Showing posts with label ‌ ವಿಡಿಯೋ. Show all posts
Showing posts with label ‌ ವಿಡಿಯೋ. Show all posts

Thursday, October 17, 2024

PARYAYA: ವಾಟ್- ಸುದ್ದಿ

ವಿಜಯದಶಮಿಯ ದಿನ ಹೆಣ್ಮಗು ಜನಿಸಿದಾಗ...!

ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ವಾಟ್- ಸುದ್ದಿ:   ವಿಜಯದಶಮಿಯ ದಿನ ಹೆಣ್ಮಗು ಜನಿಸಿದಾಗ...! ವಾಟ್-ಸುದ್ದಿ = ವಾಟ್ಸಪ್‌ ಸುದ್ದಿ! ವಿಜಯ ದಶಮಿಯ ದಿನ ಹೆಣ್ಣು ಮಗುವೊಂದು ಜನಿಸಿತು. ಹೆರಿಗೆ ಮಾಡಿಸಿದ ವೈದ್ಯೆ ಆ ಮಗುವಿಗೆ ...

Friday, December 8, 2023

PARYAYA: ಏನಿದೆ ಈ ಪುಸ್ತಕಗಳಲ್ಲಿ?

 ಏನಿದೆ ಈ ಪುಸ್ತಕಗಳಲ್ಲಿ?

ಬೆಂಗಳೂರು: ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದಿರುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ ಪುಸ್ತಕಗಳು 2023 ಡಿಸೆಂಬರ್‌ 9ರ ಶನಿವಾರ ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿವೆ.

ಈ ಪುಸ್ತಕಗಳಲ್ಲಿ ಏನಿದೆ? ವಿವರ ಇಲ್ಲಿದೆ:

ಭಾರತೀಯ ಸಂವಿಧಾನಕ್ಕೆ 1992ರಲ್ಲಿ ತರಲಾದ 73ನೇ ತಿದ್ದುಪಡಿಯು ʼಪಂಚಾಯತಿ ರಾಜ್‌ ಕಾಯಿದೆʼ ಎಂಬುದಾಗಿಯೇ ಖ್ಯಾತಿ ಪಡೆದಿದೆ. ಗ್ರಾಮ ಪಂಚಾಯಿತಿಗಳನ್ನು ಸಂವಿಧಾನಬದ್ಧಗೊಳಿಸಿ ದೇಶದ ಗ್ರಾಮೀಣ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮ ಪಂಚಾಯಿತಿಗಳಿಗೆ ವಿಕೇಂದ್ರೀಕರಣ ಮಾಡುವುದು ಇದರ ಮುಖ್ಯ ಗುರಿಯಾಗಿತ್ತು. ಈ ತಿದ್ದುಪಡಿಯ ಪ್ರಕಾರ, ಗ್ರಾಮ ಪಂಚಾಯತಿಗಳಿಗೆ ಹಣಕಾಸು, ಕಾರ್ಯ ನಿರ್ವಹಣೆ ಮತ್ತು ಪದಾಧಿಕಾರಿಗಳ ವಿಚಾರದಲ್ಲಿ ಅಧಿಕಾರಗಳನ್ನು ಸಂವಿಧಾನಬದ್ಧವಾಗಿಯೇ ಒದಗಿಸಲಾಗಿದೆ. ಆದರೆ ಇಂದಿಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ನಿರ್ಧಾರಗಳನ್ನು ಶಾಸಕರು, ಸಂಸದರು ಮತ್ತು ರಾಜ್ಯ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳೇ  ತೆಗೆದುಕೊಳ್ಳುತ್ತಾರೆ.

ಈ ಪುಸ್ತಕವು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ಪಂಚಾಯಿತಿ ರಾಜ್‌ ಕಾಯಿದೆಯ ಕುರಿತು ಅರಿವು ಮೂಡಿಸುತ್ತದೆ. ಅದರ ಜೊತೆಗೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಳಿಗೆ ಹೊಂದಿಕೆಯಾಗುವಂತೆ ತಮ್ಮ ಸ್ಥಳೀಯ ಸರ್ಕಾರವನ್ನು ಹೇಗೆ ನಡೆಸಬೇಕು ಮತ್ತು ತಮ್ಮ ಗ್ರಾಮದ ಪರಿಸ್ಥಿತಿ, ಅಗತ್ಯಗಳು ಮತ್ತು ಜನರ ಆಶಯಗಳಿಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಗ್ರಾಮದ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಹೇಳುತ್ತದೆ..

ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ನ್ಯಾವಿಗೇಟೆಡ್ ಲರ್ನಿಂಗ್ ಟೆಕ್ನಾಲಜಿ),  ಸಹಜ ಭಾಷಾ ಸಂಸ್ಕರಣೆ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್), ಸಾಧನಗಳ ಅಂತರ್ಜಾಲ (ಐಒಟಿ), ಕೆಲಸದ ಹರಿವಿನ ಸ್ವಯಂಚಲನ (ವರ್ಕ್‌ಫ್ಲೋ ಆಟೊಮೇಷನ್) ಮತ್ತು  ಬ್ಲಾಕ್‌ಚೈನ್ ತಂತ್ರಜ್ಞಾನಗಳಂತಹ ಸೀಮಾತೀತ ತಂತ್ರಜ್ಞಾನಗಳನ್ನು ಗ್ರಾಮಗಳ ವಿಕಾಸಕ್ಕೆ ಗ್ರಾಮ ಪಂಚಾಯತ್ ಹೇಗೆ ಬಳಸಬಹುದು ಎಂಬ ಬಗ್ಗೆ ಪುಸ್ತಕವು ಚರ್ಚಿಸುತ್ತದೆ. ಜೊತೆಗೇ ಈ ಸೀಮಾತೀತ ತಂತ್ರಜ್ಞಾನಗಳ ಬಳಕೆ ಮೂಲಕ ಮಹಾತ್ಮ ಗಾಂಧೀಜಿಯವರ ʼಗ್ರಾಮ ಸ್ವರಾಜ್‌ʼ ಪರಿಕಲ್ಪನೆಯನ್ನು ನನಸುಗೊಳಿಸುವುದು ಹೇಗೆ ಎಂಬ ಬಗ್ಗೆಯೂ ವಿವರಿಸುತ್ತದೆ.

21 ನೇ ಶತಮಾನದಲ್ಲಿ, ಇಡೀ ಜಗತ್ತು "ಡಿಜಿಟಲ್" ಆಗುತ್ತಿದೆ. ಭಾರತವು ಕೂಡಾ "ಡಿಜಿಟಲ್ ಇಂಡಿಯಾ" ಎಂಬುದಾಗಿ ಘೋಷಿಸಿದೆ. ಈ ಹೊತ್ತಿನಲ್ಲಿ ಭಾರತದ ಪ್ರತಿಯೊಂದು ಗ್ರಾಮ ಪಂಚಾಯಿತಿಯನ್ನೂ "ಡಿಜಿಟಲ್ ಗ್ರಾಮ ಪಂಚಾಯಿತಿʼ ಆಗಿ ಪರಿವರ್ತಿಸುವುದು ಅತ್ಯಂತ ಮುಖ್ಯವಾಗಿದೆ.

ಭಾರತದಲ್ಲಿ 2,40,000 ಗ್ರಾಮ ಪಂಚಾಯಿತಿಗಳಿದ್ದು, 6 ಲಕ್ಷ ಹಳ್ಳಿಗಳು ಮತ್ತು 80 ಕೋಟಿ ಜನಸಂಖ್ಯೆ ಇದೆ. ಭಾರತದ ನಗರಗಳ ಜನರು ಮತ್ತು ಗ್ರಾಮೀಣ ಜನರ ಮಧ್ಯೆ ಇಂದು ದೊಡ್ಡ ಪ್ರಮಾಣದ ʼಡಿಜಿಟಲ್‌ ಅಂತರʼ ಇದೆ. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು, ಈ ಅಂತರವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಪರಿವರ್ತನೆ ಆಗಬೇಕಾಗಿದ್ದು ದೇಶದ 80 ಕೋಟಿಯಷ್ಟು ಸಂಖ್ಯೆಯಲ್ಲಿ ಇರುವ ಗ್ರಾಮೀಣ ಜನರನ್ನು ಇದರಲ್ಲಿ ಸೇರಿಸುವುದು ಅನಿವಾರ್ಯವಾಗಿದೆ. ತಂತ್ರಜ್ಞಾನದ ಕೊರತೆಯಿಂದ ಯಾರೇ ಒಬ್ಬ ನಾಗರಿಕನೂ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕಾಗಿದೆ.

ಸಂಪೂರ್ಣ ಸ್ವರಾಜ್ ಪ್ರತಿಷ್ಠಾನವು ಭಾರತದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿನ ಜನರ ಪರಿಸ್ಥಿತಿಯ ಅಧ್ಯಯನ ಮಾಡಿದೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಕ್ತವಾಧ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸಿದೆ. ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಅದರ ಪ್ರಯೋಗವನ್ನೂ ಮಾಡಿದೆ.

ಉದಾಹರಣೆಗೆ: ಜಿಪಿಎಸ್‌ ಆಧಾರಿತವಾದ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ). ಹಳ್ಳಿಗರು ಗ್ರಾಮ ಪಂಚಾಯಿತಿ ಆಡಳಿತವನ್ನು ಹೇಗೆ ನಡೆಸಬೇಕೆಂದು ಕಲಿಯಲು, ಪುಸ್ತಕಗಳನ್ನು ಓದುವ ಅಗತ್ಯವಿಲ್ಲ. ಅವರು ತಮ್ಮ ಮೊಬೈಲ್ ಫೋನ್ ಬಳಸಿ ಈ ತಂತ್ರಜ್ಞಾನದ ಮೂಲಕ ಗ್ರಾಮ ಪಂಚಾಯಿತಿ ಆಡಳಿತ ನಡೆಸುವ ಬಗೆಯನ್ನು ಕಲಿಯಬಹುದು.

ಓದಲು ಮತ್ತು ಬರೆಯಲು ಬಾರದ ಹಳ್ಳಿಗರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗ ಅವರ ಧ್ವನಿಯನ್ನು ಗುರುತಿಸುವ ವ್ಯವಸ್ಥೆಯನ್ನು (ಸಹಜ ಭಾಷಾ ಸಂಸ್ಕರಣೆ) ಅಭಿವೃದ್ಧಿ ಪಡಿಸಲಾಗಿದೆ. ಅವರು ತಮ್ಮ ಮೊಬೈಲ್‌ನಲ್ಲಿಯೇ ಆರೋಗ್ಯ, ಕೃಷಿ ಮತ್ತು ಆಡಳಿತದ ಬಗ್ಗೆ ತಿಳಿದುಕೊಳ್ಳಬಹುದು.

ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿರುವ ಕೆಲಸದ ಹರಿವು ಸ್ವಯಂಚಲನ ತಂತ್ರಜ್ಞಾನ (ವರ್ಕ್ ಫ್ಲೋ ಆಟೊಮೇಷನ್) ಆ್ಯಪ್ ಬಳಸಿ ಗ್ರಾಮ ಪಂಚಾಯಿತಿ ಜೊತೆಗಿನ ತಮ್ಮ ಎಲ್ಲ ವ್ಯವಹಾರಗಳನ್ನು ನಡೆಸಬಹುದು ಮತ್ತು ತಮ್ಮ ಕೆಲಸವನ್ನು ಮಾಡಬಹುದು. ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಈ ತಂತ್ರಜ್ಞಾನ ದಕ್ಷತೆ ಮತ್ತು ಹೊಣೆಗಾರಿಕೆಯನ್ನು ತರುತ್ತದೆ ಮತ್ತು ದೋಷರಹಿತ ಗ್ರಾಮ ಪಂಚಾಯತಿಯನ್ನು ಒದಗಿಸುತ್ತದೆ.

ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ, ಗ್ರಾಮ ಪಂಚಾಯಿತಿಗಳು ಪ್ರತಿ ವಹಿವಾಟು, ಭೂ ದಾಖಲೆಗಳನ್ನು ದೃಢೀಕರಿಸಬಹುದು ಮತ್ತು ಮಧ್ಯವರ್ತಿ ಇಲ್ಲದೆಯೇ ಇ-ಕಾಮರ್ಸ್ ಹೆಚ್ಚಿಸಲು ಸಾಧ್ಯವಿದೆ. ಈ ವಿಶ್ವಾಸಾರ್ಹ ವಹಿವಾಟು ತಂತ್ರಜ್ಞಾನವು ನ್ಯಾಯಾಲಯಗಳಿಗೆ ಅಲೆದಾಟವನ್ನು ತಪ್ಪಿಸುತ್ತದೆ ಮತ್ತು ನಾಗರಿಕರಿಗೆ ಸಮಯವನ್ನು ಉಳಿಸುತ್ತದೆ.

