Showing posts with label ರಾಮಾಯಣ. Show all posts
Showing posts with label ರಾಮಾಯಣ. Show all posts

Sunday, March 22, 2026

PARYAYA: ಗೀತಾ ರಾಮಾಯಣ

 ಗೀತಾ ರಾಮಾಯಣ

ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ದೇವಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗಿನ ದೃಶ್ಯ. (ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ.)

ಅವರು ಅಭ್ಯಾಸ ಮಾಡುತ್ತಿದ್ದದು ಲವಕುಶ ಕಾಳಗದ ಒಂದು ದೃಶ್ಯ.

ಈ ಕಥೆ ಯಾವುದು, ಅದನ್ನು ಹೇಳುತ್ತಿರುವುದು ಏಕೆ? ಹೇಳುತ್ತಿರುವುದು ಯಾರು ಇವೆಲ್ಲ ಪ್ರಶ್ನೆಗಳಿಗೆ ಉತ್ತರ: ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಸಮೀಪದ ಭಾರತೀಯ ಸಿಟಿಯ ನಿಕೂ ಹೋಮ್ಸ್‌ ನಲ್ಲಿ 2026 ಮಾರ್ಚ್‌ 27ರ ಸಂಜೆ 6.45 ಗಂಟೆಗೆ.

ಪೂರ್ತಿ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


ಪರ್ಯಾಯ.ಕಾಮ್ ವೆಬ್‌ ಸೈಟಿನ ʼಯಕ್ಷಗಾನ ತಾಳಮದ್ದಳೆʼ ಪುಟಕ್ಕೆ ಭೇಟಿ ಕೊಡಿ

PARYAYA: ಗೀತಾ ರಾಮಾಯಣ:   ಗೀತಾ ರಾಮಾಯಣ ಇ ದು ಗೀತಾ ರಾಮಾಯಣದ ಒಂದು ದೃಶ್ಯ. ಬೆಂಗಳೂರಿನ ಯಕ್ಷ ಕಲಾ ಕೌಸ್ತುಭ ತಂಡದ ಮಕ್ಕಳು ಪ್ರದರ್ಶಿಸುತ್ತಿರುವುದು. ಇದು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್...

Friday, January 16, 2026

PARYAYA: ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ

 ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಪುಣ್ಯಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುವ ಶುಭಕಾಲ, ಭೀಷ್ಮಾಚಾರ್ಯರು ಯುದ್ಧದಲ್ಲಿ ತೀವ್ರ ಗಾಯಗೊಂಡಿದ್ದರೂ ದೇಹ ತ್ಯಜಿಸಲು ಆಯ್ದುಕೊಂಡ ಮಹಾಪರ್ವ ಕಾಲ, ಸ್ವರ್ಗದ ಬಾಗಿಲು ತೆರೆಯುವ ಕಾಲ- ಇವೆಲ್ಲವೂ ಸೂರ್ಯನ ಪಥ ಪರಿವರ್ತನೆಯ ದಿನದ ಮಹತ್ವವನ್ನು ಸಾರುತ್ತವೆ.

ಮಕರ ಸಂಕ್ರಾಂತಿಯೊಂದಿಗೆ ಆರಂಭವಾಗುವ ಉತ್ತರಾಯಣದ ಪುಣ್ಯ ಕಾಲದಲ್ಲಿ ಸೂರ್ಯನ ಮಹತ್ವವನ್ನು ಸಾರುವ, ಅತ್ಯಂತ ರಹಸ್ಯಮಯವಾದ ಆದಿತ್ಯ ಹೃದಯಸ್ತೋತ್ರದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಈ ಸ್ತೋತ್ರವನ್ನು ಒಮ್ಮೆ ಸಂಪೂರ್ಣವಾಗಿ ಓದಿ. ಅದರ ಫಲ ಲಭಿಸಬೇಕು ಎಂದಿದ್ದರೆ, ಸ್ನಾನ ಮುಗಿಸಿಕೊಂಡು ಸೂರ್ಯೋದಯದ ಹೊತ್ತಿನಲ್ಲಿ ತಿಗುಣಿತ ಬಾರಿ ಅಂದರೆ ಮೂರು ಬಾರಿ ಅತ್ಯಂತ ಶ್ರದ್ಧಾಭಕ್ತಿಯೊಂದಿಗೆ ಓದಿಕೊಳ್ಳಿ.

