Showing posts with label ಶ್ರೀ ಬಾಲಾಜಿ ಕೃಪಾ. Show all posts
Showing posts with label ಶ್ರೀ ಬಾಲಾಜಿ ಕೃಪಾ. Show all posts

Thursday, September 24, 2026

PARYAYA: ಮುದ ನೀಡಿದ ಭರತನಾಟ್ಯ

ಮುದ ನೀಡಿದ ಭರತನಾಟ್ಯ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮೂರು ದಿನಗಳ ಗಣೇಶೋತ್ಸವ ಸಂದರ್ಭದಲ್ಲಿ ವಿದುಷಿ ಸುಮಾ ಶ್ರೀಧರ್‌ ನೇತೃತ್ವದ ನೂಪುರ ಕಲಾ ನಿಕೇತನ ತಂಡದ ಬಾಲ ಕಲಾವಿದೆಯರು ತಮ್ಮ ಭರತನಾಟ್ಯದಿಂದ ಗಮನ ಸೆಳೆದರು.

ಈ ಸಂದರ್ಭದಲ್ಲಿ ಬಾಲಕಿ ಆದ್ಯ ಕಶ್ಯಪ್‌ ತಾನು ಕಲಿತಿದ್ದ ಯಕ್ಷಗಾನದ ಹೆಜ್ಜೆಯನ್ನೂ ಅಳವಡಿಸಿಕೊಂಡದ್ದು ಪ್ರೇಕ್ಷಕರ ಮನ ಗೆದ್ದಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಮುದ ನೀಡಿದ ಭರತನಾಟ್ಯ: ಮುದ ನೀಡಿದ ಭರತನಾಟ್ಯ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನ...

Tuesday, September 22, 2026

PARYAYA: ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ

 ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಸೆಪ್ಟೆಂಬರ್‌ ೧೮, ೧೯ ಮತ್ತು ೨೦ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ.

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ಬಡಾವಣೆಯ ೨೬ನೇ ಹಾಗೂ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಮೂರನೇ ವರ್ಷದ ಗಣೇಶೋತ್ಸವ ಸಡಗರ.

ವಿದುಷಿ ಸುಮಾ ಶ್ರೀಧರ್‌ ನೇತೃತ್ವದ ನೂಪುರ ಕಲಾನಿಕೇತನ ತಂಡದ ೪೫ ಮಂದಿ ಬಾಲ ಕಲಾವಿದೆಯರು ಅತ್ಯಾಕರ್ಷಕ ನೃತ್ಯಗಳನ್ನು ನೀಡಿ ಭಾರತದ ಸಾಂಸ್ಕೃತಿ ವೈಭವವನ್ನು ಉಣಬಡಿಸಿದರು.

ಬಡಾವಣೆಯ ದೇವಸ್ಥಾನದಲ್ಲೇ ಕಳೆದ ಒಂದು ವರ್ಷದಿಂದ ಯಕ್ಷಗಾನ ಅಭ್ಯಾಸ ನಿರತರಾಗಿದ್ದ ಮಕ್ಕಳು ಮತ್ತು ಅಮ್ಮಂದಿರು ʼಲವ ಕುಶ ಕಾಳಗʼ ಯಕ್ಷಗಾನವನ್ನು ಪ್ರದರ್ಶಿಸಿ ಎಲ್ಲರ ಮನ ಗೆದ್ದರು. ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭ ಬೆಂಗಳೂರುʼ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ಹಿಮ್ಮೆಳದಲ್ಲಿ ಭಾಗವತರಾಗಿ ಉಮೇಶ್‌ ರಾಜ್‌ ಮಂದಾರ್ತಿ, ಮದ್ದಳೆ ಮತ್ತು ಚೆಂಡೆವಾದನದಲ್ಲಿ ಕ್ರಮವಾಗಿ ವೆಂಕಟೇಶ ಪ್ರಭು ಮತ್ತು ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಮನರಂಜಿಸಿದರು. ಪಾತ್ರಧಾರಿಗಳಾಗಿ ಪುಟ್ಟ ಮಕ್ಕಳಾದ ಆದ್ರಿತಾ ರೈ, ಬ್ರಿತಿ ಮತ್ತು ಕನೀರಾ ಅವರ ಬಾಲಗೋಪಾಲ ಪ್ರೇಕ್ಷಕರೆಲ್ಲದ ಮನ ಗೆದ್ದಿತು. ʼಲವಕುಶ ಕಾಳಗʼದಲ್ಲಿ ಶತ್ರುಘ್ನನಾಗಿ ಆದ್ಯಭಟ್‌, ಲವನಾಗಿ ಆಧ್ಯ ಆದ್ಯ ಶ್ರೀವಲ್ಲಿ, ಕುಶನಾಗಿ ಆದ್ಯ ಕಶ್ಯಪ್‌, ಶ್ರೀರಾಮನಾಗಿ ಡಾ. ಉಮಾದೇವಿ ಎನ್‌, ಲಕ್ಷ್ಮಿನಿಧಿಯಾಗಿ ಕಾರ್ತಿಕ್‌, ಸೀತೆಯಾಗಿ ಅರ್ಚನಾ ಬಂಗೇರ, ವಾಲ್ಮೀಕಿಯಾಗಿ ಪ್ರಣೀತಾ ರೈ, ದಮನನಾಗಿ ಶಿವಾಂಶ್‌ ವಿ ಕೆ, ಪುಷ್ಕಳನಾಗಿ ಅಭ್ಯುದಯ ಪೂಜಾ ಯಾವುದೇ ವೃತ್ತಿ ಕಲಾವಿದರಿಗೆ ಕಡಿಮೆ ಇಲ್ಲದಂತೆ ಪ್ರದರ್ಶನ ನೀಡಿ ಮನರಂಜಿಸಿದರು. ಪ್ರಸನ್ನ ಮಯ್ಯ, ವರುಣ್‌ ತೀರ್ಥಹಳ್ಳಿ, ಉದಯ ಮಂದಾರ್ತಿ ಅವರ ಮೇಕಪ್‌ ಯಕ್ಷಗಾನ ಕಲಾವಿದರ ಸೊಬಗನ್ನು ಹೆಚ್ಚಿಸಿತು.

ಮೂರನೇ ದಿನ ಬೆಂಗಳೂರಿನ ಬಾಣಸವಾಡಿಯ ಶ್ರೀ ಧರ್ಮಶಾಸ್ತಾ ವಾದ್ಯ ಕಲಾ ಕೇಂದ್ರದ ಆನಿಲ್‌ ಕುಮಾರ್‌ ಎಎಸ್‌, ಶರತ್‌ ಗೋಪಾಲ್‌, ನಿಹಾಲ್‌ ಮಣಿಕಂದನ್‌, ಪ್ರಶಾಂತ ರಾಘವನ್‌, ಸಿಜಿಮೋನ್‌ ಎಲ್‌, ಜಯಕುಮಾರ್‌ ಆರ್‌, ಅಖಿಲ್‌ ಆರ್.‌ ಆಚಾರ್ಯ, ಆದಿತ್ಯನ್‌, ಪ್ರದೀಪ ಕುಮಾರ್‌, ರತುಲ್‌, ವೈಶಾಖ್‌ ಅವರನ್ನು ಒಳಗೊಂಡ ತಂಡ ಒಂದು ಗಂಟೆಗೂ ಅಧಿಕ ಅವಧಿಯ ನಿರಂತರ ಕೇರಳ ಚೆಂಡೆವಾದನದ ಮೂಲಕ ಭಕ್ತಾದಿಗಳ ರೋಮ ನಿಮಿರಿಸಿದ್ದಲ್ಲದೆ, ಮಹಾಮಂಗಳಾರತಿ, ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ನಡೆದ ಗಣೇಶ ಶೋಭಾ ಯಾತ್ರೆಯಲ್ಲಿ (ಪುರ ಮೆರವಣಿಗೆ) ಪಾಲ್ಗೊಂಡರು ಭಕ್ತರು ತನ್ಮಯತೆಯಿಂದ ನಲಿದಾಡುವಂತೆ ಮಾಡಿದರು.

ಎಂಸಿಎಚ್‌ಎಸ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿಯ ಸದಸ್ಯೆಯರು ತಮ್ಮ ಭಜನೆಯ ಮೂಲಕ ಗಮನ ಸೆಳೆದರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಎರಡು ದಿನಗಳ ಕಾಲ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಿಜೆಪಿ ಧುರೀಣ ತಮ್ಮೇಶ್‌ ಗೌಡ ಮತ್ತು ಕಾಂಗ್ರೆಸ್‌ ಯುವ ಮುಖಂಡ ಶಿವಕುಮಾರ್‌ ಬಹುಮಾನಗಳನ್ನು ವಿತರಿಸಿದರು.

ಪುರಮೆರವಣಿಗೆಯ ಬಳಿಕ ರಾಚೇನ ಹಳ್ಳಿ ಕೆರೆಯಲ್ಲಿ ಗಣಪ ವಿಸರ್ಜನೆ ನಡೆಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಚಿತ್ರಗಳ ಸಮೀಪ ನೋಟ ಹಾಗೂ ವಿಡಿಯೋ ನೋಡಲು ಚಿತ್ರಗಳನ್ನು ಕ್ಲಿಕ್‌ ಮಾಡಿರಿ.





ಈ ಸುದ್ದಿಯನ್ನೂ ಓದಿರಿ:
PARYAYA: ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ:   ಭರತನಾಟ್ಯ, ಲವಕುಶ ಕಾಳಗ, ಕೇರಳ ಚೆಂಡೆ, ಭಜನೆ ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಸೆಪ್ಟೆಂಬರ್‌ ೧೮, ೧೯ ಮತ್ತು ೨೦ರಂದು ಸಾ...

Monday, January 26, 2026

PARYAYA: ಗಣರಾಜ್ಯೋತ್ಸವ ಆಚರಣೆ

 ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು ರಾಮೃಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೬ ಜನವರಿ ೨೬ರ ಸೋಮವಾರ ೭೭ನೇ ಗಣರಾಜ್ಯೋತ್ಸವವನ್ನು ಸಂಭ್ರಮೋತ್ಸಾಹಗಳೊಂದಿಗೆ ಆಚರಿಸಲಾಯಿತು.

ಕರ್ನಾಟಕ ಸರ್ಕಾರದ ಉನ್ನಡ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಹಾಗೂ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಕಂಪ್ಯೂಟ್ರರ್‌ ವಿಜ್ಞಾನ ಪ್ರಾಧ್ಯಾಪಕ ಡಾ. ಭಾಗ್ಯವಾನ್‌ ಮುದಿಗೌಡ್ರ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತ್ರಿವರ್ಣ ಧ್ವಜವನ್ನು ಅರಳಿಸಿದರು.

ಬಡಾವಣೆಯ ನಿವಾಸಿಗಳು ಸಂಭ್ರಮದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಡಗರದ ದೃಶ್ಯ

PARYAYA: ಗಣರಾಜ್ಯೋತ್ಸವ ಆಚರಣೆ:   ಗಣರಾಜ್ಯೋತ್ಸವ ಆಚರಣೆ ಬೆಂ ಗಳೂರು ರಾಮೃಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂ...