲ್ದಾಣಗಳನ್ನು ಒಳಗೊಂಡಿದೆ.
  • ಪ್ರಾಮುಖ್ಯತೆ: ಬಿಟಿಎಂ ಲೇಔಟ್ಎಚ್‌ಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಗಳಿಗೆ ಪ್ರಯಾಣವನ್ನು ಸುಲಭಗೊಳಿಸುವುದು ಈ ಮಾರ್ಗದ ಮುಖ್ಯ ಉದ್ದೇಶವಾಗಿದೆ. ಇದು ಪ್ರಮುಖ ವಾಣಿಜ್ಯ ಮತ್ತು ತಂತ್ರಜ್ಞಾನ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
  • ಇಂಟರ್‌ಚೇಂಜ್‌ಗಳು (ಸಂಪರ್ಕ ನಿಲ್ದಾಣಗಳು): ಇದು ಆರ್‌ವಿ ರಸ್ತೆಯಲ್ಲಿ ಅಸ್ತಿತ್ವದಲ್ಲಿರುವ ಹಸಿರು ಮಾರ್ಗ (ಗ್ರೀನ್ ಲೈನ್) ಜೊತೆ ಸಂಪರ್ಕ ಸಾಧಿಸಲಿದೆ. ಭವಿಷ್ಯದಲ್ಲಿಜಯದೇವ ಆಸ್ಪತ್ರೆಯಲ್ಲಿ ಗುಲಾಬಿ ಮಾರ್ಗ (ಪಿಂಕ್ ಲೈನ್) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ನೀಲಿ ಮಾರ್ಗ (ಬ್ಲೂ ಲೈನ್) ಜೊತೆಗೂ ಸಂಪರ್ಕ ಕಲ್ಪಿಸಲಿದೆ.
  • ಚಾಲಕರಹಿತ ರೈಲುಗಳು: ಇದು ಬೆಂಗಳೂರಿನಲ್ಲಿ ಚಾಲಕರಹಿತ ರೈಲುಗಳನ್ನು ಹೊಂದಿರುವ ಮೊದಲ ಮೆಟ್ರೋ ಮಾರ್ಗವಾಗಲಿದೆ.
  • ಆರಂಭಿಕ ಕಾರ್ಯಾಚರಣೆಗಳು: ಆರಂಭದಲ್ಲಿ ಕೇವಲ ಮೂರು ರೈಲುಗಳು ಮಾತ್ರ ಲಭ್ಯವಿರುತ್ತವೆಇದರಿಂದ ರೈಲುಗಳ ಆವರ್ತನವು 25 ನಿಮಿಷಗಳಿಗೆ ಒಮ್ಮೆ ಇರಲಿದೆ.

ಪ್ರಗತಿ ಮತ್ತು ಕಾಲಮಿತಿ:

  • ನಿರ್ಮಾಣ ಕಾರ್ಯ: ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದುಸುರಕ್ಷತಾ ತಪಾಸಣೆಗಳು ಜುಲೈಯಲ್ಲಿ ನಡೆದಿವೆ.
  • ISA ಪ್ರಮಾಣೀಕರಣ: ಸಿಗ್ನಲಿಂಗ್ ವ್ಯವಸ್ಥೆಗಾಗಿ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ISA) ಪ್ರಮಾಣೀಕರಣವು ಲಭ್ಯವಾಗಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
  • CMRS ತಪಾಸಣೆ: ISA ಪ್ರಮಾಣೀಕರಣದ ನಂತರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಸುರಕ್ಷತಾ ತಪಾಸಣೆ ನಡೆಸಲಿದ್ದುಇದು ಇಷ್ಟರಲ್ಲೇ ನಡೆಯುವ ಸಾಧ್ಯತೆಯಿದೆ.
  • ಸಂಭಾವ್ಯ ಉದ್ಘಾಟನೆ: ಈ ಮಾರ್ಗವು ಆಗಸ್ಟ್ ಆರಂಭದಲ್ಲಿ ಉದ್ಘಾಟನೆಯಾಗಲು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಸಂಭಾವ್ಯ ಸವಾಲುಗಳು:

  • ಸೀಮಿತ ರೈಲುಗಳು: ಪ್ರಸ್ತುತ ಕೇವಲ ಮೂರು ರೈಲುಗಳು ಮಾತ್ರ ಲಭ್ಯವಿವೆಇದು ಸೇವೆಗಳ ಆವರ್ತನದ ಮೇಲೆ ಪರಿಣಾಮ ಬೀರಲಿದೆ.
  • ಹೊರಗುತ್ತಿಗೆ ಸಿಬ್ಬಂದಿ: ಬಿಎಂಆರ್‌ಸಿಎಲ್ ರೈಲುಗಳನ್ನು ನಿರ್ವಹಿಸಲು ಹೊರಗುತ್ತಿಗೆ ಸಿಬ್ಬಂದಿಯನ್ನು ಬಳಸಲು ಯೋಜಿಸುತ್ತಿದೆ.
  • ಗಡುವುಗಳನ್ನು ಪೂರೈಸುವಿಕೆ: ಯೆಲ್ಲೋ ಲೈನ್‌ಗೆ ಸಂಬಂಧಿಸಿದಂತೆ ಹಿಂದಿನ ಗಡುವುಗಳು ತಪ್ಪಿಹೋಗಿದ್ದುಇದರಿಂದ ಸಾರ್ವಜನಿಕರಲ್ಲಿ ನಿರಾಶೆ ಉಂಟಾಗಿತ್ತು.

ಈ ಕೆಳಗಿನವುಗಳನ್ನೂ ಓದಿರಿ:

ನಾಗವಾರಕೆಂಪಾಪುರಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ 

PARYAYA: ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲು:   ಬೆಂಗಳೂರಿನ ಮೊದಲ ಚಾಲಕ ರಹಿತ ಮೆಟ್ರೋ ರೈಲು ಹಳದಿ ಮಾರ್ಗ ಆಗಸ್ಟ್‌ ತಿಂಗಳಲ್ಲಿ ಆರಂಭ? ಬೆಂ ಗಳೂರಿನ ನಮ್ಮ ಮೆಟ್ರೋದ 19.15 ಕಿ.ಮೀ. ಉದ್ದದ ಹಳದಿ ಮಾರ್ಗ ( ಯೆಲ್ಲೋ ...

Wednesday, May 8, 2024

PARYAYA: ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌...

 ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ


ಬೆಂಗಳೂರು:
 ಕೆ.ಆರ್.‌ ಪುರಂ, ನಾಗವಾರ, ಕೆಂಪಾಪುರ, ಹೆಬ್ಬಾಳ ಸೇರಿದಂತೆ ಬೆಂಗಳೂರು ಮಹಾನಗರದಾದ್ಯಂತ ಒಟ್ಟು 16 ರೈಲು ಬದಲಾವಣೆ ನಿಲ್ದಾಣಗಳನ್ನು (ಇಂಟರ್‌ ಚೇಂಜ್‌ ನಿಲ್ದಾಣ) ಸ್ಥಾಪಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಬಿಎಂಆರ್‌ ಸಿಎಲ್)‌ ನಿರ್ಧರಿಸಿದೆ.

ತನ್ನ ಎರಡು ಮತ್ತು ಮೂರನೇ ಹಂತಗಳಲ್ಲಿ ಇಂಟರ್‌ ರೈಲು ಬದಲಾವಣೆ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ಪ್ರಕಟಿಸಿದೆ.

ಪ್ರಸ್ತುತ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮೆಜೆಸ್ಟಿಕ್ಕಿನಲ್ಲಿ ಮಾತ್ರವೇ ಇಂತಹ ರೈಲು ಬದಲಾವಣೆ ನಿಲ್ದಾಣ ಅಥವಾ ಇಂಟರ್‌ ಚೇಂಜ್‌ ನಿಲ್ದಾಣ ಇದೆ. ಇಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಿಗೆ ರೈಲು ಬದಲಾವಣೆಗೆ ಅನುಕೂಲವಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ಈಗ ಈ ಹೊಸ 16 ಇಂಟರ್‌ ಚೇಂಜ್‌ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.

ಬಿಎಂಆರ್‌ ಸಿಎಲ್‌ ಪ್ರಕಾರ ಹೊಸದಾಗಿ ಸ್ಥಾಪನೆಯಾಗಲಿರುವ 16 ಇಂಟರ್‌ ಚೇಂಜ್‌ ನಿಲ್ದಾಣಗಳ ಪೈಕಿ ಹಳದಿ ಮತ್ತು ಗುಲಾಬಿ ಮಾರ್ಗಗಳನ್ನು ಸಂಪರ್ಕಿಸುವ ಜಯದೇವ ಜಂಕ್ಷನ್‌ ಅತ್ಯಂತ ದೊಡ್ಡ ಇಂಟರ್‌ ಚೇಂಜ್‌ ನಿಲ್ದಾಣ ಆಗಿರುತ್ತದೆ. ಇದರಿಂದ ಪ್ರತಿದಿನ 80,000ದಿಂದ 90,000 ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಸ್ತುತ ನಗರದ ಏಕೈಕ ಇಂಟರ್‌ ಚೇಂಜ್‌ ನಿಲ್ದಾಣವಾಗಿರುವ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ  ನೇರಳೆ ಮತ್ತು ಹಸಿರುಮಾರ್ಗಗಳನ್ನು ಸಂಪರ್ಕಿಸುವ ನಿಲ್ದಾಣವಿದ್ದು ಇದರಿಂದ ಪ್ರತಿದಿನ 50,000 ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹೊಸದಾಗಿ 16 ರೈಲು ಬದಲಾವಣೆ ನಿಲ್ದಾಣಗಳ ಸ್ಥಾಪನೆಯಿಂದ ಮೆಟ್ರೋದ ನೇರಳೆ, ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳ ಸಂಪರ್ಕ ಸಾಧ್ಯವಾಗುತ್ತದೆ.

ನಮ್ಮ ಮೆಟ್ರೋ ಮೂಲಗಳ ಪ್ರಕಾರ, ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‌, ಮಹಾತ್ಮ ಗಾಂಧಿ ರಸ್ತೆ, ಕೆ.ಆರ್.‌ ಪುರಂ, ಹೊಸಹಳ್ಳಿ, ಮೈಸೂರು ರಸ್ತೆ, ಪೀಣ್ಯ, ಆರ್‌ ವಿ ರಸ್ತೆ, ಜೆಪಿ ನಗರ 4ನೇ ಹಂತಡೈರಿ ಸರ್ಕಲ್ನಾಗವಾರಕೆಂಪಾಪುರ, ಹೆಬ್ಬಾಳ, ಅಗರ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮತ್ತು ಸುಮನಹಳ್ಳಿ ಕ್ರಾಸ್‌ - ಇಲ್ಲಿ ಇಂಟರ್‌ ಚೇಂಜ್‌ ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಪೈಕಿ ಜಯದೇವ ಜಂಕ್ಷನ್ನಿನಲ್ಲಿ ಸ್ಥಾಪನೆಯಾಗಲಿರುವ ಬಹು ಹಂತದ ರೈಲು ಬದಲಾವಣೆ ಮೆಟ್ರೋ ನಿಲ್ದಾಣ ನಗರದಲ್ಲೇ ಅತ್ಯಂತ ದೊಡ್ಡ ಮೆಟ್ರೋ ರೈಲು ಬದಲಾವಣೆ ನಿಲ್ದಾಣವಾಗಲಿದೆ.

ಜಯದೇವ ಜಂಕ್ಷನ್‌ ರೈಲು ಬದಲಾವಣೆ ನಿಲ್ದಾಣವು ಈ ವರ್ಷಾಂತ್ಯದಲ್ಲೇ ಆರಂಭವಾಗುವ ನಿರೀಕ್ಷೆ ಇದ್ದು ಇದು ಹಳದಿ ಮತ್ತು ಗುಲಾಬಿ ಮಾರ್ಗಗಳನ್ನು ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹೋಗುವ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಹೋಗುವ ಗುಲಾಬಿ ಮಾರ್ಗಗಳನ್ನು ಇದು ಸಂಪರ್ಕಿಸಲಿದೆ.

ಇದಲ್ಲದೆ, ಹಳದಿ ಮಾರ್ಗದಲ್ಲಿ ರಸ್ತೆ ವಾಹನಗಳು ಮತ್ತು ಮೆಟ್ರೋ ರೈಲುಗಳಿಗಾಗಿ ಪ್ರತ್ಯೇಕ ಹಂತಗಳಿರುವ ಡಬಲ್‌ ಡೆಕ್ಕರ್‌ ಮೇಲ್ಸೇತುವೆಗಳು (ಫ್ಲೈ ಓವರ್)‌ ಇರುವುದು ವಿಶೇಷವಾಗಿದೆ. ಈ ಹೊಸ ವಿನ್ಯಾಸವು  ರಾಗಿ ಗುಡ್ಡದ ಕಡೆಯಿಂದ ಬರುವ ಪ್ರಯಾಣಿಕರಿಗೆ  ಸಿಲ್ಕ್‌ ಬೋರ್ಡ್‌ ಕಡೆಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಅವರು ಸಿಗ್ನಲ್‌ ಗಳಿಗಾಗಿ ನಿಲ್ಲಬೇಕಾಗಿ ಬರುವುದಿಲ್ಲ.

ಇದೊಂದು ಅಪರೂಪದ ಪುಸ್ತಕ- ಇ-ಬುಕ್‌ ರೂಪದಲ್ಲೂ ಲಭ್ಯ
ಕೆಳಗೆ ಕ್ಲಿಕ್‌ ಮಾಡಿ - ಖರೀದಿಸಿ ಓದಿ
.


PARYAYA: ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌...:   ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ ಬೆಂಗಳೂರು: ಕೆ.ಆರ್.‌ ಪುರಂ, ನಾಗವಾರ, ಕೆಂಪಾಪುರ, ಹೆಬ್ಬಾಳ ಸೇರಿದಂತೆ ಬೆಂಗಳೂರು ...