Showing posts with label ಬಾಲಾಜಿ. Show all posts
Showing posts with label ಬಾಲಾಜಿ. Show all posts

Sunday, June 21, 2026

PARYAYA: ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

 ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು

ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದು.


ಯಕ್ಷಗಾನ ಕಲಾವಿದರು ತಮ್ಮ ವೇಷ ಧರಿಸುವುದನ್ನು ಸ್ವತಃ ಮಾಡುತ್ತಾರೆ, ಅದು ಅಂದವಾಗಿ ಬಣ್ಣ ಬಳಿದುಕೊಂಡು, ವೇಷಭೂಷಣ ತೊಟ್ಟುಕೊಳ್ಳುವುದರಿಂದ ಹಿಡಿದು ಗೆಜ್ಜೆ ಕಟ್ಟುವವರೆಗೂ ಅವರವರೇ ತಮ್ಮ ಕೆಲಸಗಳನ್ನು ಮಾಡುತ್ತಾರೆ.

ಗೆಜ್ಜೆ ಕಟ್ಟುವುದನ್ನು ಕಲಿಯುವ ಮುನ್ನ ಗುರುಗಳು ಗೆಜ್ಜೆಯನ್ನು ಕಲಾವಿದರಿಗೆ ಕೊಡುತ್ತಾರೆ. ಅದನ್ನು ಪಡೆದುಕೊಳ್ಳುವ ಕಲಾವಿದರು ಪ್ರಪ್ರಥಮವಾಗಿ ದೇವರ ಮುಂದೆ ಹೋಗಿ ನಮಸ್ಕರಿಸಿ ಆ ಬಳಿಕ ಗುರುಗಳಿಗೆ ನಮಸ್ಕರಿಸುತ್ತಾರೆ. ಆ ಬಳಿಕ ಗುರುಗಳು ಕಲಾವಿದರಿಗೆ ಗೆಜ್ಜೆ ಕಟ್ಟುವುದನ್ನು ಹೇಳಿಕೊಡುತ್ತಾರೆ.

ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಚೌಕಿಯಲ್ಲಿ ಗಣೇಶನ ಭಾವಚಿತ್ರವನ್ನು ಇರಿಸಿರುತ್ತಾರೆ. ಗೆಜ್ಜೆ ಕಟ್ಟುವ ಮುನ್ನ ಕಲಾವಿದರು ಗಣೇಶನಿಗೆ ನಮಸ್ಕರಿಸಿ ನಂತರ ಗೆಜ್ಜೆ ಕಟ್ಟಿಕೊಳ್ಳುತ್ತಾರೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ತಿಂಗಳುಗಳಿಂದ ಯಕ್ಷಗಾನ ಕಲಿಯುತ್ತಿರುವ ಮಕ್ಕಳಿಗೆ ಇಂದು ೨೦೨೬ ಜೂನ್‌ ೨೧ರ ಭಾನುವಾರ ಗೆಜ್ಜೆ ಕಟ್ಟುವ ಸಂಭ್ರಮ. ಯಕ್ಷ ಕಲಾ ಕೌಸ್ತುಭ ತಂಡದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರು ಮಕ್ಕಳಿಗೆ ಗೆಜ್ಜೆ ಕಟ್ಟುವ ಬಗ್ಗೆ ಕಾರ್ಯಾಗಾರವನ್ನು ನಡೆಸಿದರು.

ಸಂದರ್ಭದ ಕೆಲವು ಪಟಗಳು ಹಾಗೂ ವಿಡಿಯೋಗಳು ಇಲ್ಲಿವೆ.

ಅಂದಹಾಗೆ ಯಕ್ಷಗಾನ ಕಲಿಯಲು ಇಚ್ಛಿಸುವವರಿಗಾಗಿ ಯಕ್ಷ ಕಲಾ ಕೌಸ್ತುಭದ ಎರಡನೇ ತಂಡದ ಅಭ್ಯಾಸ ಮುಂದಿನ ಭಾನುವಾರ ೨೦೨೬ ಜೂನ್‌ ೨೧ರಂದು ಬೆಳಗ್ಗೆ ಆರಂಭವಾಗಲಿದೆ. 
ಆಸಕ್ತರು ಇಲ್ಲಿ ಕ್ಲಿಕ್‌ ಮಾಡಿ ನೋಡಿ 👉


PARYAYA: ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು:   ಯಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಯ ಕ್ಷಗಾನದಲ್ಲಿ ಗೆಜ್ಜೆ ಕಟ್ಟುವುದು ಒಂದು ಮಹತ್ವದ ಅಂಗ. ಗೆಜ್ಜೆ ಕಟ್ಟುವುದು ಯಕ್ಷಗಾನ ಕಲಾವಿದರಿಗೆ ಒಂದು ಸಂಭ್ರಮದ ಕ್ಷಣವೂ ಅಹುದ...

Tuesday, May 26, 2026

PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

 ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ

ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ, ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರುವ ಶ್ರೀ ಹನುಮಂತನ ಕೃಪೆಗೆ ಪಾತ್ರವಾಗಲು ನೆರವೇರಿಸುವ ಅತ್ಯಂತ ಪವಿತ್ರವಾದ ಒಂದು ಆಚರಣೆ.

ಜೀವನದ ಹಾದಿಯಲ್ಲಿ ಎದುರಾಗುವ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ, ಅಡೆತಡೆಗಳನ್ನು ನಿವಾರಿಸಲು ಹಾಗೂ ಎಲ್ಲ ಬಗೆಯ ದುಃಖ-ಕಷ್ಟಗಳಿಂದ ಮುಕ್ತಿ ಪಡೆಯಲು ಈ ಹೋಮವನ್ನು ಮಾಡಲಾಗುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಹನುಮಂತನ ದಿವ್ಯ ರಕ್ಷಾಕವಚ ಮತ್ತು ಆಶೀರ್ವಾದವನ್ನು ಪಡೆಯುವುದೇ ಇದರ ಮುಖ್ಯ ಉದ್ದೇಶ.

ಆಂಜನೇಯ ಹೋಮದ ಆಚರಣೆಯು ಭಕ್ತರಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ದೃಢತೆಯನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನಲ್ಲಿದ್ದ ಭೀತಿಯನ್ನು ಹೋಗಲಾಡಿಸಿ, ಜೀವನದ ವಿವಿಧ ಮಜಲುಗಳಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸಲು ದಾರಿಯಾಗುತ್ತದೆ.

ಈ ಪವಿತ್ರ ವಿಧಿಯಲ್ಲಿ ಹನುಮಂತನ ಮೂಲಮಂತ್ರ ಸಹಿತ ಶಕ್ತಿಶಾಲಿ ಮಂತ್ರಗಳನ್ನು ಪಠಿಸಲಾಗುತ್ತದೆ. ಹೋಮ ಕುಂಡದಲ್ಲಿ ಪವಿತ್ರ ಹವಿಸ್ಸನ್ನು ಅರ್ಪಿಸುವ ಮೂಲಕ, ಹನುಮದೇವನ ದಿವ್ಯ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿ, ಸಕಲ ಅಭೀಷ್ಟಗಳನ್ನು ಈಡೇರಿಸಿಕೊಳ್ಳುವ ಸುಂದರ ಪ್ರಕ್ರಿಯೆ ಇದು.

ಹನುಮ ಜಯಂತಿಯಂತಹ ಅತ್ಯಂತ ಮಂಗಳಕರ ಸಂದರ್ಭಗಳಲ್ಲಿ ಈ ಹೋಮವನ್ನು ನೆರವೇರಿಸುವುದರಿಂದ ವಿಶೇಷ ಫಲಗಳು ಲಭ್ಯವಾಗುತ್ತವೆ. ಇದು ನಿಮ್ಮ ಆಧ್ಯಾತ್ಮಿಕ ಅನುಭವವನ್ನು ಮತ್ತಷ್ಟು ಉನ್ನತಗೊಳಿಸಿ, ಭಗವಂತನ ಕೃಪೆಗೆ ಪಾತ್ರರನ್ನಾಗಿ ಮಾಡುತ್ತದೆ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಶಾಸ್ತ್ರಿ ಮತ್ತು ಅವರ ಸಹ ಋತ್ವಿಜರು ೨೦೨೬ ಮೇ ೨೬ರ ಮಂಗಳವಾರ ಅಭಯ ಆಂಜನೇಯನ ಸನ್ನಿಧಾನದಲ್ಲಿ ಕೌಟುಂಬಿಕ ಸಂಕಲ್ಪಕ್ಕೆ ಅನುಗುಣವಾಗಿ ದಶದ್ರವ್ಯ ಆಹುತಿಯೊಂದಿಗೆ ಈ ಆಂಜನೇಯ ಹೋಮವನ್ನು ನೆರವೇರಿಸಿದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.



PARYAYA: ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯಕ್ಕಾಗಿ:   ಶ್ರೀ ಆಂಜನೇಯ ಹೋಮ: ಶಕ್ತಿ ಮತ್ತು ಧೈರ್ಯ ಕ್ಕಾಗಿ ಹ ನುಮದ್ವಂದನೆ ಅಥವಾ ಆಂಜನೇಯ ಹೋಮವು ಸಾಕ್ಷಾತ್ ವಾಯುಪುತ್ರ , ಅಪ್ರತಿಮ ಶೌರ್ಯ ಮತ್ತು ಅಪಾರ ಶಕ್ತಿಯ ಸಂಕೇತವಾಗಿರು...

Sunday, February 15, 2026

PARYAYA: ಶಿವೋಹಂ ಶಿವೋಹಂ: ಮಹಾ ಶಿವರಾತ್ರಿ ಸಡಗರ

 ಶಿವೋಹಂ ಶಿವೋಹಂ: ಮಹಾ ಶಿವರಾತ್ರಿ ಸಡಗರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ರ ಫೆಬ್ರುವರಿ ೧೫ರಂದು ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಬೆಳಗ್ಗೆ ಶಿವಲಿಂಗಕ್ಕೆ ಗಂಗಾಜಲ ಹಾಗೂ ಕ್ಷೀರಾಭಿಷೇಕ ಪೂರ್ವಕ ಅರ್ಚನೆ ಸಲ್ಲಿಸಿ ಬಳಿಕ, ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸೇರಿದಂತೆ ಸಪರಿವಾರ ದೇವರುಗಳಿಗೆ ಹಾಗೂ ಶಿವನಿಗೆ ಮಹಾಮಂಗಳಾರತಿ ಸೇವೆ ಮಾಡಲಾಯಿತು.

ಆರಂಭದಲ್ಲಿ ಯಕ್ಷ ಕಲಾ ಕೌಸ್ತುಭ ತಂಡದಿಂದ ಗಣಪತಿ ಸ್ತುತಿ ನಡೆಯಿತು.

ಸಾಯಂಕಾಲ ಸಂಪಿಗೆಹಳ್ಳಿಯ ಕೋದಂಡರಾಮ ಭಜನಾ ಮಂಡಳಿ ತಂಡದಿಂದ ಮತ್ತು ದೇವಾಲಯದ ಭಕ್ತರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಪಿಗೆ ಹಳ್ಳಿಯ ಭಜನಾ ತಂಡದ ಸದಸ್ಯರು ಶಿವರಾತ್ರಿ ಜಾಗರಣೆ ಸಲುವಾಗಿ ಆಸುಪಾಸಿನ ವಿವಿಧ ದೇವಾಲಯಗಳಲ್ಲಿಯೂ ಭಜನಾ ಸೇವೆ ಹಮ್ಮಿಕೊಂಡಿದ್ದರು.

ಶ್ರೀ ಮುನಿರಾಜು ಅವರು ದೇವಾಲಯದ ಅಲಂಕಾರ ಹಾಗೂ ಪ್ರಸಾದ ಸೇವಾ ವ್ಯವಸ್ಥೆ ಮಾಡಿದ್ದರು. ಭಕ್ತರು ಅಪಾರ ಸಂಖ್ಯೆಯಲ್ಲಿ ದೇವರ ದರ್ಶನ ಮಾಡಿ ಶಿವಲಿಂಗಕ್ಕೆ ಕ್ಷೀರ ಹಾಗೂ ಗಂಗಾಜಲ ಅಭಿಷೇಕ ಮಾಡಿದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ವಿಡಿಯೋಗಳನ್ನು ನೋಡಲು ಚಿತ್ರಗಳನ್ನು ಕ್ಲಿಕ್‌ ಮಾಡಿರಿ.





PARYAYA: ಶಿವೋಹಂ ಶಿವೋಹಂ: ಮಹಾ ಶಿವರಾತ್ರಿ ಸಡಗರ:   ಶಿವೋಹಂ ಶಿವೋಹಂ: ಮಹಾ ಶಿವರಾತ್ರಿ ಸಡಗರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾ...

Tuesday, February 10, 2026

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಫೆಬ್ರುವರಿ ೮ರ ಸಂಜೆ ಕೇರಳ ಚೆಂಡೆಯ ಸಂಭ್ರಮ. ನಿರಂತರ ಅರವತ್ತು ನಿಮಿಷಗಳ ಕಾಲ ಅಂದರೆ ಒಂದು ಘಂಟೆ ಅರೆ ನಿಮಿಷದ ಬಿಡುವು ಕೂಡಾ ಇಲ್ಲದಂತೆ ಕೇಳಿಬಂದ ಚೆಂಡೆಯ ಧ್ವನಿಗೆ ಎಲ್ಲರೂ ಮಂತ್ರಮುಗ್ಧ..

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಸಾಯಂಕಾಲ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಸಂದರ್ಭ ಅದು. ವಿಡಿಯೋ 👇

ಈ ಚೆಂಡೆಯ ಸಂಭ್ರಮ ಇಲ್ಲಿಗೆ ಮುಗಿಯಲಿಲ್ಲ. ನಂತರ ಬಡಾವಣೆಯ ಮುಖ್ಯರಸ್ತೆಯಲ್ಲಿ ಅವರ ಘೋಷಯಾತ್ರೆ ಬಡಾವಣೆಯ ಎಲ್ಲರ ಮನ ತಣಿಸಿತು. ಚೆಂಡೆಯ ತಂಡದ ಸದಸ್ಯರ ಜೊತೆಗೆ ದೇವಸ್ಥಾನಕ್ಕೆ ವಾರ್ಷಿಕೋತ್ಸವ ಸಡಗರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತರೂ ಹೆಜ್ಜೆ ಹಾಕಿದರು.

ಘೋಷಯಾತ್ರೆಯ ಬಳಿಕ ದೇವಾಲಯದಲ್ಲಿ ಚೆಂಡೆಯ ನಿನಾದದೊಂದಿಗೇ ಮಹಾಪೂಜೆ ಮತ್ತು ಮಹಾಮಂಗಳಾರತಿ. ವಿಡಿಯೋ 👇

ಈ ಚೆಂಡೆವಾದನ ಮಾಡಿದ ತಂಡದಲ್ಲಿ ಇದ್ದವರು ೮ ಮಂದಿ. ಅವರ ಪೈಕಿ ಕೆಲವರು ಸಿವಿಲ್‌ ಹಾಗೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ಇಬ್ಬರು ಮಕ್ಕಳು. ಅನಿಲ್‌ ಕುಮಾರ್‌ ನೇತೃತ್ವದ ಈ ತಂಡದಲ್ಲಿ ಇದ್ದವರು: ಹರಿಪ್ರಶಾಂತ್‌ಅಖಿಲ್‌ನಿಹಾಲ್‌ಜಯಕುಮಾರ್‌ ಮತ್ತು ೧೦ ವರ್ಷದ ಬಾಲಕ ವೈಶಾಖ್‌ ಹಾಗೂ ೧೩ರ ಹರೆಯದ ರಥು ಕುಮಾರ್. ಈ ಚೆಂಡೆ ವಾದನಕ್ಕೆ ವ್ಯವಸ್ಥೆ ಮಾಡಿದವರು ಬಡಾವಣೆಯ ಹಿರಿಯ ಸದಸ್ಯ ಕೆ.ಪಿ. ಸುಗುಣನ್.‌

ಚೆಂಡೆ ವಾದನಕ್ಕೆ ಮುನ್ನ ವಿದ್ಯಾ ರಘುಪ್ರಸಾದ್‌ ನೇತೃತ್ವದಲ್ಲಿ ನೆರೆಯ ಎಂಸಿಇಸಿಎಚ್‌ಎಸ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿ ಸದಸ್ಯೆಯರು ಹಾಗೂ ದೇವಸ್ಥಾನದ ಭಜನಾ ತಂಡದ ಸದಸ್ಯರು ಸುಶ್ರಾವ್ಯವಾಗಿ ಭಜನಾ  ಸೇವೆ 👇 (ವಿಡಿಯೋ) ಸಲ್ಲಿಸಿದರು.

ದೇವಾಲಯದ ಅಲಂಕಾರ ಸೇವೆ ಹಾಗೂ ರಾತ್ರಿ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ ವಹಿಸಿಕೊಂಡಿತ್ತು. ಮಧ್ಯಾಹ್ನದ ಪ್ರಸಾದ ಸೇವೆಯನ್ನು ಎಚ್.ವಿ. ಉದಯಶಂಕರ, ಕೆ.ಎಂ. ನಾಗರಾಜ್‌ ಮತ್ತು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚೌಡರೆಡ್ಡಿ ಕುಟುಂಬ ಸದಸ್ಯರು ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಇಲ್ಲಿವೆ. ಗಣಪತಿ ಸ್ತುತಿ ವಿಡಿಯೋ

ಇದನ್ನೂ ಓದಿರಿ:
ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ:   ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಫೆಬ್ರುವರಿ ೮ರ ಸಂಜೆ ಕೇರಳ ಚೆಂಡ...

Saturday, February 7, 2026

PARYAYA: ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!

 ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!

ದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ.

ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ ಇರುವುದು ಪ್ರಯಾಣಿಕರನ್ನು ಕರೆದೊಯ್ಯಲು. ಆದರೆ ಇಲ್ಲಿ ಅಂದರೆ ರಾಮಕೃಷ್ಣ ಹೆಗಡೆ ನಗರದಲ್ಲಿ ಆಟೋರಿಕ್ಷಾಗಳು ಪ್ರಯಾಣಿಕರ ಜೊತೆಗೆ ಅವರ ಕಸವನ್ನೂ ಸಾಗಿಸುತ್ತವೆ.

ಯಾಕೆ ಎಂದು ಕೇಳುತ್ತೀರಲ್ಲವೇ?

ಪ್ರಯಾಣಿಕರಿಗೆ ತಮ್ಮ ಮನೆಯನ್ನು ಸ್ವಚ್ಚಗೊಳಿಸಿದ ಬಳಿಕ ಗೋಣಿಯಲ್ಲಿ ತುಂಬಿದ ಕಸವನ್ನು ಪಕ್ಕದ ಬಡಾವಣೆಯಲ್ಲಿ ಮನೆಗಳ ಮುಂದೆ ಸುರಿಯಲು ಅಷ್ಟೇ.

ಕೆಲವು ದಿನಗಳ ಹಿಂದೆ ಗ್ರೇಟರ್‌ ಬೆಂಗಳೂರು ಅಥಾರಿಟಿ ಹಿಂದಿನ ಬಿಬಿಎಂಪಿ ಸಿಬ್ಬಂದಿ ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಕಸ ಬಿಸಾಕಿದವರ ಮನೆಗೆ ಕಸ ತಂದು ಸುರಿದು ದಂಡ ವಿಧಿಸುವ ಕ್ರಮ ಜರುಗಿಸಿದ್ದರು.

ಈಗ ಅವರ ಬದಲಿಗೆ ಜನರೇ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ತಮ್ಮ ಮನೆಯ ಕಸ ಸಾಗಿಸಿ ಸುರಿಯುವ ಕೆಲಸಕ್ಕೆ ಹೊರಟಿದ್ದಾರೆ. ಅವರಿಗೆ ಕಸ ಒಯ್ಯಲು ನೆರವಾಗುತ್ತಿರುವುದು ಆಟೋ ರಿಕ್ಷಾಗಳು ಅದಕ್ಕೆ ಹೇಳಿದ್ದು ಇದು ಬೆಂಗಳೂರಿನ  ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ ಎಂದು.

ಇಲ್ಲಿರುವ ವಿಡಿಯೋ ನೋಡಿ. ಇದು ಹೆಗಡೆ ನಗರದ ಬಸವಲಿಂಗಪ್ಪ ನಗರಲ್ಲಿ ಇರುವ ಹತ್ಮನೆ ಬಡಾವಣೆಯಿಂದ ೭ನೇ ಅಡ್ಡರಸ್ತೆಯ ಮೂಲಕ ಶ್ರೀ ಬಾಲಾಜಿ ಕೃಪಾ ಬಡಾವಣೆಗೆ ಬಂದು ೪೦೮ನೇ ನಂಬರಿನ ಮನೆಯ ಗೇಟಿನ ಮುಂದೆ ಜಾರಿಸಿ ಹೋದ ದೃಶ್ಯ. ಆಟೋ ರಿಕ್ಷಾ ೪೦೭ನೇ ನಂಬರಿನ ಮನೆಯ ಮುಂದೆ ಕಸದ ಮೂಟೆ ಇಟ್ಟುಕೊಂಡು ಬರುವುದು ಮತ್ತು ೪೦೮ನೇ ನಂಬರಿನ ಮನೆಯ ಮುಂದೆ ಜಾರಿಸಿ ಮುಂದಕ್ಕೆ ಹೋಗುವುದು ಈ ಎರಡೂ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಂ. ಬಹಳ ಮುಖ್ಯವಾದದ್ದು ಏನು ಎಂದರೆ ಇದು ೨೦೨೬ ಫೆಬ್ರುವರಿ ೫ರಂದು ಮಟ ಮಟ ಮಧ್ಯಾಹ್ನ ೩.೩೦ರ ಸಮಯದಲ್ಲಿ ನಡೆದ ಘಟನೆ.

ರಾತ್ರಿ ಹೊತ್ತಿನಲ್ಲಿ ಇಲ್ಲಿನ ರಸ್ತೆ ರಸ್ತೆಗಳಿಗೂ ಹೀಗೆಯೇ ಕಸ ಬಂದು ಬೀಳುತ್ತಿರುತ್ತವೆ.

ರಿಕ್ಷಾಗಳಷ್ಟೇ ಅಲ್ಲ, ಸ್ಕೂಟರುಗಳಲ್ಲಿ ಹೀಗೆ ಕಸದ ಮೂಟೆ ತಂದು ಮನೆಗಳ ಮುಂದೆ ತಂದು ಇಟ್ಟು ಆ ಮನೆಯವರ ಮೂಲಕ ಅದನ್ನು ಬಿಬಿಎಂಪಿ ವಾಹನಕ್ಕೆ ತಲುಪಿಸುವವರೂ ಇದ್ದಾರೆ.

ಬಿಬಿಎಂಪಿ/ ಜಿಬಿಎಯ ʼದಂಡʼಕ್ಕೆ ಇವರು ಬಗ್ಗುವುದಿಲ್ಲ. ಇವರಿಗೆ ʼದಂಡಂ ದಶಗುಣಂʼ ಎನ್ನುವ ಹಾಗೆ  ಆರಡಿ ಉದ್ದದ ದಂಡಗಳಿಂದಲೇ ಬುದ್ದಿ ಕಲಿಸಬೇಕಾದ ಕಾಲ ಬರುತ್ತದೋ ಏನೋ.

ಬೆಂಗಳೂರಿನಲ್ಲಿ ಬೇರೆ ಯಾವುದಾದರೂ ಬಡಾವಣೆಯವರಿಗೆ ಇಂತಹ ಉಚಿತ ಕಸ ಸಾಗಣೆ ಆಟೋ ವ್ಯವಸ್ಥೆ ಬೇಕಾಗಿದ್ದರೆ ಅತ್ಯಂತ ವೇಗವಾಗಿ ನಂಬರ್‌ ಕೂಡಾ ಗೊತ್ತಾಗದಂತೆ ಸಾಗಿ ಹೋದ ಈ ಆಟೋ ರಿಕ್ಷಾದ ನಂಬರ್‌ ಗುರುತಿಸಿ ಅವರನ್ನೇ ಸಂಪರ್ಕಿಸಬಹುದು.

PARYAYA: ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ!:   ಉಚಿತ ಉಚಿತ ಉಚಿತ: ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ! ಇ ದು ಬೆಂಗಳೂರಿನಲ್ಲಿ ಚಾಲ್ತಿಯಲ್ಲಿ ಇರುವ ಆಟೋ ರಿಕ್ಷಾ ಕಸ ಸಾಗಣೆ ವ್ಯವಸ್ಥೆ. ಎಲ್ಲ ಕಡೆಯಲ್ಲೂ ಆಟೋ ರಿಕ್ಷಾ...

Thursday, February 5, 2026

PARYAYA: ಮಾಘ ಮಾಸದ ಸಂಕಷ್ಟಿ ಪೂಜಾ

 ಮಾಘ ಮಾಸದ ಸಂಕಷ್ಟಿ ಪೂಜಾ

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨೦೨೬ ಫೆಬ್ರುವರಿ ೦೫ರ ಗುರುವಾರ ಮಾಘ ಮಾಸದ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಮಾಘ ಮಾಸದ ಸಂಕಷ್ಟಿ ಪೂಜಾ:   ಮಾಘ ಮಾಸದ ಸಂಕಷ್ಟಿ ಪೂಜಾ ಬೆಂ ಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨...

Saturday, January 10, 2026

PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

 ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ್ಷಿಸುತ್ತೀರಿ ಮತ್ತು ನಿಮ್ಮ ಬಂಧು ಮಿತ್ರರಿಗೆ ಇವುಗಳನ್ನು ಕಳುಹಿಸಿಕೊಡುತ್ತೀರಿ.

ಇವು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ʼಫೂಟ್‌ ಪಲ್ಸ್‌ʼ ಥೆರಪಿ ಶಿಬಿರದ ಸಂದರ್ಭದಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಸಂಪನ್ಮೂಲ ವ್ಯಕ್ತಿ ಡಾ. ರತ್ನಾಕರ ಶೆಟ್ಟಿ ಅವರು ಆಡಿದ ಮಾತುಗಳ ವಿಡಿಯೋಗಳು.

ಕೆಳಗೆ ಕ್ಲಿಕ್‌ ಮಾಡಿ ನೋಡಿ. ನಿಮ್ಮ ಬಂಧು ಮಿತ್ರರಿಗೂ ಕಳುಹಿಸಿಕೊಡಿ.



PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?:   ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ? ನಿ ಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ...

Wednesday, January 7, 2026

PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

 ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

ನೆಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು  ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣ. ಅದರಲ್ಲೂ ಬಸ್ಕಿ ತೆಗೆಯುವುದು, ಕೂತು-ಏಳುವ ಅಭ್ಯಾಸ ಕಡಿಮೆ ಮಾಡಿಕೊಂಡದ್ದು ಇತ್ಯಾದಿ ಕೂಡಾ ನರಸಂಬಂಧಿ ಸಮಸ್ಯೆಗಳಿಗೆ ಮೂಲ

ಮಹಿಳೆಯರು ಹಿಂದೆ ನೆಲದಲ್ಲಿ ಕುಳಿತೇ ಅಡುಗೆ ಮಾಡುತ್ತಿದ್ದರು. ಈಗ ಅಡುಗೆ ಮನೆಯ ವಿನ್ಯಾಸವೇ ಬದಲಿಯಾಗಿದೆ. ನಿಂತುಕೊಂಡು ಅಡುಗೆ ಮಾಡುವುದೇ ಆರಾಮ ಎಂಬ ಭಾವನೆ ಇದೆ. ಇದರೊಂದಿಗೆ ಅತ್ತಿತ್ತ ಓಡಾಡುವ ಅಭ್ಯಾಸವೂ ಕಡಿಮೆ.

ಮನೆಯ ಹೊರಗೆ ಬಿಡಿ ಮನೆಯ ಒಳಗೂ ಬರಿಗಾಲಲ್ಲಿ ನಡೆಯುವ ಕ್ರಮ ಕ್ರಮೇಣ ಮಾಯವಾಗುತ್ತಿದೆ. ನಡೆದಾಡುವುದೇ ಕಡಿಮೆ, ಕಡಿಮೆ ನಡೆದಾಡುವುದರ ಜೊತೆ ಮನೆಯ ಹೊರಗೆ, ಒಳಗೆ ಚಪ್ಪಲಿಗೆ ಮುಕ್ತ ಪ್ರವೇಶ. ಪರಿಣಾಮ ಪಾದಗಳಿಗೆ ಭೂಮಿಯ ಸ್ಪರ್ಶವೇ ಇಲ್ಲ.

ಇದರಿಂದ ಆಗುವ ದೊಡ್ಡ ನಷ್ಟ- ಭೂಮಿಯ ಅಯಸ್ಕಾಂತ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಿಕೆ. ಈ ಅಯಸ್ಕಾಂತ ಶಕ್ತಿ ಅಥವಾ ಮ್ಯಾಗ್ನೆಟ್‌ ಪವರ್‌ ದೇಹ ಸ್ವಾಸ್ಥ್ಯಕ್ಕೆ ಬಲುಮುಖ್ಯ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಮತ್ತು ಕಂಪಾನಿಯೋ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ʼಫೂಟ್‌ ಪಲ್ಸ್‌ʼ ಥೆರೆಪಿ ಶಿಬಿರದ ಸಂದರ್ಭದಲ್ಲಿ ಥೆರೆಪಿ ತಜ್ಞ ಕಾರ್ತಿಕ್‌ ಹೇಳಿದ ಸೂತ್ರಗಳಲ್ಲಿ ಇವೂ ಸೇರಿವೆ.

ಅವರ ಮಾತುಗಳ ವಿಡಿಯೋ ಇಲ್ಲಿದೆ. ಚಿತ್ರ ಕ್ಲಿಕ್‌ ಮಾಡಿ ನೋಡಿ. Youtube Video link: https://youtu.be/TlSSjnHtgJA

ರಂಗೋಲಿ ಸ್ಪರ್ಧೆ

ಹೇಳಬೇಕಾದ ಇನ್ನೊಂದು ಸುದ್ದಿ ಇಲ್ಲಿದೆ. ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ ೧೫ರಂದು ಬರಲಿರುವ ಮಕರ ಸಂಕ್ರಾಂತಿಯ ಪ್ರಯುಕ್ತ ಮಹಿಳೆಯರಿಗೆ ʼರಂಗೋಲಿʼ ಸ್ಪರ್ಧೆಯನ್ನು ೨೦೨೫ ಜನವರಿ ೧೧ರ ಭಾನುವಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಬೆಳಗ್ಗೆ ೧೦.೩೦ರಿಂದ ೧೨ರ ನಡುವಣ ಅವಧಿಯಲ್ಲಿ ನಡೆಯಲಿದೆ. ಪಾಲ್ಗೊಳ್ಳಬಯಸುವವರು ಮಮತಾ (೮೮೬೭೯೬೭೮೮೮) ಅಥವಾ ಸ್ವಾತಿ (೮೧೦೫೬೮೫೮೯೯) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.


PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?:   ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ? ನೆ ಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು   ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರ...

Monday, January 5, 2026

PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರವು ೨೦೨೬ ಜನವರಿ ೩ರಿಂದ ಆರಂಭಗೊಂಡಿದೆ.

ಪ್ರತಿದಿನ ಬೆಳಗ್ಗೆ ೯.೩೦ಕ್ಕೆ ಆರಂಭವಾಗಿ ಸಂಜೆ ೫ ಗಂಟೆಯವರೆಗೆ ನಡೆಯುವ ಈ ಶಿಬಿರವು ಜನವರಿ ೧೨ರವರೆಗೂ ನಡೆಯಲಿದೆ.


ಪ್ರತಿದಿನ ೩೦ ನಿಮಿಷಗಳ ಅವಧಿಯ ಚಿಕಿತ್ಸೆ ಪಡೆಯುವುದರಿಂದ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದ ಪರಿಹಾರ ಲಭಿಸುತ್ತದೆ.

ಮಧುಮೇಹ, ಮಧುಮೇಹದಿಂದ ಬರುವ ಪಾದ ಉರಿಯೂತ, ಸಂಧಿವಾತ, ಕುತ್ತಿಗೆ ನೋವು ಇತ್ಯಾದಿ ಸಮಸ್ಯೆಗಳಿಗೂ ಈ ಚಿಕಿತ್ಸೆಯಲ್ಲಿ ಪರಿಹಾರ ಲಭ್ಯವಿದೆ. ಬಹುಮುಖ್ಯವಾಗಿ ಫಿಸಿಯೋಥೆರೆಪಿ ಅಗತ್ಯ ಉಳ್ಳವರಿಗೆ ಇದು ಅತ್ಯುತ್ತಮ ಎನ್ನುತ್ತಾರೆ ಈ ಚಿಕಿತ್ಸಾ ತಜ್ಞ ಕಾರ್ತಿಕ್.‌

ಚಿಕಿತ್ಸೆ ಬಗ್ಗೆ ಅವರೇನು ಹೇಳುತ್ತಾರೆ ? ಇಲ್ಲಿ 👇 ನೋಡಿ.


ಇದನ್ನೂ ನೋಡಿ:
PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?:   ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Monday, December 29, 2025

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

 ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೩೦ ಮಂಗಳವಾರದ ವೈಕುಂಠ ಏಕಾದಶಿ ಆಚರಣೆಗೆ ಸಡಗರದ ಸಿದ್ಧತೆ, ಶ್ರಮದಾನ ಕಾರ್ಯಕ್ರಮಗಳು ಡಿಸೆಂಬರ್‌ ೨೯ರಂದು ಭರದಿಂದ ನಡೆದವು.

ಭಕ್ತಾದಿಗಳು ದೇವಾಲಯ ಸ್ವಚ್ಛತೆಯಿಂದ ಹಿಡಿದು ಅಲಂಕಾರದವರೆಗೆ ಎಲ್ಲ ರೀತಿಯ ಶ್ರಮದಾನದಲ್ಲಿ ಲಗುಬಗೆಯಿಂದ ಪಾಲ್ಗೊಂಡರು.

ಮಂಗಳವಾರ ಬೆಳಗ್ಗೆ ೪ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ, ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ೧೧ ಗಂಟೆಗೆ ವಿದ್ಯಾ ರಘು ಪ್ರಸಾದ್‌ ತಂಡವು ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದೆ.

ವೈಕುಂಠ ದ್ವಾರವನ್ನು ಶನಿವಾರ ರಾತ್ರೆಯ ವೇಳಗೆ ಸಜ್ಜುಗೊಳಿಸಲಾಗಿದ್ದು ಬೆಳಗ್ಗೆಯಿಂದ ರಾತ್ರಿ ೯ ಗಂಟೆಯವರೆಗೆ ವೈಕುಂಠ ದ್ವಾರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.

ಮಾಜಿ ಸಚಿವ ಮಾಲೂರು ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಲಡ್ಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ:   ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...

Thursday, November 6, 2025

PARYAYA: ಯಕ್ಷಗಾನ ಅಂದರೇನು?

ಯಕ್ಷಗಾನ ಅಂದರೇನು?


ಯಕ್ಷಗಾನವು ನವರಸ ಭರಿತವಾದ ಒಂದು ಸಂಪೂರ್ಣ ಕಲೆ. ಈ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಯತ್ನಗಳು ನಡೆಯುತ್ತಿವೆ. ತರಗತಿಗಳೂ ನಡೆಯುತ್ತಿವೆ.

ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯಕ್ಷ ಕಲಾ ಕೌಸ್ತುಭದ ವತಿಯಿಂದ ಇಂತಹದೊಂದು ಯತ್ನ ಆರಂಭವಾಗಿದೆ.

ಯಕ್ಷಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ (ಫೋನ್‌ 
9663671591) ಅವರು ಯಕ್ಷಗಾನ ಕಲಿಯಬಯಸುವವರಿಗೆ ಯಕ್ಷಗಾನ ಕಲೆಯನ್ನು ಹೇಳಿಕೊಡುತ್ತಿದ್ದಾರೆ. ಮೊದಲ ತರಗತಿಯ ಒಂದು ದೃಶ್ಯ ಇಲ್ಲಿದೆ. 

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ: https://youtu.be/1EhpNPAlZA8


ವಿವರಗಳಿಗೆ:  paryaya.com ವೆಬ್‌ ಸೈಟಿನ ಯಕ್ಷಗಾನ / ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ.
PARYAYA: ಯಕ್ಷಗಾನ ಅಂದರೇನು?: ಯಕ್ಷಗಾನ ಅಂದರೇನು ? ಯಕ್ಷಗಾನವು ನವರಸ ಭರಿತವಾದ ಒಂದು ಸಂಪೂರ್ಣ ಕಲೆ. ಈ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂಬ ನಿಟ್ಟಿನಲ್ಲಿ ಹಲವಾರು ಕಡೆಗಳಲ್ಲಿ ಯತ್ನಗಳು ನ...

Sunday, October 26, 2025

PARYAYA: ಯಕ್ಷಗಾನ ತರಗತಿ ಶುಭಾರಂಭ

 ಯಕ್ಷಗಾನ ತರಗತಿ ಶುಭಾರಂಭ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಅಕ್ಟೋಬರ್‌ ೨೬ರ ಭಾನುವಾರ ಯಕ್ಷ ಕಲಾ ಕೌಸ್ತುಭ ವತಿಯಿಂದ ಯಕ್ಷಗಾನ ತರಬೇತಿ ತರಗತಿ ಶುಭಾರಂಭಗೊಂಡಿತು.


ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಯಕ್ಷಗಾನ ಗುರು ಶ್ರೀ ಉಮೇಶ ರಾಜ್‌ ಮಂದಾರ್ತಿ ಮತ್ತು ಅವರ ತಂಡದವರಿಂದ ನಡೆದ ಗಣಪತಿ ಸ್ತುತಿಯನ್ನು ನೆರವೇರಿಸಿದರು.
ಗಣಪತಿ ಸ್ತುತಿಯ ಬಳಿಕ ದೀಪ ಪ್ರಜ್ಞಲನೆ, ಚೌಕಿ ಗಣೇಶ ಸ್ತುತಿ ನಡೆಯಿತು.

ಶ್ರೀ ರಾಜೇಶ ಹೆಗಡೆ ಅವರು ಯಕ್ಷಗಾನದ ಮಹತ್ವದ ಬಗ್ಗೆ ವಿವರಿಸಿದರು. ಶ್ರೀ ಚೌಡರೆಡ್ಡಿ ಅವರು ದೇವಸ್ಥಾನದಲ್ಲಿ ಯಕ್ಷಗಾನ ಕಲಿಯಲು ಬರುವ ಎಲ್ಲರಿಗೂ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಎಲ್ಲ ಸಹಕಾರವನ್ನು ನೀಡುವ ಭರವಸೆ ಕೊಟ್ಟರು.
ಶ್ರೀ ಉಮೇಶರಾಜ್‌ ಮಂದಾರ್ತಿ ಅವರು ಯಕ್ಷಗಾನವನ್ನು ಏಕೆ ಕಲಿಯಬೇಕು ಮತ್ತು ಕಲಿಸಬೇಕು ಎಂಬ ಬಗ್ಗೆ ವಿವರಿಸಿದರು. ಯಕ್ಷಗಾನದ ಪ್ರಾಥಮಿಕ ತರಬೇತಿಯನ್ನೂ ನೀಡಿದರು.

ಯಕ್ಷ ಕಲಾ ಕೌಸ್ತುಭ ತಂಡದ ಚೆಂಡೆ ವಾದಕ ಸುಬ್ರಹ್ಮಣ್ಯ
 ಸಾಸ್ತಾನ, ಮದ್ದಳೆ ವಾದಕ ನರಸಿಂಹ ಆಚಾರ್ಯ ಹಾಗೂ ಉದಯ ಮಂದಾರ್ತಿ ಅವರು ಹಾಜರಿದ್ದರು.
ಡಾಲರ್ಸ್‌ ಕಾಲೋನಿ, ಹೆಣ್ಣೂರು ರಸ್ತೆ, ಸಾತನೂರು ಸೇರಿದಂತೆ ಹೆಗಡೆ ನಗರದ ಆಸುಪಾಸಿನ ಬಹಳಷ್ಟು ಪೋಷಕರು ತಮ್ಮ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕಮಲಾಕರ ಹೆಗಡೆ, ಟ್ರಸ್ಟಿಗಳಾದ ಶ್ರೀ ಮುನಿರಾಜು, ಸುಗುಣನ್‌, ನೆತ್ರಕೆರೆ ಉದಯಶಂಕರ ಹಾಗೂ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.
ಚೌಕಿ ಪೂಜೆಯ ಸಂದರ್ಭದ ಗಣಪ ಸ್ತುತಿ ಇಲ್ಲಿದೆ:

ಯಕ್ಷಗಾನ ಪ್ರಾಥಮಿಕ ಅಭ್ಯಾಸದ ಒಂದು ವಿಡಿಯೋ ಕೆಳಗಿದೆ.

ದೇವರ ಸನ್ನಿಧಿಯಲ್ಲಿ ನಡೆದ ಗಣಪತಿಸ್ತುತಿಯ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಯೂ ಟ್ಯೂಬ್‌ ವಿಡಿಯೋ ನೋಡಲು ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/sbWyM8KaKX8

ಯಕ್ಷಗಾನ ಮಂಗಲ ಸಂದರ್ಭದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. ಅಥವಾ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ: https://youtu.be/206hUkGzjVQ

ಇನ್ನಷ್ಟು ವಿಡಿಯೋಗಳು ಪರ್ಯಾಯ5 ಯೂಬ್‌ ಚಾನೆಲ್‌ನಲ್ಲಿಯೂ ಮೂಡಿ ಬರಲಿವೆ.

ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಯಕ್ಷಗಾನ ತರಗತಿಗಳು ನಡೆಯಲಿದ್ದು, ಆಸಕ್ತರು ಶ್ರೀ ಉಮೇಶರಾಜ್‌ ಮಂದಾರ್ತಿ (ಫೋನ್:‌ 9663671591)  ಅವರನ್ನು ಸಂಪರ್ಕಿಸಬಹುದು.

ಯಕ್ಷಗಾನ ಕುರಿತ ಇನ್ನಷ್ಟು ವಿಷಯಗಳಿಗೆ- ಪರ್ಯಾಯ ವೆಬ್‌ ಸೈಟಿನ ಯಕ್ಷಗಾನ/ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ. ಅಥವಾ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಯಕ್ಷಗಾನ ತರಗತಿ ಶುಭಾರಂಭ:   ಯಕ್ಷಗಾನ ತರಗತಿ ಶುಭಾರಂಭ ಯ ಕ್ಷಗಾನ ತರಗತಿ ಶುಭಾರಂಭ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ , ವೆಂಕಟೇಶ್ವರ , ಅಭ...

Wednesday, August 27, 2025

PARYAYA: ವಿನಾಯಕ ಚತುರ್ಥೀ ಸಂಭ್ರಮ

 ವಿನಾಯಕ ಚತುರ್ಥೀ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಆಗಸ್ಟ್‌ ೨೭ರ ಬುಧವಾರ ವಿನಾಯಕ ಚತುರ್ಥಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.

ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವಿನಾಯಕ, ವೆಂಕಟರಮಣ, ಅಭಯ ಆಂಜನೇಯ ಸ್ವಾಮಿ ದರ್ಶನ ಪಡೆದರು.

ಈ ಸಂದರ್ಭದ ಕೆಲವು ಚಿತ್ರಗಳು, ವಿಡಿಯೋ ಇಲ್ಲಿದೆ.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


                  👇👇





ಮೇಲಿನ ಲೇಖನಗಳನ್ನು ಓದಲು/ ಅವುಗಳ ಸಮೀಪ ನೋಟಕ್ಕೆ  ಅವುಗಳನ್ನು ಕ್ಲಿಕ್‌ ಮಾಡಿ.
PARYAYA: ವಿನಾಯಕ ಚತುರ್ಥೀ ಸಂಭ್ರಮ:   ವಿನಾಯಕ ಚತುರ್ಥೀ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾ...

Wednesday, August 13, 2025

PARYAYA: ಅಂಗಾರಕ ಸಂಕಷ್ಟಿ ಮತ್ತು ಮಕ್ಕಳ ಕಲರವ

 ಅಂಗಾರಕ ಸಂಕಷ್ಟಿ ಮತ್ತು ಮಕ್ಕಳ ಕಲರವ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಆಗಸ್ಟ್‌ ೧೨ ಮತ್ತು ೧೩ರಂದು ಭಾರೀ ವಿಶೇಷ.


ದೇವಸ್ಥಾನದಲ್ಲಿ ಒಂದೆಡೆಯಲ್ಲಿ ಅಂಗಾರಕ ಸಂಕಷ್ಟಿ ಪೂಜೆಯ ಸಂಭ್ರಮ ಒಂದಡೆಯಾದರೆ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಮಕ್ಕಳ ʼದೇವಾಲಯ ದರ್ಶನʼ ಕಾರ್ಯಕ್ರಮ ಇನ್ನೊಂದೆಡೆ. ಎರಡೂ ದಿನವೂ ಸುಮಾರು ೧೦೦ರಿಂದ ೧೫೦ ಮಂದಿ ಮಕ್ಕಳು ದೇವಾಲಯಕ್ಕೆ ಬಂದು ಶ್ಲೋಕ, ಭಜನೆ ಹಾಡುಗಳನ್ನು ಹೇಳಿ ದೇವಾಲಯದಲ್ಲಿ ಸಂಚಲನ ಮೂಡಿಸಿದರು.


ಅಂಗಾರಕ ಸಂಕಷ್ಟಿ ಪೂಜೆಯಲ್ಲಿ ಪಾಲ್ಗೊಂಡರೆ ೨೧ ಸಂಕಷ್ಟಿ ಪೂಜೆಯಲ್ಲಿ ಪಾಲ್ಗೊಂಡ ಫಲ ಲಭಿಸುವುದೆಂಬ ಕಾರಣಕ್ಕಾಗಿ ಸಂಕಷ್ಟಿ ಪೂಜೆಯಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು.

ಈ ಸಂದರ್ಭದ ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.









ಇನ್ನಷ್ಟು ಸುದ್ದಿಗಳಿಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

PARYAYA: ಅಂಗಾರಕ ಸಂಕಷ್ಟಿ ಮತ್ತು ಮಕ್ಕಳ ಕಲರವ:   ಅಂಗಾರಕ ಸಂಕಷ್ಟಿ ಮತ್ತು ಮಕ್ಕಳ ಕಲರವ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ...