ನಾನು ಮೆಚ್ಚಿದ ವಾಟ್ಸಪ್

Friday, October 28, 2022

PARYAYA: ಮೊಳಗಿತು ಕೋಟಿ ಕಂಠ ಗಾಯನ

ಮೊಳಗಿತು ಕೋಟಿ ಕಂಠ ಗಾಯನ

ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂಠʼ ಗಾಯನ ಮೊಳಗಿತು.

ನೆಲದಲ್ಲಷ್ಟೇ ಅಲ್ಲ ಜಲದಲ್ಲೂ ದೋಣಿಗಳಲ್ಲಿ, ಆಕಾಶದಲ್ಲಿ ವಿಮಾನದಲ್ಲಿ ಕೂಡಾ ʼಕನ್ನಡ ಡಿಂಡಿಮʼ ಭಾರಿಸಿತು.

ಬೆಂಗಳೂರಿನಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಲಭಿಸಿತು.


ಈ ಸಂದರ್ಭದಲ್ಲಿ ಹಿರಿಯ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು  ಬೆಂಗಳೂರಿನಲ್ಲಿ ತೆಗೆದ ಛಾಯಾಚಿತ್ರಗಳ ವಿಡಿಯೋ ಇಲ್ಲಿದೆ.  ಕ್ಲಿಕ್‌ ಮಾಡಿ ನೋಡಿ:


ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಕರ್ನಾಟಕದಾದ್ಯಂತ ಕನ್ನಡದ ಹಾಡು ಮೊಳಗಿದ ಪರಿಯನ್ನು ವೀಕ್ಷಿಸಿ:


PARYAYA: ಮೊಳಗಿತು ಕೋಟಿ ಕಂಠ ಗಾಯನ:   ಮೊಳಗಿತು ಕೋಟಿ ಕಂಠ ಗಾಯನ ಬೆಂಗಳೂರು: ಕರ್ನಾಟಕದ ಉದ್ದಕ್ಕೂ ೨೦೨೨ ಅಕ್ಟೋಬರ್‌ ೨೮ರ ಶುಕ್ರವಾರ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ನಾಡು ನನ್ನ ಹಾಡು- ಕೋಟಿ ಕಂ...

Monday, October 24, 2022

PARYAYA: ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

 ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!

ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ಹಿರಿತಲೆಗಳ ನಾಲಿಗೆಯಲ್ಲಿ ಬರುತ್ತಿರುತ್ತದೆ:” ಭಾರತೀಯರು ಸ್ವಾತಂತ್ರ್ಯಕ್ಕೆ ಲಾಯಕ್ಕಲ್ಲ. ಸಿಕ್ಕಿದರೂ ಅವರು ಸ್ವಾತಂತ್ರ್ಯ ಉಳಿಸಿಕೊಳ್ಳಲಾರರು… ಅವರು ಆಡಳಿತ ನಡೆಸಲು ಸಾಧ್ಯವಿಲ್ಲ” ಅಂತ.

ಭಾರತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಭಾರತದ ಹಿರಿಮೆ ವಿಶ್ವದ ಮೂಲೆ ಮೂಲೆಗೂ ಪಸರಿಸುತ್ತಿದೆ.

ಆದರೆ, ವಿಶ್ವವನ್ನೇ ಆಳಿದ್ದ ದೇಶ. ಇಂಗ್ಲೆಂಡ್…‌ ಈಗಿನ ಯುನೈಟೆಡ್‌ ಕಿಂಗ್‌ ಡಮ್‌ʼ (ಯುಕೆ) ಆರ್ಥಿಕವಾಗಿ ನಲುಗುತ್ತಿದೆ. ಗೆದ್ದಿದ್ದ ಪ್ರಧಾನಿ ಲಿಜ್‌ ಟ್ರಸ್‌ ಕೇವಲ ೪೫ ದಿನ ಆಡಳಿತ ನಡೆಸಿ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ೨೦೨೨ರ ಅಕ್ಟೋಬರ್‌ ೨೪ರ ಸೋಮವಾರ ಭಾರತದ ಅದರಲ್ಲೂ ಕರ್ನಾಟಕದ ಅಳಿಯ ಯುವ ರಿಷಿ ಸುನಕ್ ಅವರು ಬ್ರಿಟನ್ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಯುನೈಟೆಡ್‌ ಕಿಂಗ್‌ ಡಮ್‌ ಗೆ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿ ಆಡಳಿತ ಮುನ್ನಡೆಸುವಂತಹ ಸ್ಥಿತಿ ಬಂದಿದೆ.

ರಿಷಿ ಸುನಕ್ ಅವರು ಇನ್ಫೋಸಿಸ್ ಕಂಪನಿ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ.. ಬ್ರಿಟನ್‌ನಲ್ಲಿ ಪ್ರಬಲ ಯುವ ರಾಜಕಾರಣಿಯಾಗಿ ಬೆಳದಿರುವ ರಿಷಿ ಸುನಕ್ ಬದಲಾದ ಪರಿಸ್ಥಿತಿಯಲ್ಲಿ ಯುಕೆಯ ಉನ್ನತ ಹುದ್ದೆ ಪಡೆಯುವಂತಾಗಿದೆ.

ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು ಯುಕೆಯ ಟೋರಿ ನಾಯಕತ್ವಕ್ಕಾಗಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರು ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ.

ಪ್ರತಿಸ್ಫರ್ಧಿಯಾಗಬಹುದಾಗಿದ್ದ ಸಂಸದೆ ಪೆನ್ನಿ ಮೊರ್ಡಾಂಟ್ ಅವರಿಗೆ ಕೇವಲ 28 ಸಂಸದರು ಆಸಕ್ತಿ ತೋರಿದರು. ಇದರಿಂದ ಸುನಕ್ ಹಾದಿ ಸುಗಮವಾಯಿತು. 198 ಸಂಸದರು ರಿಷಿ ಪರವಾಗಿದ್ದಾರೆ. ಇದಕ್ಕೂ ಮುನ್ನ ಪ್ರತಿಸ್ಪರ್ಧಿಯಾಗಬಯಸಿದ್ದ ಬೋರಿಸ್‌ ಜಾನ್ಸನ್‌ ಪುನರಾಯ್ಕೆ ಬಯಸುವುದಿಲ್ಲ ಎಂದು ಹೇಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಸೋಮವಾರ ಸಂಜೆಯ ವೇಳೆಗೆ ರಿಷಿ ಸುನಕ್‌ ಅವರು ಕನ್ಸರ್ವೇಟಿವ್‌ ಪಕ್ಷದ ನಾಯಕನಾಗಿ ಆಯ್ಕೆಯಾದ ಪ್ರಕಟಣೆ ಹೊರಬಿದ್ದಿತು. ಸುನಕ್‌ ಅವರು ಅಕ್ಟೋಬರ್‌ ೨೮ರಂದು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ತಿಳಿಸಿವೆ.

ವಿಶ್ವವನ್ನೇ ಆಳಿದ, ಭಾರತೀಯರು ತಮ್ಮನ್ನು ತಾವು ಆಳಿಕೊಳ್ಳಲು ನಾಲಾಯಕ್‌ ಜನ ಎಂದು ಹೇಳಿದ ದೇಶಕ್ಕೆ ಇದೀಗ ಆಡಳಿತ ನಡೆಸಲು ಭಾರತೀಯರೇ ಬರಬೇಕಾಯಿತು. ಇದಕ್ಕೇ ಹೇಳುವುದು: ಕಾಲಾಯ ತಸ್ಮೈ ನಮಃ.

PARYAYA: ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ!:   ವಿಶ್ವ ವಿಜೇತ ದೇಶಕ್ಕೆ ಈಗ ಭಾರತದ ನಾಯಕ! ಅದೊಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ನೀಡಲು ಮೀನಾ ಮೇಷ ಎಣಿಸುತ್ತಿದ್ದ ಕಾಲ. ಆಗ ಬ್ರಿಟಿಷರು ಹೇಳಿದ್ದ ಮಾತು ಈಗಲೂ ...

Sunday, October 23, 2022

PARYAYA: ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ

 ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ

ಅಯೋಧ್ಯೆ: ಹನ್ನೆರಡು ಲಕ್ಷದ ಎಪ್ಪತ್ತಾರು ಸಾವಿರ (12,76,000) ಹಣತೆಗಳನ್ನು ಬೆಳಗುವ ಮೂಲಕ 2022 ಅಕ್ಟೋಬರ್‌ 24ರ ಭಾನುವಾರ ಅಯೋಧ್ಯೆ ವಿಶ್ವದಾಖಲೆಯನ್ನು ಬರೆಯಿತು. ಇದರೊಂದಿಗೆ  ಲೇಸರ್‌ ಬೆಳಕಿನಲ್ಲಿ ರಾಮಾಯಣ, ಅಯೋಧ್ಯಾ ಮಂದಿರದ ದೃಶ್ಯಗಳೂ ಕಣ್ಮನ ಸೆಳೆದವು.

ಅಯೋಧ್ಯೆಯ ಅಭೂತಪೂರ್ವ ದೀಪಾವಳಿ, ಗಂಗಾರತಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಪಾಲ್ಗೊಂಡರು.

ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಕೆಳಗಿನ ವಿಡಿಯೋ ಕ್ಲಿಕ್‌ ಮಾಡಿ. ಇದು ಎನ್‌ಎನ್‌ಐ  ವಿಡಿಯೋ.


ಇನ್ನೊಂದು ವಿಡಿಯೋ ನೋಡಿ: 

PARYAYA: ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ:   ಅಯೋಧ್ಯಾ ದೀಪಾವಳಿ: ವಿಶ್ವದಾಖಲೆ ಅಯೋಧ್ಯೆ : ಹನ್ನೆರಡು ಲಕ್ಷದ ಎಪ್ಪತ್ತಾರು ಸಾವಿರ (12,76,000) ಹಣತೆಗಳನ್ನು ಬೆಳಗುವ ಮೂಲಕ 2022 ಅಕ್ಟೋಬರ್‌ 24ರ ಭಾನುವಾರ ಅಯೋಧ್ಯ...

Monday, October 17, 2022

PARYAYA: ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಎಲ್ಲಿ ಮಾರಾಯರೇ ಈ ಆಟ?

ಇದು ಸುವರ್ಣ ನೋಟ...!

ಬೆಳಗ್ಗೆ ಮೊಬೈಲಿನಲ್ಲಿ ವಾಟ್ಸಪ್‌ ನೋಡುತ್ತಿದ್ದಾಗ ಮೂರು ಚಿತ್ರಗಳು ಗಮನ ಸೆಳೆದವು.

ತತ್‌ ಕ್ಷಣವೇ ಮೆಸ್ಸೇಜ್‌ ಮಾಡಿದೆ: “ಸೂಪರ್‌ ಓಳು ಮಾರಾಯರೇ ಈ ಗೊಬ್ಬು” (ಸೂಪರ್‌ ಎಲ್ಲಿ ಮಾರಾಯರೇ ಈ ಆಟ ) ಅಂತ.

ಸ್ವಲ್ಪ ಹೊತ್ತಿನಲ್ಲೇ ಸುವರ್ಣರ ಫೋನ್‌ ಬಂತು. ʼಓಯ್‌ ಮಾರಾಯರೇ ಅವು ಕಂಠೀರವ ಸ್ಟೇಡಿಯಂಡು. ನ್ಯಾಷನಲ್‌ ಗೇಮ್ಸ್‌ ಆವೋಂಡು ಉಂಡತ್ತೇ? ಅಳ್ಪದ” (ಓಯ್‌ ಮಾರಾಯರೇ ಅವು ಕಂಠೀರವ ಸ್ಟೇಡಿಯಂನದ್ದು. ರಾಷ್ಟ್ರೀಯ ಕ್ರೀಡಾಕೂಟಾ ನಡೆಯುತ್ತಿದೆಯಲ್ಲವೇ? ಅಲ್ಲಿಯದ್ದು.)

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರ ಚಿತ್ರಗಳೇ ಹಾಗೆ. ಮನಸ್ಸಿನ ಆಳಕ್ಕೆ ಹೊಕ್ಕು ಬಿಡುತ್ತವೆ.

ಇವು ಕ್ರೀಡಾಕೂಟದಲ್ಲಿ ನಡೆದ ಲಾಂಗ್‌ ಜಂಪ್‌ ಆಟೋಟದ್ದು. ಈಜಲು ನೀರಿಗೆ ಜಿಗಿದಾಗ ನೀರು ಮೇಲಕ್ಕೆ ಚಿಮ್ಮುವ ಅಪೂರ್ವ ದೃಶ್ಯದ ಹಾಗೆಯೇ ಉದ್ದ ಜಿಗಿತದಲ್ಲಿ ಅಷ್ಟು ದೂರಕ್ಕೆ ಹಾರಿ ಕೆಳಗ್ಗೆ ಬಿದ್ದೊಡನೆಯೇ ಮರಳಿನ ಕಣಗಳು ಚಿಮ್ಮಿದ ಕ್ಷಣದ ಚಿತ್ರಗಳಿವು.

ಜೊತೆಗೇ ಆ ಹೊತ್ತಿನಲ್ಲಿ ಸ್ಪರ್ಧಾಳುಗಳ ಮುಖಭಾವ ಕೂಡಾ ಅದೆಷ್ಟು ಸುಂದರವಾಗಿ ಮೂಡಿ ಬಂದಿದೆ. ನೋಡಿ.

ಅಭಿನಂದನೆಗಳು ಸುವರ್ಣ.

ಚಿತ್ರದ ಸಮೀಪ ದೃಶ್ಯದ ಅನುಭವಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ

-ನೆತ್ರಕೆರೆ ಉದಯಶಂಕರ

PARYAYA: ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ: ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ ...! ಬೆಳಗ್ಗೆ ಮೊಬೈಲಿನಲ್ಲಿ ವಾಟ್ಸಪ್‌ ನೋಡುತ್ತಿದ್ದಾಗ ಮೂರು ಚಿತ್ರಗಳು ಗಮನ ಸೆಳೆದವು. ತತ್‌ ಕ್ಷಣವೇ ಮೆಸ್ಸೇಜ್‌ ಮಾಡಿ...

Tuesday, October 11, 2022

PARYAYA: ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ

 ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ

ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು 2022 ಅಕ್ಟೋಬರ್‌ 11ರ ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ 'ಶ್ರೀ ಮಹಾಕಾ ಲೋಕʼದ (ಕಾರಿಡಾರ್) ಮೊದಲ ಹಂತವನ್ನು ರಾಷ್ಟ್ರಾರ್ಪಣೆ ಮಾಡಿದರು. 856 ಕೋಟಿ ರೂಪಾಯಿ ವೆಚ್ಚದ ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ ಅಭಿವೃದ್ಧಿ ಯೋಜನೆಯ ಭಾಗವಾಗಿ ಈ ಭವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಮಹಾಕಾ ಲೋಕ’ದ ಮೊದಲ ಹಂತವನ್ನು 316 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮಹಾಕಾಳ ಲೋಕ ಅಂದರೆ ಮಹಾಕಾಳ ಕಾರಿಡಾರ್‌ 900 ಮೀಟರ್‌ ಉದ್ದವಿದ್ದು, ರುದ್ರಸಾಗರ ಸರೋವರದ ಸುತ್ತ ಹರಡಿಕೊಂಡಿದೆ.


900 ಮೀಟರ್‌ಗಿಂತಲೂ ಹೆಚ್ಚು ಉದ್ದದ 'ಮಹಾಕಾ ಲೋಕಕಾರಿಡಾರ್ದೇಶದಲ್ಲೇ ಅತಿ ದೊಡ್ಡ ಕಾರಿಡಾರುಗಳಲ್ಲಿ ಒಂದಾಗಿದೆ. ಹಳೆಯ ರುದ್ರಸಾಗರ ಸರೋವರದ ಸುತ್ತಲೂ ಪಸರಿಸಿರುವ  ಇದನ್ನು ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಸುತ್ತ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ಪುನರುಜ್ಜೀವನಗೊಳಿಸಲಾಗಿದೆ. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಮಹಾಕಾಳೇಶ್ವರ ಲಿಂಗವು ಭಾರೀ ಸಂಖ್ಯೆಯ ಭಕ್ತರನ್ನು ಸೆಳೆಯುತ್ತದೆ.

ಎರಡು ಭವ್ಯ ಮಹಾದ್ವಾರಗಳು:  ನಂದಿ ದ್ವಾರ ಮತ್ತು ಪಿನಾಕಿ ದ್ವಾರ ಈ ಎರಡು ಮಹಾದ್ವಾರಗಳನ್ನು ಅನತಿ ದೂರದಲ್ಲಿ ಕಾರಿಡಾರ್‌ ಆರಂಭವಾಗುವ ಸ್ಥಳದ ಸಮೀಪದಲ್ಲೇ ನಿರ್ಮಿಸಲಾಗಿದೆ.  ಸ್ವಲ್ಪ ದೂರದಿಂದ ಬೇರ್ಪಟ್ಟುಕಾರಿಡಾರ್‌ನ ಪ್ರಾರಂಭದ ಸಮೀಪದಲ್ಲಿ ನಿರ್ಮಿಸಲಾಗಿದೆವು ದೇವಾಲಯದ ಪ್ರವೇಶದ್ವಾರಕ್ಕೆ ಸಾಗುತ್ತವೆ. ದಾರಿಯುದ್ದಕ್ಕೂ ರಮಣೀಯ ನೋಟವನ್ನು ನೀಡುತ್ತವೆ.

ಭವ್ಯ ಮಹಾಕಾ ಲೋಕ

ಸಂಕೀರ್ಣವಾದ ಕೆತ್ತಿದ ಮರಳುಗಲ್ಲುಗಳಿಂದ ನಿರ್ಮಿಸಲ್ಪಟ್ಟಿರುವ 108 ಅಲಂಕೃತ ಕಂಬಗಳ ಭವ್ಯವಾದ ಸ್ತಂಭಗಳುಚಿಮ್ಮುವ ಕಾರಂಜಿಗಳು ಮತ್ತು 'ಶಿವ ಪುರಾಣ'ದ ಕಥೆಗಳನ್ನು ಚಿತ್ರಿಸುವ 50 ಕ್ಕೂ ಹೆಚ್ಚು ಚಲಿಸುವ ಭಿತ್ತಿಚಿತ್ರಗಳ ಫಲಕವು ಉಜ್ಜಯಿನಿಯ ಮಹಾಕಾ ಲೋಕವನ್ನು ಸ್ಮರಣೀಯ  ಅನುಭವವನ್ನಾಗಿ ಮಾಡುತ್ತವೆ.

ಪಾದಚಾರಿ ಮಾರ್ಗವು 108 ಭಿತ್ತಿಚಿತ್ರಗಳು ಮತ್ತು ಶಿವನಿಗೆ ಸಂಬಂಧಿಸಿದ ಕಥೆಗಳನ್ನು ಚಿತ್ರಿಸುವ 93 ಪ್ರತಿಮೆಗಳನ್ನು ಒಳಗೊಂಡಿದೆ. ಉದಾಹರಣೆಗೆ ಶಿವ ವಿವಾಹತ್ರಿಪುರಾಸುರ ವಧೆಶಿವ ಪುರಾಣ ಮತ್ತು ಶಿವ ತಾಂಡವ  ಸ್ವರೂಪ. ಈ ಪಾದಚಾರಿ ಮಾರ್ಗದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ 128 ಸ್ಥಳಗಳಿವೆ. ಇಲ್ಲಿ ತಿಂಡಿ ತಿನಸು, ಮತ್ತು ಶಾಪಿಂಗ್ ಸ್ಥಳಗಳೂ, ಹೂ ಮಾರುವವರು, ಕರಕುಶಲ ಮಳಿಗೆಗಳು ಇತ್ಯಾದಿಗಳಿವೆ.

ವಿಡಿಯೋ ವೀಕ್ಷಿಸಲು ಕೆಳಗೆ ಕ್ಲಿಕ್‌ ಮಾಡಿರಿ 

ದೇಗುಲ ವಿಸ್ತಾರ

ಯೋಜನೆಯಡಿಯಲ್ಲಿಸುಮಾರು 2.82 ಹೆಕ್ಟೇರಿನಷ್ಟಿರುವ ಮಹಾಕಾಳೇಶ್ವರ ದೇವಾಲಯದ ಆವರಣವನ್ನು 47 ಹೆಕ್ಟೇರುಗಳಿಗೆ ಹೆಚ್ಚಿಸಲಾಗುತ್ತಿದೆ ಉಜ್ಜಯಿನಿ ಜಿಲ್ಲಾಡಳಿತವು ಎರಡು ಹಂತಗಳಲ್ಲಿ ಇದನ್ನು ಅಭಿವೃದ್ಧಿಪಡಿಸುತ್ತದೆ. ಇದರಲ್ಲಿ 17 ಹೆಕ್ಟೇರ್ ರುದ್ರಸಾಗರ ಕೆರೆ ಕೂಡಾ ಸೇರಲಿದೆ. ಈ ಯೋಜನೆಯಿಂದ ನಗರಕ್ಕೆ ಆಗಮಿಸುವ ಯಾತ್ರಿಕರ ಸಂಖ್ಯೆ  ಈಗಿನ 1.50 ಕೋಟಿಯಿಂದ ಸುಮಾರು ಮೂರು ಕೋಟಿಗೆ ಹೆಚ್ಚುವ ನಿರೀಕ್ಷೆಯಿದೆ.

2ನೇ ಹಂತದಲ್ಲಿ ಏನೇನು?


ಯೋಜನೆಯ ಎರಡನೇ ಹಂತಕ್ಕಾಗಿ  310.22 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆಇದು ದೇವಾಲಯದ ಪೂರ್ವ ಮತ್ತು ಉತ್ತರದ ಮುಂಭಾಗಗಳ ವಿಸ್ತರಣೆಯನ್ನು ಒಳಗೊಂಡಿದೆ. ಉಜ್ಜಯಿನಿ ನಗರದ ವಿವಿಧ ಪ್ರದೇಶಗಳಾದ ಮಹಾರಾಜವಾಡಮಹಲ್ ಗೇಟ್ಹರಿ ಫಾಟಕ್ ಸೇತುವೆರಾಮಘಾಟ್ ಮುಂಭಾಗ ಮತ್ತು ಬೇಗಂ ಬಾಗ್ ರಸ್ತೆಗಳ ಅಭಿವೃದ್ಧಿಯನ್ನು ಸಹ ಇದು ಒಳಗೊಂಡಿದೆ. ಮಹಾರಾಜವಾಡದಲ್ಲಿನ ಕಟ್ಟಡಗಳನ್ನು ಮರುಅಭಿವೃದ್ಧಿಪಡಿಸಲಾಗುತ್ತದೆ ಮತ್ತು ಮಹಾಕಾ ದೇವಾಲಯದ ಆವರಣಕ್ಕೆ ಸಂಪರ್ಕಿಸಲಾಗುತ್ತದೆಆದರೆ ಪಾರಂಪರಿಕ ಧರ್ಮಶಾಲಾ ಮತ್ತು ಕುಂಭ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತದೆ.

