Showing posts with label ಗ್ರಾಮ ಪಂಚಾಯಿತಿ. Show all posts
Showing posts with label ಗ್ರಾಮ ಪಂಚಾಯಿತಿ. Show all posts

Wednesday, August 28, 2024

PARYAYA: ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

 ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ

ಆ. 29ಕ್ಕೆ ಬೆಂಗಳೂರಿನಲ್ಲಿ ಉಪನ್ಯಾಸ ಮಾಲಿಕೆ

ಬೆಂಗಳೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನಗಳನ್ನು ತನ್ನ ʼಭುವನʼದಂತಹ ವೇದಿಕೆಯ ಜೊತೆಗೆ ಸಂಯೋಜಿಸುವ ಸಾಧ್ಯತೆ ಬಗ್ಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ – ಇಸ್ರೋ  ಆಸಕ್ತಿ ತಾಳಿದ್ದು, ಈ ಬಗ್ಗೆ ಚರ್ಚಿಸಲು ಉಪನ್ಯಾಸ ಮಾಲಿಕೆಯೊಂದನ್ನು ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ.

ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ- ನಿಯಾಸ್‌ (ಎನ್‌ ಐ ಎಎಸ್) ಮತ್ತು ಹ್ಯಾನ್ಸ್‌ ಸೀಡೆಲ್‌ ಫೌಂಡೇಷನ್‌ ಜಂಟಿಯಾಗಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ನಿಯಾಸ್‌ ಸಭಾಂಗಣದಲ್ಲಿ  ಆಗಸ್ಟ್‌ 29ರ ಗುರುವಾರ  ಬೆಳಗ್ಗೆ 10 ಗಂಟೆಗೆ ‘ಸ್ಥಳೀಯ ಆಡಳಿತದ ಬಲವರ್ಧನೆ-ತಂತ್ರಜ್ಞಾನ ಮೂಲಕ ಅಂತರ ನಿವಾರಣೆʼ ಉಪನ್ಯಾಸ ಕಾರ್ಯಕ್ರಮವನ್ನು ಸಂಘಟಿಸಿವೆ.

ಕಾರ್ಯಕ್ರಮದಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ.ಶಂಕರ ಕೆ. ಪ್ರಸಾದ್‌, ನಿಯಾಸ್‌ನಲ್ಲಿ ʼಇಸ್ರೋ ಚೇರ್‌ ಪ್ರೊಫೆಸರ್‌ ಆಗಿರುವ ಡಾ. ಪಿ.ಜಿ. ದಿವಾಕರ್‌ ಮತ್ತು ನಿಯಾಸ್‌ನಲ್ಲಿ ಸಂಘರ್ಷ ಪರಿಹಾರ  ಮತ್ತು ಶಾಂತಿ ಸಂಶೋಧನಾ ಕಾರ್ಯಕ್ರಮದ ಸಹಾಯಕ ಪ್ರಾಧ್ಯಾಪಕ ಡಾ. ಅಂಶುಮಾನ್‌ ಬೆಹೆರಾ ಪಾಲ್ಗೊಳ್ಳಲಿದ್ದಾರೆ.

ಡಾ. ಶಂಕರ ಪ್ರಸಾದ್‌ ಅವರು ಬ್ಲಾಕ್‌ ಚೈನ್‌, ಇಂಡಿಯಾ ಸ್ಟಾಕ್‌ ಮತ್ತು ಧ್ವನಿ ಸಂವಹನದೊಂದಿಗೆ ಇ-ಆಡಳಿತವನ್ನು ಸಂಯೋಜಿಸುವ ಬಗ್ಗೆ, ಡಾ. ಪಿ. ದಿವಾಕರ್‌ ಅವರು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಂಶೋಧನಾ ಯೋಜನೆ, ಭೂ ವೀಕ್ಷಣಾ ಉಪಗ್ರಹಗಳು ಮತ್ತು ಜಿಯೋ ಸ್ಪೇಷಿಯಲ್‌ ಟೆಕ್ನಾಲಜಿಗಳ ಮೂಲಕ ಡೇಟಾ ಪ್ರಕ್ರಿಯೆ ಮತ್ತು ಡಾ. ಆಂಶುಮಾನ್‌ ಬೆಹೆರಾ ಭಾರತದಲ್ಲಿ ರಾಜಕೀಯ ಹಿಂಸೆ ಮತ್ತು ಆಂತರಿಕ ಸಂಘರ್ಷಗಳು, ರಾಜಕೀಯ ಸಿದ್ಧಾಂತ ಹಾಗೂ ಅಭಿವೃದ್ಧಿಯ ಸಾಮಾಜಿಕ ಪರಿಣಾಮಗಳ ಬಗ್ಗೆ ಚರ್ಚಿಸುವರು.

