ನಾನು ಮೆಚ್ಚಿದ ವಾಟ್ಸಪ್

Tuesday, September 26, 2023

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

ಬೆಂಗಳೂರು: ಚೆಂಡೆ ಧ್ವನಿಯ ಅನುರಣನ, ಬಾನಿನಲ್ಲಿ ಪಟಾಕಿ ಚಿತ್ತಾರದ ಸಂಭ್ರಮದೊಂದಿಗೆ ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೨ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ೨೦೨೩ ಸೆಪ್ಟೆಂಬರ್‌ ೨೪ರ ಭಾನುವಾರ ಸಡಗರದೊಂದಿಗೆ ನಡೆಯಿತು.

ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ, ಬಡಾವಣೆಯ ನಿರ್ಮಾಪಕ ಶ್ರೀ ಎಸ್.‌ ಎನ್.‌ ಕೃಷ್ಣಯ್ಯ ಶೆಟ್ಟಿ, ರಾಜಕೀಯ ನಾಯಕರಾದ ಜಯಗೋಪಾಲ ಗೌಡ ಮತ್ತು ಶಿವಕುಮಾರ್‌ ಅವರು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.

ಸೆಪ್ಟೆಂಬರ್‌ ೨೩ರ ಶನಿವಾರ ಮಧ್ಯಾಹ್ನ ವರುಣ ಸಿಂಚನದ ಶುಭಾಶೀರ್ವಾದದೊಂದಿಗೆ ಮಕ್ಕಳು ಮತ್ತು ಮಹಿಳೆಯರ ಆಟೋಟ ಸ್ಪರ್ಧೆಗಳು ನಡೆದವು. ಇದೇ ವೇಳೆಯಲ್ಲಿ ಬಾಲಕ ಬಾಲಕಿಯರು ತಮ್ಮಿಷ್ಟದ ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸುತ್ತಾ ಸಂಭ್ರಮಿಸಿದರು.


ಅದೇ ದಿನ ರಾತ್ರಿ ವರುಣನ ಅಮೃತ ಧಾರೆಯೊಂದಿಗೆ ಶುದ್ಧಗೊಂಡ ಬಡಾವಣೆಯ ಉದ್ಯಾನವನ ವಿದ್ಯುದ್ದೀಪಗಳ ಅಲಂಕಾರದೊಂದಿಗೆ ಗಣಪನ ಆಹ್ವಾನಕ್ಕೆ ಸಜ್ಜಾಯಿತು. ಬೆಳಗ್ಗೆ ಬಡಾವಣೆಯ ನಿವಾಸಿಗಳು ಉತ್ಸಾಹದ ಶ್ರಮದಾನದೊಂದಿಗೆ ಉದ್ಯಾನದಲ್ಲಿ ತುಂಬಿದ್ದ ನೀರನ್ನು ತೆರವುಗೊಳಿಸಿ ಕಸ ತೆಗೆದು ಶುದ್ಧಗೊಳಿಸಿದರು. ಮಹಿಳೆಯರು ರಂಗೋಲಿ, ಪುಷ್ಪಗಳಿಂದ ಅಲಂಕಾರ ಮಾಡಿ ಹಾಕಿ ವಿಘ್ನ ವಿನಾಯಕನಿಗೆ ಸ್ವಾಗತ ಕೋರಿದರು.

ಬಡಾವಣೆಯಲ್ಲಿ ಗಣಪನ ದೇಗುಲ ನಿರ್ಮಾಣ, ಬಡಾವಣೆಯ ನೀರಿನ ಸಮಸ್ಯೆಯ ನಿವಾರಣೆ, ಎಲ್ಲ ನಿವಾಸಿಗಳ ಆಯುರಾರೋಗ್ಯ, ಸುಖ ಸಂಪತ್ತಿನ ವೃದ್ಧಿಯಾಗಬೇಕೆಂಬ ಸಂಕಲ್ಪದೊಂದಿಗೆ ಗಣಹೋಮ, ಗಣಪತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು.