ಅದಕ್ಕೂ ಮುನ್ನ ಇಲ್ಲಿರುವ ವಿಡಿಯೋ ನೋಡಿ ಆದಿತ್ಯ ಹೃದಯ ಸ್ತೋತ್ರದ ಮಹತ್ವವೇನು ಎಂಬದನ್ನು ಅರ್ಥ ಮಾಡಿಕೊಳ್ಳಿ. ಈ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡುವ ಮೂಲಕವೂ ವಿಡಿಯೋ ನೋಡಬಹುದು: https://youtu.be/7knlIqjxeOo

ಶ್ರೀ ಆದಿತ್ಯ ಹೃದಯಸ್ತೋತ್ರಮ್‌: ಸೂರ್ಯಾರಾಧನೆಯ ಸಾರ ಮತ್ತು ಮಹಿಮೆ

ತತೋ ಯುದ್ಧಪರಿಶ್ರಾನ್ತಂ ಸಮರೇ ಚಿನ್ತಯಾ ಸ್ಥಿತಮ್ |
ರಾವಣಂ ಚಾಗ್ರಗೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾಬ್ರವೀದ್ ರಾಮಮಗಸ್ತ್ಯೋ ಭಗವಾಂಸ್ತದಾ ||

ರಾಮ ರಾಮ ಮಹಾಬಾಹೋ ಶ್ರುಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸೇ ||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಮಕ್ಷಯಂ ಪರಮಂ ಶಿವಮ್ ||

 ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿನ್ತಾಶೋಕಪ್ರಶಮನಮಾಯುರ್ವಧನಮುತ್ತಮಮ್ ||

ರಶ್ಮಿಮನ್ತಂ ಸಮುದ್ಯನ್ತಂ ದೇವಾಸುರನಮಸ್ಕೃತಮ್ |
ಪೂಜಯಸ್ವ ವಿವಸ್ವನ್ತಂ ಭಾಸ್ಕರಂ ಭುವನೇಶ್ವರಮ್ ||

 ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್‍ಲ್ಲೋಕಾನ್ ಪಾತಿ ಗಭಸ್ತಿಭಿಃ ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕನ್ದಃ ಪ್ರಜಾಪತಿಃ |
ಮಹೇನ್ದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ||

ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಃ ಪ್ರಾಣಾ ಋತುಕರ್ತಾ ಪ್ರಭಕರಃ ||

ಆದಿತ್ಯಃ ಸವಿತಾ ಸೂರ್ಯ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರಃ ||

 ಹರಿದ್ವಶಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಣ್ಡಕೋಽಂಶುಮಾನ್ ||

ಹಿರಣ್ಯಗರ್ಭಃ ಶಿಶಿರಸ್ತಪನೋಽಹಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿನ್ಧ್ಯವೀಥೀಪ್ಲವಂಗಮಃ ||

ಆತಪೀ ಮಣ್ಡಲೀ ಮೃತ್ಯೂಃ ಪಿಙ್ಗಲಃ ಸ್ಸರ್ವತಾಪನಃ |
ಕವಿರ್ವಿಶ್ಜೋ ಮಹಾತೇಜಾ ರಕ್ತಃ ಸರ್ವಭವೋದ್ಧವಃ || 

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸ್ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||

ನಮ ಉಗ್ರಾಯ ವೀರಾಯ ಸಾರಙ್ಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಪ್ರಚಂಡಾಯ ನಮೋಽಸ್ತು ತೇ || 