ಆಡಳಿತವನ್ನು ವಿಕೇಂದ್ರೀಕರಿಸಲು ಮತ್ತು ಅಂತರ್ಗತ ನಿರ್ಧಾರ ಕೈಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ತಳಮಟ್ಟದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ಉತ್ತೇಜಿಸುವ ಗುರಿಯನ್ನು 73 ನೇ ತಿದ್ದುಪಡಿ ಕಾಯಿದೆ (1992)  ಹೊಂದಿದೆ. ಆದರೆ ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಸಾಮಾನ್ಯ ಜನರಲ್ಲಿ ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿ ಅರಿವಿನ ಕೊರತೆಯಿಂದಾಗಿ ಅದರ ಯಶಸ್ಸು ಹೆಚ್ಚಾಗಿ ಸೀಮಿತವಾಗಿದೆ.

ಸ್ಥಳೀಯ ಆಡಳಿತದ ತತ್ವಗಳು ಮತ್ತು ಕಾರ್ಯಗಳ ಬಗ್ಗೆ ಜನ ಸಾಮಾನ್ಯರು ಮತ್ತು ಚುನಾಯಿತ ಪ್ರತಿನಿಧಿಗಳಲ್ಲಿನ ಅರಿವಿನ ಕೊರತೆಯ ಅಂತರದಿಂದಾಗಿ ಪಂಚಾಯತ್‌ ರಾಜ್‌ ಸಂಸ್ಥೆಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಲು ಅಗತ್ಯವಾದ ಮಾಹಿತಿಗಳನ್ನು ಹೊಂದಿರುವುದಿಲ್ಲ. ಇಂತಹ ಸವಾಲುಗಳನ್ನು ಗೆಲ್ಲಲು ತಂತ್ರಜ್ಞಾನ ಚಾಲಿತ ಉಪಕ್ರಮಗಳು ನೆರವಾಗುತ್ತವೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿದ ಭುವನ್‌ನಂತಹ ಜ್ಞಾನ ವೇದಿಕೆಯು ತಳಮಟ್ಟದಲ್ಲಿ ಉತ್ತಮ ಯೋಜನೆ ಮತ್ತು ನಿರ್ಧಾರ ಕೈಗೊಳ್ಳುವಿಕೆಯನ್ನು ಬೆಂಬಲಿಸಲು ಬೇಕಾದ ಅಮೂಲ್ಯವಾದ ಭೌಗೋಳಿಕ ಮಾಹಿತಿ ಒದಗಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳನ್ನು ಈ ವೇದಿಕೆಯ ಜೊತೆಗೆ ಸಂಯೋಜಿಸುವ ಮೂಲಕ ಪಂಚಾಯಿತ್‌ ರಾಜ್‌ ಸಂಸ್ಥೆಗಳು ಸ್ಥಳೀಯ ಆಡಳಿತವನ್ನು ಬಲಪಡಿಸಬಹುದು. ಈ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆಯು ಆಡಳಿತದ ಅಂತರ ನಿವಾರಣೆ ಮತ್ತು ಅದಕ್ಕಾಗಿ ತಾಂತ್ರಿಕ ಪರಿಹಾರಗಳನ್ನು ಸಂಯೋಜಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ ಎಂದು ನಿಯಾಸ್‌ ಪ್ರಜಾತಂತ್ರ ವೇದಿಕೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
Click the image to see closer view:

PARYAYA: ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ:   ಗ್ರಾಮ ಪಂಚಾಯತಿಗಳಿಗೆ ತಂತ್ರಜ್ಞಾನ ಸಂಯೋಜನೆಗೆ ಇಸ್ರೋ ಆಸಕ್ತಿ ಆ. 29ಕ್ಕೆ ಬೆಂಗಳೂರಿನಲ್ಲಿ ಉಪನ್ಯಾಸ ಮಾಲಿಕೆ ಬೆಂ ಗಳೂರು: ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ...

