Monday, September 29, 2025

PARYAYA: ಗಣಪನಿಗೆ ತರಕಾರಿ ಅಲಂಕಾರ

 ಗಣಪನಿಗೆ ತರಕಾರಿ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಎಂಟನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೯ರ ಸೋಮವಾರ ಶ್ರೀ ಬಾಲಾಜಿ ಮಹಾಗಣಪತಿಗೆ ತರಕಾರಿ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.



ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.

PARYAYA: ಗಣಪನಿಗೆ ತರಕಾರಿ ಅಲಂಕಾರ:   ಗಣಪನಿಗೆ ತರಕಾರಿ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ...

Sunday, September 28, 2025

PARYAYA: ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ

 ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಏಳನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೮ರ ಭಾನುವಾರ ಶ್ರೀ ಬಾಲಾಜಿ ಮಹಾಗಣಪತಿಗೆ ನವಧಾನ್ಯ ಅಲಂಕಾರ.

ಮಹಿಳೆಯರಿಂದ ಸಾಮೂಹಿಕ ಭಜನಾ ಕೈಂಕರ್ಯ ನೆರವೇರಿತು.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.



PARYAYA: ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ:   ಬಾಲಾಜಿ ಗಣಪನಿಗೆ ನವಧಾನ್ಯ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದ...

Saturday, September 27, 2025

PARYAYA: ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ

 ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಆರನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೭ರ ಶನಿವಾರ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಸ್ವಾಮಿಗೆ ಒಣ್ಣ ಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು. 





PARYAYA: ತ್ರಿಮೂರ್ತಿಗಳಿಗೆ ಒಣಹಣ್ಣುಗಳ (ಡ್ರೈ ಫ್ರುಟ್ಸ್‌) ಅಲಂಕಾರ:   ತ್ರಿಮೂರ್ತಿಗಳಿಗೆ ಒಣಹಣ್ಣುಗಳ  (ಡ್ರೈ ಫ್ರುಟ್ಸ್‌)   ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್...

PARYAYA: ದುರ್ಗಾದೇವಿ- ಮಹಿಷಾಸುರ ಸಮರ

 ದುರ್ಗಾದೇವಿ- ಮಹಿಷಾಸುರ ಸಮರ

ರನ್ನವರಾತ್ರಿ ಉತ್ಸವದ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಅಂತಹ ಕಥೆಗಳಲ್ಲಿ ಒಂದು ದುರ್ಗಾದೇವಿ-ಮಹಿಷಾಸುರ ಸಮರ.
ದುರ್ಗಾದೇವಿ ಮತ್ತು ಮಹಿಷಾಸುರನ ಮಧ್ಯೆ ಯುದ್ಧ ನಡೆದದ್ದು ಏಕೆ
ನವರಾತ್ರಿಯ ಹೊತ್ತಿನಲ್ಲಿ  ಈ ಒಂದು ರೋಚಕ ಕಥೆಯನ್ನು ಕೊನೆತನಕ ನೋಡಿ.

ಇಲ್ಲಿರುವ ವಿಡಿಯೋ ಒಂದು ಇದರ ಸಣ್ಣ ಭಾಗ. ಪೂರ್ತಿ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ 


ಇಲ್ಲಿರುವ 
ಯುಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.: https://youtu.be/wUsuY2qhECs

PARYAYA: ದುರ್ಗಾದೇವಿ- ಮಹಿಷಾಸುರ ಸಮರ:   ದುರ್ಗಾದೇವಿ - ಮಹಿಷಾಸುರ ಸಮರ ಶ ರನ್ನವರಾತ್ರಿ ಉತ್ಸವದ ಆಚರಣೆಯ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಅಂತಹ ಕಥೆಗಳಲ್ಲಿ ಒಂದು ದುರ್ಗಾದೇವಿ-ಮಹಿಷಾಸುರ ಸಮರ. ದುರ್ಗಾ...

Friday, September 26, 2025

PARYAYA: ಭಿಕ್ಷೆ ಬೇಡುವಿರೇಕೆ ಇರುವ ʼಮಾರ್ಗʼವ ಬಿಟ್ಟು...?

 ಭಿಕ್ಷೆ ಬೇಡುವಿರೇಕೆ ಇರುವ ʼಮಾರ್ಗʼವ ಬಿಟ್ಟು...?

ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಮಾರ್ಗಗಳನ್ನು ಬಿಟ್ಟು ವಿಪ್ರೋ ಸಂಸ್ಥೆಯ ಅಜೀಮ್‌ ಪ್ರೇಮ್‌ ಜಿ ಬಳಿ ಭಿಕ್ಷೆ ಬೇಡುವಿರೇಕೆ ಎಂದು ಬೆಳ್ಳಂದೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು (RWA) ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಸಂಘವು ಹೊರ ವರ್ತುಲ ರಸ್ತೆಯ (Outer Ring Road) ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಸ್ತಾವನೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಂದೇಶದಲ್ಲಿ ಹಂಚಿಕೊಂಡಿದ್ದುಇದು ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ.

 ಸರ್ಜಾಪುರ ರಸ್ತೆಯನ್ನು ಹೊರ ವರ್ತುಲ ರಸ್ತೆಗೆ ಸಂಪರ್ಕಿಸುವ ರಸ್ತೆ ವಿನ್ಯಾಸವನ್ನು ವಿಸ್ತರಿಸುವುದು ಅತ್ಯಂತ ಅವಶ್ಯಕ ಎಂದು ಸಂಘವು ಸಂದೇಶದಲ್ಲಿ ಒತ್ತಿ ಹೇಳಿದೆ.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿರುವ 'ಸೇವ್ ಬೆಳ್ಳಂದೂರು', ವಿಪ್ರೋ ಕ್ಯಾಂಪಸ್ ಬಳಿ ಸುಮಾರು 1 ಕಿ.ಮೀ.ಗಿಂತಲೂ ಕಡಿಮೆ ಉದ್ದದ ಎರಡು 'ಸಮಗ್ರ ಅಭಿವೃದ್ಧಿ ಯೋಜನಾ ರಸ್ತೆಗಳು' (Comprehensive Development Plan roads) ಇವೆ. ಈ ರಸ್ತೆಗಳನ್ನು ಬಳಸಿದರೆಈ ಮಾರ್ಗದಲ್ಲಿ ಪ್ರತಿದಿನ ಸಂಚರಿಸುವ 7,500 PCU ವಾಹನಗಳ ಪೈಕಿಸುಮಾರು 38% ರಷ್ಟು ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ.

ಈ ರಸ್ತೆಗಳ ಸುಧಾರಿತ ಸಂಪರ್ಕದಿಂದ ಸಹಸ್ರಾರು ಮಂದಿ ಶಾಲಾ ಮಕ್ಕಳು ಮತ್ತು ವೃತ್ತಿ ನಿರತರಿಗೆ ಅನುಕೂಲವಾಗಲಿದೆ ಎಂದು ಸೇವ್‌ ಬೆಳ್ಳಂದೂರು ಹೇಳಿದೆ.

ಈಜಿಪುರ ರ‍್ಯಾಂಪ್ ಇಬ್ಲೂರು ಜಂಕ್ಷನ್‌ನೊಳಗೆ ಕೇವಲ 1 ಕಿ.ಮೀ. ದೂರದಲ್ಲಿದೆಇದು ಸರ್ಜಾಪುರ ರಸ್ತೆಯ ನಿವಾಸಿಗಳಿಗೆ ದಟ್ಟಣೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅನೇಕ ಪ್ರಯಾಣಿಕರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತಾರೆದೈನಂದಿನ ಪ್ರಯಾಣದ ಸಮಯದಲ್ಲಿ ತಮ್ಮ ಕಾರುಗಳಲ್ಲಿಯೇ ಬಂಧಿಗಳಾಗುತ್ತಾರೆ ಎಂದು ಸಂದೇಶ ಹೇಳಿದೆ.

PARYAYA: ಭಿಕ್ಷೆ ಬೇಡುವಿರೇಕೆ ಇರುವ ʼಮಾರ್ಗʼವ ಬಿಟ್ಟು...?:   ಭಿಕ್ಷೆ ಬೇಡುವಿರೇಕೆ ಇರುವ ʼ ಮಾರ್ಗ ʼ ವ ಬಿಟ್ಟು ...? ವಾ ಹನ ದಟ್ಟಣೆಯನ್ನು ಕಡಿಮೆ ಮಾಡಲು ಇರುವ ಮಾರ್ಗಗಳನ್ನು ಬಿಟ್ಟು ವಿಪ್ರೋ ಸಂಸ್ಥೆಯ ಅಜೀಮ್‌ ಪ್ರೇಮ್‌ ಜಿ ಬಳಿ ...

PARYAYA: ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ

 ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಐದನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೬ರ ಶುಕ್ರವಾರ ಶ್ರೀ ಬಾಲಾಜಿ ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ.


ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.




ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.
PARYAYA: ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ:   ಮಹಾಗಣಪತಿಗೆ ಕುಂಕುಮ-ಅರಶಿನ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ...

Thursday, September 25, 2025

PARYAYA: ಪಿಕ್‌ ಮೈ ಗಾರ್ಬೇಜ್..!‌

 ಪಿಕ್‌ ಮೈ ಗಾರ್ಬೇಜ್..!‌

ʼನನ್ನ ಕಸ ಕೊಂಡೊಯ್ಯಿರಿʼ ಹೀಗಂತ ನೀವು ಯಾರಿಗಾದರೂ ಹೇಳಿದರೆ, ಕೇಳಿಸಿಕೊಂಡವರು ನಿಮ್ಮ ಕೆಪ್ಪರದಂಡೆಗೆ ಭಾರಿಸಲು ಮುಂದಾಗಬಹುದು. ಆದರೆ ತುಮಕೂರಿನಲ್ಲಿ ಹೀಗಾಗುವುದಿಲ್ಲ. ಕೇಳಿಸಿಕೊಂಡ ವ್ಯಕ್ತಿ ನೀವು ಹೇಳಿದ ಸಮಯಕ್ಕೆ ಬಂದು ನಿಮ್ಮಿಂದ ಕಸವನ್ನು ತೆಗೆದುಕೊಂಡು ಹೋಗುತ್ತಾರೆ.
ವಾಹ್‌ ಎಂತಹ ವ್ಯವಸ್ಥೆ, ಅಲ್ಲವೇ? ಇಂತಹುದೊಂದು ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಾರಿಗೆ ತಂದಿರುವ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆ ಬಿ.ವಿ. ಅಶ್ವಿಜಾ ನಿಜಕ್ಕೂ ಅಭಿನಂದನಾರ್ಹರು. ಈ ಯೋಜನೆ ಏಕೆ ಅಭಿನಂದನೀಯ, ಏನು ಅದರ ವಿಶೇಷತೆ ಎಂಬುದನ್ನು ತಿಳಿಯಲು ಮೇಲಿನ ವಾಟ್-ಸುದ್ದಿ ಪುಟ ಕ್ಲಿಕ್ ಮಾಡಿ ನೋಡಿ.‌ ಅಥವಾ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ: http://www.paryaya.com/p/blog-page_17.html

PARYAYA: ಪಿಕ್‌ ಮೈ ಗಾರ್ಬೇಜ್..!‌:   ಪಿಕ್‌ ಮೈ ಗಾರ್ಬೇಜ್..!‌ ʼ ನನ್ನ ಕಸ ಕೊಂಡೊಯ್ಯಿರಿ ʼ  ಹೀಗಂತ ನೀವು ಯಾರಿಗಾದರೂ ಹೇಳಿದರೆ, ಕೇಳಿಸಿಕೊಂಡವರು ನಿಮ್ಮ ಕೆಪ್ಪರದಂಡೆಗೆ ಭಾರಿಸಲು ಮುಂದಾಗಬಹುದು. ಆದರೆ ತು...

PARYAYA: ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ

 ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವದ ನಾಲ್ಕನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೫ರ ಗುರುವಾರ ಶ್ರೀ ವೆಂಕಟೇಶ್ವರನಿಗೆ ಕುಂಕುಮ (ಸಿಂಧೂರ) ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.





PARYAYA: ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ:   ಶ್ರೀ ವೆಂಕಟೇಶ್ವರನಿಗೆ ಕುಂಕುಮ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾ...

Wednesday, September 24, 2025

PARYAYA: ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪ...

 ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪಣಿ ಉಡಾವಣೆ

ಭಾರತವು ಹಳಿ ಆಧಾರಿತ ಸಂಚಾರೀ ಉಡಾವಣಾ ವ್ಯವಸ್ಥೆಯಿಂದ ಮಧ್ಯಮ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ೨೦೨೫ ಸೆಪ್ಟೆಂಬರ್‌ ೨೫ರ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ಮುಂದಿನ ಪೀಳಿಗೆಯ ಈ ಕ್ಷಿಪಣಿಯನ್ನು 2000 ಕಿ.ಮೀ ವರೆಗಿನ ವ್ಯಾಪ್ತಿಗೆ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಳಿ ಆಧಾರಿತ ಸಂಚಾರಿ ಉಡಾವಣಾ ವ್ಯವಸ್ಥೆಯಿಂದ ನಡೆಸಲಾದ ಈ ಉಡಾವಣೆಯು ಯಾವುದೇ ಪೂರ್ವ ಷರತ್ತುಗಳಿಲ್ಲದೆ ರೈಲು ಹಳಿಜಾಲದ ಮೇಲೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದೇಶಾದ್ಯಂತ ಚಲನಶೀಲತೆ ಮತ್ತು ಕಡಿಮೆ ಸಮಯದಲ್ಲಿ ಉಡಾವಣೆ ಮಾಡುವ ಅವಕಾಶವನ್ನು ಹೆಚ್ಚಿಸುತ್ತದೆ.

ಈ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಮತ್ತು ಸಶಸ್ತ್ರ ಪಡೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮೂಲಕ ಅಭಿನಂದಿಸಿದ್ದಾರೆ.

ಚಲಿಸುತ್ತಿರುವ ರೈಲು ಜಾಲದಿಂದ ಕ್ಯಾನಿಸ್ಟರೈಸ್ಡ್ ಉಡಾವಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರಗಳ ಸಮೂಹಕ್ಕೆ ಭಾರತವನ್ನು ಈ ಯಶಸ್ವಿ ಪರೀಕ್ಷೆಯು ಸೇರಿಸಿದೆ.

PARYAYA: ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪ...:   ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪಣಿ ಉಡಾವಣೆ ಭಾರತವು ಹಳಿ ಆಧಾರಿತ ಸಂಚಾರೀ ಉಡಾವಣಾ ವ್ಯವಸ್ಥೆಯಿಂದ ಮಧ್ಯಮ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷ...

PARYAYA: ಮಹಾಗಣಪತಿಗೆ ವಿಭೂತಿ ಅಲಂಕಾರ

 ಮಹಾಗಣಪತಿಗೆ ವಿಭೂತಿ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರವನ್ನವರಾತ್ರಿ ಮಹೋತ್ಸವ ಮೂರನೇ ದಿನವಾದ ೨೦೨೫ರ ಸೆಪ್ಟೆಂಬರ್‌ ೨೪ರ ಬುಧವಾರ ಶ್ರೀ ಬಾಲಾಜಿ ಮಹಾಗಣಪತಿಗೆ ವಿಭೂತಿ ಅಲಂಕಾರ.

ರಾತ್ರಿ ಸಂಪೂರ್ಣ ತೈಲ ದೀಪದ ಬೆಳಕಿನಲ್ಲಿ ಮಹಾಮಂಗಳಾರತಿ ನಡೆಯಿತು.





PARYAYA: ಮಹಾಗಣಪತಿಗೆ ವಿಭೂತಿ ಅಲಂಕಾರ:   ಮಹಾಗಣಪತಿಗೆ ವಿಭೂತಿ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥ...

PARYAYA: ಇಂದಿನ ಇತಿಹಾಸ History Today ಸೆಪ್ಟೆಂಬರ್ 24

 ಇಂದಿನ ಇತಿಹಾಸ   History Today  ಸೆಪ್ಟೆಂಬರ್ 24

2025: ಬೆಂಗಳೂರು: ಪದ್ಮಭೂಷಣ, ಪದ್ಮಶ್ರೀ ಮತ್ತು ಸರಸ್ವತಿ ಸಮ್ಮಾನ್‌, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ಸಾಹಿತಿ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಎಸ್.‌ ಎಲ್.‌ ಭೈರಪ್ಪ) ಅವರು 2025  ಸೆಪ್ಟೆಂಬರ್‌ 24ರ ಬುಧವಾರ ತಮ್ಮ 94ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.ಎಸ್.‌ ಎಲ್.‌ ಭೈರಪ್ಪ ಒಬ್ಬ ಭಾರತೀಯ ಕಾದಂಬರಿಕಾರತತ್ವಜ್ಞಾನಿ ಮತ್ತು ಚಿತ್ರಕಥೆಗಾರರಾಗಿದ್ದರುʼಪರ್ವʼ ಸೇರಿದಂತೆ ಕನ್ನಡದಲ್ಲಿ ಹಲವಾರು ಜನಪ್ರಿಯ ಕೃತಿಗಳನ್ನು ರಚಿಸಿದ ಅವರು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿತರಾಗಿದ್ದಾರೆ. ಅವರ ಕಾದಂಬರಿಗಳು ವಿಷಯರಚನೆ ಮತ್ತು ಪಾತ್ರಗಳ ವಿಷಯದಲ್ಲಿ ವಿಶಿಷ್ಟವಾಗಿವೆ. ಭೈರಪ್ಪ ಅವರು ಹಾಸನದಲ್ಲಿ 1931ರ ಆಗಸ್ಟ್‌ 20ರಂದು ಜನಿಸಿದ್ದರು. ಅವರು  ಮಹಾರಾಜ ಸಯಾಜಿರಾವ್ ಬರೋಡಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದರು.

2019: ನವದೆಹಲಿ: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರವು ಕೊಡುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ  ಬಾರಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಆಯ್ಕೆಯಾದರುಬಚ್ಚನ್  ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆ  2019 ಸೆಪ್ಟೆಂಬರ್  24ರ ಮಂಗಳವಾರ ಟ್ವೀಟ್ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಫೂರ್ತಿಯ ಸೆಲೆಬೆಳ್ಳಿಪರದೆಯ ದಂತಕಥೆ ಅಮಿತಾಭ್ ಬಚ್ಚನ್ ಅವರು ಅವಿರೋಧವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಇಡೀ ದೇಶ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಇದು ಖುಷಿ ಕೊಡುವ ಸಂಗತಿಅಮಿತಾಭ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳುಎಂದು ತಿಳಿಸಿದರು. ಸಿನಿಮಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರವು 1969ರಿಂದ ಪ್ರಶಸ್ತಿ ನೀಡುತ್ತಿದೆಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.ಪ್ರಶಸ್ತಿಯು ಸ್ವರ್ಣ ಕಮಲ ಪದಕಶಾಲು ಹಾಗೂ 10 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆನಟಿ ದೇವಿಕಾ ರಾಣಿ ಅವರಿಗೆ 1969ರಲ್ಲಿ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊತ್ತ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

 
2019: ನ್ಯೂಯಾರ್ಕ್: ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಧಾನಕಾರನಾಗಲು ತಾನು ಸಿದ್ಧ ಎಂಬುದಾಗಿ 2019 ಸೆಪ್ಟೆಂಬರ್ 24ರಂದು ೨೪ ಗಂಟೆಗಳ ಒಳಗಾಗಿ ಎರಡು ಬಾರಿ ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಆದರೆ ಉಭಯ ರಾಷ್ಟ್ರಗಳು ಒಪ್ಪಿ ಬಯಸಿದರೆ ಮಾತ್ರ’ ಎಂಬ ಶರತ್ತು ವಿಧಿಸಿ ಬುದ್ದಿವಂತಿಕೆ ಮೆರೆದರುಇದೇ ವೇಳೆಗೆ ಪಾಕಿಸ್ತಾನಕ್ಕೆ ಬೇಕಾದ ಮಾತುಗಳನ್ನು ತನ್ನ ಬಾಯಿಯಿಂದ ಉದುರಿಸಲು ಯತ್ನಿಸಿದ ಪಾಕ್ ಪತ್ರಕರ್ತನಿಗೆ ಅವರು ತಿರುಗೇಟು ಕೊಟ್ಟರು.ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯ ವೇಳೆಯಲ್ಲಿ ಜಮ್ಮು -ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆ ಮಹಾಸಭೆಯಲ್ಲಿನ ತಮ್ಮ ಭಾಷಣಕ್ಕೆ ಮುನ್ನ ಪುನಃ ಉಭಯ ದೇಶಗಳು ಬಯಸಿದರೆ ತಾನು  ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಹೇಳಿದರುವಿಶ್ವಸಂಸ್ಥೆ ಮಹಾ ಅಧಿವೇಶನದ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತುಕತೆ ನಡೆಸಿದ ಟ್ರಂಪ್ ಭಯೋತ್ಪಾದನೆಗೆ ತಿರುಗೇಟು ಕೊಡಲು ಮೋದಿ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಶ್ಲಾಘಿಸಿದರು.೨೪ ಗಂಟೆಗಳಲ್ಲಿ ಎರಡನೇ ಬಾರಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡುವುದರೊಂದಿಗೆ ಟ್ರಂಪ್ ಅವರು ಪ್ರಸ್ತುತ ವರ್ಷದಲ್ಲಿ ಒಟ್ಟು ನಾಲ್ಕು ಬಾರಿ  ಪ್ರಸ್ತಾಪ ಮಾಡಿದಂತಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ನವದೆಹಲಿ: ತಂತ್ರಜ್ಞಾನವು ಅಪಾಯಕಾರಿ ತಿರುವನ್ನು ಪಡೆದುಕೊಂಡಿದೆ ಎಂಬುದಾಗಿ 2019 ಸೆಪ್ಟೆಂಬರ್ 24ರ ಮಂಗಳವಾರ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ರಾಷ್ಟ್ರದಲ್ಲಿ ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ನಿಗ್ರಹಿಸಲು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಬೇಕಾದ ಕಾಲಾವಕಾಶದ ಬಗ್ಗೆ ಮೂರು ವಾರಗಳ ಒಳಗಾಗಿ ತನಗೆ ತಿಳಿಸುವಂತೆ ನಿರ್ದೇಶಿಸಿತು.ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠವು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ಸಂದೇಶ ಅಥವಾ ಅಂತರ್ಜಾಲ ಮಾಹಿತಿಯ ಸೃಷ್ಟಿಕರ್ತರನ್ನು ಪತ್ತೆಹಚ್ಚಲು ವಿಫಲವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿಈಗ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕು ಎಂದು ಹೇಳಿತು. ವೈಜ್ಞಾನಿಕ ವಿಷಯದ ಬಗ್ಗೆ ನಿರ್ಧರಿಸಿಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಸಮರ್ಥವಲ್ಲಇಂತಹ ವಿಷಯಗಳ ಬಗ್ಗೆ ವ್ಯವಹರಿಸಲು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಸರ್ಕಾರದ ಕೆಲಸ ಎಂದು ಹೇಳಿತು.ತಾಂತ್ರಿಕ ಪ್ರಗತಿಯಲ್ಲಿನ ಕುಂದುಕೊರತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತ ಪಡಿಸಿದ ಕೋರ್ಟ್, ‘ತಂತ್ರಜ್ಞಾನ ಬೆಳೆಯುತ್ತಿರುವ ರೀತಿ ಅಪಾಯಕಾರಿಸಾಮಾಜಿಕ ಮಾಧ್ಯಮಗಳಿಗಾಗಿ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ಸರ್ಕಾರ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಹೇಳಿತು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್ಸಿಬಿಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಹಿವಾಟು ನಡೆಸಿರುವ ಆರೋಪದ ಮೇಲೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಸೋದರಳಿಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯವು 2019 ಸೆಪ್ಟೆಂಬರ್  24ರ ಮಂಗಳವಾರ ಪ್ರಕರಣ ದಾಖಲಿಸಿತು.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಂತೆ  ವಿದ್ಯಮಾನ ಘಟಿಸಿತು. ಬಾಂಬೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಎಂಎಸ್ಸಿಬಿ ಹಗರಣ ಪ್ರಕರಣ ಸಂಬಂಧ ಕಳೆದ ತಿಂಗಳು ಮುಂಬೈ ಪೊಲೀಸರು ಅಜಿತ್ ಪವಾರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.ರೈತರು ಮತ್ತು ಕಾರ್ಯಕರ್ತರು ಪಕ್ಷದ ನಾಯಕ ಜಯಂತ್ ಪಾಟೀಲ್ ಮತ್ತು ರಾಜ್ಯದ ೩೪ ಜಿಲ್ಲೆಗಳ ಸೂಪರ್ ಸೀಡ್ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.೨೦೦೭ ರಿಂದ ೨೦೧೧ರ ನಡುವೆ ನಡೆದ ಎಂಎಸ್ಸಿಬಿ ಹಗರಣದಿಂದ ಸುಮಾರು ಒಂದು ಸಾವಿರ ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪಾಕಿಸ್ತಾನ ಭಾರತ ಗಡಿ ಪ್ರದೇಶದಲ್ಲಿ 2019 ಸೆಪ್ಟೆಂಬರ್ 24ರ ಮಂಗಳವಾರ ಸಂಜೆ .೩೧ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದಲ್ಲಿ ೧೯ ಮಂದಿ ಸಾವನ್ನಪ್ಪಿ೩೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಆಕ್ರಮಿಕ ಕಾಶ್ಮೀರದಿಂದ ಬಂದ ವರದಿ ತಿಳಿಸಿದೆ.ಸುಮಾರು -೧೦ ಸೆಕೆಂಡ್ ಕಾಲದ ಭೂಕಂಪದ ಪರಿಣಾಮವಾಗಿ ಭಾರತದ ರಾಜಧಾನಿ ದೆಹಲಿರಾಷ್ಟ್ರೀಯ ರಾಜಧಾನಿ ಪ್ರದೇಶ (ನ್ಯಾಷನಲ್ ಕ್ಯಾಪಿಟಲ್ ರೀಜನ್ಎನ್ಸಿಆರ್ಪಂಜಾಬ್ಹರಿಯಾಣದಲ್ಲಿ  ಭೂಮಿ ಕಂಪಿಸಿತು ಎಂದು ಭೂಕಂಪಶಾಸ್ತ್ರ ಇಲಾಖೆ ಅಧಿಕಾರಿಗಳು ಹೇಳಿದರು.ಇಸ್ಲಾಮಾಬಾದ್ಪೇಶಾವರರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭೂಕಂಪ ಸಂಭವಿಸಿತು ಎಂದು ಪಾಕಿಸ್ತಾನದ ’ಡಾನ್ ನ್ಯೂಸ್’ ವರದಿ ಮಾಡಿತು.ಭೂಕಂಪದ ಪರಿಣಾಮವಾಗಿ ಭಾರತದಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲಭೂಕಂಪನದಿಂದಾಗಿ ಭೂಮಿ ೪೦ ಕಿಮಿ ಆಳದವರೆಗೆ ಭೂಮಿ ಕಂಪಿಸಿತುಪ್ರಾಥಮಿಕ ವರದಿಗಳ ಪ್ರಕಾರ ಇಸ್ಲಾಮಾಬಾದಿನಲ್ಲಿ ಭೂಕಂಪನಕ್ಕೆ ಕಟ್ಟಡವೊಂದು ಕುಸಿದು ಬಿದ್ದು ಕನಿಷ್ಠ ೧೯ ಮಂದಿ ಮೃತರಾಗಿ ೩೦೦ಕ್ಕೂ ಹೆಚ್ಚು ಮಂದಿ  ಗಾಯಗೊಂಡರು ಎಂದು ವರದಿ ತಿಳಿಸಿದೆ.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

PARYAYA: ಇಂದಿನ ಇತಿಹಾಸ History Today ಸೆಪ್ಟೆಂಬರ್ 24:   ಇಂದಿನ ಇತಿಹಾಸ     History Today    ಸೆಪ್ಟೆಂಬರ್ 24 2025: ಬೆಂಗಳೂರು: ಪದ್ಮಭೂಷಣ, ಪದ್ಮಶ್ರೀ ಮತ್ತು ಸರಸ್ವತಿ ಸಮ್ಮಾನ್‌, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್...