Friday, June 15, 2018

ಬುಖಾರಿ, ಔರಂಗ ಜೇಬ್ ಹತ್ಯೆಯ ಹಿಂದೆ ಉಗ್ರ ನವೀದ್, ಐಎಸ್ಐ ಕೈವಾಡ


ಬುಖಾರಿ,  ಔರಂಗ ಜೇಬ್  ಹತ್ಯೆಯ ಹಿಂದೆ ಉಗ್ರ ನವೀದ್, ಐಎಸ್ಐ ಕೈವಾಡ


ನವದೆಹಲಿ:  ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಮುಖ್ಯಸಂಪಾದಕ ಶುಜಾತ್ ಬುಖಾರಿ ಅವರ ಹಂತಕರಲ್ಲಿ  ಒಬ್ಬ ವ್ಯಕ್ತಿ ಉಗ್ರ ನವೀದ್ ಜಾಟ್ ಎಂಬುದು ಬೆಳಕಿಗೆ ಬಂದಿದ್ದರೆ, ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಗುಂಡಿಕ್ಕಿ ಕೊಂದ ಘಟನೆಯ ಹಿಂದೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಕೈವಾಡ ಇರುವ ಬಗ್ಗೆ ಮಾಹಿತಿಗಳು ಲಭಿಸಿವೆ.

ರೈಸಿಂಗ್ಕಾಶ್ಮೀರ್ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ಬುಖಾರಿಯನ್ನು ಹತ್ಯೆಗೈಯಲು ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಒಬ್ಟಾತನು ಪಾಕ್ಉಗ್ರ ನವೀದ್ಜಾಟ್ಎಂದು ಗುಪ್ತಚರ ದಳ ಹೇಳಿದೆ.


ನವೀದ್ಜಾಟ್ಕಾಶ್ಮೀರದಲ್ಲಿನ ಹಲವಾರು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದವ. ಅಂತೆಯೇ ಆತ ಎನ್ಐಎ ವಿಚಕ್ಷಣೆಗೆ ಒಳಪಟ್ಟಿರುವ ಉಗ್ರನಾಗಿದ್ದಾನೆ. ಈತ ಈಚೆಗೆ ಶ್ರೀನಗರ ಆಸ್ಪತ್ರೆಯಿಂದ ಪರಾರಿಯಾಗಿದ್ದ.


ರೈಸಿಂಗ್ಕಾಶ್ಮೀರ್ಮುಖ್ಯ ಸಂಪಾದಕ ಶುಜಾತ್ಬುಖಾರಿ ಅವರ ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಶಂಕಿತ ಹಂತಕರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು.


ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ೂಟೇಜ್ನಲ್ಲಿ ಬೈಕ್ನಲ್ಲಿ ಮೂವರು ಉಗ್ರರು ಇದ್ದು ಮುಂದೆ ಕುಳಿತವ ಕಪ್ಪು ಹೆಲ್ಮೆಟ್ಧರಿಸಿದ್ದ. ಮಧ್ಯದಲ್ಲಿದ್ದನ ಕೈಯಲ್ಲಿ ಬ್ಯಾಗ್ಇದ್ದು ಆತ ಮುಖವನ್ನು ಮುಚ್ಚಿಕೊಂಡಿದ್ದ. ಈತನ ಬೆನ್ನ ಹಿಂದೆ ಕುಳಿತವ ಕಪ್ಪು ಮುಖವಾಡ ತೊಟ್ಟಿದ್ದ.


ಬುಖಾರಿ ಹಂತಕರನ್ನು ಸೆರೆ ಹಿಡಿಯಲು ಜನರು ತಮಗೆ ತಿಳಿದಿರುವ ಮಾಹಿತಿಯನ್ನು ಕೊಡುವಂತೆ ಪೊಲೀಸರು ಕೋರಿದ್ದರು.


ಪಾಕಿಸ್ಥಾನದ ಮುಲ್ತಾನ್ನವನಾಗಿರುವ ಮೊಹಮ್ಮದ್ನವೀದ್ಜಾಟ್ ವರ್ಷ ಫೆ.6ರಂದು ಶ್ರೀನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ಆಸ್ಪತ್ರೆಯಿಂದ ಪರಾರಿಯಾಗಿದ್ದ. ಬಂಧಿತ ನವೀದ್ಜಾಟ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ಒಯ್ಯುತ್ತಿದ್ದ ಇಬ್ಬರು ಪೊಲೀಸರನ್ನು ಆತನ ಸಂಗಡಿಗರು ಗುಂಡಿಕ್ಕಿ ಕೊಂದು ಜಾಟ್ಪಲಾಯನಕ್ಕೆ ಸಹಕರಿಸಿದ್ದರು.


ಐಎಸ್ ಐ ಕೈವಾಡ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಲಾಂಪೋರಾದಲ್ಲಿ ಗುಂಡೇಟುಗಳೊಂದಿಗೆ ಶವವಾಗಿ ಪತ್ತೆಯಾಗಿರುವ ಅಪಹೃತ ಸೇನಾ ಜವಾನ ಔರಂಗಜೇಬ್ಅವರ ಹತ್ಯೆಯ ಹಿಂದೆ ಕುಖ್ಯಾತ ಪಾಕ್ಬೇಹು ಸಂಸ್ಥೆ ಐಎಸ್ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ದಳಕ್ಕೆ ಕೆಲವು ಸೂಕ್ಷ್ಮ ಮಾಹಿತಿಗಳು ಲಭಿಸಿವೆ ಎಂದು ವರದಿಗಳು ತಿಳಿಸಿವೆ.


ಕಾಶ್ಮೀರ ವಿಮೋಚನೆಗಾಗಿ ಜಿಹಾದ್ವಿಮೋಚನಾ ಸಮರದಲ್ಲಿ ಭಾಗಿಯಾಗಿರುವ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಿಂದ ಧೃತಿಗೆಟ್ಟಿರುವ ಪಾಕ್ಐಎಸ್, ಭಾರತಕ್ಕೆ ಬುದ್ದಿ ಕಲಿಸುವ ಹುನ್ನಾರದಲ್ಲಿ ಯೋಧ ಔರಂಜೇಬ್ಅವರನ್ನು ಹತ್ಯೆಗೈದಿರವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.


ಯೋಧ ಔರಂಗಜೇಬ್ಅವರು ಅಪಹರಣಕ್ಕೆ ಗುರಿಯಾದ ಕೆಲವೇ ತಾಸುಗಳಲ್ಲಿ ಶವವಾಗಿ ಪತ್ತೆಯಾಗಿದ್ದರು.
ಔರಂಗಜೇಬ್
ಅವರು ಹಿಜ್ಬುಲ್ಮುಜಾಹಿದೀನ್ಉಗ್ರ ಸಮೀರ್ಟೈಗರ್ನನ್ನು ಕಳೆದ ಮೇ ತಿಂಗಳಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಗೈದ ಭಾರತೀಯ ಸೇನಾ ತಂಡದ ಸದಸ್ಯರಾಗಿದ್ದರು.


ಕಾಶ್ಮೀರದಲ್ಲಿನ ವಿಮೋಚನಾ ಜಿಹಾದಿಗಳು ಭಾರತೀಯ ಸೇನಾ ಪಡೆಯ ಕಾರ್ಯಾಚರಣೆಗೆ ಬೆದರುವುದಿಲ್ಲ ಎಂಬ ಸಂದೇಶ ರವಾನೆಯ ಉದ್ದೇಶದಲ್ಲಿ  ಪಾಕ್ಐಎಸ್ ಯೋಧ ಔರಂಗಜೇಬ ಅವರ ಅಪಹರಣ ಮತ್ತು ಹತ್ಯೆಯನ್ನು ಆಯೋಜಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.


No comments:

Post a Comment