ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?
ನೆಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣ. ಅದರಲ್ಲೂ ಬಸ್ಕಿ ತೆಗೆಯುವುದು, ಕೂತು-ಏಳುವ ಅಭ್ಯಾಸ ಕಡಿಮೆ ಮಾಡಿಕೊಂಡದ್ದು ಇತ್ಯಾದಿ ಕೂಡಾ ನರಸಂಬಂಧಿ ಸಮಸ್ಯೆಗಳಿಗೆ ಮೂಲ
ಮಹಿಳೆಯರು ಹಿಂದೆ ನೆಲದಲ್ಲಿ ಕುಳಿತೇ ಅಡುಗೆ ಮಾಡುತ್ತಿದ್ದರು. ಈಗ ಅಡುಗೆ ಮನೆಯ ವಿನ್ಯಾಸವೇ ಬದಲಿಯಾಗಿದೆ. ನಿಂತುಕೊಂಡು ಅಡುಗೆ ಮಾಡುವುದೇ ಆರಾಮ ಎಂಬ ಭಾವನೆ ಇದೆ. ಇದರೊಂದಿಗೆ ಅತ್ತಿತ್ತ ಓಡಾಡುವ ಅಭ್ಯಾಸವೂ ಕಡಿಮೆ.
ಮನೆಯ ಹೊರಗೆ ಬಿಡಿ ಮನೆಯ ಒಳಗೂ ಬರಿಗಾಲಲ್ಲಿ ನಡೆಯುವ ಕ್ರಮ ಕ್ರಮೇಣ ಮಾಯವಾಗುತ್ತಿದೆ. ನಡೆದಾಡುವುದೇ ಕಡಿಮೆ, ಕಡಿಮೆ ನಡೆದಾಡುವುದರ ಜೊತೆ ಮನೆಯ ಹೊರಗೆ, ಒಳಗೆ ಚಪ್ಪಲಿಗೆ ಮುಕ್ತ ಪ್ರವೇಶ. ಪರಿಣಾಮ ಪಾದಗಳಿಗೆ ಭೂಮಿಯ ಸ್ಪರ್ಶವೇ ಇಲ್ಲ.
ಇದರಿಂದ ಆಗುವ ದೊಡ್ಡ ನಷ್ಟ- ಭೂಮಿಯ ಅಯಸ್ಕಾಂತ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಿಕೆ. ಈ ಅಯಸ್ಕಾಂತ ಶಕ್ತಿ ಅಥವಾ ಮ್ಯಾಗ್ನೆಟ್ ಪವರ್ ದೇಹ ಸ್ವಾಸ್ಥ್ಯಕ್ಕೆ ಬಲುಮುಖ್ಯ.
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಮತ್ತು ಕಂಪಾನಿಯೋ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ʼಫೂಟ್ ಪಲ್ಸ್ʼ ಥೆರೆಪಿ ಶಿಬಿರದ ಸಂದರ್ಭದಲ್ಲಿ ಥೆರೆಪಿ ತಜ್ಞ ಕಾರ್ತಿಕ್ ಹೇಳಿದ ಸೂತ್ರಗಳಲ್ಲಿ ಇವೂ ಸೇರಿವೆ.
ಅವರ ಮಾತುಗಳ ವಿಡಿಯೋ ಇಲ್ಲಿದೆ. ಚಿತ್ರ ಕ್ಲಿಕ್ ಮಾಡಿ ನೋಡಿ. Youtube Video link: https://youtu.be/TlSSjnHtgJA
ರಂಗೋಲಿ ಸ್ಪರ್ಧೆ
ಹೇಳಬೇಕಾದ ಇನ್ನೊಂದು ಸುದ್ದಿ ಇಲ್ಲಿದೆ. ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ ೧೫ರಂದು ಬರಲಿರುವ ಮಕರ ಸಂಕ್ರಾಂತಿಯ ಪ್ರಯುಕ್ತ ಮಹಿಳೆಯರಿಗೆ ʼರಂಗೋಲಿʼ ಸ್ಪರ್ಧೆಯನ್ನು ೨೦೨೫ ಜನವರಿ ೧೧ರ ಭಾನುವಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಬೆಳಗ್ಗೆ ೧೦.೩೦ರಿಂದ ೧೨ರ ನಡುವಣ ಅವಧಿಯಲ್ಲಿ ನಡೆಯಲಿದೆ. ಪಾಲ್ಗೊಳ್ಳಬಯಸುವವರು ಮಮತಾ (೮೮೬೭೯೬೭೮೮೮) ಅಥವಾ ಸ್ವಾತಿ (೮೧೦೫೬೮೫೮೯೯) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.














