ನಾನು ಮೆಚ್ಚಿದ ವಾಟ್ಸಪ್

Thursday, June 21, 2018

ಅಲ್ ಕೈದಾ, ಐಸಿಸ್ ಅಂಗ ಸಂಸ್ಥೆಗಳಿಗೆ ನಿಷೇಧ


ಅಲ್ ಕೈದಾ, ಐಸಿಸ್ ಅಂಗ ಸಂಸ್ಥೆಗಳಿಗೆ ನಿಷೇಧ

ನವದೆಹಲಿ: ಭಯೋತ್ಪಾದಕ ಸಂಘಟನೆಗಳಾದ ಅಲ್ಕೈದಾ, ಐಸಿಸ್ನ (ಐಎಸ್ಐಎಸ್‌) ಹೊಸ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಗುರುವಾರ, 21 ಜೂನ್ 2018ರಂದು  ನಿಷೇಧಿಸಿತು.

ಭಾರತದ ಉಪಖಂಡದ ಅಲ್ ಕೈದಾ ಮತ್ತು ಆಫ್ಗಾನಿಸ್ತಾನದಲ್ಲಿ ನೆಲೆಯಾಗಿರುವ ಐಸಿಸ್ ಅಂಗಸಂಸ್ಥೆ ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಅಂಡ್ ಶಾಮ್ಖೊರಾಸನ್ (ಐಎಸ್ಐಎಸ್‌–ಕೆ) ಸಂಘಟನೆಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿವೆ ಎಂದು ಕೇಂದ್ರ ಗೃಹಸಚಿವಾಲಯ ಹೊರಡಿಸಿರುವ ಆದೇಶ ತಿಳಿಸಿದೆ.

ಐಎಸ್ಐಎಸ್‌–ಕೆ ಸಂಘಟನೆಯು ಖೊರಾಸನ್ ಪ್ರಾಂತ್ಯದ (ಐಎಸ್ಐಎಸ್ ವಿಲಾಯತ್ ಖೋರಾಸನ್) ಇಸ್ಲಾಮಿಕ್ ಸ್ಟೇಟ್ ಎಂದೇ ಹೆಸರಾಗಿವೆ.

ಸಂಘಟನೆಗಳು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಹಾಗೂ ಜಾಗತಿಕ ಜಿಹಾದ್ಗೆ ಭಾರತೀಯ ಯುವಕರನ್ನು ಪ್ರಚೋದಿಸುತ್ತಿರುವ ಅಂಶ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.

ಅಲ್ ಕೈದಾದ ಸಹ ಸಂಸ್ಥೆ ಎಕ್ಯೂಐಎಸ್, ನೆರೆಯ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಉಪಖಂಡದಲ್ಲಿ ಭಾರತೀಯ ಹಿತಾಸಕ್ತಿಗಳ ಮೇಲೆ ಯುದ್ಧ ಸಾರಿದೆ ಎಂದು ಆದೇಶ ತಿಳಿಸಿದೆ.

No comments:

Post a Comment