ಬ್ರಹ್ಮೀಶಾನಾಚ್ಯುತೇಶಾಯ ಸೂರಾಯದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 

ತಪ್ತಚಾಮೀಕರಾಭಾಯ ಹರಯೇ ವಿಶ್ವಕರ್ಮಣೇ |
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ ||

ನಾಶಯತ್ಯೇಷ ವೈ ಭೂತಂ ತಮೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಚೈವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ ||

ದೇವಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವೇಷು ಪರಮಪ್ರಭುಃ || 

ಏನಮಾಪತ್ಸು ಕೃಚ್ಛ್ರೇಷು ಕಾನ್ತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ ||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಠತಿ || 

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ಹನಿಷ್ಯಸಿ |
ಏವಮುಕ್ತ್ವಾ ತತೋಽಗಸ್ತ್ಯೋ ಜಗಾಮ ಸ ಯಥಾಗತಮ್ ||

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 

ಆದಿತ್ಯಂ ಪ್ರೇಕ್ಷ್ಯ ಜಪ್ತ್ವೇದಂ ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಜಯಾರ್ಥಂ ಸಮುಪಾಗಮತ್ |
ಸರ್ವಯತ್ನೇನ ಮಹತಾ ವೃತಸ್ತಸ್ಯ ಮಧೇಽಭವತ್ ||

ಅಥ ರವಿರವದನ್ನಿರೀಕ್ಷ್ಯ ರಾಮಮ್ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||

ಶ್ರೀ ಆದಿತ್ಯ ಹೃದಯ ಸ್ತೋತ್ರವು ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಅತ್ಯಂತ ಶಕ್ತಿಶಾಲಿ ಸ್ತೋತ್ರ. ಯುದ್ಧದ ಸಮಯದಲ್ಲಿ ಶ್ರೀರಾಮನು ದಣಿದಾಗ ಮತ್ತು ಚಿಂತಿತನಾಗಿದ್ದಾಗಅಗಸ್ತ್ಯ ಮಹರ್ಷಿಗಳು ಜಯವನ್ನು ಲಭಿಸುವಂತೆ ಮಾಡಲು ಈ ಸೂರ್ಯ ಸ್ತೋತ್ರವನ್ನು ಉಪದೇಶಿಸುತ್ತಾರೆ.

ಸ್ತೋತ್ರದ ಸಾರಾಂಶ (ಅರ್ಥ)

