ನಾನು ಮೆಚ್ಚಿದ ವಾಟ್ಸಪ್

Saturday, August 26, 2023

PARYAYA: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದವರು ಒಬ್ಬಿಬ್ಬರಲ್ಲ. ತಮ್ಮದೇ ಆದ ರೀತಿಯಲ್ಲಿ ಅದನ್ನು ಮಂದಿ ಸಂಭ್ರಮಿಸಿದ್ದಾರೆ. ಈ ದಿನವನ್ನು ಇನ್ನು ಮುಂದೆ ಪ್ರತಿವರ್ಷ ʼರಾಷ್ಟ್ರೀಯ ಬಾಹ್ಯಾಕಾಶ ದಿನʼ ಎಂಬುದಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ೨೦೨೩ ಆಗಸ್ಟ್‌ ೧೬ರಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ಇಸ್ರೋದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿ ಚಂದ್ರಯಾನ-೩ರ ʼವಿಕ್ರಮʼ ಇಳಿದ ಸ್ಥಳವನ್ನು ʼಶಿವಶಕ್ತಿʼ ಎಂಬುದಾಗಿಯೂ, ಚಂದ್ರನಲ್ಲಿ ಇಳಿದ ಆಗಸ್ಟ್‌ ೨೩ರ ದಿನವನ್ನು ʼರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ದಿನʼ ಎಂಬುದಾಗಿ ಆಚರಿಸುವುದಾಗಿಯೂ, ಚಂದ್ರಯಾನ -೨ರ ತನ್ನ ಗುರುತನ್ನು ಬಿಟ್ಟಿ ಚಂದ್ರನ ನೆಲವನ್ನು ʼತಿರಂಗʼ ಎಂಬುದಾಗಿ ಹೆಸರಿಸುವುದಾಗಿಯೂ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಚಂದ್ರಯಾನದ ಯಶಸ್ಸನ್ನು ಸಂಭ್ರಮಿಸಿದ ಹಲವರ ಕಲ್ಪನೆಯ ಕೆಲವು ಚಿತ್ರ, ವಿಡಿಯೋಗಳನ್ನೂ ʼಪರ್ಯಾಯʼ ಇಲ್ಲಿ ಪ್ರಕಟಿಸುತ್ತಿದೆ. ಅದರಲ್ಲಿ ಚಂದ್ರನಲ್ಲಿ ಇಳಿದ ಹರ್ಷವನ್ನು ಹಾಡಿನ ರೂಪದಲ್ಲಿ ಬಣ್ಣಿಸಿದ ಹರ್ಷ ಕಾವೇರಿಪುರ ಅವರ ವಿಡಿಯೋ ಒಂದು. ಇದರ ಸಾಹಿತ್ಯ, ಸಂಗೀತ, ಗಾಯನ ಹಳ್ಳೇರಾವ ಕುಲ್ಕರ್ಣಿ ಕೆಂಭಾವಿ ಅವರದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ 
ʼಹರ್ಷ ಕಾವೇರಿಪುರʼ ಅವರ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ:


ಈ ವಿಡಿಯೋ ಕರ್ತೃ ಹರ್ಷ ಅವರ ಬಗ್ಗೆ ತಿಳಿಯಲು ಗೂಗಲ್‌ ಎಂಜಿನ್ನಿನಲ್ಲಿ ಸರ್ಚ್‌ ಮಾಡಿದರೆ ನಿಮಗೆ ಅವರ ಬಗ್ಗೆ ಹೆಚ್ಚಿನ ವಿವರ ಸಿಗುವುದಿಲ್ಲ. ಆದರೆ ಅವರ ಹಲವಾರು ವಿಡಿಯೋ, ರೀಲ್‌ಗಳು ಸಿಗುತ್ತವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆಂದು ಅನಿಸುವ ವಿಡಿಯೋಗಳು ಇವು. ಆಸಕ್ತರು ಗೂಗಲ್‌ ನಲ್ಲಿ ತಡಕಾಡಿ ʼಹರ್ಷ ಕಾವೇರಿಪುರʼ ಅವರ ವಿಡಿಯೋಗಳ ಸೊಬಗು ಸವಿಯಬಹುದು.

ಆದರೆ ಇಲ್ಲಿ ಹಾಕಿರುವ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಹರ್ಷ ಕಾವೇರಿಪುರ ಅವರ ವಿಡಿಯೋ ಮಾತ್ರ ನನಗೆ ಅಲ್ಲಿ ಸಿಗಲಿಲ್ಲ. ನಿಮಗೆ ಸಿಕ್ಕಿದರೆ ಖಂಡಿತ ʼಪರ್ಯಾಯʼಕ್ಕೆ ತಿಳಿಸಿ.

ಮೇಲೆ ತಿಳಿಸಿದಂತೆ ಚಂದ್ರಯಾನ ಯಶಸ್ಸಿನ ಸಂದರ್ಭವನ್ನು ಹಲವಾರು ಮಂದಿ ತಮ್ಮದೇ ಕಲ್ಪನೆ, ತಮಗೆ ಕಂಡಂತೆ ಚಿತ್ರ, ತಮ್ಮಿಷ್ಟದಂತೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದಾರೆ.

ಯಾರೋ ಒಬ್ಬರು ಉಡುಪಿಯ ಕೃಷ್ಣನನ್ನು ಚಂದ್ರನ ಹಿನ್ನೆಲೆ ಇಟ್ಟು ಚಿತ್ರಿಸಿದರೆ, ಇನ್ನೊಬ್ಬರಿಗೆ ಚಂದ್ರನಲ್ಲಿ ಇಳಿದ ʼವಿಕ್ರಮ್ʼ ʼತಿರುಪತಿʼ ತಿಮ್ಮಪ್ಪನಂತೆ ಕಂಡಿದೆ.

ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿಯವರು ತಮ್ಮದೇ ʼಇಮೋಜಿʼ ರಚಿಸಿದ್ದಾರೆ. 

ನಂಜುಂಡಸ್ವಾಮಿ ಅವರ ಕಲ್ಪನೆಯನ್ನೂ ನೀವಿಲ್ಲಿ ನೋಡಬಹುದು.

ಇದರೊಂದಿಗೆ ಇನ್ನೊಂದು ಪುಟ್ಟ ವಿಡಿಯೋ ಇದೆ. ಅದು ಚಂದ್ರಯಾನದ ಸ್ಫೂರ್ತಿಯ ʼಪುಟ್ಟುʼ.

ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ, ಆನಂದಿಸಿ.







PARYAYA: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ!: ಚಂದ್ರನಲ್ಲಿ ಇಳಿದ ಹರ್ಷ: ಈ ದಿನದ ನೆನಪು ಇನ್ನು ಪ್ರತಿವರ್ಷ! ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಭಾರತ ಇಳಿದ ೨೦೨೩ ಆಗಸ್ಟ್‌ ೨೩ರ ದಿನದ ಐತಿಹಾಸಿಕ ಕ್...

No comments:

Post a Comment