Showing posts with label ವರ್ಟಿಕಲ್‌ ಸೇತುವೆ. Show all posts
Showing posts with label ವರ್ಟಿಕಲ್‌ ಸೇತುವೆ. Show all posts

Sunday, April 6, 2025

PARYAYA: ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ

 ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ

ಬೆಂಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸುಮಾರು ೫೦೦ ಕೋಟಿ ರೂಪಾಯಿಗಳ ವೆಚ್ಚದ ತಮಿಳುನಾಡಿನ ರಾಮೇಶ್ವರಂ ಬಳಿಯ ನೂತನ  ಪಂಬನ್‌ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ೨೦೨೬ರ ರಾಮನವಮಿಯ ದಿನವಾಗಿರುವ ಈದಿನ (೦೬ ಏಪ್ರಿಲ್)‌ ಲೋಕಾರ್ಪಣೆ ಮಾಡಿದರು.

ಶ್ರೀರಾಮನು ಲಂಕೆಯಲ್ಲಿ ರಾವಣನನ್ನು ವಧಿಸಿ ಅಯೋಧ್ಯೆಗೆ ವಾಪಸಾಗುವಾಗ ರಾಮೇಶ್ವರಂಗೆ ಭೇಟಿ ನೀಡಿ ಜ್ಯೋತಿರ್ಲಿಂಗ ದರ್ಶನ  ಪಡೆದಿದ್ದನೆಂಬ ಪ್ರತೀತಿ ಇದೆ.

ಕಾಕತಾಳೀಯವಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಶ್ರೀಲಂಕಾ ಪ್ರವಾಸದಿಂದ ವಾಪಸಾಗುವಾಗ ರಾಮೇಶ್ವರದಲ್ಲಿ  ದೇವಾಲಯಕ್ಕೆ ತೆರಳಿ ದೇವರ ದರ್ಶನ ಮಾಡಿ ನಂತರ ನೂತನ ಪಂಬನ್‌ ಸೇತುವೆಯನ್ನು ಲೋಕಾರ್ಪಣೆ ಮಾಡಿದರು. ಲೋಕಾರ್ಪಣೆಯ ವಿಡಿಯೋ ಇಲ್ಲಿದೆ ನೋಡಿರಿ:


ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿರಿ. ಅಥವಾ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.

ಇವುಗಳನ್ನೂ ನೋಡಿರಿ/ ಓದಿರಿ:

ಸಮುದ್ರದ ಮೇಲೊಂದು ಸೇತುವೆ ಕೌತುಕ!

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

https://youtu.be/MIP4rO3Gejg


PARYAYA: ಸಮುದ್ರದ ಮೇಲಿನ “ಲಿಫ್ಟ್‌ʼ ಸೇತುವೆ ಲೋಕಾರ್ಪಣೆ:   ಸಮುದ್ರದ ಮೇಲಿನ “ಲಿಫ್ಟ್‌ ʼ ಸೇತುವೆ ಲೋಕಾರ್ಪಣೆ ಬೆಂ ಗಳೂರು: ಸಮುದ್ರದ ಮೇಲೆ ನಿರ್ಮಿಸಿರುವ ದೇಶದ ಮೊತ್ತ ಮೊದಲ ಲಿಫ್ಟ್‌ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರ...

Saturday, April 5, 2025

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!

 ಸಮುದ್ರದ ಮೇಲೊಂದು ಸೇತುವೆ ಕೌತುಕ!

ದೇಶದಲ್ಲೇ ಮೊದಲು ಇಂತಹ ಸೇತುವೆ

ರಾಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರಿಯ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೧೯೧೪ರಲ್ಲಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸುಮಾರು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಅತ್ಯಾಧುನಿಕ ಎಂಜಿನಿಯರಿಂಗ್‌ ಪದ್ಧತಿಯನ್ನು ಒಳಗೊಂಡಿದೆ. ಹಡಗುಗಳ ಸಂಚಾರಕ್ಕೆ ಅನುಕೂಲವಾಗಲು ಇಲ್ಲಿ ನಿರ್ಮಿಸಲಾಗಿರುವ ʼವರ್ಟಿಕಲ್‌ ಲಿಫ್ಟ್‌ʼ (ಲಂಬ ಎತ್ತು ಸೇತುವೆ) ಸಮುದ್ರದ ಮೇಲಿನ ಕೌತುಕ ಎಂದರೆ ತಪ್ಪಿಲ್ಲ..

ಹಳೆಯ ಸೇತುವೆ ಪಕ್ಕದಲ್ಲೇ ಹೊಸದಾಗಿ ನಿರ್ಮಿಸಲಾಗಿರುವ ಈ ನೂತನ ಸೇತುವೆ ಸುಮಾರು ೨ ಕಿಲೋ ಮೀಟರಿನಷ್ಟು ಉದ್ದವಿದೆ. ಈ ಸೇತುವೆಯಲ್ಲಿ ಸುರಕ್ಷತೆಗಾಗಿ, ವೇಗ ನಿಯಂತ್ರಣಕ್ಕಾಗಿ ಆಧುನಿಕ ಎಂಜಿನಿಯರಿಂಗ್‌ ವಿಧಾನವನ್ನು ಬಳಸಿ ಪ್ರಯಾಣಿಕರ ಹಾಗೂ ರೈಲಿನ ಸುರಕ್ಷತೆಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರ್‌ ವಿ ಎನ್‌ ಎಲ್‌ನ ಹಿರಿಯ ಅಧಿಕಾರಿ ಆರ್.‌ ಶ್ರೀನಿವಾಸನ್‌ ಹೇಳುತ್ತಾರೆ.

 ಈ ವಿಡಿಯೋ ನೋಡಿ. ಅಂದಾಜು ೫೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ರೈಲು ಸೇತುವೆಯ ಮೇಲೆ ಹೇಗೆ ಸರಾಗವಾಗಿ ಸಾಗಿ ಹೋಗುತ್ತದೆ.

ಆದರೆ ಈ ಸೇತುವೆಯ ಕೆಳಭಾಗದಲ್ಲಿ ಹಡಗು ಬಂದರೆ?

ಅಂತಹ ಹಡಗುಗಳಿಗೆ ಸಾಗಿ ಹೋಗಲು ಇಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕೆಳಗೆ ಹಡಗು ಬಂದಾಗ ಸೇತುವೆಯ ಈ ಲಿಫ್ಟ್‌ ಮಾದರಿಯ ಭಾಗವನ್ನು ನಿಧಾನವಾಗಿ ಲಂಬಾಕಾರವಾಗಿ ಅಂದರೆ ನೇರವಾಗಿ ಮೇಲಕ್ಕೆ ಎತ್ತಲಾಗುತ್ತದೆ.

ಹಡಗುಗಳಿಗೆ ಹೋಗಲು ವ್ಯವಸ್ಥೆ ಮಾಡುವ ಈ ಕೆಲಸಕ್ಕೆ ಹಿಂದೆ ೪೫ ನಿಮಿಷ ಬೇಕಾಗಿದ್ದರೆ, ಈಗ ಕೇವಲ ೫ ನಿಮಿಷದಲ್ಲಿ ಈ ಕೆಲಸ ಆಗುತ್ತದೆ.

ಲಿಫ್ಟ್‌ ಮಾದರಿಯ ಸೇತುವೆಯ ಭಾಗವೇ ಈ ಪಂಬನ್‌ ನೂತನ ಸೇತುವೆಯ ವಿಶೇಷ. ಲಂಬಾಕಾರವಾಗಿ ಹೀಗೆ ಸೇತುವೆಯ ಭಾಗವನ್ನೇ ಮೇಲಕ್ಕೆ ಎತ್ತುವ ತಂತ್ರಜ್ಞಾನದ ಬಳಕೆಯಾಗಿರುವ ಇಂತಹ ಸೇತುವೆ ಇಡೀ ದೇಶದಲ್ಲಿ ಬೇರೆ ಇಲ್ಲ. ದೇಶಕ್ಕೆ ಇದೇ ಮೊದಲನೆಯದು. ಲಿಫ್ಟ್‌ ಮಾದರಿಯ ಈ ಭಾಗದ ಉದ್ದ ೭೨ ಮೀಟರಿನಷ್ಟಿದೆ. ಈ ಲಿಫ್ಟ್‌ ೨೨ ಮೀಟರಿನಷ್ಟು ಎತ್ತರಕ್ಕೆ ಏರಬಲ್ಲುದು.

 ಈ ವಿಶೇಷ ವ್ಯವಸ್ಥೆಯಿಂದ ರೈಲಿನ ಸರಾಗ ಸಂಚಾರಕ್ಕೆ ವ್ಯವಸ್ಥೆ ಆಗಿದೆ. ಜೊತೆಗೆ ಕೆಳಗೆ ಸಮುದ್ರದಲ್ಲಿ ಬರುವ ಹಡಗುಗಳ ಸಂಚಾರಕ್ಕೂ ತೊಂದರೆ ಇಲ್ಲ.

ಈ ನೂತನ ಸೇತುವೆ ದೇಶದ ಅರ್ಥ ವ್ಯವಸ್ಥೆಗೆ ದೊಡ್ಡ ಲಾಭವನ್ನು ತಂದು ಕೊಡಲಿದೆ. ದೇಶದ ʼಚಾರ್‌ ಧಾಮ್ ಯಾತ್ರೆʼ ಪರಿಪೂರ್ಣವಾಗಲು ರಾಮೇಶ್ವರಂಗೆ ಯಾತ್ರಿಕರು ಭೇಟಿ ಕೊಡಲೇಬೇಕು. ಈ ಸೇತುವೆಯಿಂದಾಗಿ ಇಂತಹ ಯಾತ್ರಿಕರಿಗೆ ಅನುಕೂಲವಾಗಲಿದೆ. ಹಾಗೆಯೇ ವಿದೇಶೀ ಪ್ರವಾಸಿಗಳಿಗೂ ಅನುಕೂಲವಾಗಲಿದೆ. ರಾಮೇಶ್ವರಕ್ಕೆ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಯೂಟ್ಯೂಬ್‌ ವಿಡಿಯೋ ನೋಡಲು ಕೆಳಗಿನ ಚಿತ್ರ  ಅಥವಾ ಲಿಂಕ್‌ ಕ್ಲಿಕ್‌ ಮಾಡಿರಿ:

Video link:

https://youtu.be/MIP4rO3Gejg

ಇವುಗಳನ್ನೂ ನೋಡಿರಿ/ ಓದಿರಿ:

ಇದು ಮೇಲಕ್ಕೆ ಧುಮುಕುವ ಜಲಪಾತ..!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಝಾನ್ಸಿಯಲ್ಲಿ ಭೂತಚೇಷ್ಟೆ..! ಪೊಲೀಸರಿಗೆ ಕಂಡದ್ದೇನು?

ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

PARYAYA: ಸಮುದ್ರದ ಮೇಲೊಂದು ಸೇತುವೆ ಕೌತುಕ!:   ಸಮುದ್ರದ ಮೇಲೊಂದು ಸೇತುವೆ ಕೌತುಕ! ದೇಶದಲ್ಲೇ ಮೊದಲು ಇಂತಹ ಸೇತುವೆ ರಾ ಮೇಶ್ವರವನ್ನು ಸಂಪರ್ಕಿಸಲು ನೂತನವಾಗಿ ನಿರ್ಮಿಸಲಾಗಿರುವ ಪಂಬನ್‌ ಸೇತುವೆ ದೇಶದಲ್ಲೇ ಈ ಮಾದರ...