ಗಣಪನ ಪ್ರಾಣ ಪ್ರತಿಷ್ಠೆಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಬಡಾವಣೆಯ ನಿರ್ಮಾಪಕ ಶ್ರೀ ಕೃಷ್ಣಯ್ಯ ಶೆಟ್ಟಿ ಅವರು ಗಣಪನಿಗೆ ಲಡ್ಡು ಪ್ರಸಾದವನ್ನು ಸಮರ್ಪಿಸಿದರು.

ಗಣಹೋಮದ ಪೂರ್ಣಾಹುತಿಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಸಚಿವ ಶ್ರೀ ಕೃಷ್ಣ ಬೈರೇಗೌಡ, ಶಿವಕುಮಾರ್‌, ಜಯಗೋಪಾಲ ಗೌಡ ಅವರು ಹೋಮದ ಪೂರ್ಣಾಹುತಿ, ಮಹಾಪೂಜೆಯಲ್ಲಿ ಪಾಲ್ಗೊಂಡರು. ಕೇರಳದ ಚೆಂಡೆಯ ನಿನಾದ ಗಣಪನ ಮಹಾಪೂಜೆಗೆ ರಂಗೇರಿಸಿತು.

ಮಹಾಪೂಜೆ, ಪ್ರಸಾದ ವಿತರಣೆಯ ಜೊತೆಗೇ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ನಡೆದ ಕೇರಳ ಚೆಂಡೆಯ ಅನುರಣಕ್ಕೆ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ಬಡಾವಣೆಯ ನಿವಾಸಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಡಾವಣೆಯ ನ್ಯಾಯವಾದಿ ಶ್ರೀ ಮುನಿರಾಜು ಅವರು ಭಕ್ತರಿಗೆ ಶುಚಿ-ರುಚಿಯಾದ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

ಮಧ್ಯಾಹ್ನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಗಣಪತಿಯನ್ನು ಅಲಂಕರಿಸಲು ಬಳಸಲಾದ ಶಾಲಿನ ಹರಾಜು ನಡೆಯಿತು.



ಕರಾವಳಿ ಚೆಂಡೆಯ ಅನುರಣನ, ಬಾನಿನಲ್ಲಿ ವೈವಿದ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ಸಂಭ್ರಮದೊಂದಿಗೆ ಗಣಪತಿಯ ಮಹಾಮಂಗಳಾರತಿ, ಶೋಭಾಯಾತ್ರೆ ನಡೆಯಿತು.

ರಾಚೇನಹಳ್ಳಿ ಕೆರೆಯಲ್ಲಿ ಗಣಪನ ವಿಸರ್ಜನೆ ನಡೆಯಿತು.

ಜಾತಿ, ಮತ, ರಾಜಕೀಯ ಭಿನ್ನಾಭಿಪ್ರಾಯಗಳ ಭೇದವಿಲ್ಲದೆ ಬಡಾವಣೆಯ ಎಲ್ಲ ನಿವಾಸಿಗಳು ಪಾಲ್ಗೊಂಡದ್ದು,


ಶೋಭಾಯಾತ್ರೆಯಲ್ಲೂ ನಲಿದು ನರ್ತಿಸಿದ್ದು, ಟೆಂಟಿಗೆ ಬಡಾವಣೆಯ ನಿವಾಸಿ ಸಿರಾಜ್, ಕೇರಳ ಚೆಂಡೆಗೆ ಬಡಾವಣೆಯ ಮಲಯಾಳಂ ಬಂಧುಗಳು, ವಿವಿಧ ಸ್ಪರ್ಧೆಗಳ ಬಹುಮಾನ, ಪಟಾಕಿ ವೆಚ್ಚವನ್ನು ಶಿವಕುಮಾರ್‌, ಗಣಪನ ವಿಗ್ರಹವನ್ನು ಗಣೇಶ ಮತ್ತು ಸಂದೀಪ ಪ್ರಾಯೋಜಿಸಿದ್ದುದು ವಿಶೇಷವಾಗಿತ್ತು.

 

 


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ:   ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ ಬೆಂಗಳೂರು: ಚೆಂಡೆ ಧ್ವನಿಯ ಅನುರಣನ, ಬಾನಿನಲ್ಲಿ ಪಟಾಕಿ ಚಿತ್ತಾರದ ಸಂಭ್ರಮದೊಂದಿಗೆ ಬೆಂಗಳೂರಿನ ರಾಮಕೃಷ್...

Monday, September 18, 2023

PARYAYA: ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

 ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂಗಳೂರಿನಲ್ಲಿ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿಯವರೆಗೆ ಸಂಸ್ಥೆಯು ಬೆಂಗಳೂರಿನಲ್ಲಿ ಶ್ರೀನಗರ ಸಮೀಪದ ಅಪೆಕ್ಸ್‌ ಬ್ಯಾಂಕ್‌ ಸಮೀಪ ಕಾರ್ಯ ನಿರ್ವಹಿಸುತ್ತಿತ್ತು.

ಬೆಂಗಳೂರಿನ ಗಿರಿನಗರಕ್ಕೆ ಸಮೀಪದ ಮುನೇಶ್ವರ ಬ್ಲಾಕಿನ ಶನೈಶ್ಚರ ದೇವಸ್ಥಾನದ ಎದುರಿನಲ್ಲಿರುವ ಸ್ವಂತ ಕಟ್ಟಡಕ್ಕೆ ಉಕ್ಕಿನಡ್ಕಾಸ್‌ ಸ್ಥಳಾಂತರ ಸಮಾರಂಭ  2023 ಸೆಪ್ಟೆಂಬರ್‌ 17ರ ಭಾನುವಾರ ಸರಳವಾಗಿ ನಡೆಯಿತು. ಚಿತ್ರ ನಟಿ ಸೋನುಗೌಡ ಅವರು ಸಮಾರಂಭವನ್ನು ಉದ್ಘಾಟಿಸಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಶ್ರೀಧರ ಸಾಗರ್‌ ಜಿ,  ಮಂಗಳೂರಿನ ಖ್ಯಾತ ಜಾಹೀರಾತು ಸಂಸ್ಥೆ ʼಕಲ್ಕೂರ ಆರ್ಟ್ಸ್‌ʼ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿ ಶಾಂತರಾಜ್‌ ಐತಾಳ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಚರ್ಮಕ್ಕೆ ಸಂಬಂಧಿಸಿದಂತೆ ವಿಶೇಷ ಆಯುರ್ವೇದ ಉಪಚಾರ ನೀಡುವಂತಹ ʼಕಾಸ್ಮೆಟಿಕ್‌ ಚಿಕಿತ್ಸಾʼ ವಿಭಾಗವನ್ನೂ ಸೋನುಗೌಡ ಉದ್ಘಾಟಿಸಿದರು.  ಸಂಸ್ಥೆಯ ವೈದ್ಯೆ ಡಾ. ನ್ಯಾನ್ಸಿ ಆಯುರ್ವೇದ ಕಾಸ್ಮೆಟಿಕ್ಸ್‌ ಚಿಕಿತ್ಸಾ ಸೌಲಭ್ಯದ ಬಗ್ಗೆ ವಿವರಿಸಿದರು.


ಸಂಸ್ಥೆಯ ಮುಖ್ಯಸ್ಥ ಡಾ. ಜಯಗೋವಿಂದ ಅವರು ಸ್ವಾಗತ ಕೋರಿ, 1950ರಲ್ಲಿ ಸ್ಥಾಪನೆಯಾದ ಉಕ್ಕಿನಡ್ಕಾಸ್‌ ಸಂಸ್ಥೆ  ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು.  ಸಂಸ್ಥೆಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಡಾ. ಸಪ್ನಾ ಜಯಗೋವಿಂದ ವಂದನಾರ್ಪಣೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಸ್ವಂತ ಕಟ್ಟಡಕ್ಕೆ ಕಾಲಿಡಲು ನೆರವಾದ ಎಲ್ಲರಿಗೂ ಈ ಸಂದರ್ಭದಲ್ಲಿ ಕಿರುಕಾಣಿಕೆ ನೀಡಿ ಸತ್ಕರಿಸಲಾಯಿತು. 
ಉಕ್ಕಿನಡ್ಕಾಸ್‌ ಆಯುರ್ವೇದ ಫಾರ್ಮೆಸಿ ವಿಭಾಗದ ಚಂದನ್‌ ಕಾರ್ಯಕ್ರಮ ನಿರ್ವಹಿಸಿದರು. 

ಇದನ್ನೂ ನೋಡಿ: 

ಬೆಂಗಳೂರಿನಲ್ಲಿ ಹೊಸ ಜಾಗಕ್ಕೆ ಉಕ್ಕಿನಡ್ಕಾಸ್‌ ಆಯುರ್ವೇದ

PARYAYA: ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ:  ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ ಬೆಂಗಳೂರು : ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂ...

Saturday, September 9, 2023

PARYAYA: ಗಜಪಡೆಯ ನೀರಾಟ…

 ಗಜಪಡೆಯ ನೀರಾಟ…

ಮೈಸೂರಿಗೆ ದಸರಾ ಸಲುವಾಗಿ ಆಗಮಿಸಿದ ಗಜಪಡೆ ನೀರು ಕಂಡಾಗ ಮಾಡಿದ್ದೇನು?
ಇದು ʼಸುವರ್ಣ ನೋಟʼ

ಯಕ್ಷ ಗಾಯನ: ಪಟ್ಲ ಸತೀಶ ಶೆಟ್ಟಿ

ಚಿತ್ರಗಳು: ವಿಶ್ವನಾಥ ಸುವರ್ಣ

ವಿಡಿಯೋ: ನೆತ್ರಕೆರೆ ಉದಯಶಂಕರ

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿ:


PARYAYA: ಗಜಪಡೆಯ ನೀರಾಟ…:   ಗಜಪಡೆಯ ನೀರಾಟ… ಮೈಸೂರಿಗೆ ದಸರಾ ಸಲುವಾಗಿ ಆಗಮಿಸಿದ ಗಜಪಡೆ ನೀರು ಕಂಡಾಗ ಮಾಡಿದ್ದೇನು? ಇದು ʼ ಸುವರ್ಣ ನೋಟ ʼ ಯಕ್ಷ ಗಾಯನ: ಪಟ್ಲ ಸತೀಶ ಚಿತ್ರಗಳು: ವಿಶ್ವನಾಥ ಸುವರ್ಣ...

Friday, September 8, 2023

PARYAYA: ಭಾರತದಲ್ಲಿ ಜಿ 20 ಶೃಂಗ: ಸೊಬಗು ಕಣ್ತುಂಬಿಕೊಳ್ಳಿ

 ಭಾರತದಲ್ಲಿ ಜಿ 20 ಶೃಂಗ: ಸೊಬಗು ಕಣ್ತುಂಬಿಕೊಳ್ಳಿ

ಭಾರತದಲ್ಲಿ 2023 ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಮುಖರು ಆಗಮಿಸುತ್ತಿದ್ದಾರೆ.

ಶೃಂಗಸಭೆಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಅದರ ಜೊತೆಗೆ ಭಾರತದ ಸಾಧನೆಗಳನ್ನೂ ಬಿಂಬಿಸುವ ಸಕಲ ಸಿದ್ಧತೆಗಳು ದೆಹಲಿಯಲ್ಲಿ ನಡೆದಿವೆ.

ಭಾರತದ ಪ್ರಗತಿಯ ಚಿತ್ರವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು:




PARYAYA: ಭಾರತದಲ್ಲಿ ಜಿ 20 ಶೃಂಗ: ಸೊಬಗು ಕಣ್ತುಂಬಿಕೊಳ್ಳಿ:   ಭಾರತದಲ್ಲಿ ಜಿ 20 ಶೃಂಗ: ಸೊಬಗು ಕಣ್ತುಂಬಿಕೊಳ್ಳಿ ಭಾರತದಲ್ಲಿ 2023 ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ...

Tuesday, September 5, 2023

PARYAYA: ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ...

 ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ

ಬೆಂಗಳೂರು: ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿನೂತನ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವ ಕಾರ್ಯಕ್ರಮ ದೇಶದಲ್ಲೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌ ನೇತೃತ್ವದಲ್ಲಿ 2023 ಸೆಪ್ಟೆಂಬರ್‌ 4ರ ಸೋಮವಾರ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ 35 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಎನ್‌ಎಲ್‌ಟಿ ತಂತ್ರಜ್ಞಾನ ಮೂಲಕ ತರಬೇತಿಯನ್ನು ಪ್ರಾಯೋಗಿಕವಾಗಿ ಮುನ್ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಜಿಲ್ಲಾ ಪಂಚಾಯತಿ ಆವರಣದ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಶ್ರೀ ಅಬ್ದುಲ್‌ ನಜೀರ್‌ ಸಾಬ್‌ ಪೀಠ ಪಂಚಾಯತ್‌ ರಾಜ್‌ ವಿಭಾಗದ ಮಾಜಿ ಅಧ್ಯಕ್ಷ ಪ್ರೊ. ಸದಾನಂದ ಜಾನೆಕೆರೆ ಅವರೊಂದಿಗೆ ಪಾಲ್ಗೊಂಡಿದ್ದ ಸಂಪೂರ್ಣ ಸ್ವರಾಜ್ ಫ಼ೌಂಡೇಷನ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು.

ಕೇಂದ್ರ ಸರ್ಕಾರ ರಚಿಸಿರುವ ʼರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಚೌಕಟ್ಟು-2022ʼ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಅಮೆರಿಕದ ಗೂರು ಸಂಸ್ಥೆಯೊಂದಿಗೆ ಅಭಿವೃದ್ದಿ ಪಡಿಸಿರುವ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಬಳಸಿಕೊಳ್ಳಲು ಶಿಫಾರಸು ಮಾಡಿದೆ.

ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯವು ಆಗಸ್ಟ್‌ ಕೊನೆಯ ವಾರ ವರ್ಚವಲ್‌ ಸಭೆಯೊಂದನ್ನೂ ಆಯೋಜಿಸಿತ್ತು. ಅದರಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಂಪೂರ್ಣ ಸ್ವರಾಜ್‌ ಫೌಂಡೇಷನ್‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಂಡಿದ್ದವು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ 10 ತಾಲೂಕುಗಳಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಅನುಷ್ಠಾನ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಮತ್ತು ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೀಮಾತೀತ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕದ ಪ್ರತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಅರುಣ್‌ ಇತ್ತೀಚೆಗೆ ಭರವಸೆ ನೀಡಿದ್ದರು..

ಚಿತ್ರ ಕ್ಯಾಪ್ಷನ್:

ಸಂಪೂರ್ಣ ಸ್ವರಾಜ್ ಫ಼ೌಂಡೇಷನ್  ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಶಿವಮೊಗ್ಗದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಪ್ರೊ. ಸದಾನಂದ ಜಾನೆಕೆರೆ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ಶಿವಮೊಗ್ಗೆ ಆವೃತ್ತಿಯಲ್ಲಿ ಪ್ರಕಟವಾಗಿರುವ ವರದಿ ಕೆಳಗಿದೆ: ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ.


