ನಾನು ಮೆಚ್ಚಿದ ವಾಟ್ಸಪ್

Saturday, August 26, 2023

PARYAYA: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದವರು ಒಬ್ಬಿಬ್ಬರಲ್ಲ. ತಮ್ಮದೇ ಆದ ರೀತಿಯಲ್ಲಿ ಅದನ್ನು ಮಂದಿ ಸಂಭ್ರಮಿಸಿದ್ದಾರೆ. ಈ ದಿನವನ್ನು ಇನ್ನು ಮುಂದೆ ಪ್ರತಿವರ್ಷ ʼರಾಷ್ಟ್ರೀಯ ಬಾಹ್ಯಾಕಾಶ ದಿನʼ ಎಂಬುದಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ೨೦೨೩ ಆಗಸ್ಟ್‌ ೧೬ರಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಇಸ್ರೋದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿ ಚಂದ್ರಯಾನ-೩ರ ʼವಿಕ್ರಮʼ ಇಳಿದ ಸ್ಥಳವನ್ನು ʼಶಿವಶಕ್ತಿʼ ಎಂಬುದಾಗಿಯೂ, ಚಂದ್ರನಲ್ಲಿ ಇಳಿದ ಆಗಸ್ಟ್‌ ೨೩ರ ದಿನವನ್ನು ʼರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನʼ ಎಂಬುದಾಗಿ ಆಚರಿಸುವುದಾಗಿಯೂ, ಚಂದ್ರಯಾನ -೨ರ ತನ್ನ ಗುರುತನ್ನು ಬಿಟ್ಟಿ ಚಂದ್ರನ ನೆಲವನ್ನು ʼತಿರಂಗʼ ಎಂಬುದಾಗಿ ಹೆಸರಿಸುವುದಾಗಿಯೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದ ಹಲವರ ಕಲ್ಪನೆಯ ಕೆಲವು ಚಿತ್ರ, ವಿಡಿಯೋಗಳನ್ನೂ ʼಪರ್ಯಾಯʼ ಇಲ್ಲಿ ಪ್ರಕಟಿಸುತ್ತಿದೆ. ಅದರಲ್ಲಿ ಚಂದ್ರನಲ್ಲಿ ಇಳಿದ ಹರ್ಷವನ್ನು ಹಾಡಿನ ರೂಪದಲ್ಲಿ ಬಣ್ಣಿಸಿದ ಹರ್ಷ ಕಾವೇರಿಪುರ ಅವರ ವಿಡಿಯೋ ಒಂದು. ಇದರ ಸಾಹಿತ್ಯ, ಸಂಗೀತ, ಗಾಯನ ಹಳ್ಳೇರಾವ ಕುಲ್ಕರ್ಣಿ ಕೆಂಭಾವಿ ಅವರದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ 
ʼಹರ್ಷ ಕಾವೇರಿಪುರʼ ಅವರ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:


ಈ ವಿಡಿಯೋ ಕರ್ತೃ ಹರ್ಷ ಅವರ ಬಗ್ಗೆ ತಿಳಿಯಲು ಗೂಗಲ್‌ ಎಂಜಿನ್ನಿನಲ್ಲಿ ಸರ್ಚ್‌ ಮಾಡಿದರೆ ನಿಮಗೆ ಅವರ ಬಗ್ಗೆ ಹೆಚ್ಚಿನ ವಿವರ ಸಿಗುವುದಿಲ್ಲ. ಆದರೆ ಅವರ ಹಲವಾರು ವಿಡಿಯೋ, ರೀಲ್‌ಗಳು ಸಿಗುತ್ತವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂದು ಅನಿಸುವ ವಿಡಿಯೋಗಳು ಇವು. ಆಸಕ್ತರು ಗೂಗಲ್‌ ನಲ್ಲಿ ತಡಕಾಡಿ ʼಹರ್ಷ ಕಾವೇರಿಪುರʼ ಅವರ ವಿಡಿಯೋಗಳ ಸೊಬಗು ಸವಿಯಬಹುದು.

ಆದರೆ ಇಲ್ಲಿ ಹಾಕಿರುವ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಹರ್ಷ ಕಾವೇರಿಪುರ ಅವರ ವಿಡಿಯೋ ಮಾತ್ರ ನನಗೆ ಅಲ್ಲಿ ಸಿಗಲಿಲ್ಲ. ನಿಮಗೆ ಸಿಕ್ಕಿದರೆ ಖಂಡಿತ ʼಪರ್ಯಾಯʼಕ್ಕೆ ತಿಳಿಸಿ.

