Wednesday, September 24, 2025

PARYAYA: ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪ...

 ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪಣಿ ಉಡಾವಣೆ

ಭಾರತವು ಹಳಿ ಆಧಾರಿತ ಸಂಚಾರೀ ಉಡಾವಣಾ ವ್ಯವಸ್ಥೆಯಿಂದ ಮಧ್ಯಮ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ೨೦೨೫ ಸೆಪ್ಟೆಂಬರ್‌ ೨೫ರ ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.

ಮುಂದಿನ ಪೀಳಿಗೆಯ ಈ ಕ್ಷಿಪಣಿಯನ್ನು 2000 ಕಿ.ಮೀ ವರೆಗಿನ ವ್ಯಾಪ್ತಿಗೆ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಳಿ ಆಧಾರಿತ ಸಂಚಾರಿ ಉಡಾವಣಾ ವ್ಯವಸ್ಥೆಯಿಂದ ನಡೆಸಲಾದ ಈ ಉಡಾವಣೆಯು ಯಾವುದೇ ಪೂರ್ವ ಷರತ್ತುಗಳಿಲ್ಲದೆ ರೈಲು ಹಳಿಜಾಲದ ಮೇಲೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದೇಶಾದ್ಯಂತ ಚಲನಶೀಲತೆ ಮತ್ತು ಕಡಿಮೆ ಸಮಯದಲ್ಲಿ ಉಡಾವಣೆ ಮಾಡುವ ಅವಕಾಶವನ್ನು ಹೆಚ್ಚಿಸುತ್ತದೆ.

ಈ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (SFC) ಮತ್ತು ಸಶಸ್ತ್ರ ಪಡೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮೂಲಕ ಅಭಿನಂದಿಸಿದ್ದಾರೆ.

ಚಲಿಸುತ್ತಿರುವ ರೈಲು ಜಾಲದಿಂದ ಕ್ಯಾನಿಸ್ಟರೈಸ್ಡ್ ಉಡಾವಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ರಾಷ್ಟ್ರಗಳ ಸಮೂಹಕ್ಕೆ ಭಾರತವನ್ನು ಈ ಯಶಸ್ವಿ ಪರೀಕ್ಷೆಯು ಸೇರಿಸಿದೆ.

PARYAYA: ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪ...:   ಹಳಿ ಆಧಾರಿತ ಮೊಬೈಲ್‌ ಲಾಂಚರಿನಿಂದ ಅಗ್ನಿ ಪ್ರೈಮ್‌ ಕ್ಷಿಪಣಿ ಉಡಾವಣೆ ಭಾರತವು ಹಳಿ ಆಧಾರಿತ ಸಂಚಾರೀ ಉಡಾವಣಾ ವ್ಯವಸ್ಥೆಯಿಂದ ಮಧ್ಯಮ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷ...

No comments:

Post a Comment