ನಾನು ಮೆಚ್ಚಿದ ವಾಟ್ಸಪ್

Monday, June 11, 2018

ಅಟಲ್ ಬಿಹಾರಿ ವಾಜಪೇಯಿ


ಅಟಲ್ ಬಿಹಾರಿ ವಾಜಪೇಯಿ

ಭಾರತದಲ್ಲಿ ಕಾಂಗ್ರೆಸ್ಸೇತರ ಕೇಂದ್ರ ಸರ್ಕಾರದ ಪ್ರಧಾನಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣವಾಗಿ ಪೂರೈಸಿದ ಧೀಮಂತ ನಾಯಕ.


1977ರಲ್ಲಿಭಾರತವು  ತುರ್ತುಪರಿಸ್ಥಿತಿಯ ಆಘಾತವನ್ನು ಮೆಟ್ಟಿ ನಿಂತ ಬಳಿಕ ವಿಶ್ವಸಂಸ್ಥೆಯಲ್ಲಿ ಭಾರತೀಯ ಭಾಷೆಯಲ್ಲಿ (ಹಿಂದಿ) ಭಾಷಣ ಮಾಡುವ ಮೂಲಕ ಭಾರತೀಯ ಭಾಷೆಯನ್ನು ವಿಶ್ವಸಂಸ್ಥೆಯಲ್ಲಿ ಮೆರೆದ ಮೊದಲ ವಿದೇಶಾಂಗ ಸಚಿವ ಎಂಬ ಹೆಗ್ಗಳಿಕೆ ಗಳಿಸಿಕೊಂಡವರು.
           
. ಪದ್ಮ ವಿಭೂಷಣ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅವರಿಗೆ, 2015ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವ, ಭಾರತ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

ಅವರನ್ನು ಈದಿನ (11 ಜೂನ್ 2018) ವೈದ್ಯಕೀಯ ತಪಾಸಣೆ ಸಲುವಾಗಿ ದೆಹಲಿಯ  ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸಬಲ್ಲಿರಾ?


ವಿಶ್ವ ಸಂಸ್ಥೆಯಲ್ಲಿ ಅವರು ಮಾಡಿದ ಭಾಷಣದ ವಿಡಿಯೋ ಮೇಲಿದೆ ವೀಕ್ಷಿಸಿ.

No comments:

Post a Comment