Wednesday, March 20, 2024

PARYAYA: ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ

 ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ

ಬೆಂಗಳೂರು: ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕುರಿತು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಡಾ. ಶಂಕರ ಕೆ. ಪ್ರಸಾದ್‌ ಅವರ ಬಾನುಲಿ ಕಾರ್ಯಕ್ರಮವು 2024 ಮಾರ್ಚ್‌ 21ರ ಗುರುವಾರ ರಾತ್ರಿ 8 ಗಂಟೆಗೆ ವಿವಿಧ ಭಾರತಿಯಲ್ಲಿ (ತರಂಗಾಂತರ 102.9೯ ಎಫ್‌ ಎಂ) ಪ್ರಸಾರವಾಗಲಿದೆ ಎಂದು ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಡಾ. ಪ್ರಸಾದ್‌ ಅವರು ಗ್ರಾಮ ಪಂಚಾಯಿತಿಗಳನ್ನು ಸ್ವಾವಲಂಬಿಯಾಗಿಸಲು ಸೀಮಾತೀತ ತಂತ್ರಜ್ಞಾನಗಳನ್ನು ಬಳಸುವ ಬಗ್ಗೆ ಕನ್ನಡ ಹಾಗೂ ಇಂಗ್ಲಿಷಿನಲ್ಲಿ ಪುಸ್ತಕಗಳನ್ನು ಬರೆದಿದ್ದು ಈ ಪುಸ್ತಕದಲ್ಲಿನ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಕಾರ್ಯಕ್ರಮವನ್ನು ಆಲಿಸಲು ಈ ಕೊಂಡಿಯನ್ನು ಒತ್ತಿರಿ:  Pls click the link below to Listen the Programme: https://images.app.goo.gl/wgix9Kec7fGhRmVu5

ಇವುಗಳನ್ನೂ ನೋಡಿ:

ಇದೀಗ ಬಿಡುಗಡೆಯಾಗಿದೆ……

ಏನಿದೆ ಈ ಪುಸ್ತಕಗಳಲ್ಲಿ?


PARYAYA: ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ:   ವಿವಿಧ ಭಾರತಿಯಲ್ಲಿ ಆತ್ಮನಿರ್ಭರ ಗ್ರಾಮ ಪಂಚಾಯಿತಿ ಬೆಂ ಗಳೂರು: ʼ ಆತ್ಮ ನಿರ್ಭರ ಗ್ರಾಮ ಪಂಚಾಯಿತಿ ʼ ಕುರಿತು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ...

Tuesday, September 5, 2023

PARYAYA: ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ...

 ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ

ಬೆಂಗಳೂರು: ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿನೂತನ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಮೂಲಕ ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವ ಕಾರ್ಯಕ್ರಮ ದೇಶದಲ್ಲೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌ ನೇತೃತ್ವದಲ್ಲಿ 2023 ಸೆಪ್ಟೆಂಬರ್‌ 4ರ ಸೋಮವಾರ ಶಿವಮೊಗ್ಗದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ 35 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಎನ್‌ಎಲ್‌ಟಿ ತಂತ್ರಜ್ಞಾನ ಮೂಲಕ ತರಬೇತಿಯನ್ನು ಪ್ರಾಯೋಗಿಕವಾಗಿ ಮುನ್ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಜಿಲ್ಲಾ ಉಪ ಕಾರ್ಯದರ್ಶಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶಿವಮೊಗ್ಗ ಜಿಲ್ಲಾ ಪಂಚಾಯತಿ ಆವರಣದ ಸಹ್ಯಾದ್ರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಶ್ರೀ ಅಬ್ದುಲ್‌ ನಜೀರ್‌ ಸಾಬ್‌ ಪೀಠ ಪಂಚಾಯತ್‌ ರಾಜ್‌ ವಿಭಾಗದ ಮಾಜಿ ಅಧ್ಯಕ್ಷ ಪ್ರೊ. ಸದಾನಂದ ಜಾನೆಕೆರೆ ಅವರೊಂದಿಗೆ ಪಾಲ್ಗೊಂಡಿದ್ದ ಸಂಪೂರ್ಣ ಸ್ವರಾಜ್ ಫ಼ೌಂಡೇಷನ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು.

ಕೇಂದ್ರ ಸರ್ಕಾರ ರಚಿಸಿರುವ ʼರಾಷ್ಟ್ರೀಯ ಸಾಮರ್ಥ್ಯ ನಿರ್ಮಾಣ ಚೌಕಟ್ಟು-2022ʼ ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಅಮೆರಿಕದ ಗೂರು ಸಂಸ್ಥೆಯೊಂದಿಗೆ ಅಭಿವೃದ್ದಿ ಪಡಿಸಿರುವ ನಿರಂತರ ಕಲಿಕೆಗೆ ಅವಕಾಶ ಕಲ್ಪಿಸುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಬಳಸಿಕೊಳ್ಳಲು ಶಿಫಾರಸು ಮಾಡಿದೆ.

ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯವು ಆಗಸ್ಟ್‌ ಕೊನೆಯ ವಾರ ವರ್ಚವಲ್‌ ಸಭೆಯೊಂದನ್ನೂ ಆಯೋಜಿಸಿತ್ತು. ಅದರಲ್ಲಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸಂಪೂರ್ಣ ಸ್ವರಾಜ್‌ ಫೌಂಡೇಷನ್‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಂಡಿದ್ದವು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ 10 ತಾಲೂಕುಗಳಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಅನುಷ್ಠಾನ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಮತ್ತು ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸೀಮಾತೀತ ತಂತ್ರಜ್ಞಾನ ಅಳವಡಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕದ ಪ್ರತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಅರುಣ್‌ ಇತ್ತೀಚೆಗೆ ಭರವಸೆ ನೀಡಿದ್ದರು..

ಚಿತ್ರ ಕ್ಯಾಪ್ಷನ್:

ಸಂಪೂರ್ಣ ಸ್ವರಾಜ್ ಫ಼ೌಂಡೇಷನ್  ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಶಿವಮೊಗ್ಗದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನದ ಬಗ್ಗೆ ಪ್ರಸ್ತುತಿ ನೀಡಿದರು. ವಿಧಾನ ಪರಿಷತ್‌ ಸದಸ್ಯ ಡಿ.ಎಸ್.‌ ಅರುಣ್‌, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಪ್ರೊ. ಸದಾನಂದ ಜಾನೆಕೆರೆ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆಯ ಶಿವಮೊಗ್ಗೆ ಆವೃತ್ತಿಯಲ್ಲಿ ಪ್ರಕಟವಾಗಿರುವ ವರದಿ ಕೆಳಗಿದೆ: ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ.


ಶಿವಮೊಗ್ಗದ ದೈನಿಕ ʼನಮ್ಮ ನಾಡುʼ ಪತ್ರಿಕೆಯಲ್ಲಿ ಬಂದ ವರದಿ. ವರದಿಯ ಸ್ಪಷ್ಟ ವೀಕ್ಷಣೆಗೆ ಚಿತ್ರವನ್ನು ಕ್ಲಿಕ್ಕಿಸಿ:

ಇದನ್ನೂ ಓದಿ:
ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

PARYAYA: ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ...:   ದೇಶದಲ್ಲೇ ಮೊದಲು ಶಿವಮೊಗ್ಗದಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನ ಬೆಂಗಳೂರು : ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿನೂತನ ದಿಕ್ಸೂಚ...

Wednesday, August 23, 2023

PARYAYA: ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

ಆಗಸ್ಟ್‌ 24ರಂದು ರಾಷ್ಟ್ರಮಟ್ಟದ ವರ್ಚುವಲ್‌ ಸಭೆ

ಬೆಂಗಳೂರು: ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ದಿ ಪಡಿಸಿರುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನಕ್ಕೆ  (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಕೇಂದ್ರದ ಪಂಚಾಯತಿ ರಾಜ್‌ ಸಚಿವಾಲಯವು ಮಾನ್ಯತೆ ನೀಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಅದನ್ನು ಬಳಸಿಕೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ʼವರ್ಚುವಲ್‌ ಸಭೆʼಯನ್ನು ಆಗಸ್ಟ್‌ 24ರಂದು ಕೇಂದ್ರ ಪಂಚಾಯತಿ ರಾಜ್‌ ಸಚಿವಾಲಯವು ಆಯೋಜಿಸಿದೆ. ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ಚೌಕಟ್ಟು -2022ರ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅದು ಶಿಫಾರಸು ಮಾಡಿದೆ.

ಕೇಂದ್ರದ ಪಂಚಾಯತಿ ರಾಜ್‌ ಸಚಿವಾಲಯದ ನೇತೃತ್ವದಲ್ಲಿ ನಡೆಯಲಿರುವ ಈ ವರ್ಚುವಲ್‌ ಸಭೆಯಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎನ್‌ ಐ ಆರ್‌ ಡಿ), ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಎನ್‌ ಎಸ್‌ ಎಸ್‌ಐಆರ್‌ಡಿ), ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ (ಎಸ್‌ ಎಸ್‌ ಎಫ್)‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಕೇರಳ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಳ್ಳಲಿವೆ.

ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ಚೌಕಟ್ಟು-2022ರ ಅಡಿಯಲ್ಲಿ ಗ್ರಾಮೀಣ ಸಂಸ್ಥೆಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ರೂಪುರೇಷೆ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಪ್ರಾಥಮಿಕ ಚರ್ಚೆ ನಡೆಸಲಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ರಾಜೀವ ಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪಂಚಾಯಿತಿಗಳ ಸಬಲೀಕರಣ ನಿಟ್ಟಿನ ಚರ್ಚೆಗಳ ವೇಳೆಯಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಕರ ಕೆ. ಪ್ರಸಾದ್‌ ಅವರು ಫೌಂಡೇಶನ್ನಿನ ದಿಕ್ಸೂಚಿ ಕಲಿಕಾ ತಂತ್ರಜ್ಞಾನಕ್ಕೆ ಕೇಂದ್ರ ಪಂಚಾಯಿತಿ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿಚಾರವನ್ನು ಬಹಿರಂಗ ಪಡಿಸಿದರು. 

ಏನಿದು ಎನ್‌ ಎಲ್‌ ಟಿ?

ದಿಕ್ಸೂಚಿ ಕಲಿಕಾ ತಂತ್ರಜ್ಞಾನ ಅಥವಾ ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ (ಎನ್‌ ಎಲ್‌ ಟಿ) ಎಂಬುದು ಆನ್‌ ಲೈನ್‌ ಮೂಲಕ ತಾವು ಇದ್ದ ಸ್ಥಳದಿಂದಲೇ, ತಮಗೆ ಅನುಕೂಲಕರವಾದ ಸಮಯದಲ್ಲಿ ಕಲಿಯುವ ವ್ಯವಸ್ಥೆಯಾಗಿದ್ದು ಅಮೆರಿಕ ಮೂಲದ ಎನ್‌ ಜಿಒ ಗೂರು ಫೌಂಡೇಶನ್‌ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದೆ.

ದೇಶಾದ್ಯಂತ 30 ಲಕ್ಷ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು 30 ಲಕ್ಷ ಗ್ರಾಮ ಪಂಚಾಯಿತಿ ಪದಾಧಿಕಾರಿಗಳಿಗೆ ಈ ತಂತ್ರಜ್ಞಾನದ ಮೂಲಕ ಸುಲಭವಾಗಿ ಮೊಬೈಲ್‌ ಬಳಸಿ, ಪಂಚಾಯಿತಿಗಳ ಕಾರ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಬಹುದಾಗಿದೆ. ಕಲಿಕಾರ್ಥಿಗಳಿಗೆ ವ್ಯಕ್ತಿಗತವಾಗಿ ಕಲಿಯುವ ಅವಕಾಶ ಇದರಲ್ಲಿದೆ.

ಫೊಟೋ:

1) ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜೀವಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಉಪನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಬಿ.ಕೆ. ಪಾಟೀಲ್‌ ಅವರು ಗ್ರಾಮೀಣ ಅಭಿವೃದ್ಧಿಯಲ್ಲಿ ಸೀಮಾತೀತ ತಂತ್ರಜ್ಞಾನ ಬಳಕೆ ಕುರಿತಾದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಹಾಗೂ ಅದರ ಇಂಗ್ಲಿಷ್‌ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ʼ ಪುಸ್ತಕಗಳನ್ನು ಖರೀದಿಸಿದರು.

೨. ಭಾರತ ಸರ್ಕಾರದ ಐಸಿಎಂಆರ್‌ ನ್ಯಾಷನಲ್‌ ಇನ್‌ ಸ್ಟಿಟ್ಟೂಟ್‌ ಆಫ್‌ ವೈರಾಲಜಿಯ ಮಾಜಿ ನಿರ್ದೇಶಕಿ, ಕೋವಿಡ್‌ ಕಾಲದಲ್ಲಿ ಮಹಿಳಾ ಶಕ್ತಿ ಪ್ರಶಸ್ತಿ ಗಳಿಸಿದ  ಪ್ರೊ.ಪ್ರಿಯಾ ಅಬ್ರಹಾಂ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಪಡಿಸಿದ ಪೊಟಾನ್‌ ತಂತ್ರಜ್ಞಾನದ ಕುರಿತು ಡಾ. ಶಂಕರ ಕೆ. ಪ್ರಸಾದ್‌ ಜೊತೆ ಚರ್ಚಿಸಿ ಮಾಹಿತಿ ಪಡೆದರು.

3) ಗಾಂಧಿ ಭವನದಲ್ಲಿ ನಡೆದ ರಾಜೀವಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಡಾ. ಶಂಕರ ಕೆ. ಪ್ರಸಾದ್‌ ಮಾತನಾಡಿದರು. ಇದರ ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.


PARYAYA: ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್...: ಪಂಚಾಯಿತಿ ತರಬೇತಿಗೆ  ದಿಕ್ಸೂಚಿ ಕಲಿಕಾ ತಂತ್ರಜ್ಞಾನ:  ಕೇಂದ್ರ ಮನ್ನಣೆ ಆಗಸ್ಟ್‌ 24ರಂದು ರಾಷ್ಟ್ರಮಟ್ಟದ ವರ್ಚುವಲ್‌ ಸಭೆ ಬೆಂಗಳೂರು: ಬೆಂಗಳೂರಿನ ಸಂಪೂರ್ಣ ಸ್ವರ...

Friday, March 31, 2023

PARYAYA: ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ...

 ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ..!


ಇವರು 

ಶ್ರೀ ವೆಂಕಟೇಶ ಮೂರ್ತಿ. ಅರಸೀಕೆರೆ  ತಾಲೂಕಿನ ಕೊರವಂಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು.

ಅಂದು ಭಾನುವಾರ. 2023ರ ಫೆಬ್ರುವರಿ 12. ಬೆಳಗ್ಗೆ ಚಹಾ ಕುಡಿಯುತ್ತಾ ʼಪ್ರಜಾವಾಣಿʼ ಪತ್ರಿಕೆ ಕೈಗೆತ್ತಿಕೊಂಡರು.

ಪತ್ರಿಕೆ ಓದುತ್ತಾ ಸಾಪ್ತಾಹಿಕ ಪುರವಣಿ ಕಡೆಗೆ ಗಮನ ಹರಿಸಿದರು. ಅಲ್ಲಿ “ಆತ್ಮ ನಿರ್ಭರ ಗ್ರಾಪಂ ಕಟ್ಟಲು ಕೈಪಿಡಿʼ ಎಂಬ ಬರಹದ ಕಡೆಗೆ ಅವರ ಗಮನ ಹರಿಯಿತು. ಪೂರ್ತಿಯಾಗಿ ಅದನ್ನು ಓದಿದರು. ಅದು ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯತಿʼ ಪುಸ್ತಕದ ಬಗೆಗಿನ ಬರಹ. ಓದಿ ಮುಗಿಸುತ್ತಿದ್ದಂತೆ ಈ ಪುಸ್ತಕವನ್ನು ಕೊಳ್ಳಲೇಬೇಕು ಎಂದು ಅನಿಸಿತು.  ಕೂಡಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಸಂಪೂರ್ಣ ಸ್ವರಾಜ್‌ ಸಂಸ್ಥೆಯ ವಿಳಾಸವನ್ನು ಗುರುತು ಹಾಕಿಕೊಂಡು, ಅಲ್ಲಿಗೆ ದೌಡಾಯಿಸಿದರು. ಪುಸ್ತಕದ ಒಂದು ಪ್ರತಿಯನ್ನು ಕೊಂಡು ಕೊಂಡು ಮನೆಗೆ ವಾಪಸಾದರು. ಮನೆಗೆ ವಾಪಸಾಗುತ್ತಲೇ ಅದರ ಪುಟಗಳನ್ನು ತಿರುವಿ ಹಾಕುತ್ತಾ ಹೋದರು.