ಮೇಲೆ ತಿಳಿಸಿದಂತೆ ಚಂದ್ರಯಾನ ಯಶಸ್ಸಿನ ಸಂದರ್ಭವನ್ನು ಹಲವಾರು ಮಂದಿ ತಮ್ಮದೇ ಕಲ್ಪನೆ, ತಮಗೆ ಕಂಡಂತೆ ಚಿತ್ರ, ತಮ್ಮಿಷ್ಟದಂತೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ.

ಯಾರೋ ಒಬ್ಬರು ಉಡುಪಿಯ ಕೃಷ್ಣನನ್ನು ಚಂದ್ರನ ಹಿನ್ನೆಲೆ ಇಟ್ಟು ಚಿತ್ರಿಸಿದರೆ, ಇನ್ನೊಬ್ಬರಿಗೆ ಚಂದ್ರನಲ್ಲಿ ಇಳಿದ ʼವಿಕ್ರಮ್ʼ ʼತಿರುಪತಿʼ ತಿಮ್ಮಪ್ಪನಂತೆ ಕಂಡಿದೆ.

ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿಯವರು ತಮ್ಮದೇ ʼಇಮೋಜಿʼ ರಚಿಸಿದ್ದಾರೆ. 

ನಂಜುಂಡಸ್ವಾಮಿ ಅವರ ಕಲ್ಪನೆಯನ್ನೂ ನೀವಿಲ್ಲಿ ನೋಡಬಹುದು.

ಇದರೊಂದಿಗೆ ಇನ್ನೊಂದು ಪುಟ್ಟ ವಿಡಿಯೋ ಇದೆ. ಅದು ಚಂದ್ರಯಾನದ ಸ್ಫೂರ್ತಿಯ ʼಪುಟ್ಟುʼ.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ, ಆನಂದಿಸಿ.







PARYAYA: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ! ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್...

Thursday, August 24, 2023

PARYAYA: ಗೂಗಲ್‌ ಡೂಡಲ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂ...

ಗೂಗಲ್‌ ಡೂಡಲ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಆಚರಣೆ!

ಗೂಗಲ್‌ ತನ್ನ ಇಂದಿನ (೨೦೨೩ ಆಗಸ್ಟ್‌ ೨೪) ಡೂಡಲ್ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿದ ಸಂಭ್ರಮ ಆಚರಣೆಗೆ ಮೀಸಲಿಟ್ಟಿತು.

ತನ್ನ ಡೂಡಲ್ ನಲ್ಲಿ ಚಂದ್ರಯಾನ ೩ರ ಚಂದ್ರನ ದಕ್ಷಿಣ ಧ್ರುವದ ಮೇಲಿನ ಲ್ಯಾಂಡಿಗ್‌ ಬಗೆ ಗೂಗಲ್‌ ಇದನ್ನು ಬರೆದಿದೆ: ಡೂಡಲ್‌ ಏನು ಬರೆದಿದೆ? ಇಲ್ಲಿ ಓದಿ:

ಆಗಸ್ಟ್ 24, 2023

ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಆಚರಣೆ!

ʼಇಂದಿನ ಡೂಡಲ್‌ ಚಂದ್ರನ ದಕ್ಷಿಣ ಧ್ರುವದಲ್ಲಿನ ಮೊದಲ ಲ್ಯಾಂಡಿಂಗ್‌ ನ್ನು ಆಚರಿಸುತ್ತಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಜುಲೈ 14, 2023 ರಂದು ಭಾರತದ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು ಮತ್ತು ಆಗಸ್ಟ್ 23, 2023 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಯಶಸ್ವಿಯಾಗಿ ಮುಟ್ಟಿ ಇಳಿಯಿತು. ಚಂದ್ರನ ಇಳಿಯುವಿಕೆ ಸುಲಭದ ಸಾಧನೆಯಲ್ಲ. ಹಿಂದೆಯುನೈಟೆಡ್ ಸ್ಟೇಟ್ಸ್ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟಗಳು ಮಾತ್ರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿವೆ - ಆದರೆ ಈ ಮೊದಲು ಯಾವುದೇ ದೇಶವು ದಕ್ಷಿಣ ಧ್ರುವ ಪ್ರದೇಶಕ್ಕೆ ಬಂದಿಳಿದಿಲ್ಲ.