ಶಿವಮೊಗ್ಗದ ದೈನಿಕ ʼನಮ್ಮ ನಾಡುʼ ಪತ್ರಿಕೆಯಲ್ಲಿ ಬಂದ ವರದಿ. ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ:

ಇದನ್ನೂ ಓದಿ:
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

PARYAYA: ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ...:   ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ ಬೆಂಗಳೂರು : ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿನೂತನ ದಿಕ್ಸೂಚ...

Friday, September 1, 2023

PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ ಯಶಸ್ವೀ ಉಡ್ಡಯನ

 ಸೂರ್ಯನೆಡೆಗೆ ʼಆದಿತ್ಯʼಪಯಣ: ಯಶಸ್ವೀ ಉಡ್ಡಯನ


ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ 
ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಿತು.

ಬೆಳಗ್ಗೆ ೧೧.೫೦ಕ್ಕೆ ಸರಿಯಾಗಿ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮುವ ಮೂಲಕ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯ ಉಡ್ಡಯನಗೊಂಡಿತು.

ಕೆಳಗೆ ಕ್ಲಿಕ್ಕಿಸುವ ಮೂಲಕ ಸೂರ್ಯಯಾನ ಸೊಬಗು ವೀಕ್ಷಿಸಬಹುದು:


ಯಾನದ ನೇರ ಪ್ರಸಾರಕ್ಕಾಗಿ ಕೆಳಗೆ ಕ್ಲಿಕ್‌ ಮಾಡಿ:


PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ ಯಶಸ್ವೀ ಉಡ್ಡಯನ:   ಸೂರ್ಯನೆಡೆಗೆ ʼ ಆದಿತ್ಯ ʼ ಪಯಣ  ಯಶಸ್ವೀ ಉಡ್ಡಯನ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕ...

PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ

ಸೂರ್ಯನೆಡೆಗೆ ʼಆದಿತ್ಯʼಪಯಣ

 ಸೂರ್ಯನೆಡೆಗೆ ʼಆದಿತ್ಯʼಪಯಣ

ಇಲ್ಲಿಂದ ನೋಡಿ ನೇರವಾಗಿ

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂರ್ಯಶಿಕಾರಿಗೆ ಹೊರಟಿರುವ ಭಾರತದ ಇಸ್ರೋ ಇಂದು ೨೦೨೩ ಸೆಪ್ಟೆಂಬರ್‌ ೨ರ ಶನಿವಾರ ಸೂರ್ಯನ ಅಧ್ಯಯನಕ್ಕಾಗಿ ʼಆದಿತ್ಯ-ಎಲ್-‌೧ ಅಂತರಿಕ್ಷ ವೀಕ್ಷಣಾಲಯವನ್ನು ನಭಕ್ಕೆ ಹಾರಿಸಲಿದೆ.

ಬೆಳಗ್ಗೆ ೧೧ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಪಿಎಸ್‌ ಎಲ್‌ ವಿ ಸಿ -೫೭ ರಾಕೆಟ್‌ ಮೂಲಕ ಗಗನಕ್ಕೆ ಚಿಮ್ಮಲಿರುವ ʼಆದಿತ್ಯʼ ಅಂತರಿಕ್ಷ ವೀಕ್ಷಣಾಲಯದ ಉಡ್ಡಯನವನ್ನು ಈ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸುವ ಮೂಲಕ ಇಸ್ರೋ ಸೂರ್ಯಯಾನವನ್ನು ನೇರವಾಗಿ ವೀಕ್ಷಿಸಬಹುದು:

PARYAYA: ಸೂರ್ಯನೆಡೆಗೆ ʼಆದಿತ್ಯʼಪಯಣ:   ಸೂರ್ಯನೆಡೆಗೆ ʼ ಆದಿತ್ಯ ʼ ಪಯಣ ಇಲ್ಲಿಂದ ನೋಡಿ ನೇರವಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಮೊದಲ ಅಡಿ ಇರಿಸಿದ ಚಂದ್ರಯಾನ-೩ ತ್ರಿವಿಕ್ರಮ ಸಾಧನೆಯ ಬಳಿಕ ಇದೇ ಸೂ...