Thursday, September 4, 2025

PARYAYA: ಸುಪ್ರೀಂ ಗಮನಕ್ಕೆ ಬಂತು ಹಿಮಾಚಲ ಮರಮಾರಣ

 ಸುಪ್ರೀಂ ಗಮನಕ್ಕೆ ಬಂತು ಹಿಮಾಚಲ ಮರಮಾರಣ

ಕೇಂದ್ರ, ರಾಜ್ಯಗಳು, ಪ್ರಾಧಿಕಾರಗಳಿಗೆ ನೋಟಿಸ್‌ ಜಾರಿ

ವದೆಹಲಿ: ಹಿಮಾಚಲ ಪ್ರದೇಶದ ನದಿಗಳಲ್ಲಿ ಮರದ ದಿಮ್ಮಿಗಳು ಪ್ರವಾಹದಲ್ಲಿ ತೇಲಿ ಬಂದ ವಿಷಯ ಸುಪ್ರೀಂಕೋರ್ಟಿನ ಗಮನಕ್ಕೆ ಬಂದಿದ್ದು ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಲ್ಲದೆ, ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ಮತ್ತು ಇತರ ಪ್ರಾಧಿಕಾರಗಳಿಗೆ ೨೯೨೫ ಸೆಪ್ಟೆಂಬರ್‌ ೩ರ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರವಾಹದಲ್ಲಿ ಮರದ ದಿಮ್ಮಿಗಳು ತೇಲುತ್ತಿರುವ ವೀಡಿಯೋಗಳನ್ನು ಗಮನಿಸಿರುವ ಸುಪ್ರೀಂ ಕೋರ್ಟ್ಹಿಮಾಲಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿತು.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವುಹಿಮಾಲಯದಲ್ಲಿ ಪರಿಸರ ನಾಶದ ಬಗ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ, "ಉತ್ತರಾಖಂಡಹಿಮಾಚಲ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಹಿಂದೆಂದೂ ಕಾಣದಂತಹ ಭೂಕುಸಿತ ಮತ್ತು ಪ್ರವಾಹವನ್ನು ನಾವು ನೋಡಿದ್ದೇವೆ. ಮಾಧ್ಯಮ ವರದಿಗಳ ಪ್ರಕಾರಪ್ರವಾಹದಲ್ಲಿ ಹೆಚ್ಚಿನ ಸಂಖ್ಯೆಯ ಮರದ ದಿಮ್ಮಿಗಳು ತೇಲುತ್ತಿರುವುದು ಕಂಡುಬಂದಿದೆ. ಮೇಲ್ನೋಟಕ್ಕೆಬೆಟ್ಟಗಳ ಮೇಲೆ ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ತೋರುತ್ತದೆ. ಇದು ಗಂಭೀರ ವಿಷಯವಾಗಿದೆ" ಎಂದು ಹೇಳಿತು.

ಈ ವಿಷಯಕ್ಕೆ ಸಂಬಂಧಿಸಿದಂತೆನ್ಯಾಯಪೀಠವು ಪರಿಸರ ಮತ್ತು ಜಲಶಕ್ತಿ ಸಚಿವಾಲಯಗಳ ಮೂಲಕ ಕೇಂದ್ರ ಸರ್ಕಾರರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಮತ್ತು ಹಿಮಾಚಲ ಪ್ರದೇಶಉತ್ತರಾಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿತು.

ತಮ್ಮ ಆದೇಶವನ್ನು ಪ್ರಕಟಿಸಿದ ನಂತರಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ, "ಇದು ಬಹಳ ಗಂಭೀರ ವಿಷಯ. ಮಾಧ್ಯಮಗಳಲ್ಲಿ ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ದೊಡ್ಡ ಸಂಖ್ಯೆಯ ಮರದ ದಿಮ್ಮಿಗಳು ತೇಲುತ್ತಿರುವುದನ್ನು ನಾವು ನೋಡಿದ್ದೇವೆ. ಅಕ್ರಮವಾಗಿ ಮರಗಳನ್ನು ಕಡಿಯಲಾಗುತ್ತಿದೆ," ಎಂದು ಮೌಖಿಕವಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರುಪರಿಸರ ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಮಾತನಾಡಿಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸುವುದಾಗಿ ತಿಳಿಸಿದರು.

ಅರ್ಜಿದಾರ ಅನಮಿಕ ರಾಣಾ ಪರ ವಕೀಲರುಚಂಡೀಗಢ ಮತ್ತು ಮನಾಲಿಯ ನಡುವೆ ಹದಿನಾಲ್ಕು ಸುರಂಗಗಳಿದ್ದುಮಳೆಯ ಸಮಯದಲ್ಲಿ ಭೂಕುಸಿತದಿಂದ ಅವು "ಸಾವಿನ ಬಲೆ"ಗಳಾಗಿ ಮಾರ್ಪಟ್ಟಿವೆ ಎಂದು ವಾದಿಸಿದರು. ಭೂಕುಸಿತದಿಂದಾಗಿ 300 ಜನರು ಸುರಂಗದಲ್ಲಿ ಸಿಲುಕಿಕೊಂಡಿದ್ದ ವರದಿಯನ್ನು ಅವರು ಉಲ್ಲೇಖಿಸಿದರು.

ಅರ್ಜಿದಾರ ಅನಮಿಕಾ ರಾಣಾ ಅವರು ಕೇಂದ್ರ ಸರ್ಕಾರದ ವಿರುದ್ಧ (W.P.(C) No. 845/2025) ಈ ಪ್ರಕರಣ ದಾಖಲಿಸಿದ್ದಾರೆ.


PARYAYA: ಸುಪ್ರೀಂ ಗಮನಕ್ಕೆ ಬಂತು ಹಿಮಾಚಲ ಮರಮಾರಣ:   ಸುಪ್ರೀಂ ಗಮನಕ್ಕೆ ಬಂತು ಹಿಮಾಚಲ ಮರಮಾರಣ ಕೇಂದ್ರ, ರಾಜ್ಯಗಳು, ಪ್ರಾಧಿಕಾರಗಳಿಗೆ ನೋಟಿಸ್‌ ಜಾರಿ ನ ವದೆಹಲಿ: ಹಿಮಾಚಲ ಪ್ರದೇಶದ ನದಿಗಳಲ್ಲಿ ಮರದ ದಿಮ್ಮಿಗಳು ಪ್ರವಾಹ...

No comments:

Post a Comment