Showing posts with label ವೈಕುಂಠ ಏಕಾದಶಿ. Show all posts
Showing posts with label ವೈಕುಂಠ ಏಕಾದಶಿ. Show all posts

Tuesday, December 30, 2025

PARYAYA: ವೈಕುಂಠ ಏಕಾದಶಿ ಸಡಗರ

 ವೈಕುಂಠ ಏಕಾದಶಿ ಸಡಗರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೩೦ರ ಮಂಗಳವಾರ ವೈಕುಂಠ ಏಕಾದಶಿಯನ್ನು ಸಡಗರದೊಂದಿಗೆ ಆಚರಿಸಲಾಯಿತು.

ನಸುಕಿನ ಬ್ರಾಹ್ಮೀ ಮುಹೂರ್ತದಲ್ಲಿಯೇ ಅಭಿಷೇಕದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಅಲಂಕಾರ, ಮಹಾಮಂಗಳಾರತಿ ನಡೆಯಿತು.

ಭಾರೀ ಸಂಖ್ಯೆಯಲ್ಲಿ ಭಕ್ತರು ಮುಂಜಾನೆಯಲ್ಲೇ ಆಗಮಿಸಿ ದೇವರ ದರ್ಶನ, ವೈಕುಂಠ ದ್ವಾರದ ದರ್ಶನ ಪಡೆದು ಪುನೀತರಾದರು.

ಮಾಜಿ ಸಚಿವರಾದ ಶ್ರೀ ಎಸ್.‌ ಎನ್.‌ ಕೃಷ್ಣಯ್ಯ ಶೆಟ್ಟಿ ಅವರಿಂದ ಲಡ್ಡು ಪ್ರಸಾದ ಸೇವೆ, ಶ್ರೀ ಮುನಿರಾಜು ಮತ್ತು ಕುಟುಂಬದವರಿಗೆ ಅಲಂಕಾರ ಸೇವೆ, ಶ್ರೀ ನಾಗರಾಜ್‌ ಕೆ.ಎಂ. ಮತ್ತು ಕುಟುಂಬ, ಶ್ರೀ ಚೌಡರೆಡ್ಡಿ ಮತ್ತು ಕುಟುಂಬದವರಿಂದ ಪ್ರಸಾದ ಸೇವೆ ವ್ಯವಸ್ಥೆಯಿತ್ತು. ವಿದ್ಯಾ ರಘು ಪ್ರಸಾದ್‌ ಮತ್ತು ತಂಡ ಹಾಗೂ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದ ಕೆಲವು ವಿಡಿಯೋ ಹಾಗೂ ಚಿತ್ರಗಳು ಇಲ್ಲಿವೆ. ಅಭಿಷೇಕದ ದೃಶ್ಯ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ - Video link https://youtu.be/31F2f6wRhmI ಇದನ್ನು ಕ್ಲಿಕ್‌ ಮಾಡಿರಿ.

 
ಮಹಾಮಂಗಳಾರತಿ ದೃಶ್ಯ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ:

PARYAYA: ವೈಕುಂಠ ಏಕಾದಶಿ ಸಡಗರ:   ವೈಕುಂಠ ಏಕಾದಶಿ ಸಡಗರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲ...

Monday, December 29, 2025

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

 ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಡಿಸೆಂಬರ್‌ ೩೦ ಮಂಗಳವಾರದ ವೈಕುಂಠ ಏಕಾದಶಿ ಆಚರಣೆಗೆ ಸಡಗರದ ಸಿದ್ಧತೆ, ಶ್ರಮದಾನ ಕಾರ್ಯಕ್ರಮಗಳು ಡಿಸೆಂಬರ್‌ ೨೯ರಂದು ಭರದಿಂದ ನಡೆದವು.

ಭಕ್ತಾದಿಗಳು ದೇವಾಲಯ ಸ್ವಚ್ಛತೆಯಿಂದ ಹಿಡಿದು ಅಲಂಕಾರದವರೆಗೆ ಎಲ್ಲ ರೀತಿಯ ಶ್ರಮದಾನದಲ್ಲಿ ಲಗುಬಗೆಯಿಂದ ಪಾಲ್ಗೊಂಡರು.

ಮಂಗಳವಾರ ಬೆಳಗ್ಗೆ ೪ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಭಿಷೇಕ, ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ವಿಶೇಷ ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ೧೧ ಗಂಟೆಗೆ ವಿದ್ಯಾ ರಘು ಪ್ರಸಾದ್‌ ತಂಡವು ಭಜನಾ ಕಾರ್ಯಕ್ರಮವನ್ನು ನೆರವೇರಿಸಿಕೊಡಲಿದೆ.

ವೈಕುಂಠ ದ್ವಾರವನ್ನು ಶನಿವಾರ ರಾತ್ರೆಯ ವೇಳಗೆ ಸಜ್ಜುಗೊಳಿಸಲಾಗಿದ್ದು ಬೆಳಗ್ಗೆಯಿಂದ ರಾತ್ರಿ ೯ ಗಂಟೆಯವರೆಗೆ ವೈಕುಂಠ ದ್ವಾರ ದರ್ಶನದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ೯ ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ.

ಮಾಜಿ ಸಚಿವ ಮಾಲೂರು ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ಉಚಿತ ಲಡ್ಡು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.

PARYAYA: ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ:   ವೈಕುಂಠ ಏಕಾದಶಿಗೆ ಸಡಗರದ ಸಿದ್ಧತೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...

Friday, January 10, 2025

PARYAYA: ವೈಕುಂಠ ಏಕಾದಶಿ ಮಹೋತ್ಸವ

 ವೈಕುಂಠ ಏಕಾದಶಿ ಮಹೋತ್ಸವ



ದೇಶಾದ್ಯಂತ ೨೦೨೫ ಜನವರಿ ೧೦ರ ಶುಕ್ರವಾರದ ಈದಿನ ಸಡಗರೋತ್ಸಾದೊಂದಿಗೆ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತರು ಆಚರಿಸಿದರು. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದರು.

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿಶ್ರೀ ವೆಂಕಟೇಶ್ವರಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಮಹೋತ್ಸವವನ್ನು ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲ ದೇವತಾ ವಿಗ್ರಹದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಬಡಾವಣೆಯ ನಿರ್ಮಾಪಕ
ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಶ್ರೀ ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರು ವಿಶೇಷ ಲಾಡು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದ ಕೆಲವು ಚಿತ್ರಗಳು ಮತ್ತು ವಿಡಿಯೋ ಇಲ್ಲಿದೆ.



ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.










ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.


PARYAYA: ವೈಕುಂಠ ಏಕಾದಶಿ ಮಹೋತ್ಸವ:   ವೈಕುಂಠ ಏಕಾದಶಿ ಮಹೋತ್ಸವ ದೇಶಾದ್ಯಂತ ೨೦೨೫ ಜನವರಿ ೧೦ರ ಶುಕ್ರವಾರ ದ ಈದಿನ ಸಡಗರೋತ್ಸಾದೊಂದಿಗೆ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತರು ಆಚರಿಸಿದರು. ಈ ಸಂದರ್ಭದಲ್...