ಪುಸ್ತಕವನ್ನು ಓದುತ್ತಿದ್ದಂತೆಯೇ ಅವರಿಗೆ ಮನಸ್ಸಿಗೆ ಬಂದ ಯೋಚನೆ- ʼನಾನು ಯಾಕೆ ಅರಸೀಕೆರೆ  ತಾಲೂಕಿನಲ್ಲಿ ಇರುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಈ ಪುಸ್ತಕದ ಒಂದೊಂದು ಪ್ರತಿಯನ್ನು ಕೊಡಬಾರದು?”. ವೆಂಕಟೇಶ ಮೂರ್ತಿ ಅವರು ತಡ ಮಾಡಲಿಲ್ಲ. ಸಂಪೂರ್ಣ ಸ್ವರಾಜ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರನ್ನು ಸಂಪರ್ಕಿಸಿದರು. ಅರಸೀಕೆರೆ  ತಾಲೂಕಿನ ನಲ್ವತ್ತನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಬೇಕಾಗುವಷ್ಟು ಪುಸ್ತಕಗಳನ್ನು ಖರೀದಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಿದರು.

ಇಷ್ಟಕ್ಕೂ ಪ್ರಜಾವಾಣಿಯ ಆ ಲೇಖನದಲ್ಲಿ ಇದ್ದುದಾದರೂ ಏನು? ಪೂರ್ತಿ ಲೇಖನವನ್ನೇನೂ ಇಲ್ಲಿ ಹೇಳುವುದಿಲ್ಲ. ಆದರೆ ಆದರೆ ಸಾರಾಂಶ ಇಷ್ಟು: “ಈ ಕೃತಿ ಯಾರಿಗಾಗಿ ಎನ್ನುವ ಪ್ರಶ್ನೆಗೆ ಲೇಖಕರು ಆರಂಭದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಯ ಜವಾಬ್ದಾರಿ ಹೊತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನೇ ಈ ಕೃತಿಯ ಮೊದಲ ಓದುಗರನ್ನಾಗಿ ಲೇಖಕರು ಆಯ್ಕೆ ಮಾಡಿದ್ದಾರೆ. ಜೊತೆಗೆ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ  ಕಾರ್ಯದರ್ಶಿಗಳಿಗೂ ಇದು ಮಾರ್ಗದರ್ಶಿಯಾಗಬಲ್ಲುದು. ಜೊತೆಗೆ ಇಲ್ಲಿರುವ ವಿಷಯಗಳನ್ನು ಅರಿತರೆ ಗ್ರಾಮದ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಹಾಗೂ ತನ್ನ ಗ್ರಾಮಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಸ್ಥಳೀಯ ಸರ್ಕಾರಕ್ಕೆ ಆಗ್ರಹಿಸಬಹುದಾಗಿದೆ.”

ಪ್ರಜಾವಾಣಿ ಅಷ್ಟೇ ಅಲ್ಲ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲೂ ಈ ಪುಸ್ತಕದ ಬಗ್ಗೆ ವಿವರಗಳು ಬಂದಿವೆ. ಪುಸ್ತಕದ ಬಗ್ಗೆ ವಿವರ ಆ ಪುಸ್ತಕ ರೂಪುಗೊಂಡದ್ದರ ಹಿಂದಿನ ಶ್ರಮ, ಅದರಲ್ಲಿ ವಿವರಿಸಿರುವ ವಿವಿಧ ವಿಚಾರಗಳ ಬಗ್ಗೆ ಈ ಪತ್ರಿಕೆಗಳು ಬರೆದಿವೆ. ಭಾರತವು ಆತ್ಮ ನಿರ್ಭರ ಆಗಬೇಕಿದ್ದರೆ ಹೇಗೆ ಮೊದಲು ಗ್ರಾಮಗಳು ಆತ್ಮ ನಿರ್ಭರ ಆಗಬೇಕು, ಗ್ರಾಮದ ಅಭ್ಯುದಯಕ್ಕೆ ಪಂಚಾಯಿತಿಗಳು ಹೇಗೆ ಕೆಲಸ ಮಾಡಬಹುದು, ನವೀನ ತಂತ್ರಜ್ಞಾನಗಳನ್ನು ಬಳಸಬಹುದು ಎಂಬಿತ್ಯಾದಿ ವಿವರಗಳು ಪುಸ್ತಕದಲ್ಲಿ ಇರುವ ಬಗ್ಗೆ ಉಲ್ಲೇಖಿಸಿವೆ.

ಕೊರವಂಕದ ವೆಂಕಟೇಶ ಮೂರ್ತಿಯವರ ಹಾಗೆ ಹತ್ತಾರು ಮಂದಿ ಇದೀಗ ಈ ಪುಸ್ತಕದ ಬಗ್ಗೆ ಗಮನಿಸುತ್ತಿದ್ದಾರೆ. ಗದಗದಲ್ಲಿ ಇತ್ತೀಚೆಗೆ ನಡೆದ ʼಸ್ವಯಂ ಆಡಳಿತದ ದೇಶೀ ಮಾದರಿಗಳುʼ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಈ ಪುಸ್ತಕದ ಬಗ್ಗೆ ಕುತೂಹಲದಿಂದ ವಿಚಾರಿಸಿದರು. ಬಹಳಷ್ಟು ಮಂದಿ ಪುಸ್ತಕಗಳಿಗಾಗಿ ʼಆರ್ಡರ್‌ʼ ನೀಡಿದರು. ಬಹಳಷ್ಟು ಮಂದಿ ಕುತೂಹಲದಿಂದ ಪುಸ್ತಕದ ಬಗ್ಗೆ ವಿಚಾರಿಸುತ್ತಿದ್ದಾರೆ. ವಾಟ್ಸಪ್‌ ಸಂದೇಶಗಳನ್ನೂ ಕಳುಹಿಸುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಅವರು ಕೂಡಾ ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ್ದ ಡಾ. ಶಂಕರ ಪ್ರಸಾದ್‌ ಅವರ ಜೊತೆಗೆ ಪುಸ್ತಕದ ಬಗ್ಗೆ ಕುತೂಹಲದಿಂದ ವಿಚಾರಿಸಿದರು.


ಹೌದು, ವಿವಿಧ ವಲಯಗಳಲ್ಲಿ ಇದೀಗ ಈ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕ ಸದ್ದಿಲ್ಲದೆಯೇ ಸುದ್ದಿ ಮಾಡುತ್ತಿದೆ. ಡಾ. ಶಂಕರ ಪ್ರಸಾದ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ ಪುಸ್ತಕವನ್ನು ಅರ್ಪಿಸಿದ್ದಾರೆ. ಮುಖ್ಯಮಂತ್ರಿಯಿಂದಲೂ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಧ್ಯಕ್ಕೆ ಈ ಪುಸ್ತಕದ ಕನ್ನಡ ಆವೃತ್ತಿ ಲಭ್ಯವಿದೆ. ಪುಸ್ತಕದ ಇಂಗ್ಲಿಷ್‌ ಮತ್ತು ಹಿಂದಿ ಆವೃತ್ತಿಗಳನ್ನು ಶೀಘ್ರದಲ್ಲೇ ಹೊರ ತರುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.

ಪುಸ್ತಕದ ಕನ್ನಡ ಆವೃತ್ತಿಯ ಪ್ರತಿಗಳನ್ನು  ಸಂಪೂರ್ಣ ಸ್ವರಾಜ್‌ ಫೌಂಡೇಶನ್ನಿನ ವೆಬ್‌ ಸೈಟ್‌ ಮೂಲಕ (ಲಿಂಕ್:‌ https://www.sampoornaswaraj.org/) ಖರೀದಿಸಬಹುದು. ಭಾರತ ಆತ್ಮ ನಿರ್ಭರ ಆಗಬೇಕು ಎಂಬುದಾಗಿ ನೀವು ಬಯಸುತ್ತಿದ್ದರೆ, ಪಂಚಾಯತಿಯನ್ನು ಮೊದಲು ಆತ್ಮ ನಿರ್ಭರವನ್ನಾಗಿ ಮಾಡುವತ್ತ ಗಮನಿಸಿ. ಅದಕ್ಕೆ ಮಾರ್ಗದರ್ಶಿ ಈ ಪುಸ್ತಕ- ಈಗಲೇ ಕೊಂಡುಕೊಳ್ಳಿ.

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂ...:   ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ..! ಇವರು ಶ್ರೀ ವೆಂಕಟೇಶ ಮೂರ್ತಿ . ಅರಸೀಕರೆ ತಾಲೂಕಿನ ಕೊರವಂಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ...