ಸುದಾರಿಕೆ ಶಂಭಟ್ಟ.. ಹ.ಹ. ಸ್ಪೆಷಲ್
!
ಮರುದಿನಕ್ಕೆ ಈ ಹುಳಿ ಹಿಟ್ಟಿನ ಎರದು ಕೊಟ್ರೆ ಕೇಶವಣ್ಣ ತಿನ್ನವು.. ನಾಡಿದ್ದು ತಿಥಿ ದಿನಕ್ಕೆ ಹೇಂಗೂ ಆಗ.. ಈ ಕಡದು ಮಡುಗಿದ ಹಿಟ್ಟಿನ ಎಂತ ಮಾಡೊದು.. ತಲಗೆ ತಿರ್ಪಲೆ ಹಾಕೆಕಷ್ಟೇ ಹೇಳಿ ಪರಂಚಿಗೊಂಡು ಒಳುದ ಹಿಟ್ಟಿನ ಫ್ರಿಜ್ಜಿಲ್ಲಿ ಮಡುಗಿತ್ತು ಹೇಮಾವತಿಯಕ್ಕ.
ತಿಥಿ ಮುನ್ನಾಣ ದಿನ ಹೊತ್ತೋಪಗಳೇ ವೊಡೆ, ಸುಕ್ರುಂಡೆ ಮಾಡ್ಳೆ ಸಕಾಯಕ್ಕೆ ಹೇಳಿ ಶಂಭಟ್ಟನ ಬಪ್ಪಲೆ ಹೇಳಿದ್ದು. ಶಂಭಟ್ಟಣ್ಣ ಒಲೆ ಬುಡಲ್ಲಿ ವೊಡೆ ಬೇಶೊಗ ಹೇಮಾವತಿ ಅಕ್ಕಂಗೊಂದು ಐಡಿಯಾ ಫ್ಲೇಶ್ ಆತು.! ಫ್ರಿಜ್ಜಿಲ್ಲಿ ಕಡದು ಮಡುಗಿದ ಹಿಟ್ಟಿನ ಅಂತೇ ಚೆಲ್ಲಿ ಹಾಳು ಮಾಡೊದೆಂತಕೆ ಹೇಳಿ, ಅದಕ್ಕಿಷ್ಟು ಅಕ್ಕಿಹೊಡಿ, ಎಳ್ಳು ಹಾಕಿ ಮೇಲಿಂದ ರಜ ಬೆಣ್ಣೆಯೂ ಸೇರ್ಸಿ ಒಂದು ತಪಲೆ ಹಿಟ್ಟು ತಂದು ಶಂಭಟ್ಟಣ್ಣನತ್ರೆ ಹೇಳಿತ್ತು- ವೊಡೆ ಎಲ್ಲ ಬೇಶಿಕ್ಕಿ ಆ ಕೊಳೆ ಎಣ್ಣೆ ಅಂತೇ ಹಾಳಪ್ಪದಲ್ಲೋ.. ಈ ಹಿಟ್ಟಿನ ರಜಾ ಚಕ್ಕುಲಿ ಮಾಡಿಕ್ಕುವೋಂ ಹೇಳಿ. ಕೇಶವಣ್ಣ ಗೊಂತಾದರೆ ಪರಂಚುಗು ಹೇಳಿ, ಅವಂ ಒಳ ಬರೆಕಾರೆ ಮೊದಲೇ ಮಾಡಿದ ಆ ಚಕ್ಕುಲಿಯ ಡಬ್ಬಿಲ್ಲಿ ತುಂಬುಸಿ ಹೇಮಾವತಿ ಅಕ್ಕ ಒಳ ಹೇಮಾರಿಸಿತ್ತು.!
ತಿಥಿ ಮರುದಿನ ಪೇಟೆಲಿ ಹಲಸಿನ ಹಬ್ಬ. ತಿಥಿ ಕಳುದು ಒತ್ತರೆ ಕೆಲಸ ಬಾಕಿ ಇದ್ದು ಹೇಳಿ ಹೇಮಾವತಿ ಅಕ್ಕಂಗೆ ಹೋಪಲಾಯಿದಿಲ್ಲೆ. ಹಲಸಿನ ಮೇಳಲ್ಲಿ ಸುಮಕ್ಕನ ನೇತೃತ್ವಲ್ಲಿ ಹೆಮ್ಮಕ್ಕಳೇ ಮಡುಗುವ ಹಲಸಿನ ಸ್ಟೋಲಿಂಗೆ, ಕೇಶವಣ್ಣಂಗೆ ಅರಡ್ಯದ್ದ ಹಾಂಗೆ ಈ ಹೊಸ ರುಚಿ ಚಕ್ಕುಲಿಯ ಶಂಭಟ್ಟಣ್ಣನ ಕೈಲಿ ಕಳಿಸಿ ಕೊಟ್ಟತ್ತು. ಹೊಸ ರುಚಿ ಸ್ಪರ್ಧೆಲಿ ರುಚಿಯಾದ ಈ ಗರಿ ಗರಿ ಹಲಸಿನ ಚಕ್ಕುಲಿಗೆ ಬಹುಮಾನವೂ ಸಿಕ್ಕಿತ್ತು, ಸ್ಟೋಲಿಂಗೆ ಕಳಿಸಿದ ಮಾಲು ಕಸ್ತಲೆ ಆಯೆಕ್ಕಾರೆ ಖಾಲಿ.! ಹೇಮಾವತಿ ಅಕ್ಕನ ಹಲಸಿನಕಾಯಿ ದೋಸೆಯ ಹುಳಿಹಿಟ್ಟು ಹೊಸ ವೇಲ್ಯೂ ಏಡೆಡ್ ಪ್ರೋಡಕ್ಟೂ ಆತು.! ಬಹುಮಾನವೂ ಸಿಕ್ಕಿತ್ತು.! ಚಿಕ್ಕಣಿ ಪೈಸೆಯೂ ಆತು.!!
ಮಧ್ಯಾಹ್ನಮೇಲೆ ಪೇಟೆಗೆ ಹೋದ ಅಮಾಯಕ ಕೇಶವಣ್ಣ ಹಾಂಗೇ ಒಂದರಿ ಹಲಸಿನ ಮೇಳಕ್ಕೂ ಹೋದ. ಅಲ್ಲಿಂದ ಬಪ್ಪಗ ಹೆಮ್ಮಕ್ಕಳ ಸ್ಟೋಲಿಂದ ಅದೂ ಇದೂ ತೆಕ್ಕೊಂಡು ಮನೆಗೆ ಬಂದ. "ಇದಾ
ಹೇಮಾವತಿ, ಇಂದು ಹಲಸಿನ ಮೇಳಲ್ಲಿ ಹೊಸ ರುಚಿ ಕಂಡಿತ್ತು. ಸೇಂಪಲ್ ನೋಡೊಗ ಮೃದು ಆಗಿ ಭಾರೀ ಪಸ್ಟಾಯಿದು. ನಿನಗೂ ರುಚಿ ನೋಡ್ಳಾತು ಹೇಳಿ ಪೈಸೆ ಕೊಟ್ಟು ತೆಕ್ಕೊಂಡೆ. ಹೇಂಗೆ ಮಾಡೊದು ಹೇಳಿ ಆರತ್ರಾರು ಕೇಳಿ ಕಲ್ತುಗೋ..!"
ಹೇಮಾವತಿಯಕ್ಕ, ಎಂತಪ್ಪಾ ಇದು.. ಹೇಳಿ ಭಾರೀ ಕುತೂಹಲಲ್ಲಿ ಕಟ್ಟ ಬಿಡುಸಿ ನೋಡೊಗ..
ಶಂಭಟ್ಟಣ್ಣನತ್ರೆ ಉದಿಯಪ್ಪಗ ಕೊಟ್ಟು ಕಳಿಸಿದ ಅದೇ ಹಲಸಿನಕಾಯಿ ಹುಳಿ ಹಿಟ್ಟಿನ ಚಕ್ಕುಲಿ..!!
-ಪೈಸಾರಿ ಬಾವ
(ವಾಟ್ಸಪ್
ನಲ್ಲಿ ಬಂದ ಕಥೆ).
No comments:
Post a Comment