  1. ಹಿನ್ನೆಲೆ: ರಾವಣನೊಂದಿಗೆ ಸುದೀರ್ಘವಾಗಿ ಯುದ್ಧ ಮಾಡಿ ದಣಿದಿದ್ದ ರಾಮನು ರಣರಂಗದಲ್ಲಿ ಚಿಂತಿತನಾಗಿ ನಿಂತಿದ್ದನು. ಆಗ ದೇವತೆಗಳೊಂದಿಗೆ ಯುದ್ಧ ನೋಡಲು ಬಂದಿದ್ದ ಅಗಸ್ತ್ಯ ಮುನಿಗಳು ರಾಮನ ಬಳಿ ಬಂದು, "ರಾಮಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಲು ಅತ್ಯಂತ ರಹಸ್ಯವೂಸನಾತನವೂ ಆದ ಈ 'ಆದಿತ್ಯ ಹೃದಯ'ವನ್ನು ಕೇಳು" ಎಂದು ಉಪದೇಶಿಸುತ್ತಾರೆ.
  2. ಫಲಶ್ರುತಿ: ಈ ಸ್ತೋತ್ರವು ಪುಣ್ಯಪ್ರದವಾದುದುಶತ್ರುನಾಶಕವಾದುದುಜಯವನ್ನು ತಂದುಕೊಡುವಂಥದ್ದು ಮತ್ತು ಸಕಲ ಪಾಪಗಳನ್ನು ಹರಿಸುವಂಥದ್ದಾಗಿದೆ. ಇದನ್ನು ಜಪಿಸುವುದರಿಂದ ಆಯಸ್ಸು ಹೆಚ್ಚುತ್ತದೆ ಮತ್ತು ಚಿಂತೆ-ಶೋಕಗಳು ದೂರವಾಗುತ್ತವೆ.
  3. ಸೂರ್ಯನ ವೈಭವ: ಸೂರ್ಯನು ಕೇವಲ ಗ್ರಹವಲ್ಲಅವನು ಬ್ರಹ್ಮವಿಷ್ಣುಶಿವಸ್ಕಂದಪ್ರಜಾಪತಿಇಂದ್ರಯಮ ಮತ್ತು ಕುಬೇರನ ಸ್ವರೂಪವೇ ಆಗಿದ್ದಾನೆ. ಈ ಜಗತ್ತಿನ ಸಕಲ ಜೀವಿಗಳ ಪ್ರಾಣಶಕ್ತಿ ಅವನೇ.
  4. ಸೂರ್ಯನ ನಾಮಾವಳಿ: ಸ್ತೋತ್ರದಲ್ಲಿ ಸೂರ್ಯನನ್ನು ಆದಿತ್ಯಸವಿತಾಭಾಸ್ಕರಮಾರ್ತಾಂಡಹಿರಣ್ಯಗರ್ಭರವಿ ಮತ್ತು ದಿವಾಕರ ಎಂದು ನಾನಾ ಹೆಸರುಗಳಿಂದ ಸ್ತುತಿಸಲಾಗಿದೆ. ಅವನು ಕತ್ತಲೆಯನ್ನು ಓಡಿಸುವವನು (ತಮೋಘ್ನ)ಶತ್ರುಗಳನ್ನು ಸಂಹರಿಸುವವನು (ಶತ್ರುಘ್ನ) ಮತ್ತು ಲೋಕಕ್ಕೆ ಸಾಕ್ಷಿಯಾದವನು.
  5. ಸೂರ್ಯನ ಶಕ್ತಿ: ನಾವೆಲ್ಲರೂ ಮಲಗಿದ್ದಾಗಲೂ ಜಗತ್ತಿನ ಚೈತನ್ಯವಾಗಿ ಸೂರ್ಯನು ಜಾಗೃತವಾಗಿರುತ್ತಾನೆ. ಆಪತ್ತುಗಳಲ್ಲಿಕಾಡುಗಳಲ್ಲಿ ಅಥವಾ ಭಯದ ಸನ್ನಿವೇಶಗಳಲ್ಲಿ ಈ ಸ್ತೋತ್ರವನ್ನು ಪಠಿಸುವವರು ಎಂದಿಗೂ ಸೋಲುವುದಿಲ್ಲ.
  6. ಉಪಸಂಹಾರ: ಅಗಸ್ತ್ಯರು ಹೇಳಿದಂತೆ ರಾಮನು ಮೂರು ಬಾರಿ ಆಚಮನ ಮಾಡಿ ಶುಚಿಯಾಗಿಸೂರ್ಯನನ್ನು ನೋಡಿ ಈ ಸ್ತೋತ್ರವನ್ನು ಮೂರು ಬಾರಿ ಜಪಿಸಿದನು. ತಕ್ಷಣವೇ ರಾಮನಿಗೆ ಅಪಾರ ಶಕ್ತಿ ಮತ್ತು ಸಂತೋಷ ಲಭಿಸಿತು. ಇದನ್ನು ಕಂಡು ಸೂರ್ಯದೇವನು ಸಂತೋಷದಿಂದ "ರಾಮಬೇಗ ರಾವಣನನ್ನು ಸಂಹರಿಸು" ಎಂದು ಹರಸಿದನು.

ಈ ಸ್ತೋತ್ರದ ವಿಶೇಷತೆಗಳು

  • ಆತ್ಮವಿಶ್ವಾಸದ ಸಂಕೇತ: ರಾಮನಂತಹ ದೇವಮಾನವನಿಗೇ ದಣಿವು ಮತ್ತು ಅನಿಶ್ಚಿತತೆ ಕಾಡಿದಾಗ ಈ ಸ್ತೋತ್ರವು ಅವನಲ್ಲಿ ಆತ್ಮಬಲವನ್ನು ತುಂಬಿತು. ಇದು ಮನುಷ್ಯನ ಮನೋಬಲವನ್ನು ಹೆಚ್ಚಿಸುವ ಮಹಾನ್ ಮಂತ್ರ.
  • ವೈಜ್ಞಾನಿಕ ದೃಷ್ಟಿಕೋನ: ಸೂರ್ಯನು ಇಡೀ ಸೌರಮಂಡಲದ ಶಕ್ತಿಯ ಕೇಂದ್ರ. ವಿಜ್ಞಾನದ ಪ್ರಕಾರ ಸೂರ್ಯನಿಲ್ಲದೆ ಭೂಮಿಯ ಮೇಲೆ ಜೀವನ ಅಸಾಧ್ಯ. ಈ ಸ್ತೋತ್ರವು ಆ 'ಜೀವಶಕ್ತಿ'ಯನ್ನು ಆರಾಧಿಸುತ್ತದೆ.
  • ಶೀಘ್ರ ಫಲದಾಯಕ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದಾಗ ಅಥವಾ ಅತಿಯಾದ ಮಾನಸಿಕ ಒತ್ತಡವಿದ್ದಾಗ ಇದನ್ನು ಪಠಿಸುವುದು ಶ್ರೇಷ್ಠ. ಇದು ಕಣ್ಣಿನ ದೃಷ್ಟಿ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಲಾಗಿದೆ.
  • ಜಯದ ಮಂತ್ರ: ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದಾಗ ಅಥವಾ ಶತ್ರುಬಾಧೆ ಹೆಚ್ಚಾದಾಗ ಆದಿತ್ಯ ಹೃದಯದ ಪಠಣೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂಬುದು ಭಕ್ತರ ನಂಬಿಕೆ.

ಸಲಹೆ: ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸ್ನಾನಾದಿ ಕರ್ಮಗಳ ನಂತರ ಈ ಸ್ತೋತ್ರವನ್ನು ಪಠಿಸುವುದು ಅತ್ಯಂತ ಶುಭಪ್ರದ.

PARYAYA: ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ:   ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ ಸೂ ರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಪುಣ್ಯಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುವ ಶುಭಕಾಲ, ಭೀಷ್ಮಾಚಾರ್ಯರು ಯುದ...

Sunday, September 21, 2025

PARYAYA: ಪುಸ್ತಕ ಪ್ರಪಂಚ

 ಬಲ್ಲಿರೇನಯ್ಯ? ಯಾರೆಂದುಕೊಂಡಿದ್ದೀರಿ?

 ಲೋಕರಾವಣ

ತ್ರಿಕೂಟಾಚಲದ ನೆತ್ತಿಯ ಮೇಲೆ ನಿಂತಿದ್ದೇನೆ.
ಸುತ್ತ ವಿಸ್ತಾರವಾದ ಜಲರಾಶಿ.
ಅದರ ನಟ್ಟ ನಡುವೆ  ಥಳ ಥಳಿಸುತ್ತಿರುವ ಮಹಾನಗರಿ.
ಅದೇ ಲಂಕೆ.
ಬರಿದೇ ಲಂಕೆ ಎನ್ನಬಹುದೇ?
ಇಲ್ಲ, ಸುವರ್ಣ ಲಂಕೆ.
ಅದರ ಒಂದೊಂದು ಗೋಪುರವೂ ನನ್ನ ಸಾಧನೆಯ ಪ್ರತೀಕ.
ಹೌದು.
ಸುವರ್ಣ ಲಂಕಾಧೀಶ್ವರನೆನಿಸಿದ  ದಶಕಂಠ ರಾವಣ ನಾನು.
ನನ್ನನ್ನು ಆವರಿಸಿರುವುದು ವಿಸ್ತಾರವಾದ ವೈಭವ.
ಅಲ್ಲ, ವೈಭವದ ವಿಸ್ತಾರ.
ಪಾತಾಳದ ಅಜ್ಞಾತವಾದ ಕತ್ತಲ ಕೂಪವೆಲ್ಲಿ?
ಈ ಪ್ರಖರ ಬೆಳಕಿನಲ್ಲಿ ಮೀಯುತ್ತಿರುವ ಮಹಾನಗರಿ ಎಲ್ಲಿ?
ಸಾಧನೆ ಅಂದರೆ ಇದು.
ಸಾಹಸ ಅಂದರೆ ಇದು.
ಭಲಾ ದಶಕಂಠ! ಸಾಹಸಕ್ಕೆ ಇನ್ನೊಂದು ಹೆಸರೇ ರಾವಣ.
ಈ ಹೆಸರು ಬಂದದ್ದೂ ಸಾಹಸದಿಂದಲೇ.
ಪಾತಾಳದ ಆಳದಲ್ಲಿ ನನ್ನ ಪಾದ.
ಅಷ್ಟೂ ಲೋಕಗಳು ನನ್ನ ಪದಾಕ್ರಾಂತವಾಗಿವೆ.
ಅಂತರಕ್ಷದಾಚೆಗೆ ಸ್ವರ್ಗದ ಎತ್ತರದಲ್ಲಿ ನನ್ನ ಮಣಿ ಮುಕುಟ.
ಸುಮ್ಮನೆ ಚತುರ್ದಶ ಭುವನದಲ್ಲಣ ಅಂದರೇನು, ನನ್ನ ಕುರಿತು?

ಕಥೆ ಆರಂಭವಾಗುವುದೇ ಹೀಗೆ. ಸ್ವಗತದೊಂದಿಗೆ. ಲಂಕಾಧಿಪತಿ ರಾವಣನ ಸ್ವಗತ. ಸ್ವಗತದ ರೂಪದಲ್ಲೇ ಸಾಗುವ ಕಾದಂಬರಿ ಇಡೀ ರಾಮಾಯಣದ ಸಮಗ್ರ ಕಥೆಯನ್ನೇ ಓದುಗನ ಕಣ್ಣ ಮುಂದಕ್ಕೆ ತರುತ್ತದೆ.
ರಾಮಾಯಣ ಶ್ರೀರಾಮನನ್ನೇ ಕೇಂದ್ರಬಿಂದುವಾಗಿ ಇರಿಸಿಕೊಂಡು ಮುಂದಕ್ಕೆ ಸಾಗುವ ಮಹಾಕಾವ್ಯ. ರಾಮನ ಹೆಜ್ಜೆಗಳ ಜಾಡಿನಲ್ಲೇ ಇಡೀ ರಾಮಾಯಣದ ಕಥೆ ಸಾಗುತ್ತದೆ.

ಇತ್ತೀಚಿಗೆ ಸೀತೆಯನ್ನೇ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಈ ಕಥೆಯನ್ನು ಬರೆದಿರುವುದೂ ಉಂಟು.
ಆದರೆ ಕಾವ್ಯದ ಖಳನಾಯಕ ಎನಿಸಿದ ರಾವಣನ ದೃಷ್ಟಿಯಲ್ಲಿ ಈ ಕಾವ್ಯ ಬಂದ ಉದಾಹರಣೆ ಇಲ್ಲವೆನ್ನಬಹುದು.
ಆದರೆ ಇದು ರಾವಣನನ್ನೇ ಕೇಂದ್ರ ಬಿಂದುವಾಗಿ ಇಟ್ಟುಕೊಂಡು ಬರೆದಿರುವ ಕಾದಂಬರಿ- 
ʼಲೋಕ ರಾವಣʼ.