ಸಾಧನಗಳ ಅಂತರ್ಜಾಲ (ಇಂಟರ್ನೆಟ್‌ ಆಫ್‌ ಥಿಂಗ್ಸ್) ಅಥವಾ ಐಒಟಿಯನ್ನು ಬಳಸಿಕೊಂಡು

ಹಳ್ಳಿಗರು ಶಾಲೆಗಳ ಕಾರ್ಯಕ್ಷಮತೆ, ಕೃಷಿ ಉತ್ಪಾದನೆ, ಪ್ರಾಣಿಗಳ ಆರೋಗ್ಯ ಮತ್ತು ನಾಗರಿಕರ ಆರೋಗ್ಯದ ಮೇಲೆ ನಿಗಾ ಇಡಬಹುದು.

ಗ್ರಾಮದ ಆಸ್ತಿಗಳು ಮತ್ತು ಸಂಪನ್ಮೂಲಗಳ ಡೇಟಾವನ್ನು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಂಗ್ರಹಿಸಬಹುದು ಮತ್ತು  ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫೀಸಿಯಲ್‌ ಇಂಟಲಿಜೆನ್ಸ್)‌ ಬಳಸಿ ಡೇಟಾ ಅನಾಲಿಟಿಕ್ಸ್ ಆಧಾರದ ಮೇಲೆ ಗ್ರಾಮ ಪಂಚಾಯಿತಿಯ  ಭವಿಷ್ಯವನ್ನು ಯೋಜಿಸಬಹುದು. ಜೊತೆಗೆ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಪರಿಸರ ವ್ಯವಸ್ಥೆಯಲ್ಲಿ ಕಂಡುಬರುವ ರೋಗಗಳ ಪ್ರವೃತ್ತಿಯನ್ನು ಊಹಿಸಬಹುದು ಹಾಗೂ ಅವುಗಳನ್ನು ನಿಯಂತ್ರಿಸಲು/ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬಹುದು.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಈ ತಂತ್ರಜ್ಞಾನಗಳನ್ನು ಹೇಗೆ ಬಳಸಬಹುದು ಎಂಬ ಬಗೆಗೂ ಪುಸ್ತಕವು ಚರ್ಚಿಸುತ್ತದೆ. ವಿಶ್ವಸಂಸ್ಥೆಯು 17 ಗುರಿಗಳನ್ನು ಅನುಷ್ಠಾನಗೊಳಿಸಲು ಕಾಲ ಮಿತಿ ನಿಗದಿ ಪಡಿಸಿದೆ. ಬಡತನ ನಿವಾರಣೆ, ಹಸಿವು ಮುಕ್ತ ಸಮಾಜ ನಿರ್ಮಾಣ, ಸುಸ್ಥಿರ ಆರೋಗ್ಯ, ಉತ್ತಮ ಶಿಕ್ಷಣ, ಹವಾಮಾನ ರಕ್ಷಣಾ ಕ್ರಮ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

ಉದಾಹರಣೆಗೆ: ಆರೋಗ್ಯ ಮೇಲ್ವಿಚಾರಣೆಗಾಗಿ ಐಒಟಿ ಸಾಧನಗಳನ್ನು ಹೇಗೆ ಬಳಸಬಹುದು, ವಾಯುಮಾಲಿನ್ಯಕಾರಕ ಇಂಗಾಲವನ್ನು ಹಿಡಿದಿಡುವುದು (ಕಾರ್ಬನ್‌ ಸ್ವೀಕ್ವೆಸ್ಟರಿಂಗ್)‌ ಹೇಗೆ? ಅದಕ್ಕಾಗಿ ಆರ್ಟಿಫೀಸಿಯಲ್‌ ಇಂಟಲಿಜೆನ್ಸ್‌ ಮತ್ತು ಯಂತ್ರಕಲಿಕೆಯನ್ನು (ಎಐಎಂಎಲ್)‌ ಬಳಸುವುದು ಹೇಗೆ ಎಂಬುದನ್ನು ಪುಸ್ತಕವು ಹೇಳುತ್ತದೆ.

ಆಪ್ಟಿಕಲ್ ಫೈಬರ್ ಅಳವಡಿಸದೆಯೇ ಸ್ಥಳೀಯವಾಗಿ ಹೇಗೆ ಇಂಟರ್ನೆಟ್ ಒದಗಿಸಬಹುದು? ಗ್ರಾಮದಲ್ಲಿ ಹಿರಿಯ ನಾಗರಿಕರಿಗೆ ಪಡಿತರ ವಿತರಿಸಲು ಮುಖ ಗುರುತಿಸುವ ತಂತ್ರಜ್ಞಾನವನ್ನು ಹೇಗೆ ಬಳಸಬಹುದು? ರೋಗದ ಮೇಲೆ ನಿಗಾ ಇಡುವಿಕೆ ಮತ್ತು ರೋಗ ನಿಯಂತ್ರಣ ಯೋಜನೆಗೆ ಹೇಗೆ ಜಿಐಎಸ್ ಮ್ಯಾಪಿಂಗ್ ಬಳಸಬಹುದು? ಎಂಬ ಬಗ್ಗೆಯೂ ಪುಸ್ತಕ ವಿವರಿಸುತ್ತದೆ.

ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗಿ, ಪುಸ್ತಕದಲ್ಲಿ ವಿವರಿಸಿದ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮಗಳ ಸ್ಥಳೀಯ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರಲು ಗ್ರಾಮಸ್ಥರ, ಚುನಾಯಿತ ಪ್ರತಿನಿಧಿಗಳ ಮತ್ತು ಗ್ರಾಮ ಪಂಚಾಯಿತಿ ಸಂಸ್ಥೆಯ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು? ಪ್ರತಿ ಗ್ರಾಮ ಪಂಚಾಯಿತಿಯ ಪ್ರಗತಿಯ ಮೇಲೆ ಕಣ್ಣಿಟ್ಟು ಅದನ್ನು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ಪುಸ್ತಕ ಹೇಳುತ್ತದೆ.

ದೇಶದಾದ್ಯಂತ ಪ್ರತಿ ಚುನಾಯಿತ ಪ್ರತಿನಿಧಿಯು ತಾಂತ್ರಿಕ ತಿಳುವಳಿಕೆಯನ್ನು ಹೊಂದುವಂತೆ ಮಾಡುವುದು ಮತ್ತು ತನ್ನ ಗ್ರಾಮ ಪಂಚಾಯಿತಿಯನ್ನು  ದೇಶದಲ್ಲೇ ಅತ್ಯುತ್ತಮ ಪಂಚಾಯಿತಿಯನ್ನಾಗಿ ಮಾಡಲು ತಂತ್ರಜ್ಞಾನಗಳನ್ನು ಬಳಸುವಂತೆ ಸಕ್ರಿಯಗೊಳಿಸುವುದು ಮತ್ತು  ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ತನ್ನ ಗ್ರಾಮ ಪಂಚಾಯಿತಿಯ ಭವಿಷ್ಯಕ್ಕೆ ತಾನೇ ಶಿಲ್ಪಿಯಾಗಬೇಕು ಎಂದು ಪ್ರಚೋದಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.

ಈ ಲೇಖನವನ್ನು ಆಲಿಸಲು ಕೆಳಗೆ ಕ್ಲಿಕ್‌ ಮಾಡಿರಿ. ಪುಸ್ತಕದ ಮುಖಪುಟಗಳ ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

ಕೆಳಗಿನ ಸುದ್ದಿಗಳನ್ನೂ ಓದಿರಿ:

ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

PARYAYA: ಏನಿದೆ ಈ ಪುಸ್ತಕಗಳಲ್ಲಿ?:   ಏನಿದೆ ಈ ಪುಸ್ತಕಗಳಲ್ಲಿ? ಬೆಂಗಳೂರು: ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದಿರುವ ʼ 21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ ...

Wednesday, October 4, 2023

PARYAYA: ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!

 ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!

ಇದು ಸುವರ್ಣ ನೋಟ

ಬಿಟ್ಟು ಬಿಡಬೇಕಂತೆ

ತಮಿಳುನಾಡಿಗೆ ನೀರು

ಎಲ್ಲಿಂದ ಬಿಡಲಿ ನಾನು?

ನನ್ನ ಒಡಲೇ ಇಲ್ಲಿ ಬರಿದಾಗುತಿದೆಯಲ್ಲ?

ಎಲ್ಲಿಂದ ಬಿಡಲಿ ನೀರು?

 

ಗಿಡಮರಗಳೆಲ್ಲ

ಒಣ ಒಣಗಿ ಹೋಗುತಿವೆ

ಎಲ್ಲಿಂದ ಬಿಡಲಿ ನೀರು?

ನನ್ನನ್ನೇ ನಂಬಿರುವ

ಪ್ರಾಣಿ ಪಕ್ಷಿಗಳಿಗೆ ಇನ್ನೆಷ್ಟು

ದಿನವೋ ನೀರು?

 

ಕಾದು ಕುಳಿತಿಹೆ ನಾನು

ನೀರು ಬಿಡದಿರಲೆಂದು

ಬಿಟ್ಟು ಮನೆಯೊಡೆಯನ

ಮನೆಯ ಸೂರು!

ಆದರೂ ಅಲ್ಲೆಲ್ಲ ನಡೆಯುತಿದೆಯಂತೆ

ನೀರಿಗಾಗಿ ಕದನ ಜೋರು!

 ಚಿತ್ರಗಳು: ವಿಶ್ವನಾಥ ಸುವರ್ಣ

ಕವನ, ವಿಡಿಯೋ: ನೆತ್ರಕೆರೆ ಉದಯಶಂಕರ

ಚಿತ್ರಗಳ ಸಮೀಪ ದೃಶ್ಯಕ್ಕೆ ಚಿತ್ರಗಳನ್ನು ಕ್ಲಿಕ್‌ ಮಾಡಿ.

ವಿಡಿಯೋ ನೋಡಲು ಹಾಡು ಕೇಳಲು  ಕೆಳಗಿನ ಚಿತ್ರ ಕ್ಲಿಕ್‌ ಮಾಡಿ.


PARYAYA: ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು!:   ಕೃಷ್ಣ ರಾಜ ಸಾಗರದಲ್ಲಿ ಕೇಳಿತು ಈ ಹಾಡು! ಇದು ಸುವರ್ಣ ನೋಟ ಬಿಟ್ಟು ಬಿಡಬೇಕಂತೆ ತಮಿಳುನಾಡಿಗೆ ನೀರು ಎಲ್ಲಿಂದ ಬಿಡಲಿ ನಾನು? ನನ್ನ ಒಡಲೇ ಇಲ್ಲಿ ಬರಿದಾಗುತ...

Monday, September 18, 2023

PARYAYA: ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

 ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ

ಬೆಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂಗಳೂರಿನಲ್ಲಿ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿಯವರೆಗೆ ಸಂಸ್ಥೆಯು ಬೆಂಗಳೂರಿನಲ್ಲಿ ಶ್ರೀನಗರ ಸಮೀಪದ ಅಪೆಕ್ಸ್‌ ಬ್ಯಾಂಕ್‌ ಸಮೀಪ ಕಾರ್ಯ ನಿರ್ವಹಿಸುತ್ತಿತ್ತು.

ಬೆಂಗಳೂರಿನ ಗಿರಿನಗರಕ್ಕೆ ಸಮೀಪದ ಮುನೇಶ್ವರ ಬ್ಲಾಕಿನ ಶನೈಶ್ಚರ ದೇವಸ್ಥಾನದ ಎದುರಿನಲ್ಲಿರುವ ಸ್ವಂತ ಕಟ್ಟಡಕ್ಕೆ ಉಕ್ಕಿನಡ್ಕಾಸ್‌ ಸ್ಥಳಾಂತರ ಸಮಾರಂಭ  2023 ಸೆಪ್ಟೆಂಬರ್‌ 17ರ ಭಾನುವಾರ ಸರಳವಾಗಿ ನಡೆಯಿತು. ಚಿತ್ರ ನಟಿ ಸೋನುಗೌಡ ಅವರು ಸಮಾರಂಭವನ್ನು ಉದ್ಘಾಟಿಸಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಶ್ರೀಧರ ಸಾಗರ್‌ ಜಿ,  ಮಂಗಳೂರಿನ ಖ್ಯಾತ ಜಾಹೀರಾತು ಸಂಸ್ಥೆ ʼಕಲ್ಕೂರ ಆರ್ಟ್ಸ್‌ʼ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿ ಶಾಂತರಾಜ್‌ ಐತಾಳ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಚರ್ಮಕ್ಕೆ ಸಂಬಂಧಿಸಿದಂತೆ ವಿಶೇಷ ಆಯುರ್ವೇದ ಉಪಚಾರ ನೀಡುವಂತಹ ʼಕಾಸ್ಮೆಟಿಕ್‌ ಚಿಕಿತ್ಸಾʼ ವಿಭಾಗವನ್ನೂ ಸೋನುಗೌಡ ಉದ್ಘಾಟಿಸಿದರು.  ಸಂಸ್ಥೆಯ ವೈದ್ಯೆ ಡಾ. ನ್ಯಾನ್ಸಿ ಆಯುರ್ವೇದ ಕಾಸ್ಮೆಟಿಕ್ಸ್‌ ಚಿಕಿತ್ಸಾ ಸೌಲಭ್ಯದ ಬಗ್ಗೆ ವಿವರಿಸಿದರು.


ಸಂಸ್ಥೆಯ ಮುಖ್ಯಸ್ಥ ಡಾ. ಜಯಗೋವಿಂದ ಅವರು ಸ್ವಾಗತ ಕೋರಿ, 1950ರಲ್ಲಿ ಸ್ಥಾಪನೆಯಾದ ಉಕ್ಕಿನಡ್ಕಾಸ್‌ ಸಂಸ್ಥೆ  ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು.  ಸಂಸ್ಥೆಯ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಡಾ. ಸಪ್ನಾ ಜಯಗೋವಿಂದ ವಂದನಾರ್ಪಣೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಸ್ವಂತ ಕಟ್ಟಡಕ್ಕೆ ಕಾಲಿಡಲು ನೆರವಾದ ಎಲ್ಲರಿಗೂ ಈ ಸಂದರ್ಭದಲ್ಲಿ ಕಿರುಕಾಣಿಕೆ ನೀಡಿ ಸತ್ಕರಿಸಲಾಯಿತು. 
ಉಕ್ಕಿನಡ್ಕಾಸ್‌ ಆಯುರ್ವೇದ ಫಾರ್ಮೆಸಿ ವಿಭಾಗದ ಚಂದನ್‌ ಕಾರ್ಯಕ್ರಮ ನಿರ್ವಹಿಸಿದರು. 

ಇದನ್ನೂ ನೋಡಿ: 

ಬೆಂಗಳೂರಿನಲ್ಲಿ ಹೊಸ ಜಾಗಕ್ಕೆ ಉಕ್ಕಿನಡ್ಕಾಸ್‌ ಆಯುರ್ವೇದ

PARYAYA: ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ:  ಮುನೇಶ್ವರ ಬ್ಲಾಕಿಗೆ ಬಂತು ಉಕ್ಕಿನಡ್ಕಾಸ್‌ ಆಯುರ್ವೇದ ಬೆಂಗಳೂರು : ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಕಾಸರಗೋಡಿನ ʼಉಕ್ಕಿನಡ್ಕಾಸ್‌ ಆಯುರ್ವೇದʼ ಇದೀಗ ಬೆಂ...

Saturday, July 29, 2023

PARYAYA: ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ

 ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂʼ

ಯ
ಕ್ಷ ಪುರುಷೋತ್ತಮ ಶ್ರೀ ದೀಪಕ್ ರಾವ್ ಪೇಜಾವರ ಅವರ ‘ಹರಿ ದರುಶನ - ಏಕ ವ್ಯಕ್ತಿ ನವರೂಪಂ’ ಎಂಬ ಯಕ್ಷಗಾನ ಪ್ರದರ್ಶನ ಇದೀಗ ಶಾಲೆ.ಕಾಮ್‌ ನಲ್ಲಿ ನಡೆಯುತ್ತಿದೆ.

ಇದರಲ್ಲಿ ದೀಪಕ್ ಅವರು ಒಂಬತ್ತು ಪಾತ್ರಗಳನ್ನು ಸ್ವತಃ ತಾವೇ ನಿರ್ವಹಿಸಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ ಪ್ರದರ್ಶನ ಇದು. ಸಂಪೂರ್ಣ ಪ್ರಸ್ತುತಿಯು ಸುಧನ್ವ ಮೋಕ್ಷವನ್ನು ಆಧರಿಸಿದೆ. ಇದು ಜೈಮಿನಿ ಭಾರತದಿಂದ ಆಯ್ಕೆ ಮಾಡಿರುವ ಉಪಕಥೆ.

ಹಂಸಧ್ವಜ, ಧೂತ, ಸುಧನ್ವ, ಸುಗರ್ಭೆ, ಕುವಳೆ, ಪ್ರಭಾವತಿ, ಅರ್ಜುನ, ಅನುಸಾಲ್ವ, ಕೃಷ್ಣ ಎಂಬ ಒಂಬತ್ತು ಪಾತ್ರಗಳನ್ನೂ ದೀಪಕ್ ಅನಾಯಾಸವಾಗಿ ಸಮರ್ಥವಾಗಿ ನಿರ್ವಹಿಸಿದ್ದಾರೆ.

ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯವರಾದ ದೀಪಕ್‌ ಪ್ರಸ್ತುತ ಬಹರೇನಿನ ಅಲ್‌ ನೂರ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾರೆ.

ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದ ದೀಪಕ್‌  ಸ್ವಲ್ಪ ಕಾಲ ಮಂಗಳೂರಿನ ಮಿಲಾಗ್ರಿಸ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದರು.

ʼಹರಿದರುಶನ- ಏಕ ವ್ಯಕ್ತಿ ನವರೂಪಂʼ ಗಂಡು ಕಲೆ ಯಕ್ಷಗಾನದ ಇತಿಹಾಸದಲ್ಲಿಯೇ ಒಂದು ವಿನೂತನ ಪ್ರಯೋಗ. ಇದರ ಸೊಬಗನ್ನು ನೋಡಿಯೇ ಆನಂದಿಸಬೇಕು.

ಶಾಲೆ.ಕಾಮ್‌ ನಲ್ಲಿ (Shaale.com) ಜುಲೈ 29ರ ಬೆಳಗ್ಗೆ 8.30ರಿಂದ ಇದರ ಪ್ರದರ್ಶನ ಆರಂಭವಾಗಿದ್ದು, ಆಗಸ್ಟ್‌ 29ರ ಮಧ್ಯಾಹ್ನ 12.30ರವರೆಗೆ ವೀಕ್ಷಣೆಗೆ ಲಭಿಸುತ್ತದೆ.

ಯಕ್ಷಗಾನ ಪ್ರಯೋಗದ ಒಂದು  ವಿಡಿಯೋ ಝಲಕ್‌ ಇಲ್ಲಿದೆ:


ಕಲಾ ಪ್ರೇಮಿಗಳು https://shaale.com/watch/ಹರಿದರುಶನ ಈ ಕೊಂಡಿಯನ್ನು (ಲಿಂಕ್)‌ ಬಳಸಿ ಇದರ ಸ್ವಾದವನ್ನು ಆಸ್ವಾದಿಸಬಹುದು.

-      ನೆತ್ರಕರೆ ಉದಯಶಂಕರ

PARYAYA: ವಿನೂತನ ಯಕ್ಷಗಾನ ಪ್ರದರ್ಶನ ʼಹರಿದರುಶನ-ಏಕವ್ಯಕ್ತಿ ನವರೂಪಂ:   ವಿನೂತನ ಯಕ್ಷಗಾನ ಪ್ರದರ್ಶನ ʼ ಹರಿದರುಶನ-ಏಕವ್ಯಕ್ತಿ ನವರೂಪಂʼ ಯ ಕ್ಷ ಪುರುಷೋತ್ತಮ ಶ್ರೀ ದೀಪಕ್ ರಾವ್ ಪೇಜಾವರ ಅವರ ‘ಹರಿ ದರುಶನ - ಏಕ ವ್ಯಕ್ತಿ ನವರೂಪಂ’ ಎಂಬ ಯಕ್...