Showing posts with label ಪಂಚಹೋಮ. Show all posts
Showing posts with label ಪಂಚಹೋಮ. Show all posts

Tuesday, February 10, 2026

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಫೆಬ್ರುವರಿ ೮ರ ಸಂಜೆ ಕೇರಳ ಚೆಂಡೆಯ ಸಂಭ್ರಮ. ನಿರಂತರ ಅರವತ್ತು ನಿಮಿಷಗಳ ಕಾಲ ಅಂದರೆ ಒಂದು ಘಂಟೆ ಅರೆ ನಿಮಿಷದ ಬಿಡುವು ಕೂಡಾ ಇಲ್ಲದಂತೆ ಕೇಳಿಬಂದ ಚೆಂಡೆಯ ಧ್ವನಿಗೆ ಎಲ್ಲರೂ ಮಂತ್ರಮುಗ್ಧ..

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಸಾಯಂಕಾಲ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಸಂದರ್ಭ ಅದು. ವಿಡಿಯೋ 👇

ಈ ಚೆಂಡೆಯ ಸಂಭ್ರಮ ಇಲ್ಲಿಗೆ ಮುಗಿಯಲಿಲ್ಲ. ನಂತರ ಬಡಾವಣೆಯ ಮುಖ್ಯರಸ್ತೆಯಲ್ಲಿ ಅವರ ಘೋಷಯಾತ್ರೆ ಬಡಾವಣೆಯ ಎಲ್ಲರ ಮನ ತಣಿಸಿತು. ಚೆಂಡೆಯ ತಂಡದ ಸದಸ್ಯರ ಜೊತೆಗೆ ದೇವಸ್ಥಾನಕ್ಕೆ ವಾರ್ಷಿಕೋತ್ಸವ ಸಡಗರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತರೂ ಹೆಜ್ಜೆ ಹಾಕಿದರು.

ಘೋಷಯಾತ್ರೆಯ ಬಳಿಕ ದೇವಾಲಯದಲ್ಲಿ ಚೆಂಡೆಯ ನಿನಾದದೊಂದಿಗೇ ಮಹಾಪೂಜೆ ಮತ್ತು ಮಹಾಮಂಗಳಾರತಿ. ವಿಡಿಯೋ 👇

ಈ ಚೆಂಡೆವಾದನ ಮಾಡಿದ ತಂಡದಲ್ಲಿ ಇದ್ದವರು ೮ ಮಂದಿ. ಅವರ ಪೈಕಿ ಕೆಲವರು ಸಿವಿಲ್‌ ಹಾಗೂ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ಇಬ್ಬರು ಮಕ್ಕಳು. ಅನಿಲ್‌ ಕುಮಾರ್‌ ನೇತೃತ್ವದ ಈ ತಂಡದಲ್ಲಿ ಇದ್ದವರು: ಹರಿಪ್ರಶಾಂತ್‌ಅಖಿಲ್‌ನಿಹಾಲ್‌ಜಯಕುಮಾರ್‌ ಮತ್ತು ೧೦ ವರ್ಷದ ಬಾಲಕ ವೈಶಾಖ್‌ ಹಾಗೂ ೧೩ರ ಹರೆಯದ ರಥು ಕುಮಾರ್. ಈ ಚೆಂಡೆ ವಾದನಕ್ಕೆ ವ್ಯವಸ್ಥೆ ಮಾಡಿದವರು ಬಡಾವಣೆಯ ಹಿರಿಯ ಸದಸ್ಯ ಕೆ.ಪಿ. ಸುಗುಣನ್.‌

ಚೆಂಡೆ ವಾದನಕ್ಕೆ ಮುನ್ನ ವಿದ್ಯಾ ರಘುಪ್ರಸಾದ್‌ ನೇತೃತ್ವದಲ್ಲಿ ನೆರೆಯ ಎಂಸಿಇಸಿಎಚ್‌ಎಸ್‌ ಬಡಾವಣೆಯ ಭಕ್ತಿ ಸಂಗಮ ಭಜನಾ ಮಂಡಳಿ ಸದಸ್ಯೆಯರು ಹಾಗೂ ದೇವಸ್ಥಾನದ ಭಜನಾ ತಂಡದ ಸದಸ್ಯರು ಸುಶ್ರಾವ್ಯವಾಗಿ ಭಜನಾ  ಸೇವೆ 👇 (ವಿಡಿಯೋ) ಸಲ್ಲಿಸಿದರು.

ದೇವಾಲಯದ ಅಲಂಕಾರ ಸೇವೆ ಹಾಗೂ ರಾತ್ರಿ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯನ್ನು ಶ್ರೀ ಮುನಿರಾಜು ಮತ್ತು ಕುಟುಂಬ ವಹಿಸಿಕೊಂಡಿತ್ತು. ಮಧ್ಯಾಹ್ನದ ಪ್ರಸಾದ ಸೇವೆಯನ್ನು ಎಚ್.ವಿ. ಉದಯಶಂಕರ, ಕೆ.ಎಂ. ನಾಗರಾಜ್‌ ಮತ್ತು ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚೌಡರೆಡ್ಡಿ ಕುಟುಂಬ ಸದಸ್ಯರು ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ಇಲ್ಲಿವೆ. ಗಣಪತಿ ಸ್ತುತಿ ವಿಡಿಯೋ

ಇದನ್ನೂ ಓದಿರಿ:
ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ:   ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕೇರಳ ಚೆಂಡೆ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ ಫೆಬ್ರುವರಿ ೮ರ ಸಂಜೆ ಕೇರಳ ಚೆಂಡ...

Sunday, February 8, 2026

PARYAYA: ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

 ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವವನ್ನು ೨೦೨೬ ಫೆಬ್ರುವರಿ ೦೮ರ ಮಾಘ ಬಹುಳ ಸಪ್ತಮಿಯಂದು ಶ್ರದ್ಧಾ ಭಕ್ತಿಯೊಂದಿಗೆ ಸಡಗರದಿಂದ ನೆರವೇರಿಸಲಾಯಿತು.

ದೇವರ ಬಲವರ್ಧನೆ ಹಾಗೂ ಭಕ್ತರ ಕ್ಷೇಮಾಭಿವೃದ್ಧಿಗಾಗಿ ಪಂಚ ಹೋಮಗಳನ್ನು ಋತ್ವಿಜ ಶ್ರೀ ಶ್ರೀಧರ್‌ ಭಟ್‌ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅದಕ್ಕೂ ಮುನ್ನ ಬೆಳಗ್ಗೆ ಎಲ್ಲ ದೇವರಿಗೆ ಕ್ಷೀರಾಭಿಷೇಕವನ್ನು ಮಾಡಲಾಯಿತು.


ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ, ನವಗ್ರಹಗಳು ಮತ್ತು ನಾಗರಾಜರನ್ನು ಆವಾಹಿಸಿ ಅವರ ಪೂಜೆಯೊಂದಿಗೆ ಮಹಾಗಣಪತಿಗಾಗಿ ಅಥರ್ವಶೀರ್ಷ ಹೋಮ, ವೆಂಕಟೇಶ್ವರನಿಗಾಗಿ ಶ್ರೀ ವೆಂಕಟೇಶ್ವರ ಮೂಲ ಮಂತ್ರ ಹೋಮ, ಅಭಯ ಆಂಜನೇಯನಿಗಾಗಿ ಶ್ರೀ ಆಂಜನೇಯ ಮೂಲಮಂತ್ರ ಹೋಮ, ಆದಿತ್ಯಾದಿ ನವಗ್ರಹರಿಗಾಗಿ ನವಗ್ರಹ ಹೋಮ, ಸುಬ್ರಹ್ಮಣ್ಯ- ನಾಗರಾಜನಿಗೆ ಸರ್ಪ ಸೂಕ್ತ ಹೋಮ ಹಾಗೂ ದೇವರ ಬಲವೃದ್ಧಿಗಾಗಿ ಕಲಾ ಹೋಮವನ್ನು ನೆರವೇರಿಸಲಾಯಿತು.

ಹೋಮದ ಬಳಿಕ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಮುನಿರಾಜು ಅವರು ಅಲಂಕಾರ ಹಾಗೂ ರಾತ್ರಿಯ ಪ್ರಸಾದ ಸೇವೆ, ಶ್ರೀ ಎಚ್.ವಿ. ಉದಯಶಂಕರ, ನಾಗರಾಜ್‌ ಕೆ.ಎಂ., ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಭಕ್ತರು ಭಾರೀ ಸಂಖ್ಯೆಯಲ್ಲಿ ಹೋಮ ಕಲಾಪದಲ್ಲಿ ಪಾಲ್ಗೊಂಡರು.

ಯುವ ನಾಯಕ ಶ್ರೀ ಶಿವಕುಮಾರ್‌, ವೇಣುಗೋಪಾಲ್‌, ಯಕ್ಷ ಕಲಾ ಕೌಸ್ತುಭ ತಂಡದ ಕಲಾವಿದ ಮಕ್ಕಳು ಅವರ ಪಾಲಕರು ಸೇರಿದಂತೆ ಆಸುಪಾಸಿನ ಬಡಾವಣೆಯಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಯಕ್ಷ ಕಲಾ ಕೌಸ್ತುಭ ತಂಡದ ಸದಸ್ಯರು ಶ್ರೀ ಉಮೇಶರಾಜ್‌ ಮಂದಾರ್ತಿ ಅವರ ನೇತೃತ್ವದಲ್ಲಿ ಗಣಪತಿ ಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಕಳಗಟ್ಟಿಸಿದರು.

ವಾರ್ಷಿಕೋತ್ಸವ ಸಡಗರದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


PARYAYA: ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ:   ದ್ವಿತೀಯ ವಾರ್ಷಿಕೋತ್ಸವ ಪಂಚಹೋಮ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವ...

Friday, February 21, 2025

PARYAYA: ದೇಗುಲ ವಾರ್ಷಿಕೋತ್ಸವ: ಪಂಚಹೋಮ

 ದೇಗುಲ ವಾರ್ಷಿಕೋತ್ಸವ: ಪಂಚಹೋಮ


ಬೆಂ
ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿವೆಂಕಟೇಶ್ವರಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವವು ೨೦೨೫ ಫೆಬ್ರುವರಿ ೨೦ ಗುರುವಾರ ಸಂಪನ್ನಗೊಂಡಿತು.
ವಿಡಿಯೋ ನೋಡಲು ಎಡಬದಿಯ ಚಿತ್ರ ಕ್ಲಿಕ್‌ ಮಾಡಿರಿ.

ದೇವಾಲಯಕ್ಕೆ ಒಂದು ವರ್ಷ ತುಂಬಿದ ಸಲುವಾಗಿ ಈ ಸಂದರ್ಭದಲ್ಲಿ ಪಂಚಹೋಮಗಳ ಸಲುವಾಗಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಆಂಜನೇಯ, ಶ್ರೀ ಸುಬ್ರಹ್ಮಣ್ಯ ಹಾಗೂ ನವಗ್ರಹ ದೇವತೆಗಳನ್ನು ಸ್ಥಾಪಿಸಿ ಅರ್ಚನೆ ನೆರವೇರಿಸಲಾಯಿತು.


ಆ ಬಳಿಕ ಶ್ರೀ ಗಣಪತಿ ಅಥರ್ವ ಶೀರ್ಷ ಹೋಮ, ಶ್ರೀ ಶ್ರೀ ವೆಂಕಟೇಶ್ವರ ಮೂಲಮಂತ್ರ ಹೋಮ,ಶ್ರೀ ಆಂಜನೇಯ ಮೂಲಮಂತ್ರ ಹೋಮ, ನವಗ್ರಹ ಹೋಮ, ಸರ್ಪ ಸೂಕ್ತ ಹೋಮಗಳನ್ನು ನಡೆಸಲಾಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.


ಪಂಚಹೋಮಗಳ ಬಳಿಕ ಮಹಾಮಂಗಳಾರತಿ ನಡೆಯಿತು. ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

ಸಂಜೆ ಭಕ್ತರು ಭಜನೆ ಸೇವೆ ಸಲ್ಲಿಸಿದರು. ಆಸುಪಾಸಿನ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಮುನಿರಾಜು ಕುಟುಂಬದವರು ಪ್ರಸಾದ ಸೇವೆಯನ್ನು ಒದಗಿಸಿದರು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇವುಗಳನ್ನೂ ಓದಿರಿ:

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

ಇನ್ನೂ ಓದಿಲ್ಲವೇ?

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

PARYAYA: ದೇಗುಲ ವಾರ್ಷಿಕೋತ್ಸವ: ಪಂಚಹೋಮ:   ದೇಗುಲ ವಾರ್ಷಿಕೋತ್ಸವ: ಪಂಚಹೋಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ , ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ...