ನಾನು ಮೆಚ್ಚಿದ ವಾಟ್ಸಪ್

Saturday, June 9, 2018

ಒಂದೆರಡಲ್ಲ 5 ಬಾರಿ ಪ್ರಧಾನಿ ಮೋದಿ ಹತ್ಯೆಗೆ ಸಂಚು!


ಒಂದೆರಡಲ್ಲ 5 ಬಾರಿ ಪ್ರಧಾನಿ ಮೋದಿ ಹತ್ಯೆಗೆ ಸಂಚು!

ನವದೆಹಲಿ: ಜಾಗತಿಕ ಮಟ್ಟದಲ್ಲಿ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ವರೆಗೆ ಒಂದೆರಡಲ್ಲ ಐದು ಬಾರಿ ಸಂಚು ರೂಪಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

2013ರಿಂದ ವರೆಗೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ನಡೆದ ಮೆರವಣಿಗೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮೋದಿ ಅವರನ್ನು ಕೊಲ್ಲುವ ಸಂಚು ರೂಪಿಸಲಾಗಿತ್ತು. ಆದರೆ ಐದು ಬಾರಿಯೂ ಈ ತಂತ್ರ ವಿಫಲಗೊಂಡಿತು ಎಂದು ಪೊಲೀಸರು ಹೇಳಿದ್ದಾರೆ.

ಯಾವ್ಯಾವಾಗ ಕೊಲೆ ಸಂಚು ನಡೆದಿತ್ತು ಎಂಬ ವಿವರ ಇಲ್ಲಿದೆ:

2013 ಅಕ್ಟೋಬರ್‌:
2013ರ ಅಕ್ಟೋಬರ್ 27ರಂದು ಪಾಟ್ನಾದಲ್ಲಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯ  ವೇಳೆ ಸರಣಿ ಬಾಂಬ್ಸ್ಪೋಟ ಸಂಭವಿಸಿತ್ತು. ಗಾಂಧಿ ಮೈದಾನದ ಸುತ್ತಮುತ್ತಣ ಪ್ರದೇಶದಲ್ಲಿ  ಒಟ್ಟು  9 ಬಾಂಬ್ಗಳನ್ನು  ಪೊಲೀಸರು ಪತ್ತೆ ಹಚ್ಚಿದ್ದರು.  ಬಾಂಬ್ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ  ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿತ್ತು.

2015 ಮೇ:
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ  ಮೊದಲ ವರ್ಷಾಚರಣೆ ವೇಳೆ, ಪಂಡಿತ್ದೀನದಯಾಳ್ಉಪಾಧ್ಯಾಯ ಅವರ ಗ್ರಾಮದಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಮೋದಿ ಅವರನ್ನು ಬಾಂಬ್ಮೂಲಕ ಸ್ಫೋಟಿಸುವ  ಬಗ್ಗೆ ವಾಟ್ಸ್ಆಪ್ಸಂದೇಶ ರವಾನೆಯಾಗಿತ್ತು. ಸಂಬಂಧ ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದರು.

2017 ಫೆಬ್ರವರಿ:
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಕಾಲದಲ್ಲಿ ಹರೇನ್ಪಾಂಡ್ಯ ಹತ್ಯೆ ಪ್ರಕರಣದ ಆರೋಪಿಯು ಪ್ರಧಾನಿ ಮೋದಿ  ಅವರ ವಾಹನವನ್ನು ರಾಕೆಟ್ಲಾಂಚರ್ ಮೂಲಕ ಉಡಾಯಿಸಲು ಯೋಜನೆ ರೂಪಿಸಿರುವುದು ಬೆಳಕಿಗೆ ಬಂದಿತ್ತು. ಮಾವೊ ಜಿಲ್ಲೆಯಲ್ಲಿ ಚುನಾವಣಾ ಸಭೆಗೆ ಆಗಮಿಸುವ ವೇಳೆ ಮೋದಿ ಅವರನ್ನು ಹತ್ಯಗೈಯುವ  ಸಂಚು ರೂಪಿಸಲಾಗಿತ್ತು ಎಂದು ಎಎಸ್ಪಿ ಆರ್ಕೆ ಸಿಂಗ್ತಿಳಿಸಿದ್ದರು. ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿತ್ತು.

2017 ಜೂನ್‌:
ಕೇರಳದ ಕೋಚಿಯಲ್ಲಿನ ಮೆಟ್ರೋ ರೈಲು ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರಿಗೆ ಆ ದಿನ ಭಯೋತ್ಪಾದಕರಿಂದ ಜೀವ ಬೆದರಿಕೆ ಇತ್ತು ಎಂದು ಕೇರಳ ಪೊಲೀಸ್ ಮಹಾ ನಿರ್ದೇಶಕ ಟಿಪಿ ಸೆನ್ಕುಮಾರ್ತಿಳಿಸಿದ್ದಾರೆ. ಆದರೆ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

2018 ಜೂನ್‌:
ಮಾವೋವಾದಿ ನಕ್ಸಲೀಯರು ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಶುಕ್ರವಾರ ಪುಣೆ ಪೊಲೀಸರು ಬಹಿರಂಗ ಪಡಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರನ್ನು ಹತ್ಯೆ ಗೈದ ಮಾದರಿಯಲ್ಲಿ ಹತ್ಯೆಗೈಯುವಂತೆ ಮಾವೋವಾದಿಗಳಿಗೆ ಬರೆದ ಪತ್ರ ರೋನ ವಿಲ್ಸನ್ಎಂಬವರ ದೆಹಲಿಯ  ಮನೆಯಲ್ಲಿ ಸಿಕ್ಕಿರುವುದಾಗಿ ಪುಣೆ ಪೊಲೀಸರು ಹೇಳಿದ್ದಾರೆ. ಮೋದಿ ಅವರ ರೋಡ್ಶೋ ಹಾಗೂ ಬಹಿರಂಗ ಕಾರ್ಯಕ್ರಮಗಳನ್ನು ಗುರಿಯಾಗಿಸುವಂತೆ ಪತ್ರದಲ್ಲಿ ತಿಳಿಸಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  ರೋನ ವಿಲ್ಸನ್ಸೇರಿದಂತೆ ಐವರನ್ನು ಪೊಲೀಸರು ಪ್ರಕರಣದಲ್ಲಿ ಬಂಧಿಸಿದ್ದಾರೆ.

No comments:

Post a Comment