ಸ್ವೀಡನ್ನಿನ ಸ್ವಾಂಟೆ ಪಾಬೊಗೆ 2022 ರ ನೊಬೆಲ್ ಔಷಧ ಪ್ರಶಸ್ತಿ
ಸ್ಟಾಕ್ ಹೋಮ್ (ಸ್ವೀಡನ್): ಸ್ವೀಡನ್ನಿನ ಸ್ವಾಂಟೆ ಪಾಬೊ ಅವರಿಗೆ 2022 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ೨೦೨೨ ಅಕ್ಟೋಬರ್ ೨ರ ಸೋಮವಾರ ಘೋಷಿಸಲಾಯಿತು.
ನೊಬೆಲ್ ಸಮಿತಿಯ ಕಾರ್ಯದರ್ಶಿ ಥಾಮಸ್ ಪರ್ಲ್‌ಮನ್ ಸೋಮವಾರ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದರು.
'ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗಳಿಗೆ ಸಂಬಂಧಿಸಿದ ಆವಿಷ್ಕಾರಗಳಿಗಾಗಿ' ಈ ಪ್ರಶಸ್ತಿಗೆ ಪಾಬೋ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಕೆಲಸವು ನಾವು, ಮನುಷ್ಯರು ಹೇಗೆ ವಿಕಸನಗೊಂಡಿದ್ದೇವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಪರ್ಲ್ ಮನ್ ಹೇಳಿದರು..
ನೊಬೆಲ್ ಪ್ರಶಸ್ತಿ ಘೋಷಣೆಯ ಒಂದು ವಾರದ ಅವಧಿಯ ಪ್ರಾರಂಭದಲ್ಲಿ ವೈದ್ಯಕೀಯ ಪ್ರಶಸ್ತಿಯನ್ನು ಮೊದಲು ಈದಿನ ಘೋಷಿಸಲಾಯಿತು. ಮಂಗಳವಾರ, ಭೌತಶಾಸ್ತ್ರ ಕ್ಷೇತ್ರದಲ್ಲಿನ ಸಾಧನೆಗಳಿಗಾಗಿ, ಬುಧವಾರ ರಸಾಯನಶಾಸ್ತ್ರ, ಗುರುವಾರ ಸಾಹಿತ್ಯ, ಶುಕ್ರವಾರ ನೊಬೆಲ್ ಶಾಂತಿ ಪ್ರಶಸ್ತಿ ಹಾಗೂ ಅಕ್ಟೋಬರ್ 10೦ರಂದು ಅರ್ಥಶಾಸ್ತ್ರಕ್ಕೆ ಕೊಡುಗೆ ನೀಡಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುವುದು.
2021 ರಲ್ಲಿ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ ವೈದ್ಯಕೀಯ ಕ್ಷೇತ್ರದ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಮಾನವ ದೇಹವು ತಾಪಮಾನ ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತದೆ ಎಂಬುದರ ಸಂಶೋಧನೆಗಳಿಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
No comments:
Post a Comment