ಚಂದ್ರನ ದಕ್ಷಿಣ ಧ್ರುವವು ಬಾಹ್ಯಾಕಾಶ ಸಂಶೋಧಕರಿಗೆ ಹೆಚ್ಚಿನ ಆಸಕ್ತಿಯ ಕ್ಷೇತ್ರಏಕೆಂದರೆ ಅವರು ಶಾಶ್ವತವಾಗಿ ನೆರಳಿನ ಕುಳಿಗಳೊಳಗೆ ಮಂಜುಗಡ್ಡೆ ನಿಕ್ಷೇಪಗಳ ಅಸ್ತಿತ್ವದ ಬಗ್ಗೆ ಶಂಕಿಸಿದ್ದಾರೆ. ಚಂದ್ರಯಾನ-3 ಈಗ ಈ ಭವಿಷ್ಯವನ್ನು ನಿಜವೆಂದು ಖಚಿತಪಡಿಸಿದೆ! ಈ ಮಂಜುಗಡ್ಡೆಯು ಭವಿಷ್ಯದ ಗಗನಯಾತ್ರಿಗಳಿಗೆ ಗಾಳಿನೀರು ಮತ್ತು ಹೈಡ್ರೋಜನ್ ರಾಕೆಟ್ ಇಂಧನದಂತಹ ನಿರ್ಣಾಯಕ ಸಂಪನ್ಮೂಲಗಳ ಸಾಮರ್ಥ್ಯವನ್ನು ನೀಡುತ್ತದೆ.

ಈ ಐತಿಹಾಸಿಕ ಸಾಧನೆಯನ್ನು ಸಾಧಿಸಿದ ನಂತರ ಚಂದ್ರಯಾನ-3 ರ ಮೊದಲ ಆಲೋಚನೆಗಳು ಏನು?

 "ಭಾರತನಾನು ನನ್ನ ಗಮ್ಯಸ್ಥಾನವನ್ನು ತಲುಪಿದ್ದೇನೆ ಮತ್ತು ನೀವೂ ಕೂಡಾ!" ಇತ್ತ ಭೂಮಿಯಲ್ಲಿ  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳನ್ನು ಅಭಿನಂದಿಸಿದರು: "ಯಶಸ್ಸು ಸಂಪೂರ್ಣ ಮಾನವೀಯತೆಗೆ ಸೇರಿದೆ.. ಇದು ಭವಿಷ್ಯದಲ್ಲಿ ಇತರ ಎಲ್ಲ ದೇಶಗಳ ಚಂದ್ರಯಾನ ಯೋಜನೆಗಳಿಗೆ ಸಹಾಯ ಮಾಡುತ್ತದೆ.ಎಂದು ನನಗೆ ವಿಶ್ವಾಸವಿದೆ. ಜಗತ್ತಿನಲ್ಲಿ ಎಲ್ಲರೂ ಚಂದ್ರ ಮತ್ತು ಅದರಾಚೆಗೆ ಹಾತೊರೆಯಬಹುದುಆಕಾಶವು ಮಿತಿಯಲ್ಲ!”.

ವಿಕ್ರಮ್‌ ಲ್ಯಾಂಡರಿನಿಂದ ಹೊರಬಂದ ರೋವರ್‌

ಈ ಮಧ್ಯೆ, ವಿಕ್ರಮ್‌ ಲ್ಯಾಂಡರಿನಿಂದ ರೋವರ್‌ ಹೊರಬಂದು ಚಂದ್ರ ನೆಲದಲ್ಲಿ ಸುತ್ತಾಟಕ್ಕೆ ಅಣಿಯಾಗಿದೆ ಎಂದು ಇಸ್ರೋ ಈದಿನ ಆಗಸ್ಟ್‌ ೨೪ರ ಶುಕ್ರವಾರ ಪ್ರಕಟಿಸಿದೆ.

ಪ್ರಜ್ಞಾನ್‌ ರೋವರ್‌ ವಿಕ್ರಮ್‌ ಲ್ಯಾಂಡರಿನಿಂದ ಹೊರಬಂದು ಚಂದ್ರನ ಮೇಲ್ಮೈಯಲ್ಲಿ ಚಲಿಸಲು ಆರಂಭಿಸಿದೆ ಎಂದು ಇಸ್ರೋ ಟ್ವೀಟ್‌ ತಿಳಿಸಿತು.


PARYAYA: ಗೂಗಲ್‌ ಡೂಡಲ್‌: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂ...:   ಗೂಗಲ್‌ ಡೂಡಲ್ ‌: ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಲ್ಯಾಂಡಿಂಗ್ ಆಚರಣೆ ! ಗೂಗಲ್‌ ತನ್ನ ಇಂದಿನ ( ೨೦೨೩ ಆಗಸ್ಟ್‌ ೨೪) ಡೂಡಲ್ ನ್ನು ಚಂದ್ರನ ದಕ್ಷಿಣ ಧ್ರುವದಲ್...

Wednesday, August 23, 2023

PARYAYA: ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್ರ ಮನ್ನಣೆ

ಆಗಸ್ಟ್‌ 24ರಂದು ರಾಷ್ಟ್ರಮಟ್ಟದ ವರ್ಚುವಲ್‌ ಸಭೆ

ಬೆಂಗಳೂರು: ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ದಿ ಪಡಿಸಿರುವ ದಿಕ್ಸೂಚಿ ಕಲಿಕಾ ತಂತ್ರಜ್ಞಾನಕ್ಕೆ  (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ- ಎನ್‌ಎಲ್‌ಟಿ) ಕೇಂದ್ರದ ಪಂಚಾಯತಿ ರಾಜ್‌ ಸಚಿವಾಲಯವು ಮಾನ್ಯತೆ ನೀಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡುವಲ್ಲಿ ಅದನ್ನು ಬಳಸಿಕೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ʼವರ್ಚುವಲ್‌ ಸಭೆʼಯನ್ನು ಆಗಸ್ಟ್‌ 24ರಂದು ಕೇಂದ್ರ ಪಂಚಾಯತಿ ರಾಜ್‌ ಸಚಿವಾಲಯವು ಆಯೋಜಿಸಿದೆ. ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ಚೌಕಟ್ಟು -2022ರ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಅದು ಶಿಫಾರಸು ಮಾಡಿದೆ.

ಕೇಂದ್ರದ ಪಂಚಾಯತಿ ರಾಜ್‌ ಸಚಿವಾಲಯದ ನೇತೃತ್ವದಲ್ಲಿ ನಡೆಯಲಿರುವ ಈ ವರ್ಚುವಲ್‌ ಸಭೆಯಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎನ್‌ ಐ ಆರ್‌ ಡಿ), ಕರ್ನಾಟಕದ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಎನ್‌ ಎಸ್‌ ಎಸ್‌ಐಆರ್‌ಡಿ), ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ (ಎಸ್‌ ಎಸ್‌ ಎಫ್)‌, ಎನ್‌ ಐಸಿ ಸಪೋರ್ಟ್‌ ಮತ್ತು ಕೇರಳದ ಕೇರಳ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ) ಪಾಲ್ಗೊಳ್ಳಲಿವೆ.

ರಾಷ್ಟ್ರೀಯ ಸಾಮರ್ಥ್ಯ ವೃದ್ಧಿ ಚೌಕಟ್ಟು-2022ರ ಅಡಿಯಲ್ಲಿ ಗ್ರಾಮೀಣ ಸಂಸ್ಥೆಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ರೂಪುರೇಷೆ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಪ್ರಾಥಮಿಕ ಚರ್ಚೆ ನಡೆಸಲಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ರಾಜೀವ ಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪಂಚಾಯಿತಿಗಳ ಸಬಲೀಕರಣ ನಿಟ್ಟಿನ ಚರ್ಚೆಗಳ ವೇಳೆಯಲ್ಲಿ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಕರ ಕೆ. ಪ್ರಸಾದ್‌ ಅವರು ಫೌಂಡೇಶನ್ನಿನ ದಿಕ್ಸೂಚಿ ಕಲಿಕಾ ತಂತ್ರಜ್ಞಾನಕ್ಕೆ ಕೇಂದ್ರ ಪಂಚಾಯಿತಿ ರಾಜ್‌ ಸಚಿವಾಲಯವು ಮಾನ್ಯತೆ ನೀಡಿರುವ ವಿಚಾರವನ್ನು ಬಹಿರಂಗ ಪಡಿಸಿದರು. 

ಏನಿದು ಎನ್‌ ಎಲ್‌ ಟಿ?

ದಿಕ್ಸೂಚಿ ಕಲಿಕಾ ತಂತ್ರಜ್ಞಾನ ಅಥವಾ ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ (ಎನ್‌ ಎಲ್‌ ಟಿ) ಎಂಬುದು ಆನ್‌ ಲೈನ್‌ ಮೂಲಕ ತಾವು ಇದ್ದ ಸ್ಥಳದಿಂದಲೇ, ತಮಗೆ ಅನುಕೂಲಕರವಾದ ಸಮಯದಲ್ಲಿ ಕಲಿಯುವ ವ್ಯವಸ್ಥೆಯಾಗಿದ್ದು ಅಮೆರಿಕ ಮೂಲದ ಎನ್‌ ಜಿಒ ಗೂರು ಫೌಂಡೇಶನ್‌ ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದೆ.

ದೇಶಾದ್ಯಂತ 30 ಲಕ್ಷ ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಮತ್ತು 30 ಲಕ್ಷ ಗ್ರಾಮ ಪಂಚಾಯಿತಿ ಪದಾಧಿಕಾರಿಗಳಿಗೆ ಈ ತಂತ್ರಜ್ಞಾನದ ಮೂಲಕ ಸುಲಭವಾಗಿ ಮೊಬೈಲ್‌ ಬಳಸಿ, ಪಂಚಾಯಿತಿಗಳ ಕಾರ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಬಹುದಾಗಿದೆ. ಕಲಿಕಾರ್ಥಿಗಳಿಗೆ ವ್ಯಕ್ತಿಗತವಾಗಿ ಕಲಿಯುವ ಅವಕಾಶ ಇದರಲ್ಲಿದೆ.

ಫೊಟೋ:

1) ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜೀವಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಉಪನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಬಿ.ಕೆ. ಪಾಟೀಲ್‌ ಅವರು ಗ್ರಾಮೀಣ ಅಭಿವೃದ್ಧಿಯಲ್ಲಿ ಸೀಮಾತೀತ ತಂತ್ರಜ್ಞಾನ ಬಳಕೆ ಕುರಿತಾದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಹಾಗೂ ಅದರ ಇಂಗ್ಲಿಷ್‌ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ ಪಂಚಾಯತ್ಸ್‌ʼ ಪುಸ್ತಕಗಳನ್ನು ಖರೀದಿಸಿದರು.

೨. ಭಾರತ ಸರ್ಕಾರದ ಐಸಿಎಂಆರ್‌ ನ್ಯಾಷನಲ್‌ ಇನ್‌ ಸ್ಟಿಟ್ಟೂಟ್‌ ಆಫ್‌ ವೈರಾಲಜಿಯ ಮಾಜಿ ನಿರ್ದೇಶಕಿ, ಕೋವಿಡ್‌ ಕಾಲದಲ್ಲಿ ಮಹಿಳಾ ಶಕ್ತಿ ಪ್ರಶಸ್ತಿ ಗಳಿಸಿದ  ಪ್ರೊ.ಪ್ರಿಯಾ ಅಬ್ರಹಾಂ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಪಡಿಸಿದ ಪೊಟಾನ್‌ ತಂತ್ರಜ್ಞಾನದ ಕುರಿತು ಡಾ. ಶಂಕರ ಕೆ. ಪ್ರಸಾದ್‌ ಜೊತೆ ಚರ್ಚಿಸಿ ಮಾಹಿತಿ ಪಡೆದರು.

3) ಗಾಂಧಿ ಭವನದಲ್ಲಿ ನಡೆದ ರಾಜೀವಗಾಂಧಿ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಡಾ. ಶಂಕರ ಕೆ. ಪ್ರಸಾದ್‌ ಮಾತನಾಡಿದರು. ಇದರ ವಿಡಿಯೋ ನೋಡಲು ಈ ಕೆಳಗೆ ಕ್ಲಿಕ್‌ ಮಾಡಿ.


PARYAYA: ಪಂಚಾಯಿತಿ ತರಬೇತಿಗೆ ದಿಕ್ಸೂಚಿ ಕಲಿಕಾ ತಂತ್ರಜ್ಞಾನ: ಕೇಂದ್...: ಪಂಚಾಯಿತಿ ತರಬೇತಿಗೆ  ದಿಕ್ಸೂಚಿ ಕಲಿಕಾ ತಂತ್ರಜ್ಞಾನ:  ಕೇಂದ್ರ ಮನ್ನಣೆ ಆಗಸ್ಟ್‌ 24ರಂದು ರಾಷ್ಟ್ರಮಟ್ಟದ ವರ್ಚುವಲ್‌ ಸಭೆ ಬೆಂಗಳೂರು: ಬೆಂಗಳೂರಿನ ಸಂಪೂರ್ಣ ಸ್ವರ...

PARYAYA: ಹೌದು.. ಭಾರತ ಇದೀಗ ಚಂದ್ರನ ಮೇಲೆ!

 ಹೌದು.. ಭಾರತ ಇದೀಗ ಚಂದ್ರನ ಮೇಲೆ!

ಬೆಂಗಳೂರು: ಹೌದು. ಭಾರತ ಅದನ್ನು ಸಾಧಿಸಿತು. ಚಂದ್ರನ ಬಳಿಗೆ ಈವರೆಗೆ ಭೂಮಿಯ ಯಾವದೇ ದೇಶ ಸಾಗದ ಜಾಗಕ್ಕೆ ಸಾಗುವ ಸಾಧನೆಯನ್ನು ಈದಿನ ೨೦೨೩ರ ಆಗಸ್ಟ್‌ ೨೩ರ ಬುಧವಾರ ಸಾಧಿಸಿತು.

ಅತ್ಯಂತ ಸುರಕ್ಷಿತವಾಗಿ, ಭಾರತದ ಚಂದ್ರಯಾನ-೩ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟ ʼವಿಕ್ರಮ್‌ʼ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಂಜೆ ೬ ಗಂಟೆಯ ನಿಗದಿತ ವೇಳೆಯಲ್ಲಿ ಯಶಸ್ವಿಯಾಗಿ ʼಹಗುರʼವಾಗಿ ಇಳಿಯಿತು.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಕರತಾಡನ ಹರ್ಷೋದ್ಘಾರದೊಂದಿಗೆ ಇಸ್ರೋ ವಿಜ್ಞಾನಿಗಳು ಆನಂದ ತುಂದಿಲರಾದರು.

ಈ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳ ಸಮೂಹ ಮತ್ತು ದೇಶದ ಜನತೆಯನ್ನು ಅಭಿನಂದಿಸಿದರು. 

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ:


ಇವುಗಳನ್ನೂ ಓದಿ:
ಚಂದ್ರನತ್ತ ಪಯಣ: ಭಾರತದ ದಾಪುಗಾಲು,  ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ
PARYAYA: ಹೌದು.. ಭಾರತ ಇದೀಗ ಚಂದ್ರನ ಮೇಲೆ!:   ಹೌದು.. ಭಾರತ ಇದೀಗ ಚಂದ್ರನ ಮೇಲೆ! ಬೆಂಗಳೂರು: ಹೌದು. ಭಾರತ ಅದನ್ನು ಸಾಧಿಸಿತು. ಚಂದ್ರನ ಬಳಿಗೆ ಈವರೆಗೆ ಭೂಮಿಯ ಯಾವದೇ ದೇಶ ಸಾಗದ ಜಾಗಕ್ಕೆ ಸಾಗುವವ ಸಾಧನೆಯನ್ನು ...

PARYAYA: ಚಂದ್ರನತ್ತ ಪಯಣ: ಭಾರತದ ದಾಪುಗಾಲು

 ʼಚಂದಮಾಮʼ ಸ್ಪರ್ಶಕ್ಕೆ ತ್ರಿ ʼವಿಕ್ರಮʼ ಹೆಜ್ಜೆ

ಚಂದ್ರನತ್ತ ಪಯಣ: ಭಾರತದ ದಾಪುಗಾಲು

ಚಂದ್ರಯಾನ ೧
೨೦೦೩ ಆಗಸ್ಟ್‌ ೧೫: ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಂದ ಚಂದ್ರಯಾನ ಕಾರ್ಯಕ್ರಮದ ಘೋಷಣೆ

೨೦೦೮ ಆಕ್ಟೋಬರ್‌ ೨೦೦೮: ಆಂದ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೧ ಉಡ್ಡಯನ

೨೦೦೮ ನವೆಂಬರ್‌ ೦೮: ಚಂದ್ರಯಾನ ೧ರಿಂದ ಚಂದ್ರನ ವರ್ಗಾವಣೆ ಪಥ ಪಯಣ ಪ್ರಾರಂಭ.

೨೦೦೮ ನವೆಂಬರ್‌ ೧೪: ಚಂದ್ರಯಾನ ೧ರ ಮೊದಲ ಮೂನ್‌ ಇಂಪ್ಯಾಕ್ಟ್‌ ಪ್ರೋಬ್‌ ಹೊರ ಹಾರಿತು ಮತ್ತು ಚಂದ್ರನ ಮೇಲ್ಮೈಗೆ ಸಮೀಪ ಅಪ್ಪಳಿಸಿತು. ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ ಅಸ್ತಿತ್ವ ದೃಢಪಟ್ಟಿತು.

೨೦೦೯ ಆಗಸ್ಟ್‌ ೨೮: ಇಸ್ರೋ ಪ್ರಕಾರ ಚಂದ್ರಯಾನ ೧ ಕಾರ್ಯಕ್ರಮ ಕೊನೆಗೊಂಡಿತು.

ಚಂದ್ರಯಾನ ೨

೨೦೧೯ ಜುಲೈ ೨೨: ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೨ ಉಡಾವಣೆ

೨೦೧೯ ಆಗಸ್ಟ್‌ ೨೦: ಚಂದ್ರಯಾನ -೨ ಬಾಹ್ಯಾಕಾಶ ನೌಕೆ ಚಂದ್ರಕಕ್ಷೆಯನ್ನು ಪ್ರವೇಶಿಸಿತು.

೨೦೧೯ ಸೆಪ್ಟೆಂಬರ್‌ ೦೨: ಚಂದ್ರಧ್ರುವ ಕಕ್ಷೆಯಲ್ಲಿ ೧೦೦ ಕಿಮೀ ಎತ್ತರದಲ್ಲಿದ್ದಾಗ ಚಂದ್ರಯಾನದಿಂದ ವಿಕ್ರಮ್‌ ಲ್ಯಾಂಡರನ್ನು ಬೇರ್ಪಡಿಸಲಾಯಿತು. ವಿಕ್ರಮ್‌ ಲ್ಯಾಂಡರ್‌  ಚಂದ್ರನ ಮೇಲ್ಮೈಯಿಂದ ೨.೧ ಕಿಮೀ ಎತ್ತದಲ್ಲಿದ್ದಾಗ ಭೂ ಕೇಂದ್ರದ ಸಂಪರ್ಕ ಕಡಿದುಹೋಯಿತು.

ಚಂದ್ರಯಾನ ೩

೨೦೨೩ ಜುಲೈ ೧೪: ಚಂದ್ರಯಾನ -೩ ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾದ ಸತೀಶ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಚಂದ್ರಯಾನ ೩ರ ಎಲ್ಲ ಪರೀಕ್ಷೆಗಳೂ ಸಫಲವಾಗಿದ್ದು, ಚಂದ್ರಕಕ್ಷೆಯಲ್ಲಿ ಚಂದ್ರನಿಗೆ ಅತ್ಯಂತ ಸಮೀಪಕ್ಕೆ ತಲುಪಿದೆ. ಬಾಹ್ಯಾಕಾಶ ನೌಕೆಯನ್ನು ನಿಧಾನವಾಗಿ ವೇಗ ತಗ್ಗಿಸುತ್ತಾ ಚಂದ್ರ ನೆಲದ ಸಮೀಪಕ್ಕೆ ಒಯ್ಯಲಾಗಿದೆ.

೨೦೨೩ ಆಗಸ್ಟ್‌ ೨೩: ಚಂದ್ರಯಾನ -೩ ವಿಕ್ರಮ್‌ ಲ್ಯಾಂಡರ್‌ ಮತ್ತು ರೋವರ್‌ ಚಂದ್ರನೆಲದ ಮೇಲೆ ʼಹಗುರ ಸ್ಪರ್ಶʼಕ್ಕೆ ಸಜ್ಜಾಗಿದೆ. ಕೊನೆಯ ಕ್ಷಣಗಳಲ್ಲಿ ಏನಾದರೂ ಅನಿರೀಕ್ಷಿತ ಸಮಸ್ಯೆ ಕಂಡು ಬಂದರೆ ಚಂದ್ರ ಸ್ಪರ್ಶ ಕಾರ್ಯಕ್ರಮವನ್ನು ಆಗಸ್ಟ್‌ ೨೭ರವರೆಗೆ ವಿಳಂಬಿಸಬಹುದು ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಆದರೆ ಇಸ್ರೋದ ಎಲ್ಲ ವಿಜ್ಞಾನಿಗಳೂ ಈದಿನ ಯಶಸ್ವೀ ಚಂದ್ರ ಸ್ಪರ್ಶ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.

ಚಂದ್ರ ಸ್ಪರ್ಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಜೆ ೬ ಗಂಟೆ ಸುಮಾರಿಗೆ ಚಂದ್ರಸ್ಪರ್ಶಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಈ ಸಾಧನೆಯೊಂದಿಗೆ ಚಂದ್ರನೆಲವನ್ನು ಈವರೆಗೆ ಯಾರೂ ಸ್ಪರ್ಶಿಸದ ಭಾಗವನ್ನು ತಲುಪಿದ ಪ್ರಪ್ರಥಮ ದೇಶ ಭಾರತ ಎಂಬ ಹೆಗ್ಗಳಿಕೆ ಭಾರತದ್ದಾಗಲಿದೆ.

ಈ ಕೌತುಕದ ಕ್ಷಣವನ್ನು ನೇರವಾಗಿ ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ: 


 ಇವುಗಳನ್ನೂ ಓದಿ: 

Zanda Ooncha Rahe Hamara.. Vijyaee Chandra Tiranga Pyara.!


PARYAYA: ಚಂದ್ರನತ್ತ ಪಯಣ: ಭಾರತದ ದಾಪುಗಾಲು:   ʼ ಚಂದಮಾಮ ʼ ಸ್ಪರ್ಶಕ್ಕೆ ತ್ರಿ ʼ ವಿಕ್ರಮ ʼ ಹೆಜ್ಜೆ ಚಂದ್ರನತ್ತ ಪಯಣ: ಭಾರತದ ದಾಪುಗಾಲು ಚಂದ್ರಯಾನ ೧ ೨೦೦೩ ಆಗಸ್ಟ್‌ ೧೫ : ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪ...

Tuesday, August 15, 2023

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ

ಬೆಂಗಳೂರುಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೩ ಆಗಸ್ಟ್‌ ೧೫ರ ಮಂಗಳವಾರ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೭೭ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. 

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸೇನಾ ಅಧಿಕಾರಿ ಥಾಮಸ್‌ ದೇವಸ್ಸಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಹಿರಿಯ ನ್ಯಾಯವಾದಿ ವಿ. ಮುನಿರಾಜು ಅವರು ಅತಿಥಿಯಾಗಿದ್ದರು.

ಸಮಾರಂಭದಲ್ಲಿ ಪಿಯುಸಿ ಮತ್ತು ಎಸ್‌ಎಸ್‌ಎಸ್‌ಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ಬಡಾವಣೆಯ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ಗೌರವಕ್ಕೆ ಅರ್ಹರಾದ ರೋಷನ್‌ ಅವರು ೫೮೮ ಅಂಕಗಳೊಂದಿಗೆ ಉನ್ನತ ಸಾಧನೆ ಮಾಡಿದ್ದರೆ, ಪಿಯುಸಿಯಲ್ಲಿ ೫೪೬ ಅಂಕಗಳನ್ನು ಪಡೆದ ರಕ್ಷಿತಾ ಆರ್.‌ ಚಿತ್ರಗಾರ ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಬಡಾವಣೆಗೆ ಕೀರ್ತಿಯನ್ನು ತಂದಿದ್ದಾರೆ.

ಸಮಾರಂಭದ ಕೆಲವು ನೋಟಗಳ ವಿಡಿಯೋಗಳು ಇಲ್ಲಿವೆ:

ಮುಖ್ಯ ಅತಿಥಿ ಥಾಮಸ್‌ ದೇವಸ್ಸಿ ಅವರ ಭಾಷಣ:

ಸಂಘದ ಅಧ್ಯಕ್ಷ ರಾಜೇಶ ಕೆ. ಹೆಗಡೆ ಅವರಿಂದ ಅಧ್ಯಕ್ಷೀಯ ಭಾಷಣ:

ಸಮಾರಂಭದ ಸಂದರ್ಭದಲ್ಲಿ ಬಡಾವಣೆಯ ಹಿರಿಯ ಸದಸ್ಯ, ನ್ಯಾಯವಾದಿ ವಿ. ಮುನಿರಾಜು ಅವರು ಲಘು ಉಪಾಹಾರದ ವ್ಯವಸ್ಥೆ ಮಾಡಿದ್ದರು.

ಹೆಚ್ಚಿನ ಅಂಕಗಳೊಂದಿಗೆ ಗೌರವಕ್ಕೆ ಪಾತ್ರರಾದ ರೋಷನ್‌ ಮತ್ತು ರಕ್ಷಿತಾ ಆರ್‌ ಚಿತ್ರಗಾರ:


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ ಬೆಂಗಳೂರು : ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೩ ಆಗಸ್ಟ್‌ ೧೫ರ ಮಂಗಳವಾರ ...