Showing posts with label ಮೋದಿ. Show all posts
Showing posts with label ಮೋದಿ. Show all posts

Saturday, January 3, 2026

PARYAYA: ಭಾರತಕ್ಕೆ ಮರಳಿತು ಬುದ್ಧನ ಅವಶೇಷ..

 ಭಾರತಕ್ಕೆ ಮರಳಿತು ಬುದ್ಧನ ಅವಶೇಷ..

ತಮಾನಕ್ಕೂ ಅಧಿಕ ಕಾಲದ ಕಾಯುವಿಕೆಯ ನಂತರಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳು (Piprahwa Relics) ಭಾರತಕ್ಕೆ ಮರಳಿವೆ.

ಈ ಕ್ಷಣ ಭಾರತೀಯರೆಲ್ಲರಿಗೂ ಹೆಮ್ಮೆಯಭಕ್ತಿಯ ಹಾಗೂ ಸಾಂಸ್ಕೃತಿಕ ಭಾವೈಕ್ಯತೆಯ ಕ್ಷಣ. ದೆಹಲಿಯಲ್ಲಿ ೨೦೨೬ ಜನವರಿ ೩ರ ಶನಿವಾರ ನಡೆದ ಕಾರ್ಯಕ್ರಮದ ಪ್ರಮುಖ ಹೈಲೈಟ್ಸ್ ಇಲ್ಲಿದೆ:

  • ಭವ್ಯ ಉದ್ಘಾಟನೆ: ನವದೆಹಲಿಯ ರೈ ಪಿತೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು "ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಪವಿತ್ರ ಪಿಪ್ರಹ್ವಾ ಅವಶೇಷಗಳ ಬೃಹತ್ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು.
  • ಹೆಮ್ಮೆಯ ನುಡಿಗಳು: ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, "ಸುಮಾರು 125 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರಭಾರತದ ಪರಂಪರೆ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತೆ ತನ್ನ ತಾಯ್ನಾಡಿಗೆ ಮರಳಿದೆ," ಎಂದು ಸಂತಸ ವ್ಯಕ್ತಪಡಿಸಿದರು.
  • ಭಾರತದ ಅಸ್ಮಿತೆ: ಈ ಅವಶೇಷಗಳ ಆಗಮನವು ಕೇವಲ ಇತಿಹಾಸದ ಮರುಕಳಿಕೆಯಷ್ಟೇ ಅಲ್ಲ, ಬದಲಿಗೆ ಭಗವಾನ್ ಬುದ್ಧನ ಶಾಂತಿ ಮತ್ತು ಜ್ಞಾನದ ಸಂದೇಶವನ್ನು ಜಗತ್ತಿಗೆ ಸಾರುವ ಭಾರತದ ಸಾಂಸ್ಕೃತಿಕ ಶಕ್ತಿಯ ಸಂಕೇತ. ಈ ಸಂದರ್ಭದ ವಿಡಿಯೋ ಇಲ್ಲಿದೆ.
PARYAYA: ಭಾರತಕ್ಕೆ ಮರಳಿತು ಬುದ್ಧನ ಅವಶೇಷ..:   ಭಾರತ ಕ್ಕೆ ಮರಳಿತು ಬುದ್ಧನ ಅವಶೇಷ.. ಶ ತಮಾನಕ್ಕೂ ಅಧಿಕ ಕಾಲದ ಕಾಯುವಿಕೆಯ ನಂತರ , ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳು ( Piprahwa Rel...

Wednesday, October 1, 2025

PARYAYA: ಭಾರತದ ಮೊತ್ತ ಮೊದಲ ʼಭಾರತ ಮಾತಾʼ ನಾಣ್ಯ

 ಭಾರತದ ಮೊತ್ತ ಮೊದಲ ʼಭಾರತ ಮಾತಾʼ ನಾಣ್ಯ

ವದೆಹಲಿ: ಭಾರತದ ಇತಿಹಾಸದಲ್ಲೇ ಯಾರೇ ನಾಯಕರನ್ನು ಬಿಂಬಿಸದೆ, ಭಾರತ ಮಾತೆಯ ಚಿತ್ರವನ್ನು ಬಿಂಬಿಸಿದ ಮೊತ್ತ ಮೊದಲ ಭಾರತೀಯ ನಾಣ್ಯ ಇದು. ಪ್ರಧಾನಿ ನರೇಂದ್ರ ಮೋದಿ ಅವರು 2025 ಅಕ್ಟೋಬರ್‌ 1ರ ಬುಧವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ ಎಸ್‌ ಎಸ್)‌ ಶತಮಾನೋತ್ಸವ ಸ್ಮರಣಾರ್ಥವಾಗಿ 100 ರೂಪಾಯಿ ಮೌಲ್ಯದ ಈ ನಾಣ್ಯವನ್ನು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರಧಾನಿಯವರು ಆರ್‌ ಎಸ್‌ ಎಸ್‌ ಶತಮಾನೋತ್ಸವ ನೆನಪಿಗಾಗಿ ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.

ಪ್ರಧಾನಿಯವರು ಬಿಡುಗಡೆ ಮಾಡಿದ  100 ರೂಪಾಯಿ ಮುಖಬೆಲೆಯ ಈ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದ್ದರೆಇನ್ನೊಂದು ಬದಿಯಲ್ಲಿ ವರದ ಮುದ್ರೆಯೊಂದಿಗೆ (ಹಸ್ತವನ್ನು ಹೊರಕ್ಕೆ ಚಾಚಿ ನೀಡುವ ಭಂಗಿ) ಸಿಂಹದ ಜೊತೆಯಲ್ಲಿ ನಿಂತಿರುವ ಭಾರತ ಮಾತೆಯ ವೈಭವಯುತ ಚಿತ್ರವಿದೆ. ಈ ತಾಯಿಯ ಮುಂದೆ ಸ್ವಯಂಸೇವಕರು ಭಕ್ತಿ ಮತ್ತು ಸಮರ್ಪಣಾ ಭಾವದಿಂದ ನಮಸ್ಕರಿಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ.

ನಾಣ್ಯದಲ್ಲಿ ಆರ್‌ ಎಸ್‌ ಎಸ್‌ ನ (RSS) ಧ್ಯೇಯ ವಾಕ್ಯವಾದ "ರಾಷ್ಟ್ರೀಯ ಸ್ವಾಹಾಇದಂ ರಾಷ್ಟ್ರಾಯಇದಂ ನ ಮಮ"  ಎಂಬ ವಾಕ್ಯವೂ ಇದೆ. ಇದರ ಅರ್ಥ: "ಎಲ್ಲವೂ ರಾಷ್ಟ್ರಕ್ಕೆ ಅರ್ಪಣೆಎಲ್ಲವೂ ರಾಷ್ಟ್ರದ್ದುನನ್ನದೆಂಬುದು ಏನೂ ಇಲ್ಲ."

ಭಾರತದ ಇತಿಹಾಸದಲ್ಲಿ ಹೆಮ್ಮೆಯ ಕ್ಷಣ


ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವು ಭಾರತೀಯ ಕರೆನ್ಸಿಯ ಮೇಲೆ ಕಾಣಿಸಿಕೊಂಡಿರುವುದು ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಮಹತ್ವದ ಕ್ಷಣ" ಎಂದು ಬಣ್ಣಿಸಿದರು.

ನಾಣ್ಯದ ಜೊತೆ ಬಿಡುಗಡೆ ಮಾಡಿದ ಅಂಚೆ ಚೀಟಿಯು 1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆರ್‌ ಎಸ್‌ ಎಸ್‌ (RSS) ಕಾರ್ಯಕರ್ತರ ಪಾಲ್ಗೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ. ಇದು ಸಂಘಟನೆಯ ಐತಿಹಾಸಿಕ ಕೊಡುಗೆಗಳಿಗೆ ಸಾಕ್ಷಿಯಾಗಿದೆ. ಈ ಕ್ಷಣವನ್ನು ಪ್ರಧಾನಿ ಮೋದಿ ಅವರು ಭಾರತ ಮಾತೆ ಮತ್ತು ಆರ್‌ ಎಸ್‌ ಎಸ್‌ ನ (RSS) ಶತಮಾನಗಳ ಸೇವೆಸಮರ್ಪಣೆಗೆ ಸಲ್ಲಿಸಿದ ಗೌರವ ನಮನ ಎಂದು ವಿವರಿಸಿದರು.

ಆರ್‌ ಎಸ್‌ ಎಸ್‌ (RSS): ಸೇವೆ ಮತ್ತು ರಾಷ್ಟ್ರ ನಿರ್ಮಾಣ

ಮಹಾರಾಷ್ಟ್ರದ ನಾಗಪುರದಲ್ಲಿ ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರು 1925 ರಲ್ಲಿ ಸ್ಥಾಪಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS), ನಾಗರಿಕರಲ್ಲಿ ಸಾಂಸ್ಕೃತಿಕ ಅರಿವುಶಿಸ್ತುಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಸಂಘದ  'ಪ್ರಚಾರಕ್ಆಗಿ ಸೇವೆ ಸಲ್ಲಿಸಿನಂತರ ಬಿಜೆಪಿಗೆ ವರ್ಗಾವಣೆಗೊಂಡವರು.

ಸಂಸ್ಕೃತಿ ಸಚಿವಾಲಯವು ಆಯೋಜಿಸಿದ್ದ ಈ ಶತಮಾನೋತ್ಸವ ಸಮಾರಂಭದಲ್ಲಿ ಆರ್‌ ಎಸ್‌ ಎಸ್‌ ಪ್ರಧಾನ ಕಾರ್ಯದರ್ಶಿ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಈ ಬಿಡುಗಡೆಗಳು ಮತ್ತು ಆಚರಣೆಗಳು ರಕ್ತದಾನ ಶಿಬಿರಗಳುಆಹಾರ ವಿತರಣೆಕೇದಾರನಾಥಬಿಹಾರ ಪ್ರವಾಹ ಮತ್ತು ಕೋವಿಡ್-19 ಸಾಂಕ್ರಾಮಿಕದಂತಹ ವಿಪತ್ತುಗಳ ಪರಿಹಾರ ಕಾರ್ಯಗಳ ಮೂಲಕ ಆರ್‌ ಎಸ್‌ ಎಸ್‌ (RSS) ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವುದನ್ನು ಎತ್ತಿ ಹಿಡಿಯುವ ಗುರಿ ಹೊಂದಿವೆ.

ಅಕ್ಟೋಬರ್‌ 2ರ ವಿಜಯದಶಮಿಯಂದು ದೇಶಾದ್ಯಂತ ಶತಮಾನೋತ್ಸವ ಕಾರ್ಯಕ್ರಮ ಆಚರಣೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಮ್ಮಿಕೊಂಡಿದೆ.

PARYAYA: ಭಾರತದ ಮೊತ್ತ ಮೊದಲ ʼಭಾರತ ಮಾತಾʼ ನಾಣ್ಯ:   ಭಾರತದ ಮೊತ್ತ ಮೊದಲ ʼ ಭಾರತ ಮಾತಾ ʼ ನಾಣ್ಯ ನ ವದೆಹಲಿ: ಭಾರತದ ಇತಿಹಾಸದಲ್ಲೇ ಯಾರೇ ನಾಯಕರನ್ನು ಬಿಂಬಿಸದೆ, ಭಾರತ ಮಾತೆಯ ಚಿತ್ರವನ್ನು ಬಿಂಬಿಸಿದ ಮೊತ್ತ ಮೊದಲ ಭಾರತೀಯ...

Monday, December 23, 2024

PARYAYA: ವಾಟ್- ಸುದ್ದಿ

ಹಗರಣ-ದೂರು-ತನಿಖೆ-ನಿಂದನೆ!

ದೆಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಸಂಬಂಧವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಪ್ರಧಾನಿ ನೀಡಿದ್ದ ಉತ್ತರದಲ್ಲಿನ ಈ ಭಾಗದ ವಿಡಿಯೋ ತುಣುಕು ಇದೀಗ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:
PARYAYA: ವಾಟ್- ಸುದ್ದಿ: ಹಗರಣ-ದೂರು-ತನಿಖೆ-ನಿಂದನೆ! ದೆ ಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತ...