Showing posts with label Health. Show all posts
Showing posts with label Health. Show all posts

Saturday, January 10, 2026

PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

 ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?

ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ್ಷಿಸುತ್ತೀರಿ ಮತ್ತು ನಿಮ್ಮ ಬಂಧು ಮಿತ್ರರಿಗೆ ಇವುಗಳನ್ನು ಕಳುಹಿಸಿಕೊಡುತ್ತೀರಿ.

ಇವು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ , ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ʼಫೂಟ್‌ ಪಲ್ಸ್‌ʼ ಥೆರಪಿ ಶಿಬಿರದ ಸಂದರ್ಭದಲ್ಲಿ ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಸಂಪನ್ಮೂಲ ವ್ಯಕ್ತಿ ಡಾ. ರತ್ನಾಕರ ಶೆಟ್ಟಿ ಅವರು ಆಡಿದ ಮಾತುಗಳ ವಿಡಿಯೋಗಳು.

ಕೆಳಗೆ ಕ್ಲಿಕ್‌ ಮಾಡಿ ನೋಡಿ. ನಿಮ್ಮ ಬಂಧು ಮಿತ್ರರಿಗೂ ಕಳುಹಿಸಿಕೊಡಿ.



PARYAYA: ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ?:   ನಿಮ್ಮ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಇದೆಯೇ? ನಿ ಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದಲ್ಲಿ ಈ ಕೆಳಗಿನ ಎರಡು ಅತ್ಯಪಯುಕ್ತ ವಿಡಿಯೋಗಳನ್ನು ನೀವು ಖಂಡಿತ ಪೂರ್ತಿಯಾಗಿ ವೀಕ...

Friday, January 9, 2026

PARYAYA: ಆರೋಗ್ಯ ರಕ್ಷಣೆ ಏಕೆ ಮುಖ್ಯ?

 ಆರೋಗ್ಯ ರಕ್ಷಣೆ ಏಕೆ ಮುಖ್ಯ?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಕಂಪಾನಿಯೋ ಸಹಯೋಗದಲ್ಲಿ ನಡೆಯುತ್ತಿರುವ ಉಚಿತ ಆಕ್ಯೂ ಪ್ಲಸ್‌ ಥೆರೆಪಿ ಶಿಬಿರದಲ್ಲಿ ೨೦೨೬ ಜನವರಿ ೯ರ ಶುಕ್ರವಾರ ಒಂದು ವಿಶೇಷ ಕಾರ್ಯಕ್ರಮ.

ಆರೋಗ್ಯ ತಜ್ಞ ಹಾಗೂ ಖ್ಯಾತ ಟಿವಿ ಶೋ ಸಂಪನ್ಮೂಲ ವ್ಯಕ್ತಿ ಶ್ರೀ ರತ್ನಾಕರ ಶೆಟ್ಟಿ ಅವರಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ. ಆರೋಗ್ಯ ರಕ್ಷಣೆಯ ಸೂತ್ರಗಳನ್ನು ಅತ್ಯಂತ ಸರಳವಾಗಿ, ಮನ ಮುಟ್ಟುವಂತೆ ನಿರರ್ಗಳವಾಗಿ ವಿವರಿಸಿದ ಅವರು ಆರೋಗ್ಯ ಕಾಪಾಡಿಕೊಳ್ಳುವಿಕೆಯ ಮಹತ್ವವನ್ನು ಒತ್ತಿ ಹೇಳಿದರು.

ಶ್ರೀ ಬಾಲಾಜಿ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎನ್.‌ ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ರಾಜೇಶ ಹೆಗಡೆ ಮತ್ತಿತರರು ಹಾಜರಿದ್ದರು. ಕಂಪಾನಿಯೋ ಪ್ರತಿನಿಧಿ ಕಾರ್ತಿಕ್‌ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಬಳಿಕ ಕಂಪಾನಿಯೋ ಕಾರ್ಯಕರ್ತೆ ಪ್ರಫುಲ್ಲ ಹಾಗೂ ಕಾರ್ತಿಕ್‌ ದೇವಾಡಿಗ ಶಿಬಿರವನ್ನು ಮುಂದುವರೆಸಿದರು.