ಸಾಹಿತಿ ಹಾಗೂ ಯಕ್ಷಗಾನ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರ್‌ ಅವರು ಬರೆದಿರುವ ಈ ಕಾದಂಬರಿಯಲ್ಲಿ ಯಕ್ಷಗಾನ ಅರ್ಥಗಾರಿಕೆಯ ಪ್ರಭಾವ ಗಾಢವಾಗಿದೆ. ಅದೇ ಕೃತಿಯ ವಿಶೇಷತೆ ಕೂಡಾ ಅಂದರೆ ತಪ್ಪಲ್ಲ. ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥಧಾರಿಗಳು ಪಾತ್ರದ ಒಳಹೊಕ್ಕು ಆ ಪಾತ್ರದ ಹಿನ್ನೆಲೆ ಮುನ್ನೆಲೆಗಳನ್ನೆಲ್ಲ ತಮ್ಮ ಮಾತಿನ ಮಂಟಪದ ಮೂಲಕವೇ ಶ್ರೋತೃಗಳ ಮನಕ್ಕೆ ತಲುಪಿಸುತ್ತಾರೆ. ಇಲ್ಲಿ ಕೂಡಾ ಕಲ್ಚಾರ್‌ ಅವರು ರಾವಣನ ಸ್ಮೃತಿ ಪಟಲದಿಂದ ಸ್ವಗತದ ಮೂಲಕ ಇಡೀ ರಾಮಾಯಣದ ಪಾತ್ರಧಾರಿಗಳ ಕಥೆಗಳನ್ನು ಹೇಳುತ್ತಾ ಸಾಗುತ್ತಾರೆ.

ರಾವಣನ ಸ್ವಗತದಲ್ಲಿ ರಾಮನ ಪೂರ್ವಜರ ಕಥೆ, ಸೀತೆಯ ಕಥೆ, ವಾಲಿ ಸುಗ್ರೀವರ ಕಥೆ, ಹನುಮಂತನ ಕಥೆ, ವೇದವತಿಯ ಕಥೆ, ಇಂದ್ರಜಿತು, ಕುಂಭಕರ್ಣ, ಅತಿಕಾಯರ ಕಥೆಗಳೆಲ್ಲ ಸಾಂದರ್ಭಿಕವಾಗಿ ಅನಾವರಣಗೊಳ್ಳುತ್ತವೆ. ಈ ಕಥೆಗಳು ಕಾದಂಬರಿಯ ಓಘಕ್ಕೆ ಪೂರಕವಾಗಿಯೇ ಸಾಗುತ್ತವೆ. ಹೀಗಾಗಿ ಕಾದಂಬರಿ ಎಲ್ಲೂ ಸೆಳೆತ ಕಳೆದುಕೊಳ್ಳುವುದಿಲ್ಲ.

ಸಂಪೂರ್ಣ ಕಥೆಯನ್ನು ಕಥೆಗಾರರು ಲಂಕಾಧಿಪತಿ ರಾವಣನ ದೃಷ್ಟಿಯಿಂದ ಬರೆದಿದ್ದಾರೆ. ಹಾಗಂತ ಅವರೇ ಹೇಳುವ ಹಾಗೆ ಇದು ರಾವಣನ ದಾರ್ಷ್ಟ್ಯದ ಸಮರ್ಥನೆಯಲ್ಲ. ಆತ ಹುಟ್ಟಿನಿಂದ ಮಹಾತಪಸ್ವಿಯಾದ ವಿಶ್ರವಸ್ಸಿನ ಮಗ. ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು. ಆದರೂ, ಆತ ಯಾಕೆ ದುಷ್ಟನಾದ? ಲೋಕ ಪೀಡಕನಾದ? ಪರಸ್ತ್ರೀ ಅಪಹಾರಕ ಎಂದು ರಾಮಾಯಣದಲ್ಲಿ ಚಿತ್ರಿತನಾದ? ಇದಕ್ಕೆಲ್ಲ ಕಾರಣ ಅವನ ಹುಟ್ಟೇ? ಸಂಸ್ಕಾರವೇ? ಅವನಿಗಾದ ಕಹಿ ಅನುಭವಗಳೇ, ಅಥವಾ ಅವನ ವ್ಯಕ್ತಿತ್ವವೇ ಹಾಗೆಯೇ?

ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಅವುಗಳಿಗೆ ಉತ್ತರ ಪಡೆಯಲು ಹೊರಟ ಕಥೆಗಾರರು, ರಾವಣನ ಅಂತರಂಗ ಪ್ರವೇಶಿಸದೆ ಉತ್ತರ ದೊರೆಯಲಾರದು ಎಂಬ ತೀರ್ಮಾನಕ್ಕೆ ಬಂದು ʼರಾವಣನ ಅಂತರಂಗ ಹೊಕ್ಕುʼ ಸ್ವಗತದ ಮೂಲಕ ಉತ್ತರ ಹುಡುಕುವ ಯತ್ನ ನಡೆಸಿದ್ದಾರೆ.

ಆ ಪ್ರಯತ್ನವೇ ಈ ಕಾದಂಬರಿ. ತಮ್ಮ ಪೌರಾಣಿಕ ಕಾದಂಬರಿ ʼಕವಚʼಕ್ಕೆ ಸಿಕ್ಕಿದ ಪ್ರೋತ್ಸಾಹವೇ ಈ ಕೃತಿ ರಚನೆಗೆ ಅವರಿಗೆ ಪ್ರೇರಣೆ. ಇವುಗಳ ಹೊರತಾಗಿ ೧೧ ಕೃತಿಗಳನ್ನು ರಚಿಸಿರುವ ಕಲ್ಚಾರ್‌ ಮೂರು ದಶಕಗಳಿಂದ ತಾಳಮದ್ದಲೆಯಲ್ಲಿ ಸಕ್ರಿಯ. ಯಕ್ಷಗಾನ ವಲಯದಲ್ಲಿ ಉದ್ದಗಲಕ್ಕೂ ಬೇಡಿಕೆಯ ಅರ್ಥಧಾರಿ. ಯಕ್ಷಗಾನ ವೇಷಧಾರಿಯಾಗಿ ರಂಗ ಪ್ರವೇಶ ಮಾಡಿದ ಅವರು ಅನೇಕ ವೇಷಗಳಲ್ಲಿ ರಂಜಿಸಿದ್ದಾರೆ. ಪತ್ರಕರ್ತನಾಗಿ, ಉಪನ್ಯಾಸಕನಾಗಿ ಸ್ವಯಂ ನಿವೃತ್ತಿ ಪಡೆದವರು. ವಿವಿಧ ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಯಲ್ಲೂ ಕ್ರಿಯಾಶೀಲ.

ʼಲೋಕ ರಾವಣʼ ಕೃತಿಯನ್ನು ಬೆಂಗಳೂರಿನ ಚಾಮರಾಜಪೇಟೆಯ ವೀರಲೋಕ ಬುಕ್ಸ್ ಪ್ರಕಟಿಸಿದೆ. ೨೦೦ ಪುಟಗಳ ಕಾದಂಬರಿಯ ಬೆಲೆ ೨೫೦ ರೂಪಾಯಿ. ಕಲಾವಿದ ರಾಜು ವಿಷ್ಣು ಆಕರ್ಷಕ ಮುಖಪುಟ ರಚಿಸಿದ್ದಾರೆ.
( ಪುಸ್ತಕ ಪ್ರಪಂಚ ಪುಟ ಕ್ಲಿಕ್‌ ಮಾಡಿರಿ.)

-ನೆತ್ರಕೆರೆ ಉದಯಶಂಕರ 

PARYAYA: ಪುಸ್ತಕ ಪ್ರಪಂಚ:     ಬಲ್ಲಿರೇನಯ್ಯ? ಯಾರೆಂದುಕೊಂಡಿದ್ದೀರಿ?   ಲೋಕರಾವಣ … ತ್ರಿ ಕೂಟಾಚಲದ ನೆತ್ತಿಯ ಮೇಲೆ ನಿಂತಿದ್ದೇನೆ. ಸುತ್ತ ವಿಸ್ತಾರವಾದ ಜಲರಾಶಿ. ಅದರ ನಟ್ಟ ನಡುವೆ    ಥಳ ಥಳಿಸುತ...