PARYAYA: ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ:   ಭವ್ಯ ಮಹಾಕಾಳ ಲೋಕ: ರಾಷ್ಟ್ರಾರ್ಪಣೆ ಉಜ್ಜಯಿನಿ: ಪ್ರಧಾನಿ ನರೇಂದ್ರ ಮೋದಿ ಅವರು 2022 ಅಕ್ಟೋಬರ್‌ 11ರ ಮಂಗಳವಾರ ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ' ಶ್ರೀ ಮ...

Sunday, October 9, 2022

PARYAYA: ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ

 ಮೊಧೇರಾ (ಗುಜರಾತ್): ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ 2022 ಅಕ್ಟೋಬರ್ 9 ರ ಭಾನುವಾರ ಮೊಧೇರಾವನ್ನು ದಿನದ ಇಪ್ಪತ್ತನಾಲ್ಕೂ ಗಂಟೆಗಳ ಕಾಲ ಬ್ಯಾಟರಿ ಇಂಧನ ದಾಸ್ತಾನು ವ್ಯವಸ್ಥೆಯ (ಬಿಇಎಸ್ಎಸ್ಬೆಂಬಲ ಹೊಂದಿದ ʼದೇಶದ ಪ್ರಪ್ರಥಮ  ಸೌರಶಕ್ತಿ ಚಾಲಿತ ಗ್ರಾಮʼ ಎಂದು ಘೋಷಿಸಿದರು.

ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಈ ಸಮಗ್ರ ಸೌರಶಕ್ತಿಯನ್ನು ಪ್ರಾರಂಭಿಸಿದೆ. ಸೂರ್ಯ ಮಂದಿರದಿಂದ ಕೇವಲ 6 ಕಿಮೀ ದೂರದಲ್ಲಿರುವ ಸುಜನಪುರಮೆಹ್ಸಾನಾದಲ್ಲಿ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಯೊಂದಿಗೆ ಯೋಜನೆ ರೂಪುಗೊಂಡಿದೆ. ಮೊಧೇರಾದಲ್ಲಿ 24×7 ಸೌರಶಕ್ತಿ ಆಧಾರಿತ ವಿದ್ಯುತ್  ಒದಗಿಸುವ ಸಲುವಾಗಿಯೇ ಮೊಧೇರಾ ಸೂರ್ಯ ದೇಗುಲ ಮತ್ತು ಗ್ರಾಮವನ್ನು ಸಂಪೂರ್ಣ ʼಸೌರ ಶಕ್ತಿಮಯʼವಾಗಿ ಮಾಡುವ ಉಪಕ್ರಮ ಕೈಗೊಳ್ಳಲಾಗಿದೆ.

ಇಂಧನ ಯೋಜನೆಯ ಪಯಣ ಹೇಗಿತ್ತು ಗೊತ್ತಾ?

ಯೋಜನೆಯ ಅಭಿವೃದ್ಧಿಗಾಗಿ ಗುಜರಾತ್ ಸರ್ಕಾರವು 12 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿತು. ಅದೇ ಸಮಯದಲ್ಲಿಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರವು ಯೋಜನೆಗೆ 50:50 ಆಧಾರದ ಮೇಲೆ ಎರಡು ಹಂತಗಳಲ್ಲಿ 80.66 ಕೋಟಿ ರೂಪಾಯಿಗಳನ್ನು ಜಂಟಿಯಾಗಿ ಖರ್ಚು ಮಾಡಿದವು. ಅಂದರೆ ಹಂತ-1 ರಲ್ಲಿ 69 ಕೋಟಿ ಮತ್ತು ಹಂತ I. 2 ರಲ್ಲಿ 11.66 ಕೋಟಿ ರೂಪಾಯಿಗಳು. ಅಲ್ಲದೆಮೋಧೇರಾದಲ್ಲಿ 1300 ಮನೆಗಳಿಗೆ ತಲಾ ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದು ಸೂರ್ಯನ ಬಿಸಿಲಿನ ಶಕ್ತಿಯಿಂದ ವಿದ್ಯುತ್ ಪಡೆಯುತ್ತದೆ. ಈ ಸೌರ ಫಲಕಗಳ ಮೂಲಕ ಹಗಲಿನಲ್ಲಿ ನೇರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಸೂರ್ಯ ಮುಳುಗಿದ ಬಳಿಕ, ರಾತ್ರಿ ಬಿಇಎಸ್‌ ಎಸ್‌ (ಬ್ಯಾಟರಿ ಎನರ್ಜಿ ಸ್ಟೋರೇಜ್‌ ಸಿಸ್ಟಮ್)‌ ಮೂಲಕ ಮನೆಗಳಿಗೆ ವಿದ್ಯುತ್‌ ಸರಬರಾಜು ಆಗುತ್ತದೆ.

ಯೋಜನೆಯ ವಿಶೇಷತೆ ಏನು?

1. ಮೊಧೇರಾ ಈ ಯೋಜನೆಯ ಮೂಲಕ ಶುದ್ಧ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಭಾರತದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2. ಸೋಲಾರ್ ಆಧಾರಿತ ಅಲ್ಟ್ರಾ-ಆಧುನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳ ಸೌಲಭ್ಯವನ್ನು ಹೊಂದಿರುವ ಮೊದಲ ಆಧುನಿಕ ಗ್ರಾಮ ಎನಿಸಿತು.

3. ಭಾರತದ ಮೊದಲ ಗ್ರಿಡ್ ಸಂಪರ್ಕಿತ MWh ಪ್ರಮಾಣದ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

4. ಇಲ್ಲಿನ ಸ್ಥಳೀಯ ಜನರ ವಸತಿ ವಿದ್ಯುತ್ ಬಿಲ್ಲಿನಲ್ಲಿ ಶೇ.60ರಿಂದ 100ರಷ್ಟು ಉಳಿತಾಯವಾಗುತ್ತಿದೆ.

ಸೌರಬೆಳಕಿನಿಂದ ಸೂರ್ಯ ದೇಗುಲ ಜಗಮಗ

ವಿಶ್ವಪ್ರಸಿದ್ಧ ಮೊಧೇರಾ ಸೂರ್ಯ ದೇವಾಲಯದಲ್ಲಿ ಸೌರಶಕ್ತಿ ಚಾಲಿತ 3-ಡಿ ಪ್ರೊಜೆಕ್ಷನ್ ಮೂಲಕ ಪ್ರವಾಸಿಗರಿಗೆ ಮೊಧೇರಾದ ಶ್ರೀಮಂತ ಇತಿಹಾಸವನ್ನು ತಿಳಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆಈ 3-ಡಿ ಪ್ರೊಜೆಕ್ಷನ್ ಪ್ರತಿದಿನ ಸಂಜೆ 7:00 ರಿಂದ 7:30 ರವರೆಗೆ ನಡೆಯುತ್ತದೆ. ದೇವಾಲಯದ ಸೌಂದರ್ಯವನ್ನು ಹೆಚ್ಚಿಸಲು ಸೌರಶಕ್ತಿ ಚಾಲಿತ ಪರಂಪರಾತ ದೀಪಗಳನ್ನು ಅದರ ಆವರಣದಲ್ಲಿ ಅಳವಡಿಸಲಾಗಿದೆ. ಸಂದರ್ಶಕರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ರವರೆಗೆ ಈ ಆಕರ್ಷಕ ಬೆಳಕನ್ನು ಆಸ್ವಾದಿಸಬಹುದು.

ವಸತಿ ವಿದ್ಯುತ್ ಬಿಲ್ ಸೊನ್ನೆ

ಮೊಧೇರಾ ಗ್ರಾಮದ ಸರಪಂಚ್ ಜತನ್‌ಬೆನ್ ಡಿ.ಟ್ಯಾಗೋರ್ ಪ್ರಕಾರ “ಕೇಂದ್ರ-ರಾಜ್ಯ ಯೋಜನೆಯಿಂದ ಗ್ರಾಮೀಣ ಜನರು ಸಂತೋಷಭರಿತರಾಗಿದ್ದಾರೆ. ಈ ಹಿಂದೆ ಗ್ರಾಮಸ್ಥರ ವಿದ್ಯುತ್ ಬಿಲ್ ತಿಂಗಳಿಗೆ ಸುಮಾರು 1000 ರೂಪಾಯಿ ಬರುತ್ತಿತ್ತು. ಈಗ ಅದು ಬಹುತೇಕ ಸೊನ್ನೆಗೆ ಇಳಿದಿದೆ.

ಯಾವುದೇ ವೆಚ್ಚವಿಲ್ಲದೆ ಎಲ್ಲ ಜನರ ಮನೆಗಳ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಈ ಸೌರ ಫಲಕಗಳು ನಮಗೆ ಅಗತ್ಯಕ್ಕಿಂತ ಹೆಚ್ಚಿನ ಶಕ್ತಿಯನ್ನು ಒದಗಿಸಿ ಉಳಿಸಿದಾಗ ಸರ್ಕಾರವು ನಮಗೆ ಹೆಚ್ಚುವರಿ ಹಣವನ್ನು ನೀಡುತ್ತದೆ” ಎನ್ನುತ್ತಾರೆ ಜತನ್‌ ಬೆನ್.

ಮೊಧೇರಾ ಈ ಸೌರ ವಿದ್ಯುತ್ ಯೋಜನೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ಸ್ವಚ್ಛ ಮತ್ತು ಹಸಿರು ಇಂಧನವನ್ನು ಸೃಷ್ಟಿಸುವ ಪ್ರಧಾನಿಯವರ ಕನಸಿಗೆ ಗುಜರಾತ್ ಮತ್ತೊಮ್ಮೆ ಮಹತ್ವದ ಕೊಡುಗೆ ನೀಡಿರುವುದು ಸಂತೋಷವಾಗಿದೆ ಎಂದು ಹೇಳಿದರು..

ಇದೇ ವೇಳೆಗೆ, 2030 ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಭಾರತದ 50% ಇಂಧನ ಅಗತ್ಯಗಳನ್ನು ಪೂರೈಸಿಕೊಳ್ಳುವ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಪಟೇಲ್ ಹೇಳಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ಗುಜರಾತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ:   ಗುಜರಾ ತಿನ ಮೊಧೇರಾ ದೇಶದ ಮೊದಲ 24X7 ಸೌರ ಗ್ರಾಮ   ಮೊಧೇರಾ (ಗುಜರಾತ್) : ಸೂರ್ಯ ದೇಗುಲದ ಮೂಲಕ ವಿಶ್ವ ಪ್ರಸಿದ್ಧವಾಗಿರುವ ಗುಜರಾತಿನ ಮೊಧೇರಾ ಈಗ ದೇಶದ ಮೊದಲ 24×7...

Tuesday, October 4, 2022

PARYAYA: ದುಬೈಯಲ್ಲಿ ಉದ್ಘಾಟನೆಗೊಂಡಿತು ನೂತನ ಭವ್ಯ ಹಿಂದೂ ದೇವಾಲಯ

ದುಬೈಯಲ್ಲಿ ಉದ್ಘಾಟನೆಗೊಂಡಿತು ನೂತನ ಭವ್ಯ ಹಿಂದೂ ದೇವಾಲಯ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈಯಲ್ಲಿ ಭಾರತೀಯ ಸಮುದಾಯವು ನೂತನ ಹಿಂದೂ ದೇವಾಲಯದ ಭವ್ಯ ಉದ್ಘಾಟನೆಗೆ 2022 ಅಕ್ಟೋಬರ್‌ 4ರ ಮಂಗಳವಾರ ʼದಸರಾ ಆಯುಧ ಪೂಜಾ ದಿನ"ಸಾಕ್ಷಿಯಾಯಿತು. ಉದ್ಘಾಟನಾ ಸಮಾರಂಭದಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಮತ್ತು ಯುಎಇಗೆ ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಭಾಗವಹಿಸಿದರು.

ಜೆಬೆಲ್ ಅಲಿಯಲ್ಲಿ ಇರುವ ಈ ದೇವಾಲಯವು ಅಕ್ಟೋಬರ್ 5 ರಿಂದ ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ.

ಈ ಅರಬ್‌ ಮಾದರಿಯ ಈ ಭವ್ಯ ದೇವಾಲಯವನ್ನು ಮೂರು ವರ್ಷಗಳಲ್ಲಿ ನಿರ್ಮಿಸಲಾಗಿದೆ ಮತ್ತು ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗಲೂ ಸಮುದಾಯ ಅಭಿವೃದ್ಧಿ ಪ್ರಾಧಿಕಾರದುಬೈ ಪುರಸಭೆದುಬೈ ಪೊಲೀಸ್ ಮತ್ತು ದುಬೈ ಭೂ ಇಲಾಖೆ ಅಧಿಕಾರಿಗಳಿಂದ ಅನುಮತಿಗಳನ್ನು ಪಡೆಯಲಾಗಿತ್ತು. ದೇವಾಲಯಕ್ಕೆ ಭೂಮಿಯನ್ನು ಯುಎಇ ಸರ್ಕಾರ 2019 ರಲ್ಲಿ ನೀಡಿತ್ತು.

ಲ್ಲ ಧರ್ಮಗಳ ಜನರಿಗೆ ಈ ದೇವಾಲಯದಲ್ಲಿ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ವಿಶಿಷ್ಟ ವಾಸ್ತುಶಿಲ್ಪವು ಪ್ರವಾಸಿಗರನ್ನೂ ಆಕರ್ಷಿಸುವ ಸಾಧ್ಯತೆಯಿದೆ. ಇದನ್ನು 80,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇದು ದುಬೈ ಜೆಬೆಲ್ ಅಲಿಯ ಆರಾಧನಾ ವಿಲೇಜ್ ಪ್ರದೇಶದಲ್ಲಿ ಇದೆ..

ಶಿವಕೃಷ್ಣಗಣೇಶ ಮತ್ತು ಮಹಾಲಕ್ಷ್ಮಿ ಸೇರಿದಂತೆ 16 ದೇವ-ದೇವತೆಗಳ ಜೊತೆಗೆ ಗುರು ಗ್ರಂಥ ಸಾಹಿಬ್ ಕೂಡಾ ಇರುವುದು ಈ ದೇವಾಲಯದ ವಿಶೇಷತೆ. ದೇವಾಲಯದ ಹೊರ ಗುಮ್ಮಟಗಳ ಮೇಲೆ ಒಂಬತ್ತು ಹಿತ್ತಾಳೆಯ ಕಲಶಗಳು ಅಥವಾ ಗೋಪುರಗಳಿವೆ. ದೊಡ್ಡದಾದ ಪ್ರಾರ್ಥನಾ ಮಂದಿರದಲ್ಲಿ 105 ಹಿತ್ತಾಳೆಯ ಗಂಟೆಗಳನ್ನು ಅಳವಡಿಸಲಾಗಿದೆ. ಮುಖ್ಯ ಪ್ರಾರ್ಥನಾ ಮಂದಿರವು ಮಧ್ಯದ ಗುಮ್ಮಟದಲ್ಲಿ ದೊಡ್ಡದಾದ 3D-ಮುದ್ರಿತ ಗುಲಾಬಿ ಕಮಲವನ್ನು ಹೊಂದಿದೆಈ ಗುಲಾಬಿ ಕಮಲ ಶಿಲ್ಪವು ವಿಶೇಷವಾಗಿ ಗಮನ ಸೆಳೆಯುತ್ತದೆ.

“2019 ರಲ್ಲಿ ಸರ್ಕಾರವು ನಮಗೆ ಹೊಸ ಭೂಮಿಯನ್ನು ನೀಡಿತು ಮತ್ತು ಜೆಬೆಲ್ ಅಲಿ ಪ್ರದೇಶದಲ್ಲಿ ಮತ್ತೊಂದು ದೇವಾಲಯವನ್ನು ನಿರ್ಮಿಸಲು ನಮಗೆ ಅವಕಾಶ ಮಾಡಿಕೊಟ್ಟಿತು. ಮೂರು ವರ್ಷಗಳಲ್ಲಿ ದುಬೈಯಲ್ಲಿ ಈ  ದೇವಾಲಯವನ್ನು ನಿರ್ಮಿಸಲಾಯಿತು. ಪ್ರತಿಯೊಬ್ಬ ಹಿಂದೂ ಕೂಡಾ ತನ್ನ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆ ಸಲ್ಲಿಸಬಹುದಾದಂತಹ ಮಂದಿರವನ್ನು ನಾವು ನಿರ್ಮಿಸಿದ್ದೇವೆ.  ಅದರಲ್ಲಿ 16 ದೇವತೆಗಳ ವಿಗ್ರಹಗಳು ಮತ್ತು ಗುರು ದರ್ಬಾರ್ ಕೂಡ ಇದೆ ಎಂದು ಹಿಂದೂ ದೇವಾಲಯದ ಟ್ರಸ್ಟಿರೀಗಲ್ ಗ್ರೂಪ್‌ನ ಅಧ್ಯಕ್ಷ ರಾಜು ಶ್ರಾಫ್ ಹೇಳಿದ್ದಾದರು.

ಈ ದೇವಾಲಯದಲ್ಲಿ ಭಕ್ತರು ತಮ್ಮ ಭೇಟಿಯನ್ನು QR ಕೋಡ್ ಮೂಲಕ ಬುಕ್ ಮಾಡಬಹುದು. ದೇವಾಲಯದ ವೆಬ್‌ಸೈಟ್ ಭಕ್ತರಿಗೆ ಭೇಟಿಕಾರ್ಯಕ್ರಮಗಳು ಮತ್ತು ದರ್ಶನವನ್ನು ಬುಕ್ ಮಾಡಲು ಸಹ ಅವಕಾಶ ಕಲ್ಪಿಸಿದೆ.

ದೇವಾಲಯ: 5. ವಿಶೇಷಗಳು

1. ದೇವಾಲಯವು ಜೆಬೆಲ್ ಅಲಿಯಲ್ಲಿದೆ. ಹಲವಾರು ಚರ್ಚುಗಳು ಮತ್ತು ಗುರು ನಾನಕ್ ದರ್ಬಾರ್ ಗುರುದ್ವಾರವನ್ನು ಹೊಂದಿರುವ ಈ ಪ್ರದೇಶವನ್ನು 'ಪೂಜಾ ಗ್ರಾಮಎಂದೂ ಕರೆಯುತ್ತಾರೆ.

2. ಎಲ್ಲ ರಾಷ್ಟ್ರೀಯತೆಗಳು ಮತ್ತು ಧಾರ್ಮಿಕ ನಂಬಿಕೆಗಳ ಜನರಿಗೆ 16 ದೇವ-ದೇವತೆಗಳು ಮತ್ತು ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್  ವೀಕ್ಷಣೆ, ಪೂಜೆಗೆ ಅವಕಾಶವಿದೆ.  

3. ವಾಸ್ತುಶಾಸ್ತ್ರದ ಪ್ರಕಾರದೇವಾಲಯವು ಎರಡು ಹಂತಗಳನ್ನು ಹೊಂದಿದೆ. ಬಹುಪಾಲು ದೇವತೆಗಳನ್ನು ಸ್ಥಾಪಿಸಲಾಗಿರುವ ಒಂದು ಮುಖ್ಯ ಪ್ರಾರ್ಥನಾ ಮಂದಿರವು ಮಧ್ಯದ ಗುಮ್ಮಟದ ಉದ್ದಕ್ಕೂ ದೊಡ್ಡದಾದ 3D-ಮುದ್ರಿತ ಗುಲಾಬಿ ಕಮಲವನ್ನು ಹೊಂದಿದೆ.

4. ದೇವಾಲಯದ ವೆಬ್‌ಸೈಟ್‌ ಮಾಹಿತಿಯ ಪ್ರಕಾರದೇವಸ್ಥಾನವು ಡಿಜಿಟಲ್ ಲೈಬ್ರರಿವೈದಿಕ ಭಾಷೆಗಳ ಮೇಲೆ ಭೌತಿಕ ಮತ್ತು ಆನ್‌ಲೈನ್ ತರಗತಿಗಳು ಮತ್ತು ಮೌಲ್ಯ ನಿರ್ಮಾಣ ಮತ್ತು ಜಾಗೃತಿ ಕೋರ್ಸ್‌ಗಳನ್ನು ಸಹ ನೀಡುತ್ತದೆ. ಅದರ ಔಟ್ರೀಚ್ ಕಾರ್ಯಕ್ರಮದ ಭಾಗವಾಗಿಅಗತ್ಯವಿರುವವರಿಗೆ ವೈದ್ಯಕೀಯ ಮತ್ತು ಶೈಕ್ಷಣಿಕ ಬೆಂಬಲವನ್ನು ಸಹ ನೀಡುತ್ತದೆ.

5. ದೇವಾಲಯವು ಅಕ್ಟೋಬರ್ 5 ರಿಂದ ಪ್ರತಿದಿನ ಬೆಳಿಗ್ಗೆ 6.30 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 7.30ಕ್ಕೆ ಆರತಿ ಅಥವಾ ವಿಶೇಷ ಪ್ರಾರ್ಥನೆಗಳು ನಡೆಯಲಿವೆ. ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು hindutempledubai.com ಮೂಲಕ ಆನ್‌ಲೈನ್ ಬುಕಿಂಗ್ ಮಾಡಲು ಅವಕಾಶವಿದೆ.

ದುಬೈಯಲ್ಲಿ ಕೇವಲ ಎರಡು ದೇವಾಲಯಗಳಿದ್ದುಮೊದಲನೆಯದನ್ನು 1958 ರಲ್ಲಿ ನಿರ್ಮಿಸಲಾಗಿತ್ತು. ಹೊಸದಾಗಿ ಉದ್ಘಾಟನೆಗೊಂಡ ಹಿಂದೂ ದೇವಾಲಯವು ಎರಡನೇ ದೇವಾಲಯವಾಗಿದೆ.

ಹೊಸ ದೇವಾಲಯವು ದೀಪಾವಳಿಯವರೆಗೆ ಮಾತ್ರ ಬುಕಿಂಗ್ ಮೂಲಕ ಭಕ್ತರಿಗೆ ತೆರೆದಿರುತ್ತದೆ. ದೀಪಾವಳಿ ಹಬ್ಬದ ನಂತರಪ್ರತಿದಿನ ನಡೆಯುವ ಆರತಿ ಸಮಾರಂಭದೊಂದಿಗೆ ದೇವಾಲಯವನ್ನು ಎಲ್ಲರಿಗೂ ತೆರೆಯಲಾಗುತ್ತದೆ.



PARYAYA: ದುಬೈಯಲ್ಲಿ ಉದ್ಘಾಟನೆಗೊಂಡಿತು ನೂತನ ಭವ್ಯ ಹಿಂದೂ ದೇವಾಲಯ:   ದುಬೈಯಲ್ಲಿ ಉದ್ಘಾಟನೆಗೊಂಡಿತು ನೂತನ ಭವ್ಯ ಹಿಂದೂ ದೇವಾಲಯ ನವದೆಹಲಿ : ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ಯಲ್ಲಿ ಭಾರತೀಯ ಸಮುದಾಯವು ನೂತನ ಹಿಂದೂ ದೇವಾಲಯದ ಭವ್ಯ ...