ಈ ಸಂದರ್ಭದ ಕೆಲವು ಫೊಟೋಗಳು ಹಾಗೂ ವಿಡಿಯೋಗಳು ಇಲ್ಲಿವೆ. ಶ್ರೀ ರತ್ನಾಕರ ಶೆಟ್ಟಿ ಅವರ ಮಾತುಗಳ ಇನ್ನಷ್ಟು ವಿಡಿಯೋ ಮುಂದಿನ ದಿನಗಳಲ್ಲಿ ಇಲ್ಲಿ ಮೂಡಿ ಬರಲಿದೆ.

PARYAYA: ಆರೋಗ್ಯ ರಕ್ಷಣೆ ಏಕೆ ಮುಖ್ಯ?:   ಆರೋಗ್ಯ ರಕ್ಷಣೆ ಏಕೆ ಮುಖ್ಯ? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥ...

Wednesday, January 7, 2026

PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

 ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?

ನೆಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು  ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣ. ಅದರಲ್ಲೂ ಬಸ್ಕಿ ತೆಗೆಯುವುದು, ಕೂತು-ಏಳುವ ಅಭ್ಯಾಸ ಕಡಿಮೆ ಮಾಡಿಕೊಂಡದ್ದು ಇತ್ಯಾದಿ ಕೂಡಾ ನರಸಂಬಂಧಿ ಸಮಸ್ಯೆಗಳಿಗೆ ಮೂಲ

ಮಹಿಳೆಯರು ಹಿಂದೆ ನೆಲದಲ್ಲಿ ಕುಳಿತೇ ಅಡುಗೆ ಮಾಡುತ್ತಿದ್ದರು. ಈಗ ಅಡುಗೆ ಮನೆಯ ವಿನ್ಯಾಸವೇ ಬದಲಿಯಾಗಿದೆ. ನಿಂತುಕೊಂಡು ಅಡುಗೆ ಮಾಡುವುದೇ ಆರಾಮ ಎಂಬ ಭಾವನೆ ಇದೆ. ಇದರೊಂದಿಗೆ ಅತ್ತಿತ್ತ ಓಡಾಡುವ ಅಭ್ಯಾಸವೂ ಕಡಿಮೆ.

ಮನೆಯ ಹೊರಗೆ ಬಿಡಿ ಮನೆಯ ಒಳಗೂ ಬರಿಗಾಲಲ್ಲಿ ನಡೆಯುವ ಕ್ರಮ ಕ್ರಮೇಣ ಮಾಯವಾಗುತ್ತಿದೆ. ನಡೆದಾಡುವುದೇ ಕಡಿಮೆ, ಕಡಿಮೆ ನಡೆದಾಡುವುದರ ಜೊತೆ ಮನೆಯ ಹೊರಗೆ, ಒಳಗೆ ಚಪ್ಪಲಿಗೆ ಮುಕ್ತ ಪ್ರವೇಶ. ಪರಿಣಾಮ ಪಾದಗಳಿಗೆ ಭೂಮಿಯ ಸ್ಪರ್ಶವೇ ಇಲ್ಲ.

ಇದರಿಂದ ಆಗುವ ದೊಡ್ಡ ನಷ್ಟ- ಭೂಮಿಯ ಅಯಸ್ಕಾಂತ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಿಕೆ. ಈ ಅಯಸ್ಕಾಂತ ಶಕ್ತಿ ಅಥವಾ ಮ್ಯಾಗ್ನೆಟ್‌ ಪವರ್‌ ದೇಹ ಸ್ವಾಸ್ಥ್ಯಕ್ಕೆ ಬಲುಮುಖ್ಯ.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಮತ್ತು ಕಂಪಾನಿಯೋ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ʼಫೂಟ್‌ ಪಲ್ಸ್‌ʼ ಥೆರೆಪಿ ಶಿಬಿರದ ಸಂದರ್ಭದಲ್ಲಿ ಥೆರೆಪಿ ತಜ್ಞ ಕಾರ್ತಿಕ್‌ ಹೇಳಿದ ಸೂತ್ರಗಳಲ್ಲಿ ಇವೂ ಸೇರಿವೆ.

ಅವರ ಮಾತುಗಳ ವಿಡಿಯೋ ಇಲ್ಲಿದೆ. ಚಿತ್ರ ಕ್ಲಿಕ್‌ ಮಾಡಿ ನೋಡಿ. Youtube Video link: https://youtu.be/TlSSjnHtgJA

ರಂಗೋಲಿ ಸ್ಪರ್ಧೆ

ಹೇಳಬೇಕಾದ ಇನ್ನೊಂದು ಸುದ್ದಿ ಇಲ್ಲಿದೆ. ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ ೧೫ರಂದು ಬರಲಿರುವ ಮಕರ ಸಂಕ್ರಾಂತಿಯ ಪ್ರಯುಕ್ತ ಮಹಿಳೆಯರಿಗೆ ʼರಂಗೋಲಿʼ ಸ್ಪರ್ಧೆಯನ್ನು ೨೦೨೫ ಜನವರಿ ೧೧ರ ಭಾನುವಾರ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಬೆಳಗ್ಗೆ ೧೦.೩೦ರಿಂದ ೧೨ರ ನಡುವಣ ಅವಧಿಯಲ್ಲಿ ನಡೆಯಲಿದೆ. ಪಾಲ್ಗೊಳ್ಳಬಯಸುವವರು ಮಮತಾ (೮೮೬೭೯೬೭೮೮೮) ಅಥವಾ ಸ್ವಾತಿ (೮೧೦೫೬೮೫೮೯೯) ಅವರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.


PARYAYA: ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ?:   ಮೊಣಕಾಲು ಅಥವಾ ಮಂಡಿನೋವು ಬರುವುದು ಏಕೆ? ನೆ ಲದಲ್ಲಿ ಅಥವಾ ಕೆಳಗೆ ಕುಳಿತುಕೊಳ್ಳುವ ಅಭ್ಯಾಸವನ್ನು ಕೈಬಿಟ್ಟದ್ದೇ ಮೊಣಕಾಲು   ಅಥವಾ ಮಂಡಿ ನೋವು ಸೇರಿದಂತೆ ನಮ್ಮ ಹಲವಾರ...

Monday, January 5, 2026

PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?

ಬೆಂಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಉಚಿತ ಫುಟ್‌ ಪಲ್ಸ್‌ ಥೆರೆಪಿ ಶಿಬಿರವು ೨೦೨೬ ಜನವರಿ ೩ರಿಂದ ಆರಂಭಗೊಂಡಿದೆ.

ಪ್ರತಿದಿನ ಬೆಳಗ್ಗೆ ೯.೩೦ಕ್ಕೆ ಆರಂಭವಾಗಿ ಸಂಜೆ ೫ ಗಂಟೆಯವರೆಗೆ ನಡೆಯುವ ಈ ಶಿಬಿರವು ಜನವರಿ ೧೨ರವರೆಗೂ ನಡೆಯಲಿದೆ.


ಪ್ರತಿದಿನ ೩೦ ನಿಮಿಷಗಳ ಅವಧಿಯ ಚಿಕಿತ್ಸೆ ಪಡೆಯುವುದರಿಂದ ರಕ್ತ ಪರಿಚಲನೆ, ಮಾಂಸಖಂಡಗಳ ಸೆಳೆತ ಮತ್ತು ನರಗಳ ಯಾವುದೇ ಸರಳ ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಔಷಧ ರಹಿತ ಹಾಗೂ ಅಡ್ಡ ಪರಿಣಾಮ ಇಲ್ಲದ ಪರಿಹಾರ ಲಭಿಸುತ್ತದೆ.

ಮಧುಮೇಹ, ಮಧುಮೇಹದಿಂದ ಬರುವ ಪಾದ ಉರಿಯೂತ, ಸಂಧಿವಾತ, ಕುತ್ತಿಗೆ ನೋವು ಇತ್ಯಾದಿ ಸಮಸ್ಯೆಗಳಿಗೂ ಈ ಚಿಕಿತ್ಸೆಯಲ್ಲಿ ಪರಿಹಾರ ಲಭ್ಯವಿದೆ. ಬಹುಮುಖ್ಯವಾಗಿ ಫಿಸಿಯೋಥೆರೆಪಿ ಅಗತ್ಯ ಉಳ್ಳವರಿಗೆ ಇದು ಅತ್ಯುತ್ತಮ ಎನ್ನುತ್ತಾರೆ ಈ ಚಿಕಿತ್ಸಾ ತಜ್ಞ ಕಾರ್ತಿಕ್.‌

ಚಿಕಿತ್ಸೆ ಬಗ್ಗೆ ಅವರೇನು ಹೇಳುತ್ತಾರೆ ? ಇಲ್ಲಿ 👇 ನೋಡಿ.


ಇದನ್ನೂ ನೋಡಿ:
PARYAYA: ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು?:   ಫೂಟ್‌ ಪಲ್ಸ್‌ ಥೆರೆಪಿ: ಏನೆಲ್ಲ ಅನುಕೂಲ ಉಂಟು? ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇ...

Sunday, July 1, 2018

ಏಪಲ್ ಬೀಜಗಳು ವಿಷಯುಕ್ತವೇ? ಏಪಲ್ ಬೀಜ ಕೊಟ್ಟು ಕೊಂದದ್ದು ಹೌದಾ?


ಏಪಲ್ ಬೀಜಗಳು ವಿಷಯುಕ್ತವೇ? ಏಪಲ್
ಬೀಜ ಕೊಟ್ಟು ಕೊಂದದ್ದು ಹೌದಾ?

ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆಯೊಬ್ಬಳು  ಪುಡಿ ಮಾಡಿದ ಏಪಲ್ ಬೀಜಗಳನ್ನು ಕೊಟ್ಟು ತನ್ನ ಗಂಡನನ್ನು ಕೊಂದಳು ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕವಾಗಿ ಪ್ರಸಾರವಾಗುತ್ತಿದೆ.  ಆಕೆ ಮತ್ತು ಆಕೆಯ ಪ್ರೇಮಿಗೆ ಈ ಪ್ರಕರಣದಲ್ಲಿ ಕ್ರಮವಾಗಿ 22 ವರ್ಷ ಮತ್ತು 25 ವರ್ಷಗಳ ಸೆರೆವಾಸದ ಶಿಕ್ಷೆಯನ್ನು 2018ರ ಜೂನ್ 21ರಂದು  ವಿಧಿಸಲಾಗಿದೆ ಎಂದು ಈ ಸುದ್ದಿ ಉಲ್ಲೇಖಿಸುತ್ತದೆ.
ಜಾಲತಾಣದ  ಇದೇ ಸುದ್ದಿಯ ಮುಂದುವರಿದ ಭಾಗ ಹೀಗೆ ಇದೆ: ಇಲ್ಲಿಯವರೆಗೆ ನನಗೆ ಏಪಲ್ಸ್ ಬೀಜಗಳೂ ಸಯನೈಡ್ ವಿಷವನ್ನು ಹೊಂದಿವೆ ಎಂಬುದು ಗೊತ್ತೇ ಇರಲಿಲ್ಲ. ನಾನು ಮಾಹಿತಿಗಾಗಿ ತಡಕಾಡಿದೆ. ಮತ್ತು ಏಪಲ್ ಬೀಜಗಳು ಸಯನೈಡ್ ಹೊಂದಿವೆ ಎಂಬ ವಿಷಯ ತಿಳಿದು ಅಚ್ಚರಿಗೊಂಡೆ. ಈ ಕಾರಣಕ್ಕಾಗಿಯೇ ಏಪಲ್ ಒಳಕ್ಕೆ ಕೀಟಗಳು ದಾಂಗುಡಿ ಇಡುವುದಿಲ್ಲ.ಬಹುಶ ಅಲ್ಲಿ ತಮಗೆ ಸಾವು ಕಾದಿರುತ್ತದೆ ಎಂಬುದು ಅವುಗಳಿಗೆ ಗೊತ್ತಿರುತ್ತದೋ ಏನೋ? ಆದ್ದರಿಂದ ಏಪಲ್ ತಿನ್ನುವ ಮುನ್ನ ಬೀಜಗಳನ್ನು ತೆಗೆಯಲು ಮರೆಯಬೇಡಿ…. ವಿಶೇಷವಾಗಿ ಮಕ್ಕಳಿಗೆ ಇಡೀ ಏಪಲ್ ಕೊಡಲೇಬೇಡಿ. ಬದಲಿಗೆ ಅವುಗಳನ್ನು ಕತ್ತರಿಸಿ, ಬೀಜಗಳನ್ನು ತೆಗೆದುಕೊಡಿ. ಈ ಕುರಿತು ಸಂಶಯಗಳಿದ್ದರೆ ಗೂಗಲ್ ನಲ್ಲಿ ಶೋಧಿಸಿ. ಮತ್ತು ಈ ಸಂದೇಶವನ್ನು ಸಾಧ್ಯವಿದ್ದಷ್ಟೂ ಜನರಿಗೆ ಕಳುಹಿಸಿ.
ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಈ ಸುದ್ದಿ ಸರಿಯಾ? ಸರಿಯಾಗಿದ್ದರೆ ಎಷ್ಟರ ಮಟ್ಟಿಗೆ ಸರಿ?
ವಾಸ್ತವಾಂಶ
ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಡುತ್ತಿರುವ ಏಪಲ್ ಬೀಜಗಳು ವಿಷಪೂರಿತವಾಗಿವೆ ಎಂಬ ಸುದ್ದಿಗೆ ಮೂಲಾಧಾರ ಆಸ್ಟ್ರೇಲಿಯಾದ ಒಂದು ಕೊಲೆ ಪ್ರಕರಣದ ಸುದ್ದಿ. ಈ ಕೊಲೆ ಪ ಪ್ರಕರಣದಲ್ಲಿ ಭಾರತೀಯ ಮಹಿಳೆಯೊಬ್ಬಳು ತನ್ನ ಗಂಡನನ್ನು ಪುಡಿ ಮಾಡಿದ ಏಪಲ್ ಬೀಜದ ಜ್ಯೂಸ್ ನೀಡಿ ಕೊಲೆ ಮಾಡಿದಳು. ಈ ಅಪರಾಧಕ್ಕಾಗಿ ಆಕೆಗೆ ಮತ್ತು ಆಕೆಯ ಪ್ರಿಯಕರನಿಗೆ ಕ್ರಮವಾಗಿ 22 ಮತ್ತು 25 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ. 

ಆದರೆ ಈ ಸುದ್ದಿ ಪೂರ್ತಿ ಸತ್ಯವಲ್ಲ, ಅರ್ಧ ಸತ್ಯ. ಸುದ್ದಿಯ ಮುಂದಿನ ಸಂದೇಶ ಏನೆಂದರೆ ಏಪಲ್ ಬೀಜಗಳು ಸಯನೈಡ್ ಹೊಂದಿವೆ. ಆದ್ದರಿಂದ ತಿಂದ ಬಳಿಕ ದೇಹದ ಒಳಗೆ ಅದು ವಿಷವಾಗಿ ಬದಲಾಗುತ್ತದೆ ಎಂಬುದು.
ವಾಸ್ತವವಾಗಿ ಇದು ಆಸ್ಟ್ರೇಲಿಯಾದಲ್ಲಿ ಸೋಫಿಯಾ ಸ್ಯಾಮ್ ಎಂಬ ಮಹಿಳೆ ತನ್ನ ಗಂಡ ಸ್ಯಾಮ್ ಅಬ್ರಹಾಮನನ್ನು ತನ್ನ ಮಾಜಿ ಪ್ರಿಯಕರ ಅರುಣ್ ಕಮಲಾಸನಮ್ ಜೊತೆ ಸೇರಿ ಕೊಂದ ಪ್ರಕರಣ.  ಈ ಘಟನೆ ಘಟಿಸಿದ್ದು ಆಸ್ಟ್ರೇಲಿಯಾದ ಮೆಲ್ಬೋರ್ನಿನಲ್ಲಿ 2015ರ ಅಕ್ಟೋಬರ್ ತಿಂಗಳಲ್ಲಿ.  ಆಸ್ಟ್ರೇಲಿಯಾದ ಸುಪ್ರೀಂಕೋರ್ಟ್ 2018ರ ಜೂನ್ 21ರಂದು ತೀರ್ಪು ನೀಡಿ ಸೋಫಿಯಾಗೆ 22 ವರ್ಷ ಮತ್ತು ಮತ್ತು ಕಮಲಾಸನಮ್ ಗೆ 27 ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿತು. ಬಹುಮುಖ್ಯವಾಗಿ ಇವರಿಬ್ಬರೂ ಸೇರಿ ಸಯನೈಡ್ ಮಿಶ್ರಿತ ಕಿತ್ತಳೆ ಜ್ಯೂಸ್ ನೀಡಿ ಸ್ಯಾಮ್ ಅಬ್ರಹಾಮ್ ನನ್ನು ಕೊಂದದ್ದಕ್ಕಾಗಿ ಕೋರ್ಟ್ ಈ ಶಿಕ್ಷೆ ವಿಧಿಸಿತು.  (ಈ ಲಿಂಕ್ ಗಮನಿಸಿ: Apple Seeds Poisonous, Woman Killed Husband Giving Them ).

ಈ ಸುದ್ದಿಯಿಂದ ಸ್ಪಷ್ಟವಾಗುವ ಅಂಶ: ಅಪರಾಧಿಗಳಿಬ್ಬರೂ ಸೇರಿ ಸ್ಯಾಮ್ ಅಬ್ರಹಾಮನನ್ನು ಕೊಂದದ್ದು ನಿಜ, ಆದರೆ ಪುಡಿ ಮಾಡಿದ ಆಪಲ್ ಬೀಜದ ಜ್ಯೂಸ್ ನೀಡಿ ಅಲ್ಲ ಬದಲಿಗೆ ಸಯನೈಡ್ ಬೆರೆಸಿದ ಜ್ಯೂಸ್ ಕುಡಿಸಿ ಎಂಬುದು. ಹೀಗಾಗಿ ಪುಡಿ ಮಾಡಿದ ಏಪಲ್ ಬೀಜ ನೀಡಿ ಕೊಲ್ಲಲಾಯಿತು ಎಂಬುದು ಸತ್ಯದೂರವಾದ ಅಂಶ.
ಹಾಗಾದರೆ ಸಾಮಾಜಿಕ ಜಾಲತಾಣದಲ್ಲಿ ಏಪಲ್ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರಚಾರ ಮಾಡಲಾಗುತ್ತಿದೆಯೇ?
ವಾಸ್ತವವಾಗಿ ಏಪಲ್ ಬೀಜಗಳು ಸಯನೈಡ್ ಮತ್ತು ಸಕ್ಕರೆಯ ಅಂಶ ಇರುವ  ‘ಅಮಿಗ್ಡಾಲಿನ್’ (Amygdalin)  ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಈ ಸಂಯುಕ್ತವು ಏಪ್ರಿಕಾಟ್,  ಬಿಟ್ಟರ್ ಆಲ್ಮಂಡ್, ಪೀಚಸ್, ಪೀಯರ್ಸ್ ಮತ್ತು ಚೆರ್ರಿ ಪಿಟ್ಸ್ ಗಳಲ್ಲೂ ಇದೆ. ಲಿಮಾ ಬೀನ್ಸ್ ನಲ್ಲೂ ಇದೇ ಸಂಯುಕ್ತ ಇರುತ್ತದೆ. ಮಾನವ ದೇಹದೊಳಗಿನ ಪಚನಕಾರಿ ಎನ್ ಜೈಮುಗಳು ಎಮಿಗ್ರಾಲಿನನ್ನು ಹೈಡ್ರೋಜೆನ್ ಸಯನೈಡ್ (ಎಚ್ ಸಿ ಎನ್) ಆಗಿ ಪರಿವರ್ತಿಸುತ್ತದೆ. ಇದು ನಿಮ್ಮನ್ನು ಅಸ್ವಸ್ಥನನ್ನಾಗಿ ಮಾಡಬಹುದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಕೊಲ್ಲಲೂ ಬಹುದು. ಆದರೆ ಆಪಲ್ ಬೀಜಗಳು ಅತ್ಯಂತ ದಪ್ಪವಾದ ರಕ್ಷಣಾತ್ಮಕ ಸಿಪ್ಪೆಯನ್ನು ಹೊಂದಿರುವುದರಿಂದ ಹೀಗಾಗುವುದು ಬಲು ಅಪರೂಪ. ಸಾಮಾನ್ಯವಾಗಿ ಜೀವಿಗಳ ಹೊಟ್ಟೆಯ ಒಳಕ್ಕೆ ಹೋದ ಬೀಜಗಳು ಅದೇ ಅವಸ್ಥೆಯಲ್ಲಿ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹೊರಬರುತ್ತವೆ. ಕಡು ರುಚಿಯ ಕಾರಣ ಜನರಾಗಲೀ ಪ್ರಾಣಿಗಳಾಗಲೀ ಅವುಗಳನ್ನು ತಿನ್ನುವುದಿಲ್ಲ.
ಆದರೆ ಹೆಚ್ಚಿನ ಪ್ರಮಾಣದಲ್ಲಿ ಏಪಲ್ ಬೀಜಗಳನ್ನು ಪುಡಿಮಾಡಿ ಇಲ್ಲವೇ ಜಗಿದು ತಿಂದರೆ ಅವು ಅಪಾಯ ಉಂಟು ಮಾಡುವ ಸಾಧ್ಯತೆ ಇದೆ. ಬ್ರಿಟಾನಿಕಾ.ಕಾಮ್ ಪ್ರಕಾರ 150ರಿಂದ ಕೆಲವು ಸಾವಿರಗಳಷ್ಟು ಪ್ರಮಾಣದ  ಪುಡಿ ಮಾಡಿದ ಏಪಲ್ ಬೀಜಗಳು ವಯಸ್ಕರಲ್ಲಿ ಸಯನೈಡ್ ವಿಷವಾಗಿ ಪರಿವರ್ತನೆಗೊಳ್ಳಬಲ್ಲುವು.

ಗೊತ್ತಿದ್ದೋ, ಗೊತ್ತಿಲ್ಲದೆಯೋ ಸ್ವಲ್ಪ ಪ್ರಮಾಣದಲ್ಲಿ ಏಪಲ್ ಬೀಜಗಳನ್ನು ತಿಂದರೆ ಅದು ಸ್ವಲ್ಪ ಪ್ರಮಾಣದ ಹೈಡ್ರೋಜನ್ ಸಯನೈಡನ್ನು ದೇಹದಲ್ಲಿ ಉಂಟು ಮಾಡಬಹುದು, ಆದರೆ
ಅದು ಸಹಜವಾಗಿಯೇ ದೇಹದಿಂದ ಹೊರತಳ್ಳಲ್ಪಡುತ್ತದೆ. ಅಲ್ಪ ಪ್ರಮಾಣದಲ್ಲಿ ಹೈಡ್ರೋಜನ್ ಸಯನೈಡ್ ದೇಹದಲ್ಲಿ ಉತ್ಪತ್ತಿಯಾದರೆ ಆಗ ತಲೆನೋವು, ಹೊಟ್ಟೆ ನೋವು, ವಾಕರಿಕೆ, ವಾಂತಿ, ತಲೆಸುತ್ತು, ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಆದ್ದರಿಂದ ಏಪಲ್ ತಿನ್ನುವಾಗ ಬೀಜಗಳನ್ನು ತೆಗೆದೇ ತಿನ್ನುವುದು ಕ್ಷೇಮಕರ.