ಶಿವೋಹಂ ಶಿವೋಹಂ: ಮಹಾ ಶಿವರಾತ್ರಿ ಸಡಗರ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ರ ಫೆಬ್ರುವರಿ ೧೫ರಂದು ಮಹಾಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.
ಬೆಳಗ್ಗೆ ಶಿವಲಿಂಗಕ್ಕೆ ಗಂಗಾಜಲ ಹಾಗೂ ಕ್ಷೀರಾಭಿಷೇಕ ಪೂರ್ವಕ ಅರ್ಚನೆ ಸಲ್ಲಿಸಿ ಬಳಿಕ, ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸೇರಿದಂತೆ ಸಪರಿವಾರ ದೇವರುಗಳಿಗೆ ಹಾಗೂ ಶಿವನಿಗೆ ಮಹಾಮಂಗಳಾರತಿ ಸೇವೆ ಮಾಡಲಾಯಿತು.
ಆರಂಭದಲ್ಲಿ ಯಕ್ಷ ಕಲಾ ಕೌಸ್ತುಭ ತಂಡದಿಂದ ಗಣಪತಿ ಸ್ತುತಿ ನಡೆಯಿತು.
ಸಾಯಂಕಾಲ ಸಂಪಿಗೆಹಳ್ಳಿಯ ಕೋದಂಡರಾಮ ಭಜನಾ ಮಂಡಳಿ ತಂಡದಿಂದ ಮತ್ತು ದೇವಾಲಯದ ಭಕ್ತರ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಪಿಗೆ ಹಳ್ಳಿಯ ಭಜನಾ ತಂಡದ ಸದಸ್ಯರು ಶಿವರಾತ್ರಿ ಜಾಗರಣೆ ಸಲುವಾಗಿ ಆಸುಪಾಸಿನ ವಿವಿಧ ದೇವಾಲಯಗಳಲ್ಲಿಯೂ ಭಜನಾ ಸೇವೆ ಹಮ್ಮಿಕೊಂಡಿದ್ದರು.
ಶ್ರೀ ಮುನಿರಾಜು ಅವರು ದೇವಾಲಯದ ಅಲಂಕಾರ ಹಾಗೂ ಪ್ರಸಾದ ಸೇವಾ ವ್ಯವಸ್ಥೆ ಮಾಡಿದ್ದರು. ಭಕ್ತರು ಅಪಾರ ಸಂಖ್ಯೆಯಲ್ಲಿ ದೇವರ ದರ್ಶನ ಮಾಡಿ ಶಿವಲಿಂಗಕ್ಕೆ ಕ್ಷೀರ ಹಾಗೂ ಗಂಗಾಜಲ ಅಭಿಷೇಕ ಮಾಡಿದರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ. ವಿಡಿಯೋಗಳನ್ನು ನೋಡಲು ಚಿತ್ರಗಳನ್ನು ಕ್ಲಿಕ್ ಮಾಡಿರಿ.





No comments:
Post a Comment