Showing posts with label ಜಾತ್ರೆ. Show all posts
Showing posts with label ಜಾತ್ರೆ. Show all posts

Friday, January 23, 2026

PARYAYA: ಪಂಚಲಿಂಗೇಶ್ವರನ ಅವಭೃತ

 ಪಂಚಲಿಂಗೇಶ್ವರನ ಅವಭೃತ

ಅವಭೃತ (ದೇವನಾಗರಿಯಲ್ಲಿ ʼಅವಭೃಥʼ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರವಾದ ಮಂಗಳಸ್ನಾನ. ಇದು ಯಜ್ಞದ ಸಮಾಪ್ತಿಯನ್ನು ಸೂಚಿಸುವ ವಿಧಿಯಾಗಿದ್ದು, ಪಾಪ ಪರಿಹಾರ ಮತ್ತು ಶುದ್ಧೀಕರಣದ ಸಂಕೇತ. 


ಅವಭೃತದ ಮುಖ್ಯಾಂಶಗಳು:

  • ಯಜ್ಞಾಂತ ಸ್ನಾನ: ಪ್ರಧಾನ ಯಾಗ ಅಥವಾ ಯಜ್ಞ ಪೂರ್ಣಗೊಂಡ ನಂತರ ಮಾಡಲಾಗುವ ವಿಶೇಷ ಜಳಕ.
  • ಶುದ್ಧೀಕರಣ: ಯಜ್ಞದ ಸಮಯದಲ್ಲಿ ಉಂಟಾಗಬಹುದಾದ ದೋಷಗಳನ್ನು ಕಳೆದು, ಯಜಮಾನನನ್ನು ಶುದ್ಧಗೊಳಿಸುವ ಪ್ರಕ್ರಿಯೆ.
  • ಮಂಗಳ ಕಾರ್ಯ: ಇದು ಯಜ್ಞದ ಮುಕ್ತಾಯದ ಸೂಚಕವಾಗಿದ್ದು, ಯಶಸ್ಸನ್ನು ಸೂಚಿಸುತ್ತದೆ.
  • ನದಿ/ತೀರ್ಥ ಸ್ನಾನ: ಸಾಮಾನ್ಯವಾಗಿ ಹರಿಯುವ ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಈ ಸ್ನಾನವನ್ನು ಆಚರಿಸಲಾಗುತ್ತದೆ. 

ಸರಳವಾಗಿ ಹೇಳುವುದಾದರೆ, ಯಜ್ಞದ ಕೊನೆಯಲ್ಲಿ ಆಚರಿಸಲಾಗುವ ಸಮಾರೋಪ ಸ್ನಾನವೇ 'ಅವಭೃತ'. ದೇವಾಲಯದ ವಾರ್ಷಿಕೋತ್ಸವ, ಜಾತ್ರೆ, ಆಯನ ಕೂಡಾ ದೇವರ ಶಕ್ತಿಯನ್ನು ಜಾಗೃತಗೊಳಿಸುವ ಯಜ್ಞ, ಹಾಗಾಗಿಯೇ ಆಯನದ ಕೊನೆಗೆ ಅವಭೃತ ನಡೆಯುತ್ತದೆ.

ವಿಟ್ಲಾಯನದ ಸಡಗರದ ರಥೋತ್ಸವದ ಮರುದಿನ ಕೊಡಂಗಾಯಿ ಹೊಳೆಯಲ್ಲಿ ವಿಟ್ಲದೊಡೆಯ ಪಂಚಲಿಂಗೇಶ್ವರನ ಅವಭೃತ ನಡೆಯುತ್ತದೆ. ಈ ಅವಭೃತಕ್ಕಾಗಿ ದೇವಸ್ಥಾನದಿಂದ ಕೊಡಂಗಾಯಿವರೆಗೆ ಸಾಗುವಾಗ  ದೇವಸ್ಥಾನದ ಕಟ್ಟೆಯಿಂದ ತೊಡಗಿ, ವಿವಿಧ ಕಟ್ಟೆಗಳಲ್ಲಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲುತ್ತದೆ. ಪ್ರತಿವರ್ಷವೂ ಈ ಕಟ್ಟೆಗಳಿಗೆ ದೇವರು ಬರುವ ಹೊತ್ತಿನಲ್ಲಿ ಆಸುಪಾಸಿನ ಜನರು ಭಕ್ತಿ ಪೂರ್ವಕವಾಗಿ ನೆರೆದು ಭಗವಂತನಿಗೆ ಕೈ ಮುಗಿಯುತ್ತಾರೆ.

ಅವಭೃತಕ್ಕಾಗಿ ಪಂಚಲಿಂಗೇಶ್ವರನು ಸಾಗುವ ದೃಶ್ಯದ ವಿಡಿಯೋ ಹಾಗೂ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸಮೀಪದ ನೆತ್ರಕೆರೆಯ ಎರಡು ಕಟ್ಟೆಗಳಲ್ಲಿ ನಡೆದ ಪಂಚಲಿಂಗನ ಪೂಜೆಯ ಚಿತ್ರ, ವಿಡಿಯೋಗಳು ಮೇಲಿವೆ. (ಚಿತ್ರ, ವಿಡಿಯೋ ಕೃಪೆ: ಸದಾಶಿವ ಬನ, ವಿಟ್ಲ ಸುದ್ದಿಗಳು ಗ್ರೂಪ್‌, ನೆತ್ರಕೆರೆ ಮಠ ಗ್ರೂಪ್)

ಅವಭೃತದ ಮರುದಿನ ಧ್ವಜಾವರತಣದೊಂದಿಗೆ ವಿಟ್ಲಾಯನದ ಸಡಗರ ಕೊನೆಗೊಳ್ಳುತ್ತದೆ.

PARYAYA: ಪಂಚಲಿಂಗೇಶ್ವರನ ಅವಭೃತ:   ಪಂಚಲಿಂಗೇಶ್ವರನ ಅವಭೃತ ಅ ವಭೃತ (ದೇವನಾಗರಿಯಲ್ಲಿ ʼ ಅವಬೃಥ ʼ ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರ...

Thursday, January 22, 2026

PARYAYA: ವಿಟ್ಲ ತೇರಿನ ಸುಂದರ ಕ್ಷಣ!

 ವಿಟ್ಲ ತೇರಿನ ಸುಂದರ ಕ್ಷಣ!

ವಿಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು.

ವಿಟ್ಲ ತೇರಿನ ಸುಂದರ ಕ್ಷಣದ ವಿಡಿಯೋ ಇಲ್ಲಿದೆ 👇👇.


ಇದನ್ನೂ ನೋಡಿ:

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

PARYAYA: ವಿಟ್ಲ ತೇರಿನ ಸುಂದರ ಕ್ಷಣ!:  ವಿಟ್ಲ ತೇರಿನ ಸುಂದರ ಕ್ಷಣ! ವಿ ಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು. ವಿಟ್ಲ ತೇರಿನ ಸುಂದರ ಕ್ಷಣದ ವಿಡಿ...

Wednesday, January 14, 2026

PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

 ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

ವಿಟ್ಲದ ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯು ಸಡಗರದೊಂದಿಗೆ ೨೦೨೬ ಜನವರಿ ೧೪ರ ಬುಧವಾರ ಮಕರ ಸಂಕ್ರಾಂತಿಯ ಶುಭದಿನ ಆರಂಭವಾಯಿತು. ವಿಟ್ಲ ಪಂಚಲಿಂಗೇಶ್ವರ ಜಾತ್ರೆಯು ಆಸುಪಾಸಿನಲ್ಲಿ ʼವಿಟ್ಲಾಯನʼ ಎಂದೇ ಖ್ಯಾತಿ ಪಡೆದಿದೆ.

ಧ್ವಜಾರೋಹಣದೊಂದಿಗೆ ಆರಂಭವಾದ ಜಾತ್ರಾ ಸಡಗರವು ಜನವರಿ ೨೧ರವರೆಗೆ ಮುಂದುವರಿಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳೊಂದಿಗೆ ಭಕ್ತರನ್ನು ಮುದಗೊಳಿಸಲಿವೆ.

ಜಾತ್ರೋತ್ಸವ ಸಡಗರದ ವಿವಿಧ ಸಂದರ್ಭದ ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ. (ಚಿತ್ರ, ವಿಡಿಯೋ ಕೃಪೆ: ವಿಟ್ಲ ಸುದ್ದಿಗಳು ವಾಟ್ಸಪ್‌ ಗ್ರೂಪ್)




 PARYAYA: ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ:   ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ ವಿ ಟ್ಲದ ಸಹಸ್ರಾರು ವರ್ಷಗಳ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯು ಸಡಗರದೊಂದಿಗ...