ಮುಂಬೈ: ಬಾಲಿವುಡ್ ಚಿತ್ರನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ವಾಸವಾಗಿರುವ ಮುಂಬೈಯ ಗಗನಚುಂಬಿ ಕಟ್ಟಡ ವರ್ಲಿಯ ಬಹುಮಹಡಿಗಳ ಬ್ಯೂಮಾಂಡ್ ಟವರ್ಸ್‌ನಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು. ಆದರೆ ನಟಿ ದೀಪಿಕಾ ಪಡುಕೋಣೆ ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಪ್ಪಾಸಾಹೇಬ್ ಮರಾಠೆ ಮಾರ್ಗದಲ್ಲಿರುವ ಕಟ್ಟಡದ ೩೩ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ೯೦-೯೫ ಮಂದಿಯನ್ನು ಕಟ್ಟಡದಿಂದ ರಕ್ಷಿಸಲಾಗಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಬಯಿಯ ಪ್ರಭಾವತಿಯಲ್ಲಿರುವ ಈ ಅಪಾರ್ಟ್‌ಮೆಂಟ್ ಕಟ್ಟಡದ ಬಿ-ವಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಂಕಿ ಅನಾಹುತ ಸಂಭವಿಸಿದಾಗ ದೀಪಿಕಾ ತನ್ನ ಫ್ಲ್ಯಾಟಿನಲ್ಲಿ ಇರಲಿಲ್ಲ ಎಂದು ಆಕೆಗೆ ನಿಕಟವಿರುವ ಮೂಲಗಳು ಹೇಳಿವೆ. ಆಕೆ ಬ್ರಾಂಡ್ ಒಂದರ ಶೂಟಿಂಗ್‌ಗಾಗಿ ಹೊರಗೆ ಹೋಗಿದ್ದರು.
ದೀಪಿಕಾ ಅವರ ಮನೆಗಾಗಲೀ ಕಚೇರಿಗಾಗಿ ಬೆಂಕಿ ತಾಗಿಲ್ಲ; ಬೆಂಕಿ ಕಂಡುಬಂದಿರುವುದು ೩೩ನೇ ಅಂತಸ್ತಿನಲ್ಲಿ. ಅಗ್ನಿ ಶಾಮಕ ದಳದವರು ಈಗಾಗಲೇ ಅಲ್ಲಿಗೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಆಕೆಯ ಸಿಬಂದಿಗಳು ಫ್ಲ್ಯಾಟಿನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ದೀಪಿಕಾಗೆ ನಿಕಟವಿರುವ ಮೂಲಗಳು ತಿಳಿಸಿದವು.
ಬೆಂಕಿ ಅವಘಡದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.
ಆರು ಅಗ್ನಿಶಾಮಕ ವಾಹನಗಳು, ಐದು ಜಂಬೋ ಟ್ಯಾಂಕರುಗಳು ಮತ್ತು ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
‘ನಮ್ಮ ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಕಿ ನಂದಿಸಲು ಮತ್ತು ಜನರಿಗೆ ನೆರವಾಗಲು ಅವರು ಪ್ರಯತ್ನಿಸುತ್ತಿದ್ದಾರೆ ‘ ಮುಂಬೈ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ಜೂನ್ ೨ರಂದು ದಕ್ಷಿಣ ಮುಂಬೈಯ ಆದಾಯ ತೆರಿಗೆ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಆದರೆ ಸಾವು ನೋವು ವರದಿಯಾಗಿರಲಿಲ್ಲ.

No comments